Last Updated:
ಲಖನೌ ವಿರುದ್ಧದ ಪಂದ್ಯವನ್ನು ಏಕಾಂಗಿಯಾಗಿ ಹೋರಾಡಿ ಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಅಶುತೋಷ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.
ಮಾರ್ಚ್ 24 ರಂದು ನಡೆದ ಐಪಿಎಲ್ (IPL 2025) 18ನೇ ಆವೃತ್ತಿಯ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಲಖನೌ ಸೂಪರ್ ಜೈಂಟ್ಸ್ (Lacknow Super Giants) ವಿರುದ್ಧ ರೋಚಕ ಗೆಲುವು ದಾಖಲಿಸಿದೆ. ಆ ಮೂಲಕ ಆರಂಭಿಕ ಪಂದ್ಯ ಗೆದ್ದು ಮುನ್ನಡೆ ಸಾಧಿಸಿದೆ. ಇತ್ತ ಈ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಡಿ ತಂಡಕ್ಕೆ ಗೆಲುವು ತಂದುಕೊಟ್ಟ ಅಶುತೋಷ್ ಶರ್ಮಾ (Ashutosh Sharma) ಪಂದ್ಯ ಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.
ಶಿಖರ್ ಧವನ್ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಪಿಸಿದ ಅಶುತೋಷ್
ಐಪಿಎಲ್ 2025 ರ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಗೆಲುವಿನ ಮೂಲಕ ಆವೃತ್ತಿಯನ್ನು ಆರಂಭಿಸಿದೆ. ಈ ಪಂದ್ಯದಲ್ಲಿ ಅಶುತೋಷ್ ಶರ್ಮಾ ಕೇವಲ 31 ಎಸೆತಗಳಲ್ಲಿ 66 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ (DC) ಗೆಲುವಿಗೆ ಕಾರಣರಾದರು. ಆರಂಭದಲ್ಲಿ20 ಎಸೆತಗಳಲ್ಲಿ 20 ರನ್ ಗಳಿಸಿದ್ದ ಅಶುತೋಷ್, ನಂತರದ ಮೂರು ಓವರ್‌ಗಳಲ್ಲಿ 11 ಎಸೆತಗಳಲ್ಲಿ 46 ರನ್ ಗಳಿಸಿದರು. ಈ ಪಂದ್ಯದಲ್ಲಿ ಪಡೆದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮಾರ್ಗದರ್ಶಕ ಮತ್ತು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅವರಿಗೆ ಅರ್ಪಿಸುವುದಾಗಿ ತಿಳಿಸಿದರು.
ಡ್ರೆಸ್ಸಿಂಗ್ ರೂಮ್‌ನಲ್ಲಿ ವಿಡಿಯೋ ಕಾಲ್
ಪಂದ್ಯದ ಬಳಿಕ ಮಾತನಾಡಿದ ಅವರು, “ನಾನು ಈ ಪ್ರಶಸ್ತಿಯನ್ನು ಶಿಖರ್ ಪಾಜಿಗೆ ಅರ್ಪಿಸುತ್ತೇನೆ” ಎಂದು ಅಶುತೋಷ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು. ಮಾತ್ರವಲ್ಲ ಡಿಸಿಯ ಡ್ರೆಸ್ಸಿಂಗ್ ಕೋಣೆಯಲ್ಲಿ ಪಾರ್ಟಿ ಪ್ರಾರಂಭವಾಗುವ ಮೊದಲು, ಅಶುತೋಷ್ ಧವನ್ ಅವರೊಂದಿಗೆ ವೀಡಿಯೊ ಕರೆ ಮೂಲಕ ಮಾತನಾಡಿದರು. “ಅವರು ತುಂಬ ಸಂತೋಷಪಟ್ಟರು. ನಿಮ್ಮನ್ನು ಪ್ರೀತಿಸುತ್ತೇನೆ ಪಾಜಿ,” ಎಂದು ಅಶುತೋಷ್ ವಿಡಿಯೋದಲ್ಲಿ ಹೇಳಿದರು. ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಈ ಇಬ್ಬರು ಆಟಗಾರರು ಒಂದೆ ತಂಡಕ್ಕೆ ಆಡಿದ್ದರು. ಆದರೆ ಧವನ್ ಸದ್ಯ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.
