Dakshina Kannada: ಹುಲಿವೇಷ ತಂಡದ ಕಲಾವಿದನ ಜಂಪಿಂಗ್ ಸ್ಟಂಟ್- ವೈರಲ್ ಆದ ವಿಡಿಯೋಗೆ ಭಾರೀ ಮೆಚ್ಚುಗೆ! | Dakshina Kannada: Jumping Stunt by Tiger Costume Artist

Dakshina Kannada: ಹುಲಿವೇಷ ತಂಡದ ಕಲಾವಿದನ ಜಂಪಿಂಗ್ ಸ್ಟಂಟ್- ವೈರಲ್ ಆದ ವಿಡಿಯೋಗೆ ಭಾರೀ ಮೆಚ್ಚುಗೆ! | Dakshina Kannada: Jumping Stunt by Tiger Costume Artist

Last Updated:

ಹುಲಿವೇಷ ಹಾಕುವ ಮೊದಲು ಸಂಪ್ರದಾಯದ ಪ್ರಕಾರ ಊದುಪೂಜೆ ನಡೆಯುತ್ತದೆ. ಈ ಪೂಜೆಯ ಬಳಿಕ ಹುಲಿವೇಷ ಹಾಕುವ ಕಲಾವಿದರು ಬಣ್ಣ ಹಾಕದೇ ಹುಲಿ ನರ್ತನ ಮಾಡುತ್ತಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿ ವೇಳೆ ಹುಲಿವೇಷ ಧರಿಸಿ ಕುಣಿಯುವುದು ಸಾಮಾನ್ಯ. ಹಿಂದೆ ಸಾಂಪ್ರದಾಯಿಕವಾಗಿ ಕುಣಿಯುತ್ತಿದ್ದ ಹುಲಿವೇಷ ತಂಡಗಳಲ್ಲಿ ಈಗ ಹೊಸತನದ ನೃತ್ಯಗಳೂ ಸೇರಿಕೊಂಡಿವೆ‌‌.

ಹುಲಿವೇಷ ಕುಣಿತದಲ್ಲಿ ಜಿಮ್ನಾಶಿಯಂ ಸಹ ಬಳಕೆಯಾಗುತ್ತಿದ್ದು, ಕೆಲವು ಹುಲಿವೇಷ ತಂಡಗಳಲ್ಲಿ ವಿವಿಧ ಬಗೆಯಲ್ಲಿ ಹಾರುವ ಹುಲಿಗಳಿಗೆ ಹೆಚ್ಚು ಡಿಮ್ಯಾಂಡ್ ಇದೆ. ಇಂಥದ್ದೇ ಒಂದು ಜಂಪಿಂಗ್ ಕಲಾವಿದನ ವಿಡಿಯೋ ಈಗ ಎಲ್ಲೆಡೆ ಭಾರಿ ವೈರಲ್ ಆಗಿದೆ. ಹುಲಿವೇಷ ಕುಣಿತಕ್ಕೆ ಸಜ್ಜುಗೊಳಿಸಿದ್ದ ಸ್ಟೇಜ್ ನಲ್ಲಿ ಹಲವು ಪಲ್ಟಿಗಳನ್ನು ಹೊಡೆಯುವ ಮೂಲಕ ಈ ಕಲಾವಿದ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಇದನ್ನೂ ಓದಿ: Gold Suresh: ಬಿಗ್‌ಬಾಸ್‌ ಸೀಸನ್‌ 11ರ ಗೋಲ್ಡ್‌ ಸುರೇಶ್ ಫ್ಯಾಮಿಲಿ ಹೇಗಿದೆ? ಬೆಂಗಳೂರು ಸೇರಿ ದುಡ್ ಮಾಡಿದ್ದು ಹೇಗೆ ಗೊತ್ತಾ?

ಹುಲಿವೇಷ ಹಾಕುವ ಮೊದಲು ಸಂಪ್ರದಾಯದ ಪ್ರಕಾರ ಊದುಪೂಜೆ ನಡೆಯುತ್ತದೆ. ಈ ಪೂಜೆಯ ಬಳಿಕ ಹುಲಿವೇಷ ಹಾಕುವ ಕಲಾವಿದರು ಬಣ್ಣ ಹಾಕದೇ ಹುಲಿ ನರ್ತನ ಮಾಡುತ್ತಾರೆ. ಒಂದು ತಂಡದ ಎಲ್ಲಾ ಕಲಾವಿದರು ಈ ಊದುಪೂಜೆಯ ಬಳಿಕ ಕುಣಿಯುವುದು ಕಡ್ಡಾಯ. ಹುಲಿವೇಷಧಾರಿಗಳ ಜೊತೆ ತಂಡವನ್ನು ನಡೆಸುವ ಜವಾಬ್ದಾರಿ ಹೊತ್ತವರೂ ಕುಣಿಯುತ್ತಾರೆ. ಊದುಪೂಜೆಯ ಬಳಿಕ ಕಲಾವಿದರಿಗೆ ಹುಲಿಯ ಬಣ್ಣಗಳನ್ನು ಬಳಿಯಲು ಆರಂಭಿಸಲಾಗುತ್ತದೆ.

ಹುಲಿವೇಷ ಕುಣಿತದ ಸಂಪ್ರದಾಯದಂತೆ ನಡೆದ ಊದುಪೂಜೆಯ ಸಂದರ್ಭದಲ್ಲಿ ಕಲಾವಿದನೊಬ್ಬ ಜಂಪಿಂಗ್ ಮಾಡಿ ಕುಣಿಯುತ್ತಿರುವ ವಿಡಿಯೋ ಈಗ ಸದ್ದು ಮಾಡುತ್ತಿದೆ. ಕಲಾವಿದನ ಈ ಸ್ಟಂಟ್ ಕಂಡು ಅಲ್ಲಿದ್ದ ಪ್ರೇಕ್ಷಕರೆಲ್ಲಾ ಸೀಟಿ ಹೊಡೆದು ಸಂಭ್ರಮಿಸಿ, ಕಲಾವಿದರನ್ನು ಪ್ರೋತ್ಸಾಹಿಸಿದ್ದು ವಿಶೇಷವೆನಿಸುತ್ತದೆ. ಒಟ್ಟಿನಲ್ಲಿ ಹುಲಿವೇಷ ಕುಣಿತದಲ್ಲಿ ಹೊಸತನವು ಸೇರಿಕೊಂಡಿರುವುದು ಹುಲಿಕುಣಿತಕ್ಕೆ ಮೆರುಗು ನೀಡುವುದರ ಜೊತೆಗೆ ಜನರನ್ನೂ ರಂಜಿಸುವಲ್ಲಿ ಯಶಸ್ವಿಯಾಗ್ತಿದೆ.