India vs England: ಚಾನ್ಸ್ ಕೊಟ್ಟಿದ್ದು ಸಾಕು, ಆತ ತಂಡಕ್ಕೆ ಲಾಯಕ್ಕಲ್ಲ ಎಂದವರಿಗೆ ತಿರುಗೇಟು ಕೊಟ್ಟ ಕನ್ನಡಿಗ; ಸರಣಿ ಸಮಬಲಕ್ಕೆ ಆತನೂ ಕಾರಣ! | Prasidh Krishna takes 8 wickets in Last test match against England silences critics | ಕ್ರೀಡೆ

India vs England: ಚಾನ್ಸ್ ಕೊಟ್ಟಿದ್ದು ಸಾಕು, ಆತ ತಂಡಕ್ಕೆ ಲಾಯಕ್ಕಲ್ಲ ಎಂದವರಿಗೆ ತಿರುಗೇಟು ಕೊಟ್ಟ ಕನ್ನಡಿಗ; ಸರಣಿ ಸಮಬಲಕ್ಕೆ ಆತನೂ ಕಾರಣ! | Prasidh Krishna takes 8 wickets in Last test match against England silences critics | ಕ್ರೀಡೆ

Last Updated:

ಕೆನ್ನಿಂಗ್ಟನ್ ಓವಲ್‌ನ​ನಲ್ಲಿ ನಡೆದ 5 ಪಂದ್ಯಗಳ ಟೆಸ್ಟ್​ ಸರಣಿಯ ಕೊನೆಯ ಟೆಸ್ಟ್ ರೋಚಕ ಅಂತ್ಯ ಕಂಡಿದೆ. ಮೊಹಮ್ಮದ್ ಸಿರಾಜ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರ ಕರಾರುವಾಕ್ ದಾಳಿಯ ನೆರವಿನಿಂದ 6 ರನ್​ಗಳ ರೋಚಕ ಜಯ ಸಾಧಿಸಿದೆ.

ಟೀಂ ಇಂಡಿಯಾ ಜೊತೆ ಪ್ರಸಿದ್ಧ್ ಕೃಷ್ಣಟೀಂ ಇಂಡಿಯಾ ಜೊತೆ ಪ್ರಸಿದ್ಧ್ ಕೃಷ್ಣ
ಟೀಂ ಇಂಡಿಯಾ ಜೊತೆ ಪ್ರಸಿದ್ಧ್ ಕೃಷ್ಣ

ಕೆನ್ನಿಂಗ್ಟನ್ ಓವಲ್‌ನ​ನಲ್ಲಿ ನಡೆದ 5 ಪಂದ್ಯಗಳ ಟೆಸ್ಟ್​ ಸರಣಿಯ (Test Series) ಕೊನೆಯ ಟೆಸ್ಟ್ ರೋಚಕ ಅಂತ್ಯ ಕಂಡಿದೆ. ಮೊಹಮ್ಮದ್ ಸಿರಾಜ್ (Mohammad Siraj) ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ಅವರ ಕರಾರುವಾಕ್ ದಾಳಿಯ ನೆರವಿನಿಂದ 6 ರನ್​ಗಳ ರೋಚಕ ಜಯ ಸಾಧಿಸಿ 5 ಪಂದ್ಯಗಳ ಸರಣಿಯನ್ನ 2-2ರಲ್ಲಿ ಸಮಬಲ ಸಾಧಿಸಿದೆ. ಮಾತ್ರವಲ್ಲ, ಈ ಪಂದ್ಯದ ಪ್ಲೇಯಿಂಗ್-11ನಲ್ಲಿ ಕಾಣಿಸಿಕೊಂಡಿದ್ದ ಕನ್ನಡಿಗನೊಬ್ಬನ ಕುರಿತು ಟೀಕಾಕಾರರು ನಾನಾ ಪ್ರಶ್ನೆಗಳನ್ನು ಎತ್ತಿದ್ದರು. ಅವರ ಎಲ್ಲಾ ಪ್ರಶ್ನೆಗಳಿಗೆ ಅವರು ತಮ್ಮ ಬೌಲಿಂಗ್ ಮೂಲಕವೇ ಉತ್ತರಿಸಿದರು. 

