ಆದರೆ ಶುಭಮನ್ ಗಿಲ್ ಮತ್ತು ಸಾರಾ ಜೊತೆ ಜೊತೆಗೆ ಎಲ್ಲಿಯೂ ಕಾಣಿಸಿಕೊಳ್ಳದೆ ಇದ್ದರೂ, ಒಂದೇ ಕಾರ್ಯಕ್ರಮದಲ್ಲಿ ಅಥವಾ ಪಾರ್ಟಿಗಳಲ್ಲಿ ಕಾಣಿಸಿಕೊಂಡ ಉದಾಹರಣೆಗಳು ತುಂಬಾನೇ ಇವೆ. ಹಾಗಾಗಿ ಇವರ ಮಧ್ಯೆ ಏನೋ ನಡೀತಾ ಇದೆ ಅನ್ನೋ ಮಾತುಗಳು ಎದ್ದಿರುವಂತದ್ದು ಮಾತ್ರ ನಿಜ.
ಆದರೆ ಸಚಿನ್ ತೆಂಡೂಲ್ಕರ್ ಅವರಿಗಿಂತ ಅವರ ಪತ್ನಿ ಅಂಜಲಿ ಅವರು ಹೇಗೆ ವಯಸ್ಸಿನಲ್ಲಿ ದೊಡ್ಡವರೋ, ಅದೇ ರೀತಿಯ ಸಮೀಕರಣ ಶುಭಮನ್ ಗಿಲ್ ಮತ್ತು ಸಾರಾ ಅವರ ಮಧ್ಯೆ ಸಹ ನೋಡಲು ಸಿಗುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸುವಂತದ್ದು.
ಏನಿದು ಸಮೀಕರಣ ಅಂತೀರಾ? ಬನ್ನಿ ಹಾಗಾದರೆ ಈ ಜೋಡಿಯ ವಯಸ್ಸು, ಅವರ ವಿದ್ಯಾಭ್ಯಾಸ ಮತ್ತು ಅವರ ಒಟ್ಟು ಆಸ್ತಿಯ ಬಗ್ಗೆ ತಿಳಿದುಕೊಳ್ಳೋಣ.
ಶುಭಮನ್ ಗಿಲ್ ಅವರು ಸೆಪ್ಟೆಂಬರ್ 8, 1999 ರಂದು ಜನಿಸಿದರು ಮತ್ತು 2025 ರಲ್ಲಿ ಅವರಿಗೆ 25 ವರ್ಷ ತುಂಬಿದೆ. ಸಾರಾ ತೆಂಡೂಲ್ಕರ್ ಅಕ್ಟೋಬರ್ 12, 1997 ರಂದು ಜನಿಸಿದರು ಮತ್ತು 2025 ರಲ್ಲಿ ಅವರಿಗೆ 27 ವರ್ಷ ತುಂಬಿದೆ. ಇದರ ಪ್ರಕಾರ ಸಾರಾ ಶುಭಮನ್ ಅವರಿಗಿಂತಲೂ ಎರಡು ವರ್ಷ ದೊಡ್ಡವರು ಅನ್ನೋದು ಅರ್ಥವಾಗುತ್ತದೆ.
ಶುಭಮನ್ ಗಿಲ್ ಅವರು ಪಂಜಾಬ್‌ನ ಮೊಹಾಲಿಯಲ್ಲಿರುವ ಮಾನವ್ ಮಂಗಲ್ ಸ್ಮಾರ್ಟ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು.
ಕೇವಲ 17ನೇ ವಯಸ್ಸಿನಲ್ಲಿಯೇ ಅವರು ಅಂಡರ್-19 ಕ್ರಿಕೆಟ್ ತಂಡವನ್ನು ಸೇರಿದಾಗಿನಿಂದ, ಅವರು ತಮ್ಮ ಅಧ್ಯಯನಕ್ಕೆ ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಹಲವಾರು ವರದಿಗಳ ಪ್ರಕಾರ, ಗಿಲ್ ಅವರು ತಮ್ಮ ಕಾಲೇಜು ವಿದ್ಯಾಭ್ಯಾಸವನ್ನು ಸಹ ಪೂರ್ತಿಯಾಗಿ ಮುಗಿಸಿಲ್ವಂತೆ.
ಆದರೆ ಸಾರಾ ತೆಂಡೂಲ್ಕರ್ ಅವರು ಮುಂಬೈನ ಧೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರು, ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಲಂಡನ್‌ಗೆ ಹೋದರು.
ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ನಲ್ಲಿ, ಅವರು ಕ್ಲಿನಿಕಲ್ ಆಂಡ್ ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಅವರ ಕಠಿಣ ಪರಿಶ್ರಮಕ್ಕಾಗಿ ಪ್ರಶಂಸಿಸಲ್ಪಟ್ಟರು. ಅವರು ಅಲ್ಲಿದ್ದಾಗ ಬಯೋಮೆಡಿಕಲ್ ಸೈನ್ಸಸ್ ಅನ್ನು ಸಹ ಅಧ್ಯಯನ ಮಾಡಿದರು.
2025 ರಲ್ಲಿ, ಶುಭಮನ್ ಅವರ ಒಟ್ಟು ಆಸ್ತಿ ಸುಮಾರು 32 ರಿಂದ 34 ಕೋಟಿ ರೂಪಾಯಿ ಅಂತ ಅಂದಾಜಿಸಲಾಗಿದೆ. ಅವರು ಈ ಒಟ್ಟು ಆಸ್ತಿಯನ್ನು ಕ್ರಿಕೆಟ್ ಆಟ ಆಡುವ ಮೂಲಕವೇ ಗಳಿಸಿದ್ದಾರಂತೆ.
ಸಾರಾ ತೆಂಡೂಲ್ಕರ್ ಮತ್ತು ಅವರ ಸಹೋದರ ಅರ್ಜುನ್ ಇಬ್ಬರೂ ಸಚಿನ್ ತೆಂಡೂಲ್ಕರ್ ಅವರ ಸಂಪತ್ತನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.
Bangalore,Karnataka
July 19, 2025 7:03 PM IST