IPL: ಸಂಜು ಸ್ಯಾಮ್ಸನ್‌ ಸಿಎಸ್‌ಕೆಗೆ ಬರೋದು ಫಿಕ್ಸ್! ಆದ್ರೆ ಈ ಕಂಡಿಷನ್ಸ್​ಗೆ ಚೆನ್ನೈ ಒಪ್ಪಿಕೊಳ್ಳಬೇಕಷ್ಟೇ! | Sanju Samson wants to leave Rajasthan Royals CSK interested | ಕ್ರೀಡೆ

IPL: ಸಂಜು ಸ್ಯಾಮ್ಸನ್‌ ಸಿಎಸ್‌ಕೆಗೆ ಬರೋದು ಫಿಕ್ಸ್! ಆದ್ರೆ ಈ ಕಂಡಿಷನ್ಸ್​ಗೆ ಚೆನ್ನೈ ಒಪ್ಪಿಕೊಳ್ಳಬೇಕಷ್ಟೇ! | Sanju Samson wants to leave Rajasthan Royals CSK interested | ಕ್ರೀಡೆ

Last Updated:

ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್‌ನಿಂದ ಬೇರ್ಪಡಲು ಬಯಸುತ್ತಾರೆ ಎಂದು ವರದಿಯಾದ ಒಂದು ದಿನದ ನಂತರ, 5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯೋಚಿಸುತ್ತಿದೆ

News18News18
News18

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಮತ್ತು ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju Samson) ಫ್ರಾಂಚೈಸಿ ತೊರೆಯಲು ಬಯಸಿದ್ದಾರೆ ಎಂಬ ಕುರಿತು ವರದಿಯಾಗಿದೆ. ಐಪಿಎಲ್ (IPL) ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಅತೀ ಹೆಚ್ಚು ಪಂದ್ಯಗಳನ್ನಾಡಿದ ಮತ್ತು ಅವರ ಪರವಾಗಿ ಅತ್ಯಧಿಕ ರನ್ ಗಳಿಸಿದ ಮತ್ತು ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿರುವ ಕೇರಳ ಮೂಲದ 30 ವರ್ಷದ ಕ್ರಿಕೆಟಿಗ ಐಪಿಎಲ್ 2026 ರ ಹರಾಜಿಗೆ ಮುಂಚಿತವಾಗಿ ಜೈಪುರ ಮೂಲದ ತಂಡದಿಂದ ಹೊರಹೋಗಲು ಭಯಸಿದ್ದಾರೆ ಎಂದು ಕ್ರಿಕ್‌ಬಜ್, ಇಎಸ್‌ಪಿಎನ್ ಕ್ರಿಕ್‌ಇನ್ಫೊ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿವೆ.

ಸ್ಟೀಫನ್ ಫ್ಲೆಮಿಂಗ್‌ರನ್ನು ಭೇಟಿಯಾಗಿದ್ದ ಸಂಜು

ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್‌ನಿಂದ ಬೇರ್ಪಡಲು ಬಯಸುತ್ತಾರೆ ಎಂದು ವರದಿಯಾದ ಒಂದು ದಿನದ ನಂತರ, 5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯೋಚಿಸುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ವಾಸ್ತವವಾಗಿ, ಐಪಿಎಲ್ 2025 ರ ನಂತರ, ಸ್ಯಾಮ್ಸನ್ ಸಿಎಸ್‌ಕೆ ಮ್ಯಾನೇಜ್ಮೆಂಟ್ ಮತ್ತು ಸಿಎಸ್‌ಕೆ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಅವರನ್ನು ಅಮೆರಿಕದಲ್ಲಿ ಭೇಟಿಯಾಗಿದ್ದಾರೆ.