ಅಮೋಘ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ

ಆದ್ರೆ, 5ನೇ ಪಂದ್ಯದ ಆರಂಭಕ್ಕೆ ಮುನ್ನ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಟ್ಟು ಬೇರೆ ವೇಗಿಗಳಿಗೆ ಅವಕಾಶ ನೀಡುವಂತೆ ಒತ್ತಾಯ ಹೆಚ್ಚಾಗಿತ್ತು. ಆದ್ರೂ ತಂಡದ ಮ್ಯಾನೇಜ್‌ಮೆಂಟ್ ಮಾತ್ರ ಕನ್ನಡಿಗನ ಮೇಲೆ ಭರವಸೆ ಇಟ್ಟು ಆಡುವ 11ರ ಬಳಗದಲ್ಲಿ ಅವಕಾಶ ನೀಡಿದ್ದರು. ಕೋಚ್ ಹಾಗೂ ನಾಯಕನ ವಿಶ್ವಾಸ ಹುಸಿ ಮಾಡದ ಪ್ರಸಿದ್ಧ್ ಓವಲ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಅಮೋಘ ಬೌಲಿಂಗ್ ಮಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

8 ವಿಕೆಟ್ ಪಡೆದು ಮಿಂಚಿದ ವೇಗಿ

5ನೇ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿದ ಪ್ರಸಿದ್ಧ್ ಕೃಷ್ಣ ಎರಡೂ ಇನ್ನಿಂಗ್ಸ್‌ನಲ್ಲೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಗಮನಸೆಳೆದರು. ಮೊದಲ ಇನ್ನಿಂಗ್ಸ್‌ನಲ್ಲಿ 62 ರನ್ ನೀಡಿ 4 ವಿಕೆಟ್ ಕಬಳಿಸಿದ ಅವರು, ಎರಡನೇ ಇನ್ನಿಂಗ್ಸ್‌ನಲ್ಲಿ 126 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಒಟ್ಟಾರೆ ಪಂದ್ಯದಲ್ಲಿ 8 ವಿಕೆಟ್ ಪಡೆದು ಗೆಲುವಿಗೆ ಕಾಣಿಕೆ ನೀಡಿದರು.

ಈ ಪಂದ್ಯಕ್ಕೆ ಅವರನ್ನು ಆಯ್ಕೆ ಮಾಡಿದಾಗ ಅನೇಕ ಕ್ರಿಕೆಟ್ ಪಂಡಿತರು ಹಾಗೂ ಮಾಜಿ ಕ್ರಿಕೆಟಿಗರು ಅವರ ವಿರುದ್ಧ ನಾನಾ ಪ್ರಶ್ನೆಗಳನ್ನು ಎತ್ತಿದ್ದರು. ಆದ್ರೆ, ಟೀಕಾಕಾರರ ಎಲ್ಲಾ ಪ್ರಶ್ನೆಗಳಿಗೆ ಬೌಲಿಂಗ್ ಮೂಲಕವೇ ಉತ್ತರಿಸಿದ ಅವರು, ಓವಲ್ ಪಂದ್ಯದಲ್ಲಿ 8 ವಿಕೆಟ್ ಪಡೆದು ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಂಡರು. ಮಾತ್ರವಲ್ಲ, ತಾವು ವಿಶ್ವದ ಯಾವುದೇ ಪಿಚ್‌‌ನಲ್ಲಿ ಗಮನಾರ್ಹ ಬೌಲಿಂಗ್ ಮಾಡಬಲ್ಲೆ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದರು. ಹಾಗೂ ಟೀಕಾಕಾರ ಬಾಯಿ ಮುಚ್ಚಿಸಿದ್ದಾರೆ.

