Chess: ಒಂದೇ ಒಂದು ಪದದಲ್ಲಿ ಗುಕೇಶ್ ಗುಣಗಾನ ಮಾಡಿದ ಚೆಸ್ ಆಟಗಾರರು! ವೈರಲ್ ಆಗಿದೆ ನೋಡಿ ಈ ವೀಡಿಯೋ | Magnus Carlsen on Gukesh wholesome

Chess: ಒಂದೇ ಒಂದು ಪದದಲ್ಲಿ ಗುಕೇಶ್ ಗುಣಗಾನ ಮಾಡಿದ ಚೆಸ್ ಆಟಗಾರರು! ವೈರಲ್ ಆಗಿದೆ ನೋಡಿ ಈ ವೀಡಿಯೋ | Magnus Carlsen on Gukesh wholesome

Last Updated:

ಡಿ ಗುಕೇಶ್ ಇತ್ತೀಚಿನ ವರ್ಷಗಳಲ್ಲಿ ಚೆಸ್ ಜಗತ್ತಿನಲ್ಲಿ ಗಮನ ಸೆಳೆದಿದ್ದಾರೆ. ಮ್ಯಾಗ್ನಸ್ ಕಾರ್ಲ್ಸನ್ ಸೇರಿದಂತೆ ಅಗ್ರ ಆಟಗಾರರು ಗುಕೇಶ್ ಅವರನ್ನು ಒಂದೇ ಪದದಲ್ಲಿ ವರ್ಣಿಸಿದರು. ಅದೇನೆಂದು ತಿಳಿಯೋಣ ಬನ್ನಿ.

News18News18
News18

ಸಾಮಾಜಿಕ ಮಾಧ್ಯಮದಲ್ಲಿ (Social Media) ಒಂದು ಮೋಜಿನ ವೀಡಿಯೋ (Video) ಸಿಕ್ಕಾಪಟ್ಟೆ ವೈರಲ್ (Viral) ಆಗುತ್ತಿದೆ ನೋಡಿ, ಆ ವೀಡಿಯೋದಲ್ಲಿ ಇತ್ತೀಚೆಗೆ ತುಂಬಾನೇ ಜನಪ್ರಿಯವಾದ ಒಬ್ಬ ಚೆಸ್ (Chess) ಆಟಗಾರನ ಬಗ್ಗೆ ವಿಶ್ವದ ಇತರೆ ಚೆಸ್ ಆಟಗಾರರು ಕೇವಲ ಒಂದೇ ಒಂದು ಪದವನ್ನು ಬಳಸಿ ಗುಣಗಾನ ಮಾಡಿರುವುದನ್ನು ನೀವು ನೋಡಬಹುದು. ಇತ್ತೀಚೆಗೆ ಜನಪ್ರಿಯವಾದ ಚೆಸ್ ಆಟಗಾರ ಅಂತ ಹೇಳಿದ ತಕ್ಷಣವೇ ನಮಗೆಲ್ಲಾ ನೆನಪಾಗುವ ಒಂದೇ ಒಂದು ಹೆಸರು ಅಂತ ಹೇಳಿದರೆ ಅದು ಪ್ರಸ್ತುತ ವಿಶ್ವ ಚಾಂಪಿಯನ್ ಅಂತ ಅನ್ನಿಸಿಕೊಂಡಿರುವ ಡಿ ಗುಕೇಶ್ ಅವರು ಅಂತ ಹೇಳಬಹುದು. ಇತ್ತೀಚಿನ ವರ್ಷಗಳಲ್ಲಿ ಡಿ ಗುಕೇಶ್ ಅವರು ಇಡೀ ಚೆಸ್ ಆಟದ ಜಗತ್ತಿನಲ್ಲಿ ತಮ್ಮ ಬುದ್ದಿವಂತಿಕೆಯ ಆಟದ ಕೌಶಲ್ಯದಿಂದ ಎಲ್ಲರ ಗಮನವನ್ನು ಸೆಳೆದಿದ್ದಾರೆ ಅಂತ ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಈ ವೀಡಿಯೋದಲ್ಲಿ  ವಿಶ್ವದ ಕೆಲವು ಅಗ್ರ ಚೆಸ್ ಆಟಗಾರರು ಪ್ರಸ್ತುತ ವಿಶ್ವ ಚಾಂಪಿಯನ್ ಆಗಿರುವ ಡಿ ಗುಕೇಶ್ ಅವರನ್ನು ಒಂದೇ ಪದದಲ್ಲಿ ವಿವರಿಸಲು ಕೇಳಲಾಯಿತು. ಇತ್ತೀಚೆಗೆ ಮುಕ್ತಾಯಗೊಂಡ ಸೂಪರ್ ಯುನೈಟೆಡ್ ರಾಪಿಡ್ ಆಂಡ್  ಬ್ಲಿಟ್ಜ್ ಕ್ರೊಯೇಷಿಯಾ ಪಂದ್ಯಾವಳಿಯ ಸಂದರ್ಭದಲ್ಲಿ ಈ ಮೊಜಿನ ಸಂವಾದವನ್ನು ವೀಡಿಯೋದಲ್ಲಿ ಸೆರೆ ಹಿಡಿಯಲಾಯಿತು.

