Jasprit Bumrah: ಟೆಸ್ಟ್ ಕ್ರಿಕೆಟ್‌ಗೆ ಜಸ್ಪ್ರೀತ್ ಬುಮ್ರಾ ಶೀಘ್ರ ನಿವೃತ್ತಿ? ಭಾರತದ ಮಾಜಿ ಕ್ರಿಕೆಟಿಗನಿಂದ ಸಂಚಲನಕಾರಿ ಹೇಳಿಕೆ | India vs England Jasprit Bumrah’s Test Career will end soon kaif bold claim after Manchester struggle

Jasprit Bumrah: ಟೆಸ್ಟ್ ಕ್ರಿಕೆಟ್‌ಗೆ ಜಸ್ಪ್ರೀತ್ ಬುಮ್ರಾ ಶೀಘ್ರ ನಿವೃತ್ತಿ? ಭಾರತದ ಮಾಜಿ ಕ್ರಿಕೆಟಿಗನಿಂದ ಸಂಚಲನಕಾರಿ ಹೇಳಿಕೆ | India vs England Jasprit Bumrah’s Test Career will end soon kaif bold claim after Manchester struggle

Last Updated:

ಜಸ್ಪ್ರೀತ್ ಬುಮ್ರಾ ತನ್ನ ಹಳೆಯ ಫಾರ್ಮ್‌ನಲ್ಲಿ ಇದ್ದಂತಿರಲಿಲ್ಲ. ಬುಮ್ರಾ ಅವರ ವೇಗ ಗಂಟೆಗೆ 125 ರಿಂದ 130 ಕಿ.ಮೀ. ಮಾತ್ರ ಇತ್ತು. ಅವರ ವೃತ್ತಿ ಜೀವನದಲ್ಲಿ ಈ ರೀತಿಯ ಕಳಪೆ ಬೌಲಿಂಗ್ ಕಾಣಿಸಿರಲಿಲ್ಲ. ಟೀಮ್ ಇಂಡಿಯಾ ಬುಮ್ರಾ ಅವರಿಂದ ಹೆಚ್ಚಿನ ವಿಕೆಟ್‌ಗಳನ್ನು ನಿರೀಕ್ಷಿಸುತ್ತಿದ್ದರೂ, ಈ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ ಬೌಲರ್ ಕೇವಲ 2 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.

 ಜಸ್ಪ್ರೀತ್ ಬುಮ್ರಾ   ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ (Old Trafford) ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ಡ್ರಾ ಸಾಧಿಸಿಕೊಳ್ಳುವುದಕ್ಕೆ ಹೋರಾಡುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಹೆಚ್ಚಿನ ಪರಿಣಾಮ ಬೀರದ ಕಾರಣ ಭಾರತ 311 ರನ್​ಗಳ ಬೃಹತ್ ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್​ಗಳನ್ನ 3 ದಿನ ಕಾರಿ 669 ರನ್​ಗಳ ಬೃಹತ್ ರನ್ ಗಳಿಸಿದರು. ಟೀಮ್ ಇಂಡಿಯಾದ ಇಬ್ಬರು ಪ್ರಮುಖ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಮೊಹಮ್ಮದ್ ಸಿರಾಜ್ (Mohammed Siraj) ಕೂಡ ವಿಕೆಟ್‌ಗಳಿಗಾಗಿ ಸಾಕಷ್ಟು ಹೆಣಗಾಡಿದರು. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಅತ್ಯಂತ ಅಚ್ಚರಿ ಮೂಡಿಸಿತು.

ಮ್ಯಾಂಚೆಸ್ಟರ್​​ನಲ್ಲಿ ಬುಮ್ರಾ ವೈಫಲ್ಯ

ಮೂರನೇ ದಿನ, ಜಸ್ಪ್ರೀತ್ ಬುಮ್ರಾ ತನ್ನ ಹಳೆಯ ಫಾರ್ಮ್‌ನಲ್ಲಿ ಇದ್ದಂತಿರಲಿಲ್ಲ. ಬುಮ್ರಾ ಅವರ ವೇಗ ಗಂಟೆಗೆ 125 ರಿಂದ 130 ಕಿ.ಮೀ. ಮಾತ್ರ ಇತ್ತು. ಅವರ ವೃತ್ತಿ ಜೀವನದಲ್ಲಿ ಈ ರೀತಿಯ ಕಳಪೆ ಬೌಲಿಂಗ್ ಕಾಣಿಸಿರಲಿಲ್ಲ. ಟೀಮ್ ಇಂಡಿಯಾ ಬುಮ್ರಾ ಅವರಿಂದ ಹೆಚ್ಚಿನ ವಿಕೆಟ್‌ಗಳನ್ನು ನಿರೀಕ್ಷಿಸುತ್ತಿದ್ದರೂ, ಈ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ ಬೌಲರ್ ಕೇವಲ 2 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಈಗ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಜಸ್ಪ್ರೀತ್ ಬುಮ್ರಾ ಬಗ್ಗೆ ಮಾಡಿರುವ ವಿಡಿಯೋ ಬೆಳಕಿಗೆ ಬಂದಿದೆ. ಆ ವಿಡಿಯೋದಲ್ಲಿ ಕೈಫ್ ಬುಮ್ರಾ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.

ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿದ ಮೊಹಮ್ಮದ್ ಕೈಫ್

ಮೂರನೇ ದಿನದಂದು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ನೋಡಿ ಮೊಹಮ್ಮದ್ ಕೈಫ್ ಕೂಡ ಆಶ್ಚರ್ಯಚಕಿತರಾದರು. ಇದಾದ ನಂತರ, ಮೊಹಮ್ಮದ್ ಕೈಫ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೈಫ್ “ಜಸ್ಪ್ರೀತ್ ಬುಮ್ರಾ ಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಈ ಮಾದರಿಯಲ್ಲಿ ಬೌಲಿಂಗ್ ಮಾಡಲು ಅವರು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಬಹುದು. ಈ ಪಂದ್ಯದಲ್ಲಿ ಅವರ ವೇಗ ಸ್ಪಷ್ಟವಾಗಿರಲಿಲ್ಲ. ಅವರು ತುಂಬಾ ಪ್ರಾಮಾಣಿಕ ವ್ಯಕ್ತಿ. ಅವರು 100 ಪ್ರತಿಶತ ನೀಡಲು ಸಾಧ್ಯವಾಗುತ್ತಿಲ್ಲ, ಇದು ವಿಕೆಟ್ ಪಡೆಯಲು ತೊಂದರೆ ಆಗುತ್ತಿದೆ ಎಂದು ಅವರು ಭಾವಿಸಿದರೆ, ಅವರು ನಿವೃತ್ತಿ ನೀಡಬಹುದು ಎಂದು ನಾನು ಭಾವಿಸುತ್ತೇನೆ. ಅವರು ವಿಕೆಟ್ ಪಡೆಯುತ್ತಾರೋ ಇಲ್ಲವೋ, ಅವರ ವೇಗ ಕೇವಲ 125-130 ಕಿ.ಮೀ. ಅವರು ಪಡೆದ ಏಕೈಕ ವಿಕೆಟ್ ಕೀಪರ್ ಮುಂದೆ ಡೈವಿಂಗ್ ಕ್ಯಾಚ್ ಆಗಿತ್ತು. ಫಿಟ್ ಆಗಿರುವ ಬುಮ್ರಾ ಅವರ ವೇಗ ಅಷ್ಟು ಕಡಿಮೆ ಇಲ್ಲ. ಅವರ ಚೆಂಡು ತುಂಬಾ ವೇಗವಾಗಿರುತ್ತಿತ್ತು” ಎಂದು ಮೊಹಮ್ಮದ್ ಕೈಫ್ ಹೇಳಿದರು.

ಮೊದಲ ಬಾರಿಗೆ 100 ರನ್ ಬಿಟ್ಟಿಕೊಟ್ಟ ಬುಮ್ರಾ

ಇಂಗ್ಲೆಂಡ್ ಸರಣಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಈ ಆಟಗಾರ ಉತ್ತಮ ಪ್ರದರ್ಶನ ನೀಡಿದರೆ ಟೀಮ್ ಇಂಡಿಯಾ ಸರಣಿ ಗೆಲ್ಲುತ್ತದೆ ಎಂದು ಭಾವಿಸಲಾಗಿತ್ತು, ಆದರೆ ಜಸ್ಪ್ರೀತ್ ಬುಮ್ರಾ ಪರಿಣಾಮಕಾರಿಯಾಗದಿದ್ದರೆ ಗೆಲ್ಲುವುದು ಕಷ್ಟ. ಬುಮ್ರಾ ಅದ್ಭುತವಾಗಿ ಬೌಲಿಂಗ್ ಮಾಡಿದಾಗ, ಅವನಿಗೆ ಇತರ ಬೌಲರ್‌ಗಳ ಬೆಂಬಲ ಸಿಗುವುದಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲೂ ಇದೇ ರೀತಿಯ ಘಟನೆ ನಡೆಯಿತು. ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಬುಮ್ರಾ ಬೌಲಿಂಗ್ ಅಷ್ಟೇನೂ ಚುರುಕಾಗಿ ಕಾಣಲಿಲ್ಲ. ನಾಲ್ಕನೇ ಟೆಸ್ಟ್‌ನಲ್ಲಿ ಬುಮ್ರಾ 33 ಓವರ್‌ಗಳನ್ನು ಬೌಲಿಂಗ್ ಮಾಡಿ ಕೇವಲ 5 ಓವರ್​ ಮಾತ್ರ ಮೇಡನ್ ಮಾಡಿದರು. ಅಲ್ಲದೆ ತಮ್ಮ ವೃತ್ತಿ ಜೀವನದಲ್ಲೇ ಮೊದಲ ಬಾರಿ ಒಂದೇ ಇನ್ನಿಂಗ್ಸ್​​ನಲ್ಲಿ 100 ರನ್​ ಬಿಟ್ಟುಕೊಟ್ಟಿದ್ದಾರೆ.