Last Updated:
ಈ ವರ್ಷದ ಏಪ್ರಿಲ್‌ನಲ್ಲಿ ಯಶಸ್ವಿ ಜೈಸ್ವಾಲ್ ಗೋವಾ ತಂಡಕ್ಕಾಗಿ ಆಡಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಿಂದ (MCA) ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (NOC) ಕೋರಿದ್ದರು. ವೈಯಕ್ತಿಕ ಕಾರಣಗಳಿಂದ ಗೋವಾಕ್ಕೆ ಸ್ಥಳಾಂತರಗೊಳ್ಳುವ ಯೋಜನೆಯನ್ನು ಜೈಸ್ವಾಲ್ ತಿಳಿಸಿದ್ದರು.
ಮುಂಬೈ : ಭಾರತದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashaswi Jaiswal) ರಾಜ್ಯ ತಂಡವನ್ನು ಬದಲಾಯಿಸಿ ಗೋವಾಕ್ಕೆ (Goa) ತೆರಳುವ ನಿರ್ಧಾರದಿಂದ ಹಿಂದೆ ಸರಿದು ಮುಂಬೈಗೆ (Mumbai) ಮರಳಿರುವುದು ಗೊತ್ತಿರುವ ವಿಷಯ. ಈ ಯೂ ಟರ್ನ್ಗೆ ಭಾರತದ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಕಾರಣ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಅಧ್ಯಕ್ಷ ಅಜಿಂಕ್ಯ ನಾಯಕ್ ತಿಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಐದು ಟೆಸ್ಟ್‌ಗಳ ಸರಣಿಯಲ್ಲಿ 2-2 ರ ಡ್ರಾದೊಂದಿಗೆ ಯಶಸ್ವಿಯಾಗಿ ಕೊನೆಗೊಂಡ ಭಾರತ ತಂಡದಲ್ಲಿ ಜೈಸ್ವಾಲ್ ಮಹತ್ವದ ಕೊಡುಗೆ ನೀಡಿದ್ದರು. ಈಗ ಜೈಸ್ವಾಲ್‌ರ ಮುಂಬೈಗೆ ಮರಳುವಿಕೆಯ ಸುದ್ದಿ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಗೆ ಕಾರಣವಾಗಿದೆ
First Published :
August 07, 2025 10:07 PM IST