IPL 2025: ಕೆಕೆಆರ್​ ಮಾರಕ ಬೌಲಿಂಗ್ ದಾಳಿಗೆ ಮುಗ್ಗರಿಸಿದ ರಾಯಲ್ಸ್! ಕೋಲ್ಕತ್ತಾ ತಂಡಕ್ಕೆ ಸುಲಭ ಗುರಿ | RR vs KKR Rajasthan Royals Post 152-Run Target in Guwahati

Last Updated:

IPL 2025ರ ಆರನೇ ಪಂದ್ಯ ರಾಜಸ್ಥಾನ ರಾಯಲ್ಸ್ (RR) ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಕೆಕೆಆರ್ ಸ್ಪಿನ್ನರ್​ಗಳ ದಾಳಿಗೆ ಕುಸಿದ ರಾಯಲ್ಸ್​ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್​ಗಳಿಸಿದೆ. ಧ್ರುವ್ ಜುರೆಲ್ 33 ತಂಡದ ಗರಿಷ್ಠ ಸ್ಕೋರರ್​ ಆದರು.

ಕೋಲ್ಕತ್ತಾ ನೈಟ್​ ರೈಡರ್ಸ್ಕೋಲ್ಕತ್ತಾ ನೈಟ್​ ರೈಡರ್ಸ್
ಕೋಲ್ಕತ್ತಾ ನೈಟ್​ ರೈಡರ್ಸ್

IPL 2025ರ ಆರನೇ ಪಂದ್ಯ ರಾಜಸ್ಥಾನ ರಾಯಲ್ಸ್ (RR) ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಕೆಕೆಆರ್ ಸ್ಪಿನ್ನರ್​ಗಳ ದಾಳಿಗೆ ಕುಸಿದ ರಾಯಲ್ಸ್​ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್​ಗಳಿಸಿದೆ. ಧ್ರುವ್ ಜುರೆಲ್ 33 ತಂಡದ ಗರಿಷ್ಠ ಸ್ಕೋರರ್​ ಆದರು.

ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ರಾಜಸ್ಥಾನ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆದರೆ ಇನ್ನಿಂಗ್ಸ್ ಆರಂಭಿಸಿದ ರಾಯಲ್ಸ್ ಮೊದಲ ವಿಕೆಟ್​​ಗೆ 33 ರನ್​ ಸಿಡಿಸಿ ಉತ್ತಮ ಆರಂಭ ಪಡೆದುಕೊಂಡಿತ್ತು. ಸ್ಯಾಮ್ಸನ್ ಕೇವಲ 13 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂಕದಲ್ಲಿ ಬಂದ ನಾಯಕ ಪರಾಗ್ 15 ಎಸೆತಗಳಲ್ಲಿ 3 ಸಿಕ್ಸರ್​ಗಳ ಸಹಿತ 25 ರನ್​ಗಳಿಸಿದರು. ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಕೈಚೆಲ್ಲಿದರು.