ಇಬ್ಬರು ಆಟಗಾರರ ಜೊತೆ ಸಂಜು ಎಕ್ಸ್‌ಚೇಂಜ್

30 ವರ್ಷದ ಸ್ಟಾರ್ ಪ್ಲೇಯರ್ ಸಂಜು ಸ್ಯಾಮ್ಸನ್ ಅವರನ್ನು ನಗದು ವಹಿವಾಟಿನ ಮೂಲಕ ಚೆನ್ನೈಗೆ ಕರೆತರಲು ಚೆನ್ನೈ ಮುಕ್ತವಾಗಿದೆ ಎಂದು ತಿಳಿದುಬಂದಿದೆ. ಆದರೆ ರಾಜಸ್ಥಾನ ತಂಡ ಸಂಜು ಸ್ಯಾಮ್ಸನ್ ಬದಲು ಚೆನ್ನೈನ ಇಬ್ಬರು ಆಟಗಾರರ ಜೊತೆಗೆ ವಿನಿಮಯ ಮಾಡಿಕೊಳ್ಳಲು ಆಸಕ್ತಿ ಹೊಂದಿದೆ. ಅಂದ್ರೆ ಚೆನ್ನೈ ತನ್ನ ಇಬ್ಬರು ಆಟಗಾರರನ್ನು ನೀಡಿದರೆ ರಾಜಸ್ಥಾನ ಚೆನ್ನೈಗೆ ಸಂಜು ಸ್ಯಾಮ್ಸನ್ ಅವರನ್ನು ಬಿಟ್ಟುಕೊಡಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ, ಮೂರು ಬಾರಿ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಕೂಡ ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕತೆ ತೋರಿದೆ ಎಂದು ಹೇಳಲಾಗಿದೆ. ಆದ್ರೆ, ಸಂಜು ಸ್ಯಾಮ್ಸನ್ ಚೆನ್ನೈ ತಂಡ ಸೇರಿಕೊಳ್ಳಲು ಆಸಕ್ತಿ ಹೊಂದಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಸ್ಯಾಮ್ಸನ್ ಈ ಹಿಂದೆ ಕೆಕೆಆರ್ ಜೊತೆ ಸಂಬಂಧ ಹೊಂದಿದ್ದರು. 2012 ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದ ಗೌತಮ್ ಗಂಭೀರ್ ನೇತೃತ್ವದ ತಂಡದ ಭಾಗವಾಗಿದ್ದರು. ಆದರೆ ಶಾರುಖ್ ಖಾನ್ ಒಡೆತನದ ತಂಡ ಅವರಿಗೆ ಪ್ಲೇಯಿಂಗ್‌11ನಲ್ಲಿ ಅವಕಾಶ ನೀಡಿರಲಿಲ್ಲ. ಸದ್ಯ ರಾಜಸ್ಥಾನ ಮತ್ತು ಚೆನ್ನೈ ಎರಡೂ ತಂಡಗಳು ಒಪ್ಪಂದಕ್ಕೆ ಬರದಿದ್ದರೆ ಸಂಜು ಸ್ಯಾಮ್ಸನ್ ಹರಾಜಿನಲ್ಲಿ ಭಾಗವಹಿಸುವ ಸಾಧ್ಯತೆಗಳು ಹೆಚ್ಚು ಎಂದು ವರದಿ ತಿಳಿಸಿದೆ.

ಐಪಿಎಲ್‌ನಲ್ಲಿ ಸ್ಯಾಮ್ಸನ್ ದಾಖಲೆ

2013 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ನಂತರ, ಸ್ಯಾಮ್ಸನ್ ಎರಡು ತಂಡಗಳಾದ ರಾಜಸ್ಥಾನ ರಾಯಲ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ (ಹಿಂದೆ ದೆಹಲಿ ಡೇರ್‌ಡೆವಿಲ್ಸ್) ಪರ ಒಟ್ಟು 177 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ಹೆಸರಿನಲ್ಲಿ 4704 ರನ್‌ಗಳಿವೆ. 30 ವರ್ಷ ವಯಸ್ಸಿನ ಬಲಗೈ ವಿಕೆಟ್‌ಕೀಪರ್-ಬ್ಯಾಟರ್ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸ್ ಕ್ರಿಕೆಟ್ ಲೀಗ್‌ನಲ್ಲಿ ಮೂರು ಶತಕಗಳು ಮತ್ತು 26 ಅರ್ಧಶತಕಗಳನ್ನು ಗಳಿಸಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ, ರಾಜಸ್ಥಾನ ರಾಯಲ್ಸ್ 2022 ರಲ್ಲಿ ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದಿತ್ತು.

ಸ್ಯಾಮ್ಸನ್ ಇದುವರೆಗೆ ಒಟ್ಟು 67 ಐಪಿಎಲ್ ಪಂದ್ಯಗಳಲ್ಲಿ ಆರ್‌ಆರ್ ಅನ್ನು ಮುನ್ನಡೆಸಿದ್ದಾರೆ ಮತ್ತು 33 ಪಂದ್ಯಗಳನ್ನು ಗೆದ್ದಿದ್ದಾರೆ. ಜೈಪುರ ಮೂಲದ ಫ್ರಾಂಚೈಸಿ ಐಪಿಎಲ್ 2025 ರ ಮೆಗಾ ಹರಾಜಿಗೆ ಮುಂಚಿತವಾಗಿ ಅವರನ್ನು 18 ಕೋಟಿ ರೂಪಾಯಿಗೆ ಉಳಿಸಿಕೊಂಡಿತು.