Test Cricket: ಟೆಸ್ಟ್ ಕ್ರಿಕೆಟ್‌ನಲ್ಲಿ ವೈಟ್​ ಜೆರ್ಸಿ ಬಟ್ಟೆ ಧರಿಸುವುದು ಯಾಕೆ? ಶೇ.99 ಕ್ರಿಕೆಟ್​ ಅಭಿಮಾನಿಗಳಿಗೆ ಈ ವಿಷಯ ಗೊತ್ತೇ ಇಲ್ಲ! | Secret behind wearing white jerseys in Test cricket revealed

Test Cricket: ಟೆಸ್ಟ್ ಕ್ರಿಕೆಟ್‌ನಲ್ಲಿ ವೈಟ್​ ಜೆರ್ಸಿ ಬಟ್ಟೆ ಧರಿಸುವುದು ಯಾಕೆ? ಶೇ.99 ಕ್ರಿಕೆಟ್​ ಅಭಿಮಾನಿಗಳಿಗೆ ಈ ವಿಷಯ ಗೊತ್ತೇ ಇಲ್ಲ! | Secret behind wearing white jerseys in Test cricket revealed

Last Updated:

ಟಿ-20, ಏಕದಿನ ಕ್ರಿಕೆಟ್ ಕ್ರೇಜ್‌ನ ನಡುವೆಯೂ ಟೆಸ್ಟ್ ಕ್ರಿಕೆಟ್‌ ತನ್ನ ಸಾರ್ವಭೌಮತ್ವವನ್ನು ಇನ್ನೂ ಉಳಿಸಿಕೊಂಡಿದೆ. ಹಾಗಿದ್ರೆ, ನಾವಿಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಬಿಳಿ ಜರ್ಸಿ ತೊಡುವುದು ಏಕೆ ಎಂದು ನೋಡೋಣ ಬನ್ನಿ.

ಟೀಂ ಇಂಡಿಯಾಟೀಂ ಇಂಡಿಯಾ
ಟೀಂ ಇಂಡಿಯಾ

ಕ್ರಿಕೆಟ್ ಅನ್ನು ಭಾರತದಂತಹ ದೇಶದಲ್ಲಿ ಒಂದು ಹಬ್ಬವಾಗಿ ಆಚರಿಸುತ್ತಾರೆ. ಒಂದು ಧರ್ಮದಂತೆ ಪೂಜಿಸುತ್ತಾರೆ. ಮಾತ್ರವಲ್ಲ, ಕ್ರಿಕೆಟ್‌ನ ಕುರಿತು ಪ್ರತಿಯೊಂದು ವಿಚಾರವನ್ನು ತಿಳಿದುಕೊಂಡಿರಲು ಕ್ರಿಕೆಟ್ ಅಭಿಮಾನಿಗಳು (Cricket Fans) ಇಷ್ಟಪಡುತ್ತಾರೆ. ಪ್ರಸ್ತುತ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ (Test Cricket) ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಟಿ-20, ಏಕದಿನ ಕ್ರಿಕೆಟ್ ಬಂದ ಬಳಿಕವೂ ಟೆಸ್ಟ್ ಕ್ರಿಕೆಟ್‌ ಕ್ರೇಜ್ ಕಡಿಮೆ ಆಗಿಲ್ಲ. ಹಾಗಿದ್ರೆ, ನಾವಿಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಬಿಳಿ ಜರ್ಸಿ (White Jersey) ತೊಡುವುದು ಏಕೆ ಎಂದು ನೋಡೋಣ ಬನ್ನಿ.

ಟೆಸ್ಟ್ ಕ್ರಿಕೆಟ್ 1877 ರಲ್ಲಿ ಪ್ರಾರಂಭ

ಟೆಸ್ಟ್ ಕ್ರಿಕೆಟ್ 1877 ರಲ್ಲಿ ಪ್ರಾರಂಭವಾಯಿತು. ಮೊದಲ ಪಂದ್ಯ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. ಟೆಸ್ಟ್ ಕ್ರಿಕೆಟ್ ಆರಂಭವಾದಾಗಿನಿಂದ, ಈ ಸ್ವರೂಪದ ಆಟಗಾರರು ಬಿಳಿ ಬಟ್ಟೆ ಮತ್ತು ಕೆಂಪು ಚೆಂಡಿನೊಂದಿಗೆ ಆಡುವುದನ್ನು ಕಾಣಬಹುದು. ಇದರ ಹಿಂದೆ ಹಲವು ಕಾರಣಗಳಿವೆ. ಇದು ಆಟಗಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಅವರು ದಣಿದಿಲ್ಲದೆ ಹೆಚ್ಚು ಸಮಯ ಮೈದಾನದಲ್ಲಿ ಉಳಿಯಬಹುದು ಎಂಬ ಕಾರಣಗಳಿವೆ.

ಬಿಳಿ ಬಟ್ಟೆ ಧರಿಸಲು ಕಾರಣವೇನು?

