ಸೆರ್ಬಿಯಾದ ಮಾಡೆಲ್-ನಟಿ ನತಾಶಾ ಸ್ಟಾಂಕೋವಿಕ್ ಸುಂದರಿ. ಅವರು ಡಿವೋರ್ಸ್ ವದಂತಿ ಶುರುವಾದಾಗ ಪಾಂಡ್ಯ ಎಂಬ ಸರ್ ನೇಮ್ ತೆಗೆದಿದ್ದರು. ಪ್ರೇಮ ಪಕ್ಷಿಗಳ ಬಿರುಕು ಸುದ್ದಿ ಮಾಡಿತು. ಆದರೆ ಸದ್ದೇ ಇಲ್ಲದೆ ಶುರುವಾದ ಪ್ರೇಮ ಕಥೆ ಗೊತ್ತಾ?
ಸೆರ್ಬಿಯಾ ಮೂಲದ ಮಾಡೆಲ್ ಜೀವನ ಕಲರ್ ಫುಲ್ ಆಗಿದೆ. ‘ಬಿಗ್ ಬಾಸ್’ ಸೀಸನ್ 8 ರಲ್ಲಿ ಭಾಗವಹಿಸುವುದರಿಂದ ಹಿಡಿದು ಸೀರಿಯಲ್ ನಟ ಅಲಿ ಗೋನಿಯೊಂದಿಗೆ ಡೇಟಿಂಗ್ ಮಾಡುವವರೆಗೆ ಅವರು ಸುದ್ದಿಯಾಗಿದ್ದರು. ಪಾಂಡ್ಯ ಅವರನ್ನು ಎರಡು ಬಾರಿ ಮದುವೆಯಾಗುವವ ಮೊದಲು ಅವರು ಹೇಗೆ ಫೇಮಸ್ ಆಗಿದ್ದರು ಗೊತ್ತಾ?
ಮಾರ್ಚ್ 4, 1992 ರಂದು ಸೆರ್ಬಿಯಾದಲ್ಲಿ ಜನಿಸಿದ ನತಾಶಾ ಸ್ಟಾಂಕೋವಿಕ್, ಭಾರತೀಯ ಚಿತ್ರರಂಗದ ಕ್ರಿಯಾತ್ಮಕ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲು ಮಾಡೆಲ್ ಆಗಿ ವೃತ್ತಿಜೀವನವನ್ನು ಆರಂಭಿಸಿದರು. ಅವರ ಬಾಲಿವುಡ್ ಪ್ರಯಾಣವು 2013 ರಲ್ಲಿ ಪ್ರಕಾಶ್ ಝಾ ಅವರ ‘ಸತ್ಯಾಗ್ರಹ’ ದೊಂದಿಗೆ ಪ್ರಾರಂಭವಾಯಿತು.
ಅಲ್ಲಿ ಅವರು ಅಜಯ್ ದೇವಗನ್ ಅವರೊಂದಿಗೆ ‘ಐಯೋ ಜಿ’ ಡ್ಯಾನ್ಸ್ನಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ಹೀಗಿದ್ದರೂ ಬಾದ್ಶಾ ಮತ್ತು ಆಸ್ತಾ ಗಿಲ್ ಅವರ ‘ಡಿಜೆ ವಾಲೆ ಬಾಬು’ ಡ್ಯಾನ್ಸ್ ಆಲ್ಬಂನಲ್ಲಿ ಅವರ ಗಮನಾರ್ಹ ಲುಕ್ ಅವರನ್ನು ನಿಜವಾಗಿಯೂ ಎಲ್ಲರೂ ತಿರುಗಿ ನೋಡುವಂತೆ ಮಾಡಿ ಗಮನ ಸೆಳೆಯಿತು. ಅವರ ಮೋಡಿಮಾಡುವ ಡ್ಯಾನ್ಸ್ ಮತ್ತು ಸೌಂದರ್ಯ ಪ್ರೇಕ್ಷಕರನ್ನು ಆಕರ್ಷಿಸಿತು.
ರಿಯಾಲಿಟಿ ಟಿವಿ ಸ್ಟಿಂಟ್
ನತಾಶಾ 2014 ರಲ್ಲಿ ಭಾರತೀಯ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 8 ರ ಸ್ಪರ್ಧಿಯಾಗಿ ಸೇರಿದಾಗ ಗಣನೀಯ ಗಮನ ಸೆಳೆದರು. ಅವರನ್ನು ಎಲಿಮಿನೇಟ್ ಮಾಡುವ ಮೊದಲು ಒಂದು ತಿಂಗಳ ಕಾಲ ಮನೆಯಲ್ಲಿದ್ದರು.
ಹಾರ್ದಿಕ್ ಪಾಂಡ್ಯಾ-ನತಾಶ
ಹೆಚ್ಚುವರಿಯಾಗಿ, ಅವರು ನಾಚ್ ಬಲಿಯೇ 9 ನೇ ಸೀಸನ್ನಲ್ಲಿ ತಮ್ಮ ಅಂದಿನ ಬಾಯ್ಫ್ರೆಂಡ್ ನಟ ಅಲಿ ಗೋನಿ ಜೊತೆಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಆ ಜೋಡಿ ಸಖತ್ ಫೇಮಸ್ ಆಗಿತ್ತು.