ಸೋಲಿನಿಂದ ಪಾರು ಮಾಡಿದ ಅಶುತೋಷ್
ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ತಂಡ ಸೋಲುವುದು ಬಹುತೇಕ ಖಚಿತ ಎನ್ನುವ ಸಂದರ್ಭದಲ್ಲಿ ರೋಚಕ ಬ್ಯಾಟಿಂಗ್ ಪ್ರದರ್ಶಿಸಿದ ಅಶುತೋಷ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು, ತಮ್ಮ ಇನ್ನಿಂಗ್ಸ್‌ನಲ್ಲಿ 31 ಎಸೆತದಲ್ಲಿ 66 ರನ್ ಸಿಡಿಸಿದರು. ಇದರಲ್ಲಿ 5 ಬೌಂಡರಿ ಹಾಗೂ 5 ಅಮೋಘ ಸಿಕ್ಸರ್ ಸೇರಿದ್ದವು.
Ashu 🫂 Gabbar
It’s a Dilli love story 💙❤️ pic.twitter.com/HZkeC3sWUE
— Delhi Capitals (@DelhiCapitals) March 24, 2025
ಎಲ್‌ಎಸ್‌ಜಿಯಿಂದ ಪಂದ್ಯ ಕಿತ್ತುಕೊಂಡ ಡಿಸಿ
ಎಲ್‌ಎಸ್‌ಜಿ ತಂಡ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾಗ, ಅಶುತೋಷ್ ಏಕಾಂಗಿಯಾಗಿ ಡಿಸಿಯ ಪರವಾಗಿ ಪಂದ್ಯವನ್ನು ವಾಲುವಂತೆ ಮಾಡಿದರು. 18ನೇ ಓವರ್‌ನಲ್ಲಿ ಬಿಷ್ಣೋಯ್ ಅವರು ಎಸೆದ ಚೆಂಡನ್ನು ಸ್ಟ್ಯಾಂಡ್‌ಗೆ ಚೆಂಡನ್ನು ಹೊಡೆದು ಬೌಂಡರಿಯೊಂದಿಗೆ ಓವರ್ ಮುಗಿಸಿದರು. ಕೊನೆಯ ಓವರ್‌ನಲ್ಲಿ, ಕುಲದೀಪ್ ಯಾದವ್ ರನ್ ಔಟ್ ಆದರು, ಆದರೆ ಅಶುತೋಷ್ ಪಂದ್ಯವನ್ನು ಗೆಲ್ಲಿಸಿದರು.
ಅಂತಿಮ ಓವರ್ ಮಾಡಲು ಬಂದ ಶಹಬಾಜ್ ಎಸೆದ ಮೊದಲ ಬಾಲ್‌ನಲ್ಲಿ ಸ್ಟಂಪ್ ಔಟ್ ಮಾಡುವ ಅವಕಾಶವನ್ನು ಪಂತ್ ಕೈಚೆಲ್ಲಿದರು. ಈ ಹಂತದಲ್ಲಿ ಎಲ್‌ಬಿಡಬ್ಯ್ಲೂಗೆ ಮನವಿ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಅಶುತೋಷ್ ಬಾಲ್ ಅನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಇನ್ನೂ 3 ಎಸೆತಗಳು ಇರುವಂತೆ ಪಂದ್ಯವನ್ನು ಗೆಲ್ಲಿಸಿದರು.
March 25, 2025 4:42 PM IST
IPL 2025: ಈ ಮಾಜಿ ಆಟಗಾರನಿಗೆ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಅರ್ಪಿಸುತ್ತೇನೆ ಎಂದ ಅಶುತೋಷ್! ಗೆದ್ದ ಬಳಿಕ ಫಸ್ಟ್ ಕಾಲ್ ಮಾಡಿದ್ದು ಯಾರಿಗೆ ಗೊತ್ತಾ?