Miyazaki Mango: ಜಗತ್ತಿನ ಅತೀ ದುಬಾರಿ ಮಾವಿನ ಹಣ್ಣಿನ ಕೃಷಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಾತಾವರಣ ಸೂಕ್ತವೇ? | Is the climate of Dakshina Kannada district suitable for growing the world’s most expensive mango?

Miyazaki Mango: ಜಗತ್ತಿನ ಅತೀ ದುಬಾರಿ ಮಾವಿನ ಹಣ್ಣಿನ ಕೃಷಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಾತಾವರಣ ಸೂಕ್ತವೇ? | Is the climate of Dakshina Kannada district suitable for growing the world’s most expensive mango?

Last Updated:

ಅತ್ಯಂತ ಹೆಚ್ಚು ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಈ ಹಣ್ಣಿನ ಗಿಡಗಳು ತಮ್ಮ ನೈಜ ರುಚಿಯನ್ನು ನೀಡುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಇಲ್ಲಿನ ವಾತಾವರಣಕ್ಕೆ ಈ ಹಣ್ಣು ಹೆಚ್ಚು ಹೊಂದಿಕೊಳ್ಳದ ಸ್ಥಿತಿಯಲ್ಲಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ವಿಶ್ವದ ಅತ್ಯಂತ ದುಬಾರಿ ಮಾವು(The most expensive mango in the world) ಎನ್ನುವ ಖ್ಯಾತಿಗೆ ಹೆಸರಾದ ಮಿಯಾಜಕಿಯನ್ನು(Miyazaki) ಇಂದು ದೇಶದ ಹಲವು ಕಡೆಗಳಲ್ಲಿ ಬೆಳೆಯಲಾಗುತ್ತದೆ. ಜಪಾನ್ (Japan) ಮೂಲದ ಈ ಹಣ್ಣಿನ ವಿಶಿಷ್ಟ ಸ್ವಾದ ಮತ್ತು ಬಣ್ಣದ ಹಿನ್ನಲೆಯಲ್ಲಿ ಈ ಹಣ್ಣಿಗೆ ಮಾರುಕಟ್ಟೆಯಲ್ಲಿ (Market) ಭಾರೀ ಬೇಡಿಕೆಯ ಜೊತೆಗೆ ದುಬಾರಿ ಹಣವೂ ಇದೆ. ಈ ಮಾವನ್ನು ಕರ್ನಾಟಕದ ಕೆಲವು ಭಾಗದಲ್ಲಿ ಬೆಳೆಯಲಾಗುತ್ತಿದ್ದು, ಈ ಹಣ್ಣಿನ ಸಸಿಗಳು ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲೂ(Dakshina Kannada District) ಪರಿಚಯಿಸಲ್ಪಟ್ಟಿದೆ.

ಬಂಟ್ವಾಳ ತಾಲೂಕಿನ ಅಳಕೆಮಜಲಿನಲ್ಲಿರುವ ಜಾಕ್ ಅನಿಲ್ ಅವರ ನಿನ್ನಿಕಲ್ಲು ನರ್ಸರಿಯಲ್ಲಿ ಈ ಸಸಿಗಳನ್ನು ಪ್ರಾಯೋಗಿಕವಾಗಿ ಇಡಲಾಗಿದೆ. ಈ ಮಾವಿನ ಸಸಿಗೆ 1ರಿಂದ 2 ಸಾವಿರ ರೂಪಾಯಿವರೆಗೂ ಬೆಲೆ ನಿಗದಿಯಾಗಿದೆ. ಅತ್ಯಂತ ಹೆಚ್ಚು ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಈ ಹಣ್ಣಿನ ಗಿಡಗಳು ತಮ್ಮ ನೈಜ ರುಚಿಯನ್ನು ನೀಡುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಇಲ್ಲಿನ ವಾತಾವರಣಕ್ಕೆ ಈ ಹಣ್ಣು ಹೆಚ್ಚು ಹೊಂದಿಕೊಳ್ಳದ ಸ್ಥಿತಿಯಲ್ಲಿದೆ.

ಇದನ್ನೂ ಓದಿ: Dakshina Kannada: ಕಲುಷಿತವಾಗುತ್ತಿದೆ ಕುಮಾರಧಾರಾ ನದಿ ಒಡಲು!

ಉತ್ತರ ಕರ್ನಾಟಕ ಭಾಗದಲ್ಲಿ ಈ ಮಾವಿನ ಸಸಿಯನ್ನು ಬೆಳೆಸಿದ ಕೃಷಿಕನ ತೋಟದಲ್ಲಿ ಮಿಯಾಜಕಿ ಹಣ್ಣು ತನ್ನ ಸ್ವಾದ ಮತ್ತು ಬಣ್ಣದಲ್ಲಿ ಯಾವುದೇ ವ್ಯತ್ಯಾಸವಿಲ್ಲದ ರೀತಿಯಲ್ಲಿ ಬೆಳೆದಿದ್ದು ದಕ್ಷಿಣಕನ್ನಡ ಜಿಲ್ಲೆಗೆ ಹೋಲಿಸಿದಂತೆ ಈ ಸಸಿಗಳಲ್ಲಿ ಅದೇ ಬಣ್ಣ ಮತ್ತು ಸ್ವಾದದ ಹಣ್ಣುಗಳು ಲಭ್ಯವಾಗಿಲ್ಲ. ಸಿಹಿ ಮತ್ತು ಬಣ್ಣದಲ್ಲೂ ವ್ಯತ್ಯಾಸ ಕಂಡಿದ್ದು, ಕಡಿಮೆ ಸಿಹಿ ಮತ್ತು ಕೆಂಪು ಬಣ್ಣದ ಬದಲು ಹಸಿರು ಮಿಶ್ರಿತ ಕೆಂಪು ಬಣ್ಣದಲ್ಲಿ ಈ ಹಣ್ಣುಗಳು ಬೆಳೆದಿವೆ.

ಈ ಕಾರಣಕ್ಕೆ ಈ ಸಸಿಗಳನ್ನು ಜಾಕ್ ಅನಿಲ್ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರಿಗೆ ಹೆಚ್ಚು ರೆಫರ್ ಮಾಡದೆ ಉತ್ತರ ಕರ್ನಾಟಕ ಭಾಗದಿಂದ ಬರುವ ಕೃಷಿಕರಿಗೆ ಮಾತ್ರವೇ ಈ‌ ಹಣ್ಣಿನ ಸಸಿಗಳನ್ನು ನೀಡುತ್ತಿದ್ದಾರೆ. ವಿಪರೀತ ಮಳೆ ಒಂದೆಡೆ, ವಿಪರೀತ ಬಿಸಿಲು ಒಂದೆಡೆ ಇರುವ ದಕ್ಷಿಣ ಕನ್ನಡ ವಾತಾವರಣಕ್ಕೆ ಈ ಹಣ್ಣಿನ ಗಿಡಗಳು ಒಗ್ಗಿಕೊಳ್ಳದ ಹಿನ್ನಲೆಯಲ್ಲಿ, ಜಗತ್ತಿನ ಅತೀ ದುಬಾರಿ ಹಣ್ಣನ್ನು ಬೆಳೆಯಬೇಕೆಂಬ ಜಿಲ್ಲೆಯ ಜನರ ಆಸಕ್ತಿಗೆ ಈ ಅಂಶಗಳು ಅಡ್ಡಿಯಾಗಿವೆ.