ತಂಡದಲ್ಲಿ ಬದಲಾವಣೆ ಅಗತ್ಯ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ RCB ತಂಡವು ಪಿಚ್ನ ಅಗತ್ಯಕ್ಕೆ ಅನುಗುಣವಾಗಿ ತನ್ನ ತಂಡ ಸಂಯೋಜನೆಯನ್ನು ಬದಲಾಯಿಸಬೇಕಾಗುತ್ತದೆ ಎಂದು ಶೇನ್ ವ್ಯಾಟ್ಸನ್ ಹೇಳಿದ್ದಾರೆ. ‘ಜಿಯೋಸ್ಟಾರ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚೆಪಾಕ್ನಲ್ಲಿ ಆಡುವುದು ಆರ್ಸಿಬಿಗೆ ದೊಡ್ಡ ಸವಾಲಾಗಿರುತ್ತದೆ., ವಿಶೇಷವಾಗಿ ಸೂಪರ್ ಕಿಂಗ್ಸ್ ಬೌಲರ್ಗಳನ್ನು ಪರಿಗಣಿಸಿದರೆ ಆರ್ಸಿಬಿ ಗೆಲುವು ಸುಲಭವಲ್ಲ ಎಂದು ತಿಳಿಸಿದ್ದಾರೆ. ಚೆಪಾಕ್ನಲ್ಲಿ ಗೆಲ್ಲಲು ತಂಡ ಸಂಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ, ಆದರೆ ಚೆಪಾಕ್ ಕ್ರೀಡಾಂಗಣವು ಚೆನ್ನೈ ತಂಡದ ಭದ್ರಕೋಟೆ ಕೇಂದ್ರವಾಗಿದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಸ್ಕೆ vs ಆರ್ಸಿಬಿ ಹೈವೋಲ್ಟೇಜ್ ಕಾದಾಟದಲ್ಲಿ ಹೆಚ್ಚು ಗೆದ್ದಿರುವ ತಂಡ ಯಾವುದು? ಇಲ್ಲಿದೆ ಮಾಹಿತಿ
ಹೆಚ್ಚುವರಿ ಸ್ಪಿನ್ನರ್ ಅಗತ್ಯ
ಚೆಪಾಕ್ನಲ್ಲಿ ಹೆಚ್ಚುವರಿ ಸ್ಪಿನ್ನರ್ ಮತ್ತು ಬಲಿಷ್ಠ ಸ್ಪಿನ್ ಬೌಲಿಂಗ್ ಎದುರಿಸುವ ಆಟಗಾರರನ್ನ ಈ ಪಂದ್ಯದಲ್ಲಿ ಕಣಕ್ಕಿಳಿಸಬೇಕೆಂದು ವಾಟ್ಸನ್ ಆರ್ಸಿಬಿಗೆ ಸಲಹೆ ನೀಡಿದ್ದಾರೆ. ಟಿಮ್ ಡೇವಿಡ್ ಬದಲಿಗೆ ಸ್ಪಿನ್ ಬೌಲಿಂಗ್ ಮತಗ್ತು ಬ್ಯಾಟಿಂಗ್ ಮಾಡಬಲ್ಲ ಜಾಕೋಬ್ ಬೆಥೆಲ್ ಆಡಿಸಿದರೆ ತಂಡದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡದ ಬಲವನ್ನು ಹೆಚ್ಚಿಸಲಿದೆ. ಅಲ್ಲದೆ ಈ ಪಂದ್ಯದಲ್ಲಿ ಲಿವಿಂಗ್ಸ್ಟೋನ್ರಿಂದ ಒಂದೆರಡು ಓವರ್ ಬೌಲಿಂಗ್ ಮಾಡಿಸಲು ಆರ್ಸಿಬಿ ಮುಂದಾಗಬೇಕಿದೆ.
ಸಿಎಸ್ಕೆ ತಂಡ ಚೆಪಾಕ್ಗೆ ಸೂಕ್ತವಾಗಿದೆ
ಚೆನ್ನೈ ತಂಡದ ತವರಿನಲ್ಲಿ ಪ್ರಾಬಲ್ಯ ಸಾಧಿಸಲು ಅಲ್ಲಿರುವ ಅತ್ಯುತ್ತಮ ಸ್ಪಿನ್ನರ್ಗಳಿರುವುದೇ ಕಾರಣ ಎಂದು ಶೇನ್ ವ್ಯಾಟ್ಸನ್ ಹೇಳಿದ್ದಾರೆ. ‘ಸೂಪರ್ ಕಿಂಗ್ಸ್ ತಂಡದ ಸಂಪೂರ್ಣ ರಚನೆ ಚೆನ್ನೈನಲ್ಲಿ ಉತ್ತಮ ಪ್ರದರ್ಶನ ನೀಡುವುದಕ್ಕೆ ತಯಾರಾಗಿದೆ’ ಎಂದು ವ್ಯಾಟ್ಸನ್ ಹೇಳಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಅಶ್ವಿನ್, ಜಡೇಜಾ ಮತ್ತು ನೂರ್ ಅಹ್ಮದ್ ಅವರ ಅದ್ಭುತ ಬೌಲಿಂಗ್ RCBಗೆ ದೊಡ್ಡ ಸವಾಲಾಗಿರುತ್ತದೆ.
