IPL 2026 ರಲ್ಲಿ ಎಂಎಸ್ ಧೋನಿ ಆಡಲ್ವಾ? ಶಾಕಿಂಗ್ ಉತ್ತರ ಕೊಟ್ಟ ಕೂಲ್ ಕ್ಯಾಪ್ಟನ್ | MS Dhoni Keeps Options Open Decision on IPL 2026 Participation by December | ಕ್ರೀಡೆ

IPL 2026 ರಲ್ಲಿ ಎಂಎಸ್ ಧೋನಿ ಆಡಲ್ವಾ? ಶಾಕಿಂಗ್ ಉತ್ತರ ಕೊಟ್ಟ ಕೂಲ್ ಕ್ಯಾಪ್ಟನ್ | MS Dhoni Keeps Options Open Decision on IPL 2026 Participation by December | ಕ್ರೀಡೆ

Last Updated:

ಎಂಎಸ್ ಧೋನಿ ಅವರು 2020 ರ ಆಗಸ್ಟ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ, ಕೇವಲ IPL ನಲ್ಲಿ ಆಡುತ್ತಿದ್ದಾರೆ. ಉಳಿದ 10 ತಿಂಗಳುಗಳನ್ನು ಅವರು ಪ್ರಾಯೋಜಕ ಈವೆಂಟ್‌ಗಳಲ್ಲಿ ಭಾಗವಹಿಸುವುದರ ಮೂಲಕ ಅಥವಾ ಕುಟುಂಬದೊಂದಿಗೆ ಕಾಲ ಕಳೆಯುವ ಮೂಲಕ ಕಳೆಯುತ್ತಾರೆ.

ಎಂಎಸ್‌ ಧೋನಿಎಂಎಸ್‌ ಧೋನಿ
ಎಂಎಸ್‌ ಧೋನಿ

ಭಾರತದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ (CSK) ತಂಡದ ಐಕಾನಿಕ್ ಆಟಗಾರ ಎಂಎಸ್ ಧೋನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ರಲ್ಲಿ ಆಡುವ ಬಗ್ಗೆ ತಮ್ಮ ನಿರ್ಧಾರವನ್ನು ಈ ವರ್ಷದ ಡಿಸೆಂಬರ್‌ನಲ್ಲಿ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಧೋನಿ ಅವರ ಈ ಹೇಳಿಕೆಯು ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತು ತಜ್ಞರಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ, ಏಕೆಂದರೆ ಕಳೆದ ನಾಲ್ಕೈದು ವರ್ಷಗಳಿಂದ ಏಕೆಂದರೆ ಅವರ ಭವಿಷ್ಯದ ಯೋಜನೆಗಳ ಬಗ್ಗೆ ಯಾವಾಗಲೂ ಚರ್ಚೆಯ ವಿಷಯವಾಗಿರುತ್ತದೆ.

ಡಿಸೆಂಬರ್​​ನಲ್ಲಿ ಅಂತಿಮ ನಿರ್ಧಾರ

ಎಂಎಸ್ ಧೋನಿ ಅವರು 2020 ರ ಆಗಸ್ಟ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ, ಕೇವಲ IPL ನಲ್ಲಿ ಆಡುತ್ತಿದ್ದಾರೆ. ಉಳಿದ 10 ತಿಂಗಳುಗಳನ್ನು ಅವರು ಪ್ರಾಯೋಜಕ ಈವೆಂಟ್‌ಗಳಲ್ಲಿ ಭಾಗವಹಿಸುವುದರ ಮೂಲಕ ಅಥವಾ ಕುಟುಂಬದೊಂದಿಗೆ ಕಾಲ ಕಳೆಯುವ ಮೂಲಕ ಕಳೆಯುತ್ತಾರೆ. ಇತ್ತೀಚೆಗೆ ಒಂದು ಈವೆಂಟ್‌ನಲ್ಲಿ ಭಾಗವಹಿಸಿದ್ದ ಧೋನಿ, IPL 2026 ರಲ್ಲಿ ಆಡುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದರು. ಅವರು ತಮ್ಮ ದೇಹದ ಸಾಮರ್ಥ್ಯವನ್ನು ಗಮನಿಸಿ, ಡಿಸೆಂಬರ್‌ನ ವೇಳೆಗೆ ತಮ್ಮ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದರು. “ನಾನು ಆಡುತ್ತೇನೆಯೋ ಇಲ್ಲವೋ ಎಂದು ಈಗಲೇ ಹೇಳಲಾರೆ, ಆದರೆ ಡಿಸೆಂಬರ್‌ವರೆಗೆ ಸಮಯವಿದೆ. ಎರಡು ತಿಂಗಳಿಗಿಂತ ಹೆಚ್ಚಿನ ಸಮಯವನ್ನು ಪರಿಗಣಿಸಿ, ನಂತರ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ,” ಎಂದು ಧೋನಿ ಹೇಳಿದರು.

