Shubman Gill: ಇಂಗ್ಲೆಂಡ್ ವಿರುದ್ಧ ಒಂದೇ ಸರಣಿಯಲ್ಲಿ ಹೆಚ್ಚು ರನ್! ವಿಶ್ವದಾಖಲೆ ನಿರ್ಮಿಸಿದ ಕ್ಯಾಪ್ಟನ್ ಗಿಲ್ | shubman gill makes history! breaks yashasvi jaiswal’s epic record, becomes 1st indian to achieve this

Shubman Gill: ಇಂಗ್ಲೆಂಡ್ ವಿರುದ್ಧ ಒಂದೇ ಸರಣಿಯಲ್ಲಿ ಹೆಚ್ಚು ರನ್! ವಿಶ್ವದಾಖಲೆ ನಿರ್ಮಿಸಿದ ಕ್ಯಾಪ್ಟನ್ ಗಿಲ್ | shubman gill makes history! breaks yashasvi jaiswal’s epic record, becomes 1st indian to achieve this

Last Updated:


ನಾಲ್ಕನೇ ಟೆಸ್ಟ್‌ನ ಐದನೇ ದಿನದಂದು ಗಿಲ್ 103 ರನ್‌ ಗಳಿಸಿ ಔಟ್ ಆದರು. ಇದರೊಂದಿಗೆ ಈ ಸರಣಿಯಲ್ಲಿ ಒಟ್ಟು 700 (722) ರನ್‌ಗಳ ಗಡಿ ದಾಟಿದರು. ಈ ಸರಣಿಯಲ್ಲಿ ಗಿಲ್ ಒಟ್ಟು ನಾಲ್ಕು ಶತಕಗಳನ್ನು ಗಳಿಸಿದ್ದಾರೆ, ಇದರಲ್ಲಿ ಬರ್ಮಿಂಗ್‌ಹ್ಯಾಮ್‌ನ ಎರಡನೇ ಟೆಸ್ಟ್‌ನಲ್ಲಿ 269 ರನ್‌ಗಳ ದ್ವಿಶತಕವೂ ಸೇರಿದೆ, ಇದು ಭಾರತದ ನಾಯಕನಿಗೆ ವಿದೇಶದಲ್ಲಿ ಗಳಿಸಿದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿತ್ತು.

ಶುಭ್​ಮನ್ ಗಿಲ್ಶುಭ್​ಮನ್ ಗಿಲ್
ಶುಭ್​ಮನ್ ಗಿಲ್

ಮಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ (Old Trafford) ನಡೆದ ಇಂಗ್ಲೆಂಡ್ (India vs England) ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಐದನೇ ದಿನದಂದು (ಜುಲೈ 27, 2025) ಭಾರತ ತಂಡದ ನಾಯಕ ಶುಭ್​ಮನ್ ಗಿಲ್ (Shubmna Gill) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಂದು ಟೆಸ್ಟ್ ಸರಣಿಯಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. ಈ ಸರಣಿಯಲ್ಲಿ ಒಟ್ಟು 722 ರನ್‌ ಗಳಿಸಿರುವ ಗಿಲ್, ಈ ಸಾಧನೆಯನ್ನು ಸುನಿಲ್ ಗವಾಸ್ಕರ್ (1971ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 774 ರನ್ ಮತ್ತು 1978/79ರಲ್ಲಿ 732 ರನ್) ಮತ್ತು ಯಶಸ್ವಿ ಜೈಸ್ವಾಲ್ (2024ರಲ್ಲಿ ಇಂಗ್ಲೆಂಡ್ ವಿರುದ್ಧ 712 ರನ್) ನಂತರ ಮಾಡಿದ ಮೂರನೇ ಭಾರತೀಯರಾಗಿದ್ದಾರೆ. ಇದರ ಜೊತೆಗೆ, ಇಂಗ್ಲೆಂಡ್‌ನಲ್ಲಿ ಒಂದು ಟೆಸ್ಟ್ ಸರಣಿಯಲ್ಲಿ 650 ರನ್‌ಗಿಂತ ಹೆಚ್ಚು ಗಳಿಸಿದ ಮೊದಲ ಏಷ್ಯಾದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನೂ ಗಿಲ್ ಮಾಡಿದ್ದಾರೆ.