ಇದನ್ನೂ ಓದಿ: 1 ಓವರ್ನಲ್ಲಿ 6 ಸಿಕ್ಸರ್, ಹರಾಜಿನಲ್ಲಿ 10 ಪಟ್ಟು ಹಣ! ಪದಾರ್ಪಣೆ ಪಂದ್ಯದಲ್ಲೇ ಹೀರೋ ಆದ 23ರ ಯುವಕ
ನೂರ್ ತಂಡದ ಸ್ಟ್ರೆಂತ್
ನೂರ್ ಅಹ್ಮದ್ ಅವರ ಮೊದಲ ಪಂದ್ಯದಲ್ಲಿ ಕಂಡುಬಂದ ಅದ್ಭುತ ಪ್ರದರ್ಶನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಶೇನ್ ವ್ಯಾಟ್ಸನ್ ಹೇಳಿದ್ದಾರೆ. 2008 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಶಸ್ತಿ ಅಭಿಯಾನದಲ್ಲಿ ಭಾಗವಹಿಸಿದ್ದ ವ್ಯಾಟ್ಸನ್, RCBಯಲ್ಲಿ ಉತ್ತಮ ಸ್ಪಿನ್ ಆಯ್ಕೆಗಳ ಕೊರತೆಯಿದೆ ಮತ್ತು ಇದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪಷ್ಟವಾಯಿತು ಎಂದು ಹೇಳಿದರು.
ಸಿಎಸ್ಕೆ vs ಆರ್ಸಿಬಿ ಹೆಡ್ ಟು ಹೆಡ್ ರೆಕಾರ್ಡ್
ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳ ನಡುವೆ ಒಟ್ಟು 33 ಪಂದ್ಯಗಳು ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ 21 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮೇಲುಗೈ ಪಡೆದಿದೆ. ಆರ್ಸಿಬಿ ಕೇವಲ 11 ಪಂದ್ಯಗಳಲ್ಲಿ ಜಯ ಗಳಿಸಿದ್ದು, ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಈ ಅಂಕಿಅಂಶಗಳು ಸಿಎಸ್ಕೆ ತಂಡದ ಪ್ರಾಬಲ್ಯವನ್ನು ತೋರಿಸುತ್ತವೆ, ಆದರೆ ಆರ್ಸಿಬಿ ಈ ಬಾರಿ ಆ ದಾಖಲೆಯನ್ನು ಬದಲಾಯಿಸುವ ಛಲದಲ್ಲಿದೆ.
ಇನ್ನು ಚೆಪಾಕ್ನಲ್ಲಿ ಆರ್ಸಿಬಿ vs ಸಿಎಸ್ಕೆ ರೆಕಾರ್ಡ್ ನೋಡುವುದಾದರೆ, ಸಿಎಸ್ಕೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಇಲ್ಲಿ ನಡೆದಿರುವ ಎರಡು ತಂಡಗಳ ನಡುವಿನ 9 ಪಂದ್ಯಗಳಲ್ಲಿ ಸಿಎಸ್ಕೆ 8ರಲ್ಲಿ ಜಯ ಸಾಧಿಸಿದ್ದರೆ, 1ರಲ್ಲಿ ಆರ್ಸಿಬಿ ಗೆದ್ದಿದೆ. ಆ ಏಕೈಕ ಗೆಲುವು 2008ರಲ್ಲಿ ಬಂದಿರುವುದು ಗಮನಾರ್ಹ. ಅಂದರೆ 16 ವರ್ಷಗಳಲ್ಲಿ ಆರ್ಸಿಬಿ ಒಂದೇ ಒಂದು ಗೆಲುವು ಸಾಧಿಸಿಲ್ಲ.
March 27, 2025 4:49 PM IST
RCB vs CSK, IPL 2025: ಚೆಪಾಕ್ನಲ್ಲಿ ಸಿಎಸ್ಕೆ ವಿರುದ್ಧ ಗೆಲ್ಲಬೇಕಾದರೆ ಈ ಬದಲಾವಣೆ ಅಗತ್ಯ! ಆರ್ಸಿಬಿ ಮಹತ್ವದ ಸಲಹೆ ನೀಡಿದ ಆಸಿಸ್ ಲೆಜೆಂಡ್