ಪಾಂಡ್ಯ ಅವರೊಂದಿಗಿನ ಪ್ರೇಮಕಥೆ ಶುರುವಾಗಿದ್ಯಾವಾಗ?
ಈ ಜೋಡಿ 2018 ರಲ್ಲಿ ಮುಂಬೈನ ನೈಟ್ಕ್ಲಬ್ನಲ್ಲಿ ಭೇಟಿಯಾದರು ಎಂದು ವರದಿಯಾಗಿದೆ. ಅವರು ಕಾಮನ್ ಫ್ರೆಂಡ್ ಮೂಲಕ ಮೊದಲ ಬಾರಿಗೆ ಭೇಟಿಯಾಗಿದ್ದರಂತೆ. ಪಾಂಡ್ಯ ಹ್ಯಾಂಡ್ಶೇಕ್ ಮಾಡುವ ಬದಲು ಭೇಟಿಯಾದ ಮೊದಲ ಕ್ಷಣದಲ್ಲಿ ನತಾಶಾ ಅವರನ್ನು ಹಗ್ ಮಾಡೋಕೆ ಹೋಗಿದ್ರಂತೆ.
ನಾನು ನನ್ನ ಕೆಲವು ಸ್ನೇಹಿತರೊಂದಿಗೆ ಹೊರಗೆ ಹೋಗಿದ್ದೆ. ನನ್ನ ಒಬ್ಬ ಸ್ನೇಹಿತ ಕೂಡ ಇದ್ದ. ಅವನು ಪಾಂಡ್ಯನ ಸ್ನೇಹಿತನಾಗಿದ್ದನು.
ಇದನ್ನೂ ಓದಿ: Bigg Boss Rajath: ರೀಲ್ಸ್ ತಂದ ಆಪತ್ತು! FIR ಬೆನ್ನಲ್ಲೇ ರಜತ್ ಮೊಬೈಲ್ ಸ್ವಿಚ್ ಆಫ್! ಗಂಡನ ಬದಲು ವಿಚಾರಣೆಗೆ ಬಂದ ಪತ್ನಿ
ಪಾಂಡ್ಯ ಅವರಿಗೆ ಮೊದಲ ನೋಟದಲ್ಲೇ ಪ್ರೀತಿ ಆಗಿತ್ತು ಎನ್ನಲಾಗಿದೆ. ಒಮ್ಮೆ ನಾನು ಟೇಬಲ್ ಪಕ್ಕ ಕುಳಿತಾಗ ನಾನು ನತಾಶಾ ಜೊತೆ ಮಾತನಾಡಲು ಪ್ರಯತ್ನಿಸುತ್ತಿದ್ದೆ. ಅವಳು ಸ್ಪಷ್ಟವಾಗಿ ತುಂಬಾ ಸುಂದರವಾಗಿದ್ದಳು. ಆಗಿನಿಂದಲೇ ನಾನು ಅವಳನ್ನು ಪ್ರೀತಿಸುತ್ತಿದ್ದೆ ಎಂದಿದ್ದಾರೆ ಪಾಂಡ್ಯ.
ನತಾಶಾ
ದಿಢೀರ್ ಮದುವೆ
2020 ರಲ್ಲಿ ಹೊಸ ವರ್ಷದ ದಿನದಂದು, ಹಾರ್ದಿಕ್ ನತಾಶಾಗೆ ಯಾಚ್ನಲ್ಲಿ ಪ್ರಪೋಸ್ ಮಾಡಿದರು. ನಂತರ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಫೋಟೋಗಳು ವೈರಲ್ ಆದವು. ಅವರ ಅಭಿಮಾನಿಗಳನ್ನು ಅಚ್ಚರಿಗೊಳಿಸಿತು.
ಇದನ್ನೂ ಓದಿ: Jaat Trailer: ಸಿಕಂದರ್ಗಿಂತ ಬೆಟರ್ ಅಂತಿದ್ದಾರೆ ಜನ! ಜಾಟ್ ಪವರ್ ಪ್ಯಾಕ್ಡ್ ಟ್ರೈಲರ್ಗೆ ಸಿನಿಪ್ರೇಮಿಗಳು ಫಿದಾ
ನಿಶ್ಚಿತಾರ್ಥದ ಫೋಟೋದಲ್ಲಿ ಈ ಜೋಡಿ ಸ್ಮಾರ್ಟ್ ಕ್ಯಾಶುಯಲ್ ಉಡುಪಿನಲ್ಲಿದ್ದರು. ಹಲವು ತಿಂಗಳುಗಳ ನಂತರ, ಮೇ 2020 ರಲ್ಲಿ, ನತಾಶಾ ಮತ್ತು ಹಾರ್ದಿಕ್ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಬಹಿರಂಗಪಡಿಸಿದರು. ಅವರು ಮೇ 31 ರಂದು ಕೋರ್ಟ್ ಮ್ಯಾರೇಜ್ ಆದರು.
Bangalore,Karnataka
March 24, 2025 10:04 PM IST