700 ರ ಗಡಿ ದಾಟಿದ ಗಿಲ್

ನಾಲ್ಕನೇ ಟೆಸ್ಟ್‌ನ ಐದನೇ ದಿನದಂದು ಗಿಲ್ 103 ರನ್‌ ಗಳಿಸಿ ಔಟ್ ಆದರು. ಇದರೊಂದಿಗೆ ಈ ಸರಣಿಯಲ್ಲಿ ಒಟ್ಟು 700 (722) ರನ್‌ಗಳ ಗಡಿ ದಾಟಿದರು. ಈ ಸರಣಿಯಲ್ಲಿ ಗಿಲ್ ಒಟ್ಟು ನಾಲ್ಕು ಶತಕಗಳನ್ನು ಗಳಿಸಿದ್ದಾರೆ, ಇದರಲ್ಲಿ ಬರ್ಮಿಂಗ್‌ಹ್ಯಾಮ್‌ನ ಎರಡನೇ ಟೆಸ್ಟ್‌ನಲ್ಲಿ 269 ರನ್‌ಗಳ ದ್ವಿಶತಕವೂ ಸೇರಿದೆ, ಇದು ಭಾರತದ ನಾಯಕನಿಗೆ ವಿದೇಶದಲ್ಲಿ ಗಳಿಸಿದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ. ಮೊದಲ ಪಂದ್ಯದಲ್ಲೂ ಶತಕ ಸಿಡಿಸಿದ್ದ ಗಿಲ್, ಇದೀಗ ಸರಣಿಯಲ್ಲಿ 4ನೇ ಶತಕ ಸಿಡಿಸುವ ಮೂಲಕ ವಿಶ್ವಕ್ರಿಕೆಟ್​​ನಲ್ಲಿ ನಾಯಕನಾಗಿ 4 ಶತಕ ಸಿಡಿಸಿದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಗವಾಸ್ಕರ್ ಹಾಗೂ ಆಸೀಸ್ ದಂತಕತೆ ಡಾನ್ ಬ್ರಾಡ್ಮನ್ ಕೂಡ 4 ಶತಕ ಸಿಡಿಸಿದ್ದರು.

ಇಂಗ್ಲೆಂಡ್ ವಿರುದ್ಧ ಗರಿಷ್ಠ ರನ್

722 ರನ್​ಗಳಿಸುವ ಮೂಲಕ ಟೆಸ್ಟ್ ಸರಣಿಯಲ್ಲಿ ಗರಿಷ್ಠ ಸ್ಕೋರರ್ ಆಗಿದ್ದಾರೆ. ಇನ್ನು ಒಂದು ಪಂದ್ಯ ಬಾಕಿ ಇದ್ದು, ಈ ರನ್​ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೂ ಗಿಲ್ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೆಚ್ಚು ರನ್​ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು. ಈ ದಾಖಲೆ ಈ ಹಿಂದೆ ಯಶಸ್ವಿ ಜೈಸ್ವಾಲ್ ಹೆಸರಿನಲ್ಲಿತ್ತು. ಭಾರತದಲ್ಲಿ ಕಳೆದ ವರ್ಷ ನಡೆದಿದ್ದ ಟೆಸ್ಟ್ ಸರಣಿ ವೇಳೆ ಜೈಸ್ವಾಲ್ 712 ರನ್​ಗಳಿಸಿದ್ದರು.