ಕ್ರಿಕ್ ಸ್ಪೋರ್ಟ್ಸ್‌ ವರದಿ ಪ್ರಕಾರ, ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿರುವ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ ಸಂಶೋಧನಾ ಅಧಿಕಾರಿ ನೀಲ್ ರಾಬಿನ್ಸನ್, 18 ನೇ ಶತಮಾನದಲ್ಲಿ ಕ್ರಿಕೆಟ್ ಪ್ರಾರಂಭವಾಯಿತು ಮತ್ತು ಆ ಸಮಯದಲ್ಲಿ ಜನರು ಸುಲಭವಾಗಿ ಲಭ್ಯವಿರುವ ಬಟ್ಟೆಗಳನ್ನು ಬಳಸಬೇಕಾಗಿ ಬಂತು ಎಂದು ಸಂದರ್ಶನವೊಂದರಲ್ಲಿ ಹೇಳಿದರು.

ಬಿಳಿ ಬಟ್ಟೆ ಧರಿಸುವುದು ಸಂಪೂರ್ಣವಾಗಿ ಪ್ರಾಯೋಗಿಕ ನಿರ್ಧಾರ ಎಂದು ನೀಲ್ ಹೇಳಿದರು. ಏಕೆಂದರೆ ಟೆಸ್ಟ್ ಕ್ರಿಕೆಟ್ ಬೇಸಿಗೆಯ ಆಟವಾಗಿತ್ತು. ಅದಕ್ಕಾಗಿಯೇ ಬಿಳಿ ಬಟ್ಟೆಗಳನ್ನು ಧರಿಸಲಾಗುತ್ತಿತ್ತು. ಬಿಳಿ ಬಟ್ಟೆ ಸೂರ್ಯನ ಕಿರಣಗಳನ್ನು ಹೀರಿಕೊಳ್ಳುವುದರಿಂದ ಮತ್ತು ಸೂರ್ಯನ ಕಿರಣಗಳನ್ನು ಸಾಧ್ಯವಾದಷ್ಟು ಪ್ರತಿಬಿಂಬಿಸುತ್ತವೆ ಹಾಗಾಗಿ ಆಟಗಾರರು ಈ ಬಟ್ಟೆ ಧರಿಸುತ್ತಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Unique Record: ಓವರ್‌ಗೆ 6 ಬಾಲ್ ಅಂತಾ ಎಲ್ಲರಿಗೂ ಗೊತ್ತು: ಆದ್ರೆ, ಈ ಮೂವರು ಮಾತ್ರ 5 ಎಸೆತ ಬೌಲ್ ಮಾಡಿ ಓವರ್ ಮುಗಿಸಿದ್ದಾರೆ!

ಇನ್ನೊಂದು ಪ್ರಮುಖ ಕಾರಣವೆಂದರೆ ಬ್ರಿಟಿಷರು ಬಿಳಿ ಬಣ್ಣವನ್ನು ರಾಜಮನೆತನ ಮತ್ತು ಹೆಮ್ಮೆಯ ಸಂಕೇತವೆಂದು ಪರಿಗಣಿಸಿದ್ದರು. ಇದರಿಂದಾಗಿ ಅವರು ಕ್ರೀಡೆಗಳಲ್ಲಿಯೂ ಬಿಳಿ ಬಣ್ಣವನ್ನು ಧರಿಸಲು ಪ್ರಾರಂಭಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ, ಬಿಳಿ ಬಟ್ಟೆಯಿಂದಾಗಿ ಆಟವು ಕೆಂಪು ಚೆಂಡಿನಿಂದ ಪ್ರಾರಂಭವಾಯಿತು. ಏಕೆಂದರೆ ಬಟ್ಟೆ ಬಿಳಿಯಾಗಿದ್ದರೆ ಚೆಂಡು ಕೂಡ ಬಿಳಿ ಬಣ್ಣದಲ್ಲಿದ್ದರೆ, ಅದನ್ನು ಸುಲಭವಾಗಿ ಚೆಂಡನ್ನು ಗುರುತಿಸಲು ಸಾಧ್ಯವಿಲ್ಲ ಎಂಬುದು ಕೂಡ ಒಂದು ಕಾರಣವಾಗಿದೆ.

ಈ ಎಲ್ಲಾ ಕಾರಣಕ್ಕಾಗಿ, ಟೆಸ್ಟ್ ಕ್ರಿಕೆಟ್‌ ಕೆಂಪು ಚೆಂಡನ್ನು ಬಳಸಲು ಪ್ರಾರಂಭಿಸಲಾಯಿತು. ಇದನ್ನು ಬಿಳಿ ಬಟ್ಟೆಗಳ ವಿರುದ್ಧ ಸುಲಭವಾಗಿ ಕಾಣಬಹುದು. ಈಗ ಹಗಲು-ರಾತ್ರಿ ಟೆಸ್ಟ್ ಪಂದ್ಯಗಳಲ್ಲಿ ಗುಲಾಬಿ ಚೆಂಡನ್ನು ಬಳಸಲಾಗುತ್ತದೆ, ಏಕೆಂದರೆ ಅದು ರಾತ್ರಿಯಲ್ಲಿ ಸುಲಭವಾಗಿ ಬಾಲ್ ಕಾಣುತ್ತದೆ ಎಂಬುದು ಒಂದು ಕಾರಣವಾಗಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Test Cricket: ಟೆಸ್ಟ್ ಕ್ರಿಕೆಟ್‌ನಲ್ಲಿ ವೈಟ್​ ಜೆರ್ಸಿ ಬಟ್ಟೆ ಧರಿಸುವುದು ಯಾಕೆ? ಶೇ.99 ಕ್ರಿಕೆಟ್​ ಅಭಿಮಾನಿಗಳಿಗೆ ಈ ವಿಷಯ ಗೊತ್ತೇ ಇಲ್ಲ!