Mangaluru: ನೋಡ ನೋಡುತ್ತಿದ್ದಂತೆಯೇ ಕೆಲ ಕ್ಷಣಗಳಲ್ಲೇ 350 ಅಡಿ ಎತ್ತರದ ಕಾರಿಂಜ ಬೆಟ್ಟವನ್ನೇರಿದ ‘ಕರ್ನಾಟಕದ ಸ್ಪೈಡರ್‌ಮ್ಯಾನ್’ | Karnataka s Spiderman jyothi raj climbed 350-foot-high Karinja Hill in 30 minutes

Mangaluru: ನೋಡ ನೋಡುತ್ತಿದ್ದಂತೆಯೇ ಕೆಲ ಕ್ಷಣಗಳಲ್ಲೇ 350 ಅಡಿ ಎತ್ತರದ ಕಾರಿಂಜ ಬೆಟ್ಟವನ್ನೇರಿದ ‘ಕರ್ನಾಟಕದ ಸ್ಪೈಡರ್‌ಮ್ಯಾನ್’ | Karnataka s Spiderman jyothi raj climbed 350-foot-high Karinja Hill in 30 minutes

Last Updated:

ಜ್ಯೋತಿ ರಾಜ್ ಇಲ್ಲಿಯವರೆಗೆ ಒಟ್ಟು ಐವತ್ತಕ್ಕೂ ಅಧಿಕ ಜನರಿಗೆ ತರಬೇತಿ ನೀಡಿದ್ದಾರೆ. ಇವರಿಂದ ತರಬೇತಿ ಪಡೆದ 30 ಯುವಕರು ಈಗಾಗಲೇ ಸೇನೆಯನ್ನು ಸೇರಿದ್ದಾರೆ.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಅದು ಸಮುದ್ರಮಟ್ಟದಿಂದ (Sea) ಅಡಿ ಎತ್ತರದ ಕರಿಬಂಡೆ. ನೆತ್ತಿ ಸುಡುತ್ತಿದ್ದ ಬಿಸಿಲು ಆ ಬಂಡೆಯನ್ನು (Summer) ಕಾದ ಕಬ್ಬಿಣದಂತೆ ಮಾಡಿತ್ತು. ಇದೇ ಸಂದರ್ಭದಲ್ಲಿ ಚಕಚಕನೇ ಬಂಡೆ ಹತ್ತಿದ್ದ ಕರ್ನಾಟಕದ (Karnataka) ಸ್ಪೈಡರ್ ಮ್ಯಾನ್ (Spider-Man) ಖ್ಯಾತಿಯ ಕೋತಿರಾಜ್ (Jyothi Raj) ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಅತೀ ಎತ್ತರದ ಬೆಟ್ಟಗಳಲ್ಲೊಂದಾದ ಬಂಟ್ವಾಳ ವಗ್ಗ ಸಮೀಪದ ಕಾರಿಂಜ ಬೆಟ್ಟವನ್ನು ‘ಕರ್ನಾಟಕದ ಸ್ಪೈಡರ್‌ಮ್ಯಾನ್’ ಜ್ಯೋತಿರಾಜ್ ಅವರು ಕೇವಲ ಅರ್ಧತಾಸಿನಲ್ಲಿ ಸರಸರನೇ ಏರಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ.

ಜ್ಯೋತಿರಾಜ್ ಅವರು ಇದೇ ಮೊದಲ ಬಾರಿಗೆ ಕಾರಿಂಜದ ಬೆಟ್ಟವೇರುವ ಸಾಹಸ ಮಾಡಿದ್ದಾರೆ. ಬೆಳಗ್ಗೆ 10 ಗಂಟೆ ವೇಳೆಗೆ ಇತಿಹಾಸ ಪ್ರಸಿದ್ಧ ಬೆಟ್ಟವೇರಲು ಆರಂಭಿಸಿದ್ದಾರೆ. ಬಿಸಿಲ ಝಳವನ್ನೂ ಲೆಕ್ಕಿಸದೇ ಕೇವಲ ಅರ್ಧ ಗಂಟೆಗಿಂತ ಮೊದಲೇ ಬೆಟ್ಟದ ತುದಿಯಲ್ಲಿರುವ ಶ್ರೀ ಕಾರಿಂಜೇಶ್ವರನ ಸನ್ನಿಧಾನವನ್ನು ಅವರು ತಲುಪಿದ್ದರು.

ನೋಡುನೋಡುತ್ತಿದ್ದಂತೆ ಜ್ಯೋತಿರಾಜ್ ಸರಸರನೇ ಬೆಟ್ಟವನ್ನು ಏರಿ ನೆರಿದಿದ್ದ ನೂರಾರು ಕೂತೂಹಲಿಗ ಕಣ್ಣುಗಳನ್ನು ನಿಬ್ಬೆರಗಾಗಿಸಿದ್ದಾರೆ. ಸುಡುವ ತಾಪವನ್ನು ಲೆಕ್ಕಿಸದೇ ಅವರು 350 ಅಡಿ ಎತ್ತರದ ಬಂಡೆಗಲ್ಲುಗಳನ್ನು ಹತ್ತಿ ಬೆಟ್ಟದ ತುದಿ ತಲುಪಿದ್ದಾರೆ. ಈ ಸಾಹಸ ಮಾಡಲು ಶನಿವಾರ ಪ್ರ್ಯಾಕ್ಟೀಸ್ ಮಾಡಿದ್ದರು. ಈ ವೇಳೆ ಬೆಟ್ಟವೇರಲು ಒಂದು ತಾಸು ತೆಗೆದುಕೊಂಡಿದ್ದ ಜ್ಯೋತಿರಾಜ್ ಕೇವಲ ಅರ್ಧ ತಾಸಿನಲ್ಲೇ ಬೆಟ್ಟವೇರಿ ಸಾಹಸ ಮೆರೆದಿದ್ದಾರೆ.

ಇದನ್ನೂ ಓದಿ: Bengaluru: ಟ್ಯಾಂಕರ್ ಮಾಫಿಯಾಗೆ ಗುನ್ನ! ಕಾವೇರಿ ನೀರು ಬೇಕಾ? ಮೊಬೈಲ್ ಆ್ಯಪ್​ನಲ್ಲೇ ಬುಕ್ ಮಾಡಿ

ಜ್ಯೋತಿ ರಾಜ್ ಇಲ್ಲಿಯವರೆಗೆ ಒಟ್ಟು ಐವತ್ತಕ್ಕೂ ಅಧಿಕ ಜನರಿಗೆ ತರಬೇತಿ ನೀಡಿದ್ದಾರೆ. ಇವರಿಂದ ತರಬೇತಿ ಪಡೆದ 30 ಯುವಕರು ಈಗಾಗಲೇ ಸೇನೆಯನ್ನು ಸೇರಿದ್ದಾರೆ.