ಇಂಗ್ಲೆಂಡ್ ವಿರುದ್ಧ ಹೆಚ್ಚು ರನ್​ಗಳಿಸಿದ ವಿದೇಶಿ ಬ್ಯಾಟರ್

ಒಟ್ಟಾರೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್​ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಡಾನ್ ಬ್ರಾಡ್ಮನ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 1930ರ ಆ್ಯಶಸ್ ಸರಣಿಯಲ್ಲಿ 974 ರನ್​ಗಳಿಸಿದ್ದರು. ಆಸ್ಟ್ರೇಲಿಯಾದ ಮಾರ್ಕ್ ಟೇಲರ್ 1989ರಲ್ಲಿ 839, ವೆಸ್ಟ್ ಇಂಡೀಸ್​ನ ವಿವಿಯನ್ ರಿಚರ್ಡ್ಸ್ 1976ರಲ್ಲಿ 829, ಬ್ರಾಡ್ಮನ್ 1936ರಲ್ಲಿ 810, ಬ್ರಿಯಾನ್ ಲಾರಾ 1993ರಲ್ಲಿ 798, ಸ್ಟೀವ್ ಸ್ಮಿತ್ 2019ರಲ್ಲಿ 774, ಬ್ರಿಯಾನ್ ಲಾರಾ 1995ರಲ್ಲಿ 765, ಬ್ರಾಡ್ಮನ್ 1934ರಲ್ಲಿ 758 ರನ್​ಗಳಿಸಿ ಗಿಲ್​​​ಗಿಂತ ಮುಂದಿದ್ದಾರೆ.

ಭಾರತ ತಂಡ ಎರಡನೇ ಇನಿಂಗ್ಸ್‌ನಲ್ಲಿ ಕಠಿಣ ಸ್ಥಿತಿಯಿಂದ ಹೊರಬಂದಿತು. ಮೊದಲ ಓವರ್‌ನಲ್ಲೇ ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಶೂನ್ಯಕ್ಕೆ ಔಟ್ ಆಗಿದ್ದರು. ಆದರೆ, ಗಿಲ್ ಮತ್ತು ಕೆ.ಎಲ್. ರಾಹುಲ್ 174 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಈ ಜೊತೆಯಾಟವು ತಂಡವು 0ಕ್ಕೆ 2 ವಿಕೆಟ್ ಕಳೆದುಕೊಂಡ ನಂತರದ ಗರಿಷ್ಠ ಜೊತೆಯಾಟದ ದಾಖಲೆಯನ್ನು ಸ್ಥಾಪಿಸಿತು. ದಿನದ ಕೊನೆಗೆ ಭಾರತ 223/4 ರನ್‌ ಗಳಿಸಿ, ಇಂಗ್ಲೆಂಡ್‌ನ 669 ರನ್‌ಗಳ ಮೊದಲ ಇನಿಂಗ್ಸ್‌ಗೆ ಹೋಲಿಸಿದರೆ 88 ರನ್‌ಗಳ ಹಿನ್ನಡೆಯಲ್ಲಿತ್ತು.

ಗವಾಸ್ಕರ್ ಆಲ್​ಟೈಮ್ ರೆಕಾರ್ಡ್ ಬ್ರೇಕ್ ಮಾಡುದ ಅವಕಾಶ

 ಗಿಲ್ ಈ ಇನ್ನೊಂದು ಶತಕ ಅಥವಾ ದೊಡ್ಡ ಸ್ಕೋರ್ ಗಳಿಸಿದರೆ, ಅವರು ಭಾರತದ ಪರವಾಗಿ ಒಂದು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿಯಬಹುದು.  ಪ್ರಸ್ತುತ ಆ ದಾಖಲೆ ಸುನಿಲ್ ಗವಾಸ್ಕರ್‌ ಹೆಸರಿನಲ್ಲಿದೆ. ಅವರು ವೆಸ್ಟ್ ಇಂಡೀಸ್ ವಿರುದ್ಧ  774 ರನ್‌ಗಳ ದಾಖಲೆಯಿಂದ ಕೇವಲ 52 ರನ್‌ಗಳ ಹಿಂದೆ ಇದ್ದಾರೆ.