IND vs ENG: ಇಂಗ್ಲೆಂಡ್​​ ಗೆಲುವಿನ ಆಸೆ ಕಮರಿಸಿದ ಜಡ್ಡು-ಸುಂದರ್​ ದ್ವಿಶತಕದ ಜೊತೆಯಾಟ! ಟ್ರೋಫಿ ಉಳಿಕೊಳ್ಳಲು ಭಾರತಕ್ಕೆ ಮತ್ತೊಂದು ಚಾನ್ಸ್

IND vs ENG: ಇಂಗ್ಲೆಂಡ್​​ ಗೆಲುವಿನ ಆಸೆ ಕಮರಿಸಿದ ಜಡ್ಡು-ಸುಂದರ್​ ದ್ವಿಶತಕದ ಜೊತೆಯಾಟ! ಟ್ರೋಫಿ ಉಳಿಕೊಳ್ಳಲು ಭಾರತಕ್ಕೆ ಮತ್ತೊಂದು ಚಾನ್ಸ್

Last Updated:

ಗಿಲ್ ಔಟ್ ಆದಾಗ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಬಹುದು ಎನ್ನಲಾಗಿತ್ತು. ಆದರೆ ಸುಂದರ್ ಹಾಗೂ ಜಡೇಜಾ ಅದಕ್ಕೆ ಅವಕಾಶ ನೀಡಲಿಲ್ಲ, ಈ ಎಡಗೈ ಜೋಡಿ ಬರೋಬ್ಬರಿ 334 ಎಸೆತಗಳನ್ನ ಎದುರಿಇಸ 203 ರನ್​ಗಳ ಅಜೇಯ ಆಟವನ್ನಾಡಿತು.

ಭಾರತ-ಇಂಗ್ಲೆಂಡ್ ಪಂದ್ಯ ಡ್ರಾಭಾರತ-ಇಂಗ್ಲೆಂಡ್ ಪಂದ್ಯ ಡ್ರಾ
ಭಾರತ-ಇಂಗ್ಲೆಂಡ್ ಪಂದ್ಯ ಡ್ರಾ

ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫರ್ಡ್​​ನಲ್ಲಿ ನಡೆಯುತ್ತಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. 311 ರನ್​ಗಳ ಬೃಹತ್​ ಹಿನ್ನಡೆಯ ಹೊರತಾಗಿಯೂ ಟೀಮ್ ಇಂಡಿಯಾ ತನ್ನ 2ನೇ ಇನ್ನಿಂಗ್ಸ್​​ನಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 425 ರನ್​ಗಳಿಸಿತು. ಅಂಪೈರ್​ಗಳು ಎರಡು ತಂಡಗಳ ಒಪ್ಪಿಗೆ ಮೇರೆಗೆ ಪಂದ್ಯವನ್ನ ಡ್ರಾ ಎಂದು ತೀರ್ಮಾನಿಸಿದರು. ನಾಯಕ ಶುಭ್​​ಮನ್ ಗಿಲ್ (103) ರವೀಂದ್ರ ಜಡೇಜಾ (ಅಜೇಯ 107) ಹಾಗೂ ವಾಷಿಂಗ್ಟನ್ ಸುಂದರ್ ( ಅಜೇಯ 101) ಶತಕ ಸಿಡಿಸಿದರೆ, ಕನ್ನಡಿಗ ಕೆಎಲ್ ರಾಹುಲ್ 90 ರನ್​ಗಳಿಸಿ ಭಾರತ ತಂಡ ಪಂದ್ಯವನ್ನ ಡ್ರಾ ಮಾಡಿಕೊಳ್ಳಲು ನೆರವಾದರು.

4ನೇ ದಿನ ಟಿಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 172 ರನ್​ಗಳಿಸಿತ್ತು. ನಿನ್ನೆ 86 ರನ್​ಗಳಿಸಿದ್ದ ಕೆಎಲ್ ರಾಹುಲ್ ಇಂದು ಕೇವಲ 4 ರನ್​ಗಳಿಸಿ ಶತಕ ಮಿಸ್ ಮಾಡಿಕೊಂಡರು. ರಾಹುಲ್ ಬೆನ್ ಸ್ಟೋಕ್ಸ್ ಬೌಲಿಂಗ್​​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ರಾಹುಲ್ 230 ಎಸೆತಗಳಲ್ಲಿ 8 ಬೌಂಡರಿ ಸಹಿತ 90 ರನ್​ಗಳಿಸಿದರು. ನಂತರ ಶುಭ್​​ಮನ್ ಗಿಲ್ ಹಾಗೂ ವಾಷಿಂಗ್ಟನ್ ಸುಂದರ್ 104 ಎಸೆತಗಳಲ್ಲಿ 34 ರನ್​ ಸೇರಿಸಿದರು. ಗಿಲ್​ 238 ಎಸೆತಗಳಲ್ಲಿ 12 ಬೌಂಡರಿ ಸಹಿತ 103 ರನ್​ಗಳಿಸಿ ಆರ್ಚರ್​ ಬೌಲಿಂಗ್​​ನಲ್ಲಿ ಕೀಪರ್ ಜೇಮಿ ಸ್ಮಿತ್​ಗೆ ಕ್ಯಾಚ್ ನೀಡಿ ಔಟ್ ಆದರು.

ಗಿಲ್ ಔಟ್ ಆದಾಗ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಬಹುದು ಎನ್ನಲಾಗಿತ್ತು. ಆದರೆ ಸುಂದರ್ ಹಾಗೂ ಜಡೇಜಾ ಅದಕ್ಕೆ ಅವಕಾಶ ನೀಡಲಿಲ್ಲ, ಈ ಎಡಗೈ ಜೋಡಿ ಬರೋಬ್ಬರಿ 334 ಎಸೆತಗಳನ್ನ ಎದುರಿಇಸ 203 ರನ್​ಗಳ ಅಜೇಯ ಆಟವನ್ನಾಡಿತು. ಜಡೇಜಾ 185 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 107 ರನ್​ಗಳಿಸಿದರೆ, ವಾಷಿಂಗ್ಟನ್ ಸುಂದರ್ 206 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್​ ಸಹಿತ ಅಜೇಯ 101 ರನ್​ಗಳಿಸಿ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಲು ನೆರವಾದರು.

ಇಂಗ್ಲೆಂಡ್ ತಂಡದ ಪರ ಕ್ರಿಸ್ ವೋಕ್ಸ್ 67ಕ್ಕೆ2, ಜೋಫ್ರಾ ಆರ್ಚರ್ 78ಕ್ಕೆ1, ಬೆನ್ ಸ್ಟೋಕ್ಸ್ 33ಕ್ಕೆ1 ವಿಕೆಟ್ ಪಡೆದರಾದರು. 0-2 ವಿಕೆಟ್ ಪಡೆದಿದ್ದ ಇಂಗ್ಲೆಂಡ್ ಪಂದ್ಯವನ್ನ ಗೆಲ್ಲಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಭಾರತ ತಂಡದ ಬ್ಯಾಟರ್​ಗಳು ಅದಕ್ಕೆ ಅವಕಾಶ ಕೊಡದೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿಸಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs ENG: ಇಂಗ್ಲೆಂಡ್​​ ಗೆಲುವಿನ ಆಸೆ ಕಮರಿಸಿದ ಜಡ್ಡು-ಸುಂದರ್​ ದ್ವಿಶತಕದ ಜೊತೆಯಾಟ! ಟ್ರೋಫಿ ಉಳಿಕೊಳ್ಳಲು ಭಾರತಕ್ಕೆ ಮತ್ತೊಂದು ಚಾನ್ಸ್