4ನೇ ದಿನ ಮಳೆ, ಇಂಗ್ಲೆಂಡ್‌‌ಗೆ ಆಘಾತ

ನಾಲ್ಕನೇ ದಿನ ಇಂಗ್ಲೆಂಡ್ ತಂಡ ಮಳೆಯ ಕಾರಣ ಪಂದ್ಯ ಸ್ಥಗಿತಗೊಳ್ಳುವ ಮುನ್ನ 6 ವಿಕೆಟ್ ಕಳೆದುಕೊಂಡು 339 ರನ್​ಗಳಿಸಿತ್ತು. ಕೊನೆಯ ದಿನ ಇಂಗ್ಲೆಂಡ್ ತಂಡ ಗೆಲ್ಲಲು 35 ರನ್​ಗಳಿಸಿಬೇಕಿತ್ತು. 5ನೇ ದಿನ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್​ ಮೊದಲ ಓವರ್​ನಲ್ಲೇ ಪ್ರಸಿಧ್ ಕೃಷ್ಣ ಬೌಲಿಂಗ್​​ನಲ್ಲಿ ಸತತ 2 ಬೌಂಡರಿ ಬಾರಿಸಿದರು. ಆಗ ಎಲ್ಲರೂ ಇಂಗ್ಲೆಂಡ್ ಸುಲಭವಾಗಿ ಗೆಲ್ಲಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಮೊಹ್ಮಮದ್ ಸಿರಾಜ್ ನಂತರದ ಓವರ್​ನಲ್ಲೇ ಸ್ಫೋಟಕ ಆಟಗಾರ ಜೇಮಿ ಸ್ಮಿತ್​ರನ್ನ ಔಟ್ ಮಾಡುವ ಮೂಲಕ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿರು.

ನಂತರ ಬಂದ  ಗಸ್​ ಆಟ್ಕಿನ್ಸನ್​​ 14 ಎಸೆತಗಳಲ್ಲಿ 7 ರನ್ ಸೇರಿಸಿದರು,  9 ರನ್​ಗಳಿಸಿದ್ದ ಓವರ್ಟನ್​ರನ್ನ ಸಿರಾಜ್​ ಎಲ್​ಬಿಡಬ್ಲ್ಯೂ ಮಾಡುವ ಮೂಲಕ ಭಾರತದ ಗೆಲುವಿನ ಆಸೆಯನ್ನ ಮತ್ತಷ್ಟು ಹೆಚ್ಚಿಸಿದರು. ಕನ್ನಡಿಗ ಪ್ರಸಿಧ್ ಕೃಷ್ಣ  12 ಎಸೆತಗಳನ್ನಾಡಿದ್ದ ಜೋಶ್ ಟಂಗ್​ರನ್ನ ಕ್ಲೀನ್ ಬೌಲ್ಡ್ ಮಾಡಿದರು. ಈ ಹಂತದಲ್ಲಿ ಭಾರತದ ಸುಲಭವಾಗಿ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಏಕೆಂದರೆ ಕ್ರಿಸ್ ವೋಕ್ಸ್ ಎಡಗೈ ಗಾಯವಾಗಿರುವುದರಿಂದ ಬ್ಯಾಟಿಂಗ್ ಬಾರದಿರಬಹುದು ಎನ್ನಲಾಗಿತ್ತು. ಆದರೆ ವೋಕ್ಸ್​ ಮೈದಾನಕ್ಕೆ ಆಗಮಿಸಿ ಎಲ್ಲರ ನಿರೀಕ್ಷೆ ಹುಸಿ ಮಾಡಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

India vs England: ಚಾನ್ಸ್ ಕೊಟ್ಟಿದ್ದು ಸಾಕು, ಆತ ತಂಡಕ್ಕೆ ಲಾಯಕ್ಕಲ್ಲ ಎಂದವರಿಗೆ ತಿರುಗೇಟು ಕೊಟ್ಟ ಕನ್ನಡಿಗ; ಸರಣಿ ಸಮಬಲಕ್ಕೆ ಆತನೂ ಕಾರಣ!