Mohammed Siraj: ಆತ ನೀಡಿದ ಸಲಹೆ ನನಗೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಲು ಸಾಧ್ಯವಾಯಿತು: ಸಿರಾಜ್ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ? |mohammed siraj shares ravindra jadeja’s heartwarming advice: ‘remember your father | ಕ್ರೀಡೆ

Mohammed Siraj: ಆತ ನೀಡಿದ ಸಲಹೆ ನನಗೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಲು ಸಾಧ್ಯವಾಯಿತು: ಸಿರಾಜ್ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ? |mohammed siraj shares ravindra jadeja’s heartwarming advice: ‘remember your father | ಕ್ರೀಡೆ

Last Updated:

ಬ್ರೂಕ್ ಕ್ಯಾಚ್ ಕೈಬಿಟ್ಟ ನಂತರ ಪಂದ್ಯದಲ್ಲಿ ನಮಗೆ ದೊಡ್ಡ ಹಿನ್ನಡೆಯಾಯಿತು. ಆದರೆ ಗೆಲುವಿನ ಭರವಸೆಯನ್ನು ಅವರು ಬಿಟ್ಟುಕೊಡಲಿಲ್ಲ. ಅಂತಿಮ ದಿನದ ಆಟ ಪ್ರಾರಂಭವಾಗುವ ಮೊದಲು ಕ್ರಿಕೆಟಿಗನಾಗಿ ಬೆಳೆಯಲು ತಾವು ಪಟ್ಟ ಶ್ರಮವನ್ನು ನೆನಪಿಸಿಕೊಳ್ಳುವಂತೆ ರವೀಂದ್ರ ಜಡೇಜಾ ನನ್ನಲ್ಲಿ ಉತ್ಸಾಹ ತುಂಬಿದರು. ಅವರ ಮಾತುಗಳು ತನ್ನನ್ನು ಪ್ರೇರೇಪಿಸಿದವು ಎಂದು ಪಂದ್ಯದ ಬಳಿಕ ಹೇಳಿಕೊಂಡಿದ್ದಾರೆ

ಮೊಹಮ್ಮದ್ ಸಿರಾಜ್ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್

ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಭಾರತ ತಂಡ 6 ರನ್​ಗಳ ರೋಚಕ ಜಯ ಸಾಧಿಸಿ 5 ಪಂದ್ಯಗಳ ಟೆಸ್ಟ್​ ಸರಣಿಯನ್ನ ಡ್ರಾ ಮಾಡಿಕೊಂಡಿದೆ. ಈ ಪಂದ್ಯದಲ್ಲಿ 2ನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಸೇರಿ ಒಟ್ಟಾರೆ 9 ವಿಕೆಟ್ ಪಡೆದ ಭಾರತ ತಂಡದ ಮೊಹಮ್ಮದ್ ಸಿರಾಜ್ (Mohammed Siraj) ಭಾರತಕ್ಕೆ ಗೆಲುವಿನ ಸರದಾರರಾದರು. ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ ಗೆಲುವು ಸಾಧಿಸಲು ದೇವರ ದಯೆಯೇ ಕಾರಣ ಎಂದು ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ. ಬ್ರೂಕ್ ಕ್ಯಾಚ್ ಕೈಬಿಟ್ಟ ನಂತರ ಪಂದ್ಯದಲ್ಲಿ ನಮಗೆ ದೊಡ್ಡ ಹಿನ್ನಡೆಯಾಯಿತು. ಆದರೆ ಗೆಲುವಿನ ಭರವಸೆಯನ್ನು ಅವರು ಬಿಟ್ಟುಕೊಡಲಿಲ್ಲ. ಅಂತಿಮ ದಿನದ ಆಟ ಪ್ರಾರಂಭವಾಗುವ ಮೊದಲು ಕ್ರಿಕೆಟಿಗನಾಗಿ ಬೆಳೆಯಲು ತಾವು ಪಟ್ಟ ಶ್ರಮವನ್ನು ನೆನಪಿಸಿಕೊಳ್ಳುವಂತೆ ರವೀಂದ್ರ ಜಡೇಜಾ ನನ್ನಲ್ಲಿ ಉತ್ಸಾಹ ತುಂಬಿದರು. ಅವರ ಮಾತುಗಳು ತನ್ನನ್ನು ಪ್ರೇರೇಪಿಸಿದವು ಎಂದು ಪಂದ್ಯದ ಬಳಿಕ ಹೇಳಿಕೊಂಡಿದ್ದಾರೆ.

9 ವಿಕೆಟ್ ಪಡೆದ ಮಿಂಚಿದ ಸಿರಾಜ್

339/6 ರಾತ್ರಿಯ ಸ್ಕೋರ್‌ನೊಂದಿಗೆ ಅಂತಿಮ ದಿನದ ಆಟವನ್ನು ಪ್ರಾರಂಭಿಸಿದ ಇಂಗ್ಲೆಂಡ್ 367 ರನ್‌ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ಸಿರಾಜ್ (5/104) ಐದು ವಿಕೆಟ್ ಪಡೆದು ಭಾರತವನ್ನು ಸ್ಮರಣೀಯ ಗೆಲುವಿಗೆ ಕಾರಣರಾದರು. ಸಿರಾಜ್ ಜೊತೆಗೆ, ಕನ್ನಡಿಗ ಪ್ರಸಿದ್ಧ್ ಕೃಷ್ಣ (4/126) ನಾಲ್ಕು ವಿಕೆಟ್ ಪಡೆದರೆ, ಆಕಾಶ್ ದೀಪ್ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ, ಐದು ಟೆಸ್ಟ್ ಸರಣಿಯನ್ನು 2-2 ರಿಂದ ಸಮಬಲ ಸಾಧಿಸಲು ಸಾಧ್ಯವಾಯಿತು. ಅಂತಿಮ ಟೆಸ್ಟ್‌ನಲ್ಲಿ ಸಿರಾಜ್ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದರು.