ಗುಕೇಶ್ ಬಗ್ಗೆ ಏನ್ ಹೇಳಿದ್ರು ನೋಡಿ ಮ್ಯಾಗ್ನಸ್ ಕಾರ್ಲ್ಸನ್

ಐದು ಬಾರಿಯ ವಿಶ್ವ ಚಾಂಪಿಯನ್ ಮತ್ತು ಪ್ರಸ್ತುತ ವಿಶ್ವ ನಂಬರ್ 1 ಮ್ಯಾಗ್ನಸ್ ಕಾರ್ಲ್ಸನ್ ಕೂಡ ಈ ಮೋಜಿನ ಆಟದಲ್ಲಿ ಸೇರಿಕೊಂಡರು. ಗುಕೇಶ್ ಅವರನ್ನು ಕೇವಲ ಒಂದೇ ಒಂದು ಪದದಲ್ಲಿ ವ್ಯಾಖ್ಯಾನಿಸಲು ಕೇಳಿದಾಗ, ಕಾರ್ಲ್ಸನ್ ‘ಹೋಲ್‌ಸಮ್’ ಅಂತ ಹೇಳಿದರು. ಇದರ ಅರ್ಥ ಈ ಯುವ ಭಾರತೀಯ ತಾರೆಯು ತುಂಬಾನೇ ವಿನಮ್ರ ಮತ್ತು ಶಾಂತ ವ್ಯಕ್ತಿತ್ವವನ್ನು ಹೊಂದಿರುವ ಪರಿಪೂರ್ಣವಾದ ವ್ಯಕ್ತಿ ಅಂತ.

2025 ರ ನಾರ್ವೆ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದ ಗುಕೇಶ್

2025 ರ ನಾರ್ವೆ ಚೆಸ್‌ನ ಆರಂಭಿಕ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರು ಗುಕೇಶ್ ಅವರನ್ನು ಸೋಲಿಸಿದ್ದರು, ಆದರೆ ನಂತರ 6ನೇ ಸುತ್ತಿನಲ್ಲಿ ಅವರು ಸೋಲನ್ನು ಅನುಭವಿಸಿದರು. ಇದು ಭಾರತೀಯ ಚೆಸ್ ತಾರೆಯ ಜೊತೆಗೆ ಕಾರ್ಲ್ಸನ್ ಅವರ ಮೊದಲ ಕ್ಲಾಸಿಕಲ್ ಗೇಮ್ ಸೋಲಾಗಿತ್ತು. ಈ ಒಂದು ಸೋಲಿನ ಬೇಸರದ ಹೊರತಾಗಿಯೂ, ಕಾರ್ಲ್ಸನ್ ಆ ಈವೆಂಟ್ ಅನ್ನು ಗೆದ್ದಿದ್ದರು, ಗುಕೇಶ್ ಅವರು ಈ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು.

ನಂತರ ಕ್ರೊಯೇಷಿಯಾದಲ್ಲಿ, ಗುಕೇಶ್ ಮತ್ತೊಮ್ಮೆ ಕಾರ್ಲ್ಸನ್ ಅವರನ್ನು ಸೋಲಿಸಿದರು. ಮತ್ತೊಮ್ಮೆ, ಕಾರ್ಲ್ಸನ್ ಆ ಹಿನ್ನಡೆಯ ನೋವನ್ನು ಬದಿಗಿಟ್ಟು ಒಟ್ಟು 22.5 ಅಂಕಗಳು ಮತ್ತು 40,000 ಡಾಲರ್ ನಗದು ಬಹುಮಾನದೊಂದಿಗೆ ಪಂದ್ಯಾವಳಿಯನ್ನು ಗೆದ್ದರು. ಗುಕೇಶ್ ಮೂರನೇ ಸ್ಥಾನ ಪಡೆದರು ಮತ್ತು ಅದಕ್ಕೆ ಅವರು 25,000 ಡಾಲರ್ ಹಣವನ್ನು ಗೆದ್ದರು.

ಮುಂಬರುವ ಟೂರ್ನಿಗಳಿಗೆ ಸಿದ್ದತೆ ನಡೆಸುತ್ತಿರುವ ಗುಕೇಶ್..  

ಗುಕೇಶ್ ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿ ಲಾಸ್ ವೇಗಾಸ್ ಲೀಗ್‌ನಲ್ಲಿ ಭಾಗವಹಿಸಬೇಕಿತ್ತು. ಆದಾಗ್ಯೂ, 19 ವರ್ಷದ ಗುಕೇಶ್ ಮುಂಬರುವ ಪಂದ್ಯಾವಳಿಗಳಿಗೆ ಸಿದ್ಧತೆಗಳಿಗೆ ಆದ್ಯತೆ ನೀಡುವ ಬಯಕೆಯನ್ನು ಉಲ್ಲೇಖಿಸಿ ಆ ಟೂರ್ನಿಯಿಂದ ಹಿಂದೆ ಸರಿದರು. ಗುಕೇಶ್ ಫ್ರೀಸ್ಟೈಲ್ ಚೆಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿಲ್ಲ ಮತ್ತು ಇದು ಅವರ ನಿರ್ಗಮನದ ಹಿಂದಿನ ಕಾರಣಗಳಲ್ಲಿ ಒಂದಾಗಿರಬಹುದು ಎಂಬುದನ್ನು ಗಮನಿಸುವುದು ಸಹ ಇಲ್ಲಿ ಮುಖ್ಯವಾಗುತ್ತದೆ.