Last Updated:
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಟಾಪ್ ಐದು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ಘೋಷಿಸಿದ್ದು, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಟಾಪ್ ಐದು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ಘೋಷಣೆ ಮಾಡಿದ್ದಾರೆ. ಈ ಲಿಸ್ಟ್‌ನಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್. ಮಾತ್ರವಲ್ಲ, ಬ್ರಿಯಾನ್ ಲಾರಾ ಅವರು ತಾವು ಕಂಡಂತಹ ‘ಅತ್ಯಂತ ಕೌಶಲ್ಯಪೂರ್ಣ’ ಆಟಗಾರ ಎಂದು ಪಾಂಟಿಂಗ್ ಹೇಳಿದ್ದಾರೆ. ಇನ್ನೂ ಪ್ರಸ್ತುತ ಕಾಲಘಟ್ಟದ ಇಬ್ಬರು ಆಟಗಾರರನ್ನು ಈ ಲಿಸ್ಟ್‌ನಲ್ಲಿ ಆಯ್ಕೆ ಮಾಡಿಕೊಂಡಿದ್ದಾರೆ.
ಪಾಂಟಿಗ್ ಆಯ್ಕೆ ಮಾಡಿರುವ ವಿಶ್ವದ ಶ್ರೇಷ್ಠ ಆಟಗಾರರ ಲಿಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಇಲ್ಲದಿರುವುದು ಚರ್ಚೆಗೆ ಕಾರಣವಾಗಿದೆ. ಕುತೂಹಲಕಾರಿಯಾಗಿ, ಮಾಜಿ ನಾಯಕ ಹಾಗೂ ಕ್ರಿಕೆಟ್ ಎಕ್ಸ್‌ಪರ್ಟ್ ಪಾಂಟಿಂಗ್, ಆಯ್ಕೆ ಮಾಡಿರುವ ಟಾಪ್ ಬೆಸ್ಟ್ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ಯಾವುದೇ ಆಸ್ಟ್ರೇಲಿಯ ಆಟಗಾರರು ಇಲ್ಲ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (34,357) ಮತ್ತು ರಾಹುಲ್ ದ್ರಾವಿಡ್ (24,208) ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ನಿವೃತ್ತರಾದರೆ ಇವರಿಬ್ಬರೂ ಇದ್ದಾರೆ. ವೆಸ್ಟ್ ಇಂಡೀಸ್ ಶ್ರೇಷ್ಠ ಆಟಗಾರ ಲಾರಾ, ಜೋ ರೂಟ್ ಮತ್ತು ವಿಲಿಯಮ್ಸನ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
“ಬ್ರಿಯನ್ ಲಾರಾ ನಾನು ಎದುರಿಸಿದ ಅತ್ಯಂತ ಕೌಶಲ್ಯಪೂರ್ಣ ಬ್ಯಾಟ್ಸ್‌ಮನ್. ನಾನು ನಾಯಕನಾಗಿದ್ದಾಗ, ಅವರು ನನಗೆ ಬೇರೆಯವರಿಗಿಂತ ಹೆಚ್ಚು ತಲೆ ನೋವಾಗಿದ್ದರು” ಎಂದು ಪಾಂಟಿಂಗ್ ದಿ ಟೈಮ್ಸ್‌ಗೆ ತಿಳಿಸಿದ್ದಾರೆ . “ರಾಹುಲ್ ದ್ರಾವಿಡ್ ಜೊತೆಗೆ ಸಚಿನ್ ತಾಂತ್ರಿಕವಾಗಿ ನಾನು ನೋಡಿದ ಅತ್ಯುತ್ತಮ ಬ್ಯಾಟರ್. ಪ್ರಸ್ತುತ ನಾನು ಜೋ ಮತ್ತು ಕೇನ್ ವಿಲಿಯಮ್ಸನ್ ಅವರನ್ನು ಸಹ ಈ ಲಿಸ್ಟ್‌ನಲ್ಲಿ ಇರಿಸುತ್ತೇನೆ” ಎಂದು ಅವರು ಹೇಳಿದರು.
ಟೆಸ್ಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿರುವ ರೂಟ್ ಅವರಿಗೆ ಸ್ಥಾನ ನೀಡಿರುವುದರಲ್ಲಿ ಉತ್ಪ್ರೇಕ್ಷೆ ಏನು ಇಲ್ಲ. ಆದ್ರೆ, ಪ್ರಸ್ತುತ ಬೆಸ್ಟ್ ಆಲ್ರೌಂಡರ್ ಆಗಿರುವ ಬೆನ್ ಸ್ಟೋಕ್ಸ್‌ರನ್ನು ಹೊರಗಿಟ್ಟಿದ್ದಾರೆ. ಸ್ಟೋಕ್ಸ್ ಕುರಿತು ಮಾತನಾಡಿದ ಅವರು, “ಸ್ಟೋಕ್ಸ್ ಒಬ್ಬ ಕಠಿಣ ವ್ಯಕ್ತಿ. ಸಂಖ್ಯೆಗಳಿಂದ ಅವರನ್ನು ವ್ಯಾಖ್ಯಾನಿಸುವುದಿಲ್ಲ. ಆತ ಬೆಸ್ಟ್ ಆಟಗಾರ, ಆತ ಸನ್ನಿವೇಶಗಳಿಗೆ ತಕ್ಕಂತೆ ಆಡಬಲ್ಲ. ಪರಿಸ್ಥಿತಿ ಕಠಿಣವಾದಾಗ ಅವನು ಅತ್ಯುತ್ತಮವಾಗಿ ಆಡುತ್ತಾನೆ. ಶ್ರೇಷ್ಠ ಆಟಗಾರರ ಬಗ್ಗೆ ಮಾತನಾಡುವಾಗ, ಆಟಗಳ ಮೇಲಿನ ಪ್ರಭಾವದ ಬಗ್ಗೆ ಮಾತನಾಡಬೇಕು” ಎಂದು ಅವರು ಹೇಳಿದರು.
ಆಧುನಿಕ ಕ್ರಿಕೆಟ್‌ನಲ್ಲಿ ಉಳಿದೆಲ್ಲ ಆಟಗಾರರಿಗಿಂತಲೂ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ತೋರಿದ್ದಾರೆ. ಮೂರು ಫಾರ್ಮ್ಯಾಟ್‌ಗಳಲ್ಲೂ ಆಡಬಲ್ಲ ಸಾಮರ್ಥ್ಯ ಹೊಂದಿದ್ದ ಅವರು. ಇತ್ತೀಚೆಗೆ ಟೆಸ್ಟ್ ಹಾಗೂ ಟಿ-20 ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದ್ರೂ, ಪಾಂಟಿಂಗ್ ಆಯ್ಕೆ ಮಾಡಿರುವ ಟಾಪ್-5 ಬೆಸ್ಟ್ ಬ್ಯಾಟ್ಸಮನ್ ಲಿಸ್ಟ್‌ನಲ್ಲಿ ವಿರಾಟ್ ಕೈಬಿಟ್ಟಿರುವುದು ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
August 10, 2025 11:30 PM IST
Ricky Ponting: ಆಲ್ ಟೈಮ್ ಟಾಪ್-5 ಬೆಸ್ಟ್ ಬ್ಯಾಟರ್ಸ್ ಇವರೇ ಎಂದ ಪಾಂಟಿಂಗ್; ಆಸಿಸ್ ಮಾಜಿ ನಾಯಕನ ಲಿಸ್ಟ್‌ನಲ್ಲಿ ಇಲ್ವೇ ಇಲ್ಲ ಕೊಹ್ಲಿ, ರೋಹಿತ್!