Dakshina Kannada: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಈ ಬಾರಿ ಮುತ್ತು ಬೆಳೆದ ಕೆರೆಯ ಪಕ್ಕದಲ್ಲೇ ಅನ್ನದಾನ! | Food donation for Puttur Mahalingeshwar temple fair next to pearl grown lake this time

Dakshina Kannada: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಈ ಬಾರಿ ಮುತ್ತು ಬೆಳೆದ ಕೆರೆಯ ಪಕ್ಕದಲ್ಲೇ ಅನ್ನದಾನ! | Food donation for Puttur Mahalingeshwar temple fair next to pearl grown lake this time

Last Updated:

ದೇವಳದ ಪ್ರಧಾನ ಅರ್ಚಕ ವ್ಯವಸ್ಥಾಪನಾ ಸಮಿತಿ ಸದಸ್ಯ ವೇ ಮೂ ವಸಂತ ಕೆದಿಲಾಯ ಅವರು ಚಪ್ಪರ ಮುಹೂರ್ತಕ್ಕೆ ಪೂಜಾ ಕಾರ್ಯಕ್ರಮ ನೆರವೇರಿಸಿದರು.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಮಹಾದೇವನು ನ್ಯಾಯ, ನೀತಿ, ಪರಿಪಾಲನೆಯ ಶಕ್ತಿ ಸ್ವರೂಪ. ಹತ್ತು ಹಲವು ಐತಿಹ್ಯಗಳಿಂದ ಕಾರಣಿಕ ಕ್ಷೇತ್ರವಾಗಿರುವ ಇತಿಹಾಸ ಪ್ರಸಿದ್ಧ ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ(Mahalingeshwara Temple) ಕೆರೆಯಲ್ಲಿ ಅನ್ನದ ಅಗಳುಗಳು ಮುತ್ತಾಗಿ ಮಾರ್ಪಟ್ಟ ಐತಿಹ್ಯವಿದೆ. ಕಾಕತಾಳಿಯವೋ ಏನೋ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಈ ಬಾರಿಯ ಜಾತ್ರೆಯಲ್ಲಿ ಭಕ್ತರಿಗೆ ಅನ್ನಪ್ರಸಾದವನ್ನು ದೇವಳದ ಕೆರೆಯ ಬಳಿಯ ವಿಶಾಲವಾದ ಜಾಗದಲ್ಲಿ ವಿತರಣೆ ಮಾಡುವುದೆಂದು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: Dakshina Kannada: ಗಗನ ಚುಂಬಿಸುವ ಎತ್ತರದಲ್ಲಿರುವ ಈ ದೈವಸ್ಥಾನವನ್ನೊಮ್ಮೆ ನೋಡಲೇಬೇಕು!

ಈ ಪ್ರಕಾರ ಮಾರ್ಚ್‌ 24 ರಂದು ದೇವಳದ ಕೆರೆಯ ಬಳಿ ಅನ್ನಪ್ರಸಾದ ವಿತರಣೆಗೆ ಚಪ್ಪರ ಮುಹೂರ್ತವನ್ನು ನೆರವೇರಿಸಲಾಯಿತು. ಈ ಬಾರಿಯ ಜಾತ್ರೆ ಗತಕಾಲದ ವೈಶಿಷ್ಟ್ಯ ಕಾಣಲಿದೆ. ಇದಕ್ಕೆ ಪೂರಕವಾಗಿ ಚಪ್ಪರ ಮೂಹೂರ್ತಕ್ಕೆ ಒಡೆದ ತೆಂಗಿನಕಾಯಿ ಶುಭ ಸೂಚನೆ ನೀಡಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆ, ನಿತ್ಯ ಬಲಿಯ ಬಳಿಕ ದೇವಳದ ಕೆರೆಯ ಬಳಿ ನೈಋತ್ಯ ಭಾಗದಲ್ಲಿ ಚಪ್ಪರ ಮುಹೂರ್ತ ನಡೆಯಿತು. ದೇವಳದ ಪ್ರಧಾನ ಅರ್ಚಕ ವ್ಯವಸ್ಥಾಪನಾ ಸಮಿತಿ ಸದಸ್ಯ ವೇ ಮೂ ವಸಂತ ಕೆದಿಲಾಯ ಅವರು ಚಪ್ಪರ ಮುಹೂರ್ತಕ್ಕೆ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಮಹಾಲಿಂಗೇಶ್ವರ ದೇವಳದ ಪುಷ್ಕರಣಿಯಲ್ಲಿ ಅನ್ನದ ಅಗಳು ಮುತ್ತಾಗಿ ಬದಲಾದ ಬಗ್ಗೆ ಕ್ಷೇತ್ರದ ಇತಿಹಾಸದಲ್ಲಿ ಉಲ್ಲೇಖವಿದೆ. ಇದೇ ಕಾರಣಕ್ಕೆ ಮಹಾಲಿಂಗೇಶ್ವರ ದೇವರನ್ನು ಪುತ್ತೂರಿನ ಮುತ್ತು ಎಂದು ಕರೆಯಲಾಗುತ್ತದೆ. ಪ್ರತೀ ಬಾರಿ ಅನ್ನದಾನಕ್ಕೆ ದೇವಸ್ಥಾನದ ಮೈದಾನದ ಒಂದು ಬದಿಯಲ್ಲಿ ಸಾರ್ವಜನಿಕ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಆದರೆ ಈ ಬಾರಿ ದೇವಸ್ಥಾನದ ಆವರಣದಲ್ಲಿದ್ದ ಎಲ್ಲಾ ಮನೆಗಳನ್ನು ತೆರವುಗೊಳಿಸಿದ ಪರಿಣಾಮ ಕರೆಯ ಪಕ್ಕದಲ್ಲಿ ಹೆಚ್ಚಿ‌ನ ಸ್ಥಳಾವಕಾಶ ಲಭಿಸಿದ ಹಿನ್ನೆಲೆಯಲ್ಲಿ ಈ ಬಾರಿ‌ ಕೆರೆಯ ಪಕ್ಕದಲ್ಲೇ ಅನ್ನದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.