BCCI Revenue: 2023-24 ರಲ್ಲಿ ದಾಖಲೆಯ ಆದಾಯ ಗಳಿಸಿದ ಬಿಸಿಸಿಐ! ಐಪಿಎಲ್‌ನಿಂದಲೇ ಸಿಂಹಪಾಲು | BCCI Revenue Soars to Rs 9741 7 Crore in 2023-24 IPL Contributes Rs 5761 Crore

BCCI Revenue: 2023-24 ರಲ್ಲಿ ದಾಖಲೆಯ ಆದಾಯ ಗಳಿಸಿದ ಬಿಸಿಸಿಐ! ಐಪಿಎಲ್‌ನಿಂದಲೇ ಸಿಂಹಪಾಲು | BCCI Revenue Soars to Rs 9741 7 Crore in 2023-24 IPL Contributes Rs 5761 Crore

ಅದೇ ಸಮಯದಲ್ಲಿ ದೇಶಾದ್ಯಂತ ಆಟವನ್ನು ಪ್ರಚಾರ ಮಾಡುತ್ತದೆ ಮತ್ತು ಎಲ್ಲಾ ಹಂತಗಳಲ್ಲಿ ಶ್ರೇಷ್ಠತೆಯನ್ನು ಖಚಿತಪಡಿಸುತ್ತದೆ ಎಂದು ರೆಡಿಫ್ಯೂಷನ್ ವರದಿ ತಿಳಿಸಿದೆ.

ಐಪಿಎಲ್​ನಿಂದಲೇ ಸಿಂಹಪಾಲು

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್, ವಿಶ್ವದ ಅತ್ಯುತ್ತಮ ಟಿ20 ಲೀಗ್ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ. ಕ್ರಿಕೆಟ್ ಮಂಡಳಿಯ ಜನಪ್ರಿಯತೆ ನಿರಂತರವಾಗಿ ಹಿಗ್ಗುತ್ತಿರುವುದರಿಂದ ಬಿಸಿಸಿಐಗೆ ಐಪಿಎಲ್ ವರವಾಗಿ ಮಾರ್ಪಟ್ಟಿದೆ. ವರದಿಯ ಪ್ರಕಾರ, 2023-24ರ ಆರ್ಥಿಕ ವರ್ಷದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ ಗಳಿಸಿದ ಆದಾಯದಲ್ಲಿ, ಐಪಿಎಲ್ ಮಾತ್ರ ಶೇಕಡಾ 59 ರಷ್ಟು ಕೊಡುಗೆ ನೀಡಿದೆ.

ಐಪಿಎಲ್ ವಾರ್ಷಿಕ ಫ್ರಾಂಚೈಸ್ ಆಧಾರಿತ ಟಿ20 ಪಂದ್ಯಾವಳಿಯಾಗಿದ್ದು, ಇದರಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತದ ಅತ್ಯುತ್ತಮ ಕ್ರಿಕೆಟ್ ಪ್ರತಿಭೆಗಳು ಭಾಗವಹಿಸುತ್ತಾರೆ. 2007 ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸ್ಪರ್ಧೆಯಲ್ಲಿ 10 ತಂಡಗಳು ಭಾಗವಹಿಸುತ್ತವೆ. ವರದಿಯ ಪ್ರಕಾರ, ಬಿಸಿಸಿಐ 2023–24ನೇ ಹಣಕಾಸು ವರ್ಷದಲ್ಲಿ 9,741.7 ಕೋಟಿ ರೂ. ಆದಾಯ ಗಳಿಸಿದೆ, ಅದರಲ್ಲಿ ಐಪಿಎಲ್ ಕೊಡುಗೆ 5,761 ಕೋಟಿ ರೂ ಆಗಿದೆ.

ಮಾಧ್ಯಮ ಹಕ್ಕಿನಿಂದ ಹೆಚ್ಚು ಆದಾಯ

2007 ರಲ್ಲಿ ಬಿಸಿಸಿಐ ಚಿನ್ನದ ಮೊಟ್ಟೆ ಇಡುವ ಐಪಿಎಲ್ ಮೂಲಕ ಉತ್ತಮ ಲಾಭ ಗಳಿಸುತ್ತಿದೆ. ಈಗ ಐಪಿಎಲ್ ಬಿಸಿಸಿಐನ 100 ಪ್ರತಿಶತ ಭಾಗವಾಗಿದೆ ಪಂದ್ಯಾವಳಿ ಅತ್ಯುತ್ತಮವಾಗಿದೆ ಮತ್ತು ಮಾಧ್ಯಮ ಹಕ್ಕುಗಳು ನಿರಂತರವಾಗಿ ಏರುತ್ತಿವೆ. ಐಪಿಎಲ್ ರಣಜಿ ಟ್ರೋಫಿ ಮಟ್ಟದ ಆಟಗಾರರಿಗೆ ಇದರ ಲಾಭ ಸಿಗುತ್ತಿದೆ. ಸುಸಜ್ಜಿತ ಮೈದಾನ, ವೇತನಗಳು ಸುಲಲಿತವಾಗಿ ಸಿಗಲು ಇದು ನೆರವಾಗಿದೆ.