ನಂಬಿಕೆ ಕಳೆದುಕೊಂಡಿರಲಿಲ್ಲ

ಈ ಗೆಲುವಿನ ನಂತರ ಅಧಿಕೃತ ಪ್ರಸಾರಕರೊಂದಿಗೆ ಮಾತನಾಡಿದ ಸಿರಾಜ್, ಈ ಪಂದ್ಯವನ್ನು ಗೆಲ್ಲುವ ಭರವಸೆಯನ್ನು ಕಳೆದುಕೊಳ್ಳಲಿಲ್ಲ ಎಂದು ಹೇಳಿದರು. ‘ಏನೇ ಇರಲಿ, ಸರಿಯಾದ ಸ್ಥಳದಲ್ಲಿ ಬೌಲಿಂಗ್ ಮಾಡುವ ಯೋಜನೆಯೊಂದಿಗೆ ನಾನು ಮೈದಾನಕ್ಕೆ ಹೋದೆ. ಬ್ರೂಕ್ ಕ್ಯಾಚ್ ತೆಗೆದುಕೊಂಡಾಗ, ನಾನು ಬೌಂಡರಿ ಗೆರೆಯನ್ನು ಮುಟ್ಟುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಅದು ಪಂದ್ಯವನ್ನೇ ಇಂಗ್ಲೆಂಡ್ ಕಡೆಗೆ ತಿರುಗಿಸಿತು. ಆ ಅವಕಾಶದೊಂದಿಗೆ, ಬ್ರೂಕ್ T20 ಮೂಡ್‌ಗೆ ಹೋದರು. ಅದರೊಂದಿಗೆ, ನಾವು ಆಟದಲ್ಲಿ ಹಿಂದುಳಿದಿದ್ದೆವು. ಆದರೆ ಆ ದೇವರ ದಯೆಯಿಂದ, ನಾನು ಯಾವುದೇ ಹಂತದಲ್ಲೂ ಗೆಲುವಿನ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಇಂದು ಬೆಳಿಗ್ಗೆಯೂ ನಾನು ಅದೇ ಆತ್ಮವಿಶ್ವಾಸದಿಂದ ಬೌಲಿಂಗ್ ಮಾಡಿದೆ,” ಎಂದು ಸಿರಾಜ್ ಹೇಳಿದರು.

ಜಡೇಜಾ ನೀಡಿದ ಸಲಹೆ ಏನು?

ಅಸಾಧಾರಣ ಪ್ರದರ್ಶನದೊಂದಿಗೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮೊಹಮ್ಮದ್ ಸಿರಾಜ್, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಸಿರಾಜ್, ಅಂತಿಮ ದಿನದ ಆಟಕ್ಕೂ ಮೊದಲು ಜಡೇಜಾ ತಮ್ಮ ಕ್ರಿಕೆಟ್ ಪ್ರಯಾಣ ಮತ್ತು ಅವರ ತಂದೆಯನ್ನು ನೆನಪಿಸಿಕೊಳ್ಳುವಂತೆ ಸೂಚಿಸಿದರು. ಅದು ನನ್ನಲ್ಲಿ ಹೊಸ ಹುರುಪು ತಂದಿತು ಎಂದು ದಿನೇಶ್ ಕಾರ್ತಿಕ್​​ರೊಂದಿಗೆ ಹಂಚಿಕೊಂಡರು.

‘ನಿಜ ಹೇಳಬೇಕೆಂದರೆ.. ಈ ಗೆಲುವು ಅದ್ಭುತವೆನಿಸುತ್ತದೆ. ಈ ಪಂದ್ಯದ ಮೊದಲ ದಿನದಿಂದಲೇ ನಾವು ಕಠಿಣವಾಗಿ ಹೋರಾಡಲು ಬಯಸಿದ್ದೆವು. ಈ ಪಂದ್ಯವನ್ನು ಗೆಲ್ಲುವುದು ಅದ್ಭುತವಾಗಿದೆ. ನಮ್ಮ ಯೋಜನೆ ಒಂದೇ ಸ್ಥಳದಲ್ಲಿ ಚೆಂಡನ್ನು ಎಸೆಯುವುದು. ನಾನು ಇಂದು ಬೆಳಿಗ್ಗೆ ಎದ್ದಾಗ, ತಂಡವನ್ನು ಗೆಲ್ಲಲು ಸಹಾಯ ಮಾಡುವ ಗುರಿಯನ್ನು ಹೊಂದಿದ್ದೆ. ನಾನು ಅದನ್ನು ಮಾಡಬಲ್ಲೆ ಎಂದು ನಾನು ಬಲವಾಗಿ ನಂಬಿದ್ದೆ. ಹ್ಯಾರಿ ಬ್ರೂಕ್ ಕ್ಯಾಚ್ ಸರಿಯಾಗಿ ಹಿಡಿದಿದ್ದರೆ, ನಿನ್ನೆ ಪಂದ್ಯ ಮುಗಿಯುತ್ತಿತ್ತು. ಆದರೆ ಬ್ರೂಕ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಆ ಕ್ಯಾಚ್ ಬಿಟ್ಟದ್ದು ನನ್ನಂದಿದಾದ ದೊಡ್ಡ ಪ್ರಮಾದವಾಗಿತ್ತು ಎಂದು ಸಿರಾಜ್ ಹೇಳಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Mohammed Siraj: ಆತ ನೀಡಿದ ಸಲಹೆ ನನಗೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಲು ಸಾಧ್ಯವಾಯಿತು: ಸಿರಾಜ್ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ?