Last Updated:
ಭಾರತ ತಂಡದ ಮೊದಲ ಇನ್ನಿಂಗ್ಸ್ನಲ್ಲಿ 23 ರನ್ಗಳ ಹಿನ್ನಡೆ ಅನುಭವಿಸಿದರು, 2ನೇ ಇನ್ನಿಂಗ್ಸ್ನಲ್ಲಿ ಕೆಚ್ಚೆದೆಯ ಪ್ರದರ್ಶನ ತೋರಿ 396 ರನ್ಗಳಿಸಿತು. 3ನೇ ದಿನ ಭಾರತ ತಂಡ ಯಶಸ್ವಿ ಜೈಸ್ವಾಲ್ ಶತಕ ಹಾಗೂ ಆಕಾಶ್ ದೀಪ್ ಹಾಗೂ ವಾಷಿಂಗ್ಟನ್ ಸುಂದರ್ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ ಇಂಗ್ಲೆಂಡ್ಗೆ ಗೆಲ್ಲಲು 374 ರನ್ಗಳ ಕಠಿಣ ಗುರಿ ನೀಡುವಲ್ಲಿ ಸಫಲವಾಗಿದೆ
ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ರೋಚಕ ಹಂತ ತಲುಪಿದೆ. ಭಾರತ ತಂಡದ ಮೊದಲ ಇನ್ನಿಂಗ್ಸ್ನಲ್ಲಿ 23 ರನ್ಗಳ ಹಿನ್ನಡೆ ಅನುಭವಿಸಿದರು, 2ನೇ ಇನ್ನಿಂಗ್ಸ್ನಲ್ಲಿ ಕೆಚ್ಚೆದೆಯ ಪ್ರದರ್ಶನ ತೋರಿ 396 ರನ್ಗಳಿಸಿತು. 3ನೇ ದಿನ ಭಾರತ ತಂಡ ಯಶಸ್ವಿ ಜೈಸ್ವಾಲ್ ಶತಕ ಹಾಗೂ ಆಕಾಶ್ ದೀಪ್ ಹಾಗೂ ವಾಷಿಂಗ್ಟನ್ ಸುಂದರ್ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ ಇಂಗ್ಲೆಂಡ್ಗೆ ಗೆಲ್ಲಲು 374 ರನ್ಗಳ ಕಠಿಣ ಗುರಿ ನೀಡುವಲ್ಲಿ ಸಫಲವಾಗಿದೆ.
ಎರಡನೇ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 75 ರನ್ಗಳಿಸಿತ್ತು. ಇಂದು ಬ್ಯಾಟಿಂಗ್ ಮುಂದುವರಿಸಿದ ಯಶಸ್ವಿ ಜೈಸ್ವಾಲ್ ಹಾಗೂ ನೈಟ್ ವಾಚ್ಮನ್ ಆಗಿ ಕಣಕ್ಕಿಳಿದಿದ್ದ ಆಕಾಶ್ ದೀಪ್ 107 ರನ್ಗಳ ಜೊತೆಯಾಟ ನಡೆಸಿದರು. ಆಕಾಶ್ ದೀಪ್ 94 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 66 ರನ್ಗಳಿಸಿದರು. ಈ ಜೋಡಿ ತಂಡದ ಮೊತ್ತ 70 ರಿಂದ 177 ರನ್ಗಳವೆಗೆ ಕೊಂಡೊಯ್ದರು. ಈ ಜೋಡಿ ಬೇರ್ಪಡುತ್ತಿದ್ದಂತೆ ಭಾರತ ದೊಡ್ಡ ಜೊತೆಯಾಟ ನಡೆಸಲು ಸಾಧ್ಯವಾಗಲಿಲ್ಲ.
ಆದರೂ ಜೈಸ್ವಾಲ್ ಸ್ಫೋಟಕವಾಗಿ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. 4ನೇ ವಿಕೆಟ್ಗೆ ಕರುಣ್ ನಾಯರ್ (17) ಹಾಗೂ ಜೈಸ್ವಾಲ್ 40 ರನ್ ಸೇರಿಸಿದರು. ಕರುಣ್ ಔಟಾಗುತ್ತಿದ್ಧಂತೆ ಬಂದ ಜಡೇಜಾ ಜೊತೆಗೆ 44 ರನ್ ಸೇರಿಸಿದರು. ಜೈಸ್ವಾಲ್ 164 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ಗಳ ಸಹಿತ 118 ರನ್ಗಳಿಸಿ ಜೋಶ್ ಟಂಗ್ಗೆ ವಿಕೆಟ್ ನೀಡಿದರು. ನಂತರ ಜಡೇಜಾ ಹಾಗೂ ಧ್ರುವ್ ಜುರೆಲ್ 72 ಎಸೆತಗಳಲ್ಲಿ 50 ರನ್ಗಳ ಜೊತೆಯಾಟ ನಡೆಸಿದರು. ಜಡೇಜಾ 77 ಎಸೆತಗಳಲ್ಲಿ 5 ಬೌಂಡರಿ ಸಹಿತ 53 ರನ್ಗಳಿಸಿದರು. ಜುರೆಲ್ 46 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 34 ರನ್ಗಳಿಸಿ ಓವರ್ಟನ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಸಿರಾಜ್ ಖಾತೆ ತೆರೆಯದೇ ಔಟ್ ಆದರು.
ಕೊನೆಗೆ ಅಬ್ಬರಿಸಿದ ವಾಷಿಂಗ್ಟನ್ ಸುಂದರ್ 46 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ಗಳ ಸಹಿತ 53 ರನ್ಗಳಿಸಿ ಕೊನೆಯವರಾಗಿ ಔಟ್ ಆದರು. ಇಂಗ್ಲೆಂಡ್ ಪರ ಜೋಶ್ ಟಂಗ್ 125ಕ್ಕೆ 5 ವಿಕೆಟ್ ಪಡೆದರೆ, ಗಸ್ ಅಟ್ಕಿನ್ಸನ್ 127ಕ್ಕೆ 3 ವಿಕೆಟ್ ಪಡೆದು ಮಿಂಚಿದರೆ, ಜೇಮಿ ಓವರ್ಟನ್ 98ಕ್ಕೆ 2 ವಿಕೆಟ್ ಪಡೆದು ಮಿಂಚಿದರು.
August 02, 2025 10:19 PM IST