ಐಪಿಎಲ್ ಮತ್ತಷ್ಟು ಬೆಳೆದಂತೆ ಲಾಭದಾಯಕತೆಯನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತದೆ ಎಂದು ವ್ಯಾಪಾರ ತಂತ್ರಜ್ಞ ಮತ್ತು ಸ್ವತಂತ್ರ ನಿರ್ದೇಶಕ ಲಾಯ್ಡ್ ಮಥಿಯಾಸ್ ಹೇಳಿದ್ದಾರೆ ಎಂದು ಪ್ರಕಟಣೆ ಉಲ್ಲೇಖಿಸಿದೆ.

ಐಪಿಎಲ್ ಅಲ್ಲದ ಆಸ್ತಿಗಳಿಂದ ಬಿಸಿಸಿಐ ಆದಾಯ

ವರದಿಯ ಪ್ರಕಾರ, ಅಂತಾರಾಷ್ಟ್ರೀಯ ಪಂದ್ಯಾವಳಿಗಳ ಪ್ರಸಾರ ಹಕ್ಕುಗಳು ಸೇರಿದಂತೆ ಐಪಿಎಲ್ ಅಲ್ಲದ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡುವುದರಿಂದ ರೂ 361 ಕೋಟಿ ಬಂದಿದೆ. ರಿಡಿಫ್ಯೂಷನ್ ಮುಖ್ಯಸ್ಥ ಸಂದೀಪ್ ಗೋಯಲ್ ಅವರ ಪ್ರಕಾರ, ಭಾರತದ ಉನ್ನತ ದೇಶೀಯ ರೆಡ್-ಬಾಲ್ ಟೂರ್ನಮೆಂಟ್ – ರಣಜಿ ಟ್ರೋಫಿ ಸೇರಿದಂತೆ ಅದರ ದೇಶೀಯ ಸ್ಪರ್ಧೆಗಳನ್ನು ವಾಣಿಜ್ಯೀಕರಿಸಲು ಹೆಚ್ಚಿನ ಸಾಮರ್ಥ್ಯ ಇರುವುದರಿಂದ ಮಂಡಳಿಯು ಆದಾಯ ವಿಷಯದಲ್ಲಿ ತನ್ನ ಪೂರ್ಣ ಸಾಮರ್ಥ್ಯವನ್ನು  ಬಳಸಿಕೊಳ್ಳಲಿದೆ.

“ಐಪಿಎಲ್ ಅಲ್ಲದ ಆದಾಯವನ್ನು ಹೆಚ್ಚಿಸಲು ಬಿಸಿಸಿಐ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಅಥವಾ ಸಿಕೆ ನಾಯುಡು ಟ್ರೋಫಿಯಂತಹ ಸಾಂಪ್ರದಾಯಿಕ ಸ್ವರೂಪಗಳನ್ನು ವಾಣಿಜ್ಯೀಕರಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ” ಎಂದು ಗೋಯಲ್ ಹೇಳಿದರು. ಮಂಡಳಿಯು ರೂ 30,000 ಕೋಟಿ ಮೀಸಲು ಹಣವನ್ನು ಹೊಂದಿದೆ, ಇದು ವರ್ಷಕ್ಕೆ ಸುಮಾರು ರೂ 1,000 ಕೋಟಿ ಬಡ್ಡಿಯನ್ನು ಉತ್ಪಾದಿಸುತ್ತಿದೆ.

ವರದಿಯ ಪ್ರಕಾರ, ಆಟದ ಜಾಗತಿಕ ಆಡಳಿತ ಮಂಡಳಿಯಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಆದಾಯವನ್ನು ಅಗತ್ಯವಿರುವಷ್ಟು ಹೆಚ್ಚಿಸುವಲ್ಲಿ ವಿಫಲವಾಗುತ್ತಿರುವುದರಿಂದ, ನಿಧಿಗಾಗಿ ಬಿಸಿಸಿಐ ಮೇಲೆ ಅವಲಂಬಿತವಾಗಿದೆ.