Last Updated:
ಧೋನಿ, ಸಾಕ್ಷಿ, ಮತ್ತು ಜೀವಾ ದೇವಾಲಯದಲ್ಲಿ ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸಿದರು. ಧೋನಿ ಹಣೆಗೆ ಕೆಂಪು ತಿಲಕ ಮತ್ತು ಕುತ್ತಿಗೆಗೆ ಕೆಂಪು ಸಾಲು ಧರಿಸಿ ಪೂಜೆಯಲ್ಲಿ ಭಾಗವಹಿಸಿದ್ದರು. ಧೋನಿ ಕುಟುಂಬ ಪೂಜೆ ಸಲ್ಲಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತದ ಮಾಜಿ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ತಮ್ಮ ಹುಟ್ಟೂರು ರಾಂಚಿಯಲ್ಲಿದ್ದಾರೆ. ಇತ್ತೀಚೆಗೆ ಅವರು ತಮ್ಮ ಪತ್ನಿ ಸಾಕ್ಷಿ (Sakshi) ಮತ್ತು ಮಗಳು ಜೀವಾ (Ziva) ಅವರೊಂದಿಗೆ ರಾಂಚಿಯ ದೇವ್ಡಿ ಗ್ರಾಮದಲ್ಲಿರುವ ಮಾ ದೇವ್ದಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ದೇವಾಲಯ ಸುಮಾರು 700 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ ಮತ್ತು ಸ್ಥಳೀಯ ಜನರಲ್ಲಿ ಬಹಳ ಜನಪ್ರಿಯವಾಗಿದೆ. ಧೋನಿ ಯಾವಾಗಲೂ ರಾಂಚಿಗೆ (Ranchi) ಬಂದಾಗ ಈ ದೇವಾಲಯಕ್ಕೆ ತಪ್ಪದೇ ಭೇಟಿ ನೀಡುತ್ತಾರೆ. ಈ ಬಾರಿಯೂ ದೇವಾಯಲಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದರು .
ಧೋನಿ, ಸಾಕ್ಷಿ, ಮತ್ತು ಜೀವಾ ದೇವಾಲಯದಲ್ಲಿ ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸಿದರು. ಧೋನಿ ಹಣೆಗೆ ಕೆಂಪು ತಿಲಕ ಮತ್ತು ಕುತ್ತಿಗೆಗೆ ಕೆಂಪು ಸಾಲು ಧರಿಸಿ ಪೂಜೆಯಲ್ಲಿ ಭಾಗವಹಿಸಿದ್ದರು. ಧೋನಿ ಕುಟುಂಬ ಪೂಜೆ ಸಲ್ಲಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೇ ಸಂದರ್ಭದಲ್ಲಿ 15ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಧೋನಿ ಮತ್ತು ಸಾಕ್ಷಿ ನಡುವಿನ ಮೋಜಿನ ಕ್ಷಣವನ್ನು ಈ ವೀಡಿಯೊ ಕ್ಲಿಪ್ ವೈರಲ್ ಆಗಿದೆ . ಪೂಜೆಯ ಸಮಯದಲ್ಲಿ, ಸಾಕ್ಷಿಗೆ ತೆಂಗಿನ ಕಾಯಿ ಹೊಡೆಯಲು ನೀಡಲಾಯಿತು. ಆದರೆ ಅವರು ಸರಿಯಾಗಿ ಒಡೆಯಲು ಸಾಧ್ಯವಾಗಲಿಲ್ಲ . ನಂತರ ಧೋನಿ ತಮ್ಮ ಕೈಯಿಂದ ತೆಂಗಿನಕಾಯಿಯನ್ನು ತೆಗೆದುಕೊಂಡು ಕೊನೆಗೆ ಒಡೆದರು, ಇಬ್ಬರ ಮುಖಗಳಲ್ಲಿ ನಗು ತರಿಸಿತು . ನಂತರ, ಜೀವಾ ಕೂಡ ಅವರನ್ನು ಹಿಂಬಾಲಿಸಿದಳು ಮತ್ತು ಮೂವರೂ ಎದ್ದು ನಿಂತು ಕೈಗಳನ್ನು ಜೋಡಿಸಿ ದೇವರನ್ನು ಪ್ರಾರ್ಥಿಸಿದರು.
ಧೋನಿ ತಮ್ಮ ವೈಯಕ್ತಿಕ ಜೀವನವನ್ನು ಸಾಧ್ಯವಾದಷ್ಟು ಖಾಸಗಿಯಾಗಿಡಲು ಇಷ್ಟಪಡುತ್ತಾರೆ. ಆದರೂ 44 ವರ್ಷದ ಧೋನಿ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದು ಬ್ರಾಂಡ್ ಪ್ರಚಾರವಾಗಲಿ ಅಥವಾ ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದಾಗಲಿ ಆಗಸ್ಟ್ 2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಈ ದಂತಕಥೆಯ ಜನಪ್ರಿಯತೆಯಲ್ಲಿ ಎನ್ನೂ ಕಡಿಮೆಯಾಗಿಲ್ಲ.
ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಿರಾಶಾದಾಯಕ ಪ್ರದರ್ಶನ ನೀಡಿತು. ತಂಡವು ಕೊನೆಯ ಸ್ಥಾನದಲ್ಲಿ ಸೀಸನ್ ಮುಗಿಸಿತು. ಧೋನಿ 2026 ರ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುತ್ತಾರೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಅವರ ವಯಸ್ಸು (44) ಮತ್ತು ಫಾರ್ಮ್‌ನ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ.
July 19, 2025 11:12 PM IST