Last Updated:
ಜಿತೇಶ್ ಶರ್ಮಾ ಭಾರತ ತಂಡಕ್ಕೆ ಮರಳುವ ಭರವಸೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಮಾತ್ರವಲ್ಲ, ಮುಂಬರುವ ಐಪಿಎಲ್ ಸೀಸನ್ಗೂ ಮುನ್ನ ಅವರು ತಮ್ಮ ಆಟವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವಲ್ಲಿ ಮುಂದಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2025 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ, ಜಿತೇಶ್ ಶರ್ಮಾ (Jitesh Sharma) ಭಾರತ ತಂಡಕ್ಕೆ ಮರಳುವ ಕಾತರದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಮಾತ್ರವಲ್ಲ, ಮುಂಬರುವ ಐಪಿಎಲ್ ಸೀಸನ್ಗೂ ಮುನ್ನ ಅವರು ತಮ್ಮ ಆಟವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ಮುಂದಾಗಿದ್ದಾರೆ.
ಇಎಸ್‌ಪಿಎನ್‌ಕ್ರಿಕ್‌ಇನ್ಫೊ ವರದಿಯ ಪ್ರಕಾರ, ಜಿತೇಶ್ ಶರ್ಮಾ 2025-26ರ ದೇಶೀಯ ಋತುವಿಗೆ ಮುಂಚಿತವಾಗಿ ವಿದರ್ಭ ತಂಡವನ್ನು ತೊರೆದು ಬರೋಡಾ ಪರ ಆಡಲಿದ್ದಾರೆ. ಜಿತೇಶ್ ಶರ್ಮಾ ಸದ್ಯ ಕೃನಾಲ್ ಪಾಂಡ್ಯ ಅವರ ನಾಯಕತ್ವದಲ್ಲಿ ಆಡಲು ಮುಂದಾಗಿದ್ದಾರೆ. 2025 ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಒಟ್ಟಿಗೆ ಆಡಿದ್ದ ಕೃನಾಲ್ ಪಾಂಡ್ಯ ಅವರೊಂದಿಗೆ ಅವರು ನಿಕಟ ಸಂಬಂಧ ಹೊಂದಿದ್ದಾರೆ. ಈ ನಡೆಯಿಂದ ಜಿತೇಶ್ ಈಗ ಕೃನಾಲ್ ಅವರ ಸಹೋದರ ಟೀಮ್ ಇಂಡಿಯಾ ಸೂಪರ್‌ಸ್ಟಾರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಸಹ ಆಟಗಾರನಾಗಿ ಆಡಲಿದ್ದಾರೆ.
ಜಿತೇಶ್ ಶರ್ಮಾ ಸದ್ಯ, 2024-25ರ ರಣಜಿ ಟ್ರೋಫಿ ಚಾಂಪಿಯನ್ಸ್ ಹಾಗೂ ವಿಜಯ್ ಹಜಾರೆ ಟ್ರೋಫಿಯ ರನ್ನರ್-ಅಪ್ ಆಗಿರುವ ವಿದರ್ಭ ತಂಡದ ಭಾಗವಾಗಿದ್ದರು. ಆದ್ರೆ, ಅವರು ರಣಜಿ ಟ್ರೋಫಿಯ ಯಶಸ್ಸಿನಲ್ಲಿ ಒಂದೇ ಒಂದು ಪಂದ್ಯವನ್ನು ಆಡುವಲ್ಲಿ ಅವರು ವಿಫಲರಾಗಿದ್ದರು. ತಂಡದ ನಾಯಕ ಅಕ್ಷಯ್ ವಾಡೇಕರ್ ಕೂಡ ಕೀಪರ್ ಆಗಿರುವುದರಿಂದ ಮತ್ತು ದೇಶೀಯ ಪಂದ್ಯಗಳಲ್ಲಿ ಅವರು ಸ್ಥಿರ ಪ್ರದರ್ಶನ ನೀಡ್ತಾ ಬಂದಿರುವುದರಿಂದ ಅವರು ಪ್ಲೇಯಿಂಗ್11 ನಲ್ಲಿ ಆಡುತ್ತಿದ್ದಾರೆ.
ಜನವರಿ 2024 ರಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಪಂದ್ಯಾವಳಿಯ ಬಳಿಕ ಜಿತೇಶ್ ಶರ್ಮಾ ಭಾರತ ಪರ ಆಡಿಲ್ಲ. ಜಿಂಬಾಬ್ವೆ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾದರೂ ಕೂಡ ಅವರು ಒಂದೇ ಒಂದು ಪಂದ್ಯದಲ್ಲೂ ಕೂಡ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡಿಲ್ಲ. 2025 ರಲ್ಲಿ ಮುಕ್ತಾಯವಾದ ಐಪಿಎಲ್‌ನಲ್ಲಿ ಜಿತೇಶ್ ಶರ್ಮಾ 29.85 ರ ಸರಾಸರಿಯಲ್ಲಿ 149.28 ರ ಸ್ಟ್ರೈಕ್ ರೇಟ್‌ನೊಂದಿಗೆ 418 ರನ್ ಗಳಿಸಿದರು.
July 16, 2025 9:08 PM IST