ಸ್ಮೃತಿ ಮಂಧಾನ ಭಾರತದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು. 29 ವರ್ಷದ ಈ ಆರಂಭಿಕ ಆಟಗಾರ್ತಿ, ಕಳೆದ ಕೆಲವು ವರ್ಷಗಳಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತಂಡವನ್ನು ಹಲವಾರು ಪಂದ್ಯಗಳಲ್ಲಿ ನಾಯಕಿಯಾಗಿ ಮುನ್ನಡೆಸಿದ್ದಾರೆ. ವಿಶೇಷವಾಗಿ, ಮಹಿಳಾ ಪ್ರೀಮಿಯರ್ ಲೀಗ್ (WPL) 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ನಾಯಕಿಯಾಗಿ ಮುನ್ನಡೆಸಿ, ಚಾಂಪಿಯನ್‌ಶಿಪ್ ಗೆಲುವಿಗೆ ಕಾರಣರಾದರು. ಒಂದರಿಂದ ಎರಡು ವರ್ಷಗಳಲ್ಲಿ ಸ್ಮೃತಿ ಭಾರತೀಯ ತಂಡದ ಪೂರ್ಣಕಾಲಿಕ ನಾಯಕಿಯಾಗುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ತಜ್ಞರು ಭಾವಿಸಿದ್ದಾರೆ.
ಸ್ಮೃತಿಯು ಭಾರತಕ್ಕಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 263 ಪಂದ್ಯಗಳನ್ನು ಆಡಿದ್ದಾರೆ, ಒಟ್ಟಾರೆ 14 ಶತಕ65 ಅರ್ಧಶತಕ ಸಿಡಿಸಿದ್ದಾರೆ.
ಟೆಸ್ಟ್: 7 ಪಂದ್ಯಗಳು,629 ರನ್ಸ್, 2 ಶತಕ, 3 ಅರ್ಧಶತಕ
ಏಕದಿನ : 103 ಪಂದ್ಯಗಳು,4501 ರನ್ಸ್, 11, 31 ಅರ್ಧಶತಕ
ಟಿ20 : 153 ಪಂದ್ಯಗಳು, 3982 ರನ್ಸ್, 1 ಶತಕ, 31 ಅರ್ಧಶತಕ
ವರದಿಗಳ ಪ್ರಕಾರ, ಸ್ಮೃತಿ ಮಂಧಾನರ ನಿವ್ವಳ ಮೌಲ್ಯ ಸುಮಾರು 32-33 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅವರ ವಾರ್ಷಿಕ ಆದಾಯ 5-6 ಕೋಟಿ ರೂಪಾಯಿಗಳ ನಡುವೆ ಇದೆ. ಈ ಆದಾಯದ ಮೂಲಗಳು ಈ ಕೆಳಗಿನಂತಿವೆ:
ಬಿಸಿಸಿಐ ಒಪ್ಪಂದ: ಸ್ಮೃತಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) A+ ದರ್ಜೆಯ ಒಪ್ಪಂದದಲ್ಲಿ ಸೇರಿಸಲಾಗಿದೆ. ಈ ದರ್ಜೆಯ ಆಟಗಾರರಿಗೆ ವಾರ್ಷಿಕವಾಗಿ 50 ಲಕ್ಷ ರೂಪಾಯಿ ಒಪ್ಪಂದ ಶುಲ್ಕ ಸಿಗುತ್ತದೆ,
ಪಂದ್ಯದ ಶುಲ್ಕ: ಪಂದ್ಯ ಶುಲ್ಕವಾಗಿ, ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂಪಾಯಿ, ಏಕದಿನ ಪಂದ್ಯದಲ್ಲಿ 6 ಲಕ್ಷ ರೂಪಾಯಿ, ಟಿ20 ಪಂದ್ಯದಕ್ಕಾಗಿ 3 ಲಕ್ಷ ರೂಪಾಯಿ ಪಡೆಯುತ್ತಾರೆ.
ಮಹಿಳಾ ಪ್ರೀಮಿಯರ್ ಲೀಗ್ (WPL): ಸ್ಮೃತಿ ಮಂಧಾನ RCB ತಂಡದ ನಾಯಕಿಯಾಗಿದ್ದು, ಈ ಒಪ್ಪಂದದ ಮೌಲ್ಯ 3.4 ಕೋಟಿ ರೂಪಾಯಿ. 2024ರಲ್ಲಿ RCB ತಂಡವನ್ನು ಚಾಂಪಿಯನ್‌ಶಿಪ್‌ಗೆ ಮುನ್ನಡೆಸಿದ್ದು, ಅವರ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದೆ.
ಬ್ರಾಂಡ್ ಅನುಮೋದನೆಗಳು
ಸ್ಮೃತಿ ಮಂಧಾನ, ನೈಕ್, ಬೌರ್ನ್‌ವಿಟಾ, ಮತ್ತು ಡಾಬರ್ ನಂತಹ ದೊಡ್ಡ ಕಂಪನಿಗಳೊಂದಿಗೆ ಒಪ್ಪಂದಗಳನ್ನು ಹೊಂದಿದ್ದಾರೆ. ಈ ಆರೋಗ್ಯ ಸೇವಾ ಮತ್ತು ಆಹಾರ ಬ್ರಾಂಡ್‌ಗಳ ಒಪ್ಪಂದಗಳು ಅವರ ಆದಾಯದ ಪ್ರಮುಖ ಭಾಗವಾಗಿವೆ. ಇತರ ಕಂಪನಿಗಳೊಂದಿಗಿನ ಜಾಹೀರಾತು ಒಪ್ಪಂದಗಳು ಸಹ ಲಕ್ಷಗಟ್ಟಲೆ ರೂಪಾಯಿಗಳನ್ನು ತಂದುಕೊಡುತ್ತವೆ.
July 18, 2025 5:22 PM IST