Last Updated:
ಬಲಿಷ್ಠ ಆಂಗ್ಲರ ಪಡೆಗೆ ಯಂಗ್ ಇಂಡಿಯಾ ಆಟಗಾರರು ದಿಟ್ಟವಾಗಿ ಎದುರಿಸಿ ಆಂಗ್ಲರಿಗೆ ತವರಿನಲ್ಲೇ ಸಖತ್ ಶಾಕ್ ನೀಡಿದ್ದಾರೆ. ಸದ್ಯ, ಅನೇಕ ಯುವ ಆಟಗಾರರು ಈ ಸರಣಿಯಲ್ಲಿ ಮಿಂಚಿದ್ದಾರೆ. ಅದರಲ್ಲಿ 25 ವರ್ಷದ ಆಟಗಾರನಿಗೆ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿ ಲಭಿಸಿದೆ.
India vs England: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಾತ್ರವಲ್ಲ, ಬಲಿಷ್ಠ ಆಂಗ್ಲರ ಪಡೆಯನ್ನು ಯಂಗ್ ಇಂಡಿಯಾ ಆಟಗಾರರು ದಿಟ್ಟವಾಗಿ ಎದುರಿಸಿ ಆಂಗ್ಲರಿಗೆ ತವರಿನಲ್ಲೇ ಸಖತ್ ಶಾಕ್ ನೀಡಿದ್ದಾರೆ. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ (Team India) ಯುವ ಪಡೆ ಸರಣಿಯನ್ನು ಡ್ರಾ ಮಾಡಿಕೊಂಡಿದೆ. ಈ ನಡುವೆ ಭಾರತ ತಂಡದ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಅವರಿಗೆ “ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಸೀರೀಸ್“ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆಗಸ್ಟ್ 2 ರ ಶನಿವಾರ ಓವಲ್ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್‌ನ ಮೂರನೇ ದಿನದಾಟದಲ್ಲಿ ವಾಷಿಂಗ್‌ಟನ್ ಸುಂದರ್ ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಇಂಗ್ಲೆಂಡ್ ತಂಡಕ್ಕೆ ದಾಖಲೆಯ 374 ರನ್‌ಗಳ ಗುರಿ ನೀಡಲು ಸಹಕಾರಿಯಾಯಿತು. ಬ್ಯಾಟಿಂಗ್ ಮಾಡಲು ಕಷ್ಟಕರವಾಗಿದ್ದ ಪಿಚ್ನಲ್ಲಿ ಬಾಲಂಗೋಚಿಗಳ ಜೊತೆ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ವಾಷಿಂಗ್ಟನ್ ಸುಂದರ್ ಅರ್ಧಶತಕ ಸಿಡಿಸಿ ಮಿಂಚಿದರು.
“ಇಂಗ್ಲೆಂಡ್‌ನಂತಹ ಕಠಿಣ ಪಿಚ್ಗಳಲ್ಲಿ ಸತತ 4 ಪಂದ್ಯಗಳನ್ನು ಆಡಿರುವುದು ಹೆಮ್ಮೆಯ ವಿಷಯಯವಾಗಿದೆ. ಇಲ್ಲಿ ಯಾವಾಗಲೂ ಉತ್ತಮ ಪ್ರದರ್ಶನ ನೀಡಲು ಭಯಸುತ್ತಿದ್ದೆ ಮತ್ತು ಒಂದು ತಂಡವಾಗಿ ನಾವು ಪ್ರತಿದಿನ ಹೋದ ರೀತಿ ಅದ್ಭುತವಾಗಿತ್ತು” ಎಂದು ಸುಂದರ್ ಡ್ರೆಸ್ಸಿಂಗ್ ರೂಮ್ನಲ್ಲಿ ಮಾತನಾಡುವಾಗ ಹೇಳಿದರು.
ನಾಲ್ಕನೇ ದಿನ ಇಂಗ್ಲೆಂಡ್ ತಂಡ ಮಳೆಯ ಕಾರಣ ಪಂದ್ಯ ಸ್ಥಗಿತಗೊಳ್ಳುವ ಮುನ್ನ 6 ವಿಕೆಟ್ ಕಳೆದುಕೊಂಡು 339 ರನ್ಗಳಿಸಿತ್ತು. ಕೊನೆಯ ದಿನ ಇಂಗ್ಲೆಂಡ್ ತಂಡ ಗೆಲ್ಲಲು 35 ರನ್ಗಳಿಸಿಬೇಕಿತ್ತು. 5ನೇ ದಿನ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಮೊದಲ ಓವರ್ನಲ್ಲೇ ಪ್ರಸಿಧ್ ಕೃಷ್ಣ ಬೌಲಿಂಗ್ನಲ್ಲಿ ಸತತ 2 ಬೌಂಡರಿ ಬಾರಿಸಿದರು. ಆಗ ಎಲ್ಲರೂ ಇಂಗ್ಲೆಂಡ್ ಸುಲಭವಾಗಿ ಗೆಲ್ಲಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಮೊಹ್ಮಮದ್ ಸಿರಾಜ್ ನಂತರದ ಓವರ್ನಲ್ಲೇ ಸ್ಫೋಟಕ ಆಟಗಾರ ಜೇಮಿ ಸ್ಮಿತ್ರನ್ನ ಔಟ್ ಮಾಡುವ ಮೂಲಕ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿರು. ಅಂತಿಮವಾಗಿ ಸಿರಾಜ್ ಹಾಗೂ ಪ್ರಸಿದ್ಧ್ ಬೌಲಿಂಗ್ ನರವಿನಿಂದ ಟೀಂ ಇಂಡಿಯಾ 6 ರನ್‌ಗಳ ಅಂತರದಲ್ಲಿ ಗೆದ್ದುಬೀಗಿತು.
August 05, 2025 6:31 PM IST
India vs England: ಜಡೇಜಾ, ಸಿರಾಜ್ ಅಲ್ಲ; ಇಂಗ್ಲೆಂಡ್ ಸರಣಿಯಲ್ಲಿ ಈ ಯಂಗ್‌ಸ್ಟರ್‌ಗೆ ಒಲಿದ ‘ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಸೀರೀಸ್’ ಪ್ರಶಸ್ತಿ