IPL 2025: ಬ್ಯಾಟಿಂಗ್ ಸ್ವರ್ಗದಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂದ ಲಕ್ನೋ! ಇಂದೂ ಕೂಡ ರನ್​​ಗಳ ಹೊಳೆ ನಿರೀಕ್ಷೆ’

IPL 2025: ಬ್ಯಾಟಿಂಗ್ ಸ್ವರ್ಗದಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂದ ಲಕ್ನೋ! ಇಂದೂ ಕೂಡ ರನ್​​ಗಳ ಹೊಳೆ ನಿರೀಕ್ಷೆ’

Last Updated:

ಲಕ್ನೋ ಸೂಪರ್ ಜೈಂಟ್ಸ್ ತಂಡ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಲಕ್ನೋ ನಾಯಕ ಪಂತ್ 240-250 ರನ್ ಚೇಸ್ ಮಾಡಬಲ್ಲೆವು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಕ್ನೋ vs ಹೈದರಾಬಾದ್ಲಕ್ನೋ vs ಹೈದರಾಬಾದ್
ಲಕ್ನೋ vs ಹೈದರಾಬಾದ್

2025ರ ಐಪಿಎಲ್​ನ 7ನೇ ಪಂದ್ಯದಲ್ಲಿ ಲಕ್ನೂ ಸೂಪರ್ ಜೈಂಟ್ಸ್ ತಂಡ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಸನ್​ರೈಸರ್ಸ್ ಹೈದರಾಬಾದ್​ ಮೊದಲು ಬ್ಯಾಟಿಂಗ್ ಮಾಡಿದರೆ 200ಕ್ಕಿಂತ ಹೆಚ್ಚು ರನ್​ ಹೊಡೆಯಬಲ್ಲರು ಎಂಬುದು ತಿಳಿದಿದ್ದರೂ, ಲಕ್ನೋ ನಾಯಕ ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೈದಾನದ ಬ್ಯಾಟಿಂಗ್ ಮಾಡಲು ಅತ್ಯುತ್ತಮ ಪಿಚ್ ಆಗಿರುವುದರಿಂದ ನಾವು 240-250ರ ಮೊತ್ತವನ್ನು ಚೇಸ್ ಮಾಡಬಲ್ಲೆವು ಎಂದು ಪಂತ್ ಟಾಸ್​ ಗೆದ್ದ ನಂತರ ಹೇಳಿದ್ದಾರೆ. ಈ ಪಂದ್ಯದಲ್ಲಿ ಲಕ್ನೋ 1 ಬದಲಾವಣೆಯೊಂದಿಗೆ ಕಣಕ್ಕಿಳಿದರೆ, ಹೈದರಾಬಾದ್ ಕಳೆದ ಪಂದ್ಯದ ತಂಡವನ್ನೇ ಇಂದೂ ಕಣಕ್ಕಿಳಿಸಿದೆ.

ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮ್ಮಿನ್ಸ್(ನಾಯಕ), ಸಿಮರ್‌ಜೀತ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ.

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಐಡೆನ್ ಮಾರ್ಕ್ರಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ವಿಕೀ/ನಾಯಕ), ಡೇವಿಡ್ ಮಿಲ್ಲರ್, ಆಯುಷ್ ಬದೋನಿ, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಆವೇಶ್ ಖಾನ್, ದಿಗ್ವೇಶ್ ರಥಿ, ಪ್ರಿನ್ಸ್ ಯಾದವ್