ಅಭಿಮಾನಿಯೊಬ್ಬರು “ಸರ್, ನೀವು ಆಡಲೇಬೇಕು” ಎಂದು ಕೂಗಿದಾಗ, ಧೋನಿ ತಮಾಷೆಯ ರೀತಿಯಲ್ಲಿ, “ಆಗ ನನ್ನ ಮೊಣಕಾಲಿನ ನೋವಿಗೆ ಯಾರು ಜವಾಬ್ದಾರರಾಗ್ತಾರೆ?” ಎಂದು ಹೇಳಿದರು. ಈ ಹಾಸ್ಯಮಯ ಉತ್ತರವು ಅವರ ಗಾಯದ ಸಮಸ್ಯೆಯನ್ನು ಸೂಕ್ಷ್ಮವಾಗಿ ಸೂಚಿಸಿತು, ಆದರೆ ಅವರು ಇನ್ನೂ ಆಡುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿಲ್ಲ.

ಧೋನಿಯ ಮೊಣಕಾಲಿನ ಗಾಯ

ಧೋನಿ ಅವರು ತಮ್ಮ ಕಾಲಿನ ಗಾಯದ ಸಮಸ್ಯೆಯನ್ನು ನಿರ್ವಹಿಸುತ್ತಾ ಕಳೆದ ಕೆಲವು ವರ್ಷಗಳಿಂದ IPL ನಲ್ಲಿ ಆಡುತ್ತಿದ್ದಾರೆ. 2023 ರ ಋತುವಿನಲ್ಲಿ ಗಾಯದಿಂದ ಬಳಲುತ್ತಿದ್ದ ಅವರು, ಋತುವಿನ ಕೊನೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಗಾಯದಿಂದಾಗಿ ಅವರು ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೂ ಅವರಿಂದ ತಂಡಕ್ಕೆ ನಿರೀಕ್ಷಿತ ಕೊಡುಗೆ ಸಿಗುತ್ತಿಲ್ಲ.

IPL 2025 ರಲ್ಲಿ ಧೋನಿಯ ಪ್ರದರ್ಶನ

IPL 2025 ರ ಋತುವಿನಲ್ಲಿ ಧೋನಿ 14 ಪಂದ್ಯಗಳಲ್ಲಿ 13 ರಲ್ಲಿ ಬ್ಯಾಟಿಂಗ್ ಮಾಡಿದ್ದರು, ಏಕೆಂದರೆ CSK ತಂಡದ ಬ್ಯಾಟಿಂಗ್ ಕೊರತೆಯಿಂದ ಕೂಡಿತ್ತು. ಈ ಋತುವಿನಲ್ಲಿ ಅವರು 135.17 ರ ಸ್ಟ್ರೈಕ್ ರೇಟ್‌ ಹಾಗೂ 24.5 ರ ಸರಾಸರಿಯಲ್ಲಿ 196 ರನ್‌ ಗಳಿಸಿದರು. ರುತುರಾಜ್ ಗಾಯಕ್ವಾಡ್ ಗಾಯದಿಂದಾಗಿ ಕೆಲವು ಪಂದ್ಯಗಳಿಂದ ಹೊರಗುಳಿದಾಗ, ಧೋನಿ CSK ತಂಡವನ್ನು ಕೆಲವು ಪಂದ್ಯಗಳಲ್ಲಿ ಮುನ್ನಡೆಸಿದರು. ಆದರೆ ಕೊನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಈ ಋತುವಿನಲ್ಲಿ ಸಿಎಸ್​ಕೆ ಕೇವಲ 3 ಪಂದ್ಯಗಳನ್ನು ಗೆದ್ದು, ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ಧೋನಿ ತಂಡದ ಬ್ಯಾಟಿಂಗ್‌ನ ಕೊರತೆಯನ್ನು ಒಪ್ಪಿಕೊಂಡಿದ್ದು, ಕೆಲವು ಪಂದ್ಯಗಳಲ್ಲಿ ಸಣ್ಣ ತಪ್ಪುಗಳು, ಕೆಲವೊಂದು ಓವರ್‌ನಲ್ಲಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಡುವುದು ಮತ್ತು ಕ್ಯಾಚ್‌ಗಳನ್ನು ಕೈಚೆಲ್ಲುವುದು ತಂಡದ ಸೋಲಿಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ.

IPL 2026 ರ ರಿಟೆನ್ಶನ್ ಮತ್ತು  ಮಿನಿ  ಆಕ್ಷನ್

IPL ತಂಡಗಳು ಡಿಸೆಂಬರ್‌ನಲ್ಲಿ ಮಿನಿ ಆಕ್ಷನ್‌ಗೆ ಮುನ್ನ ತಮ್ಮ ರಿಟೇನ್ ಮಾಡಿದ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಈ ಕಾರಣದಿಂದಾಗಿ, ಧೋನಿ ತಮ್ಮ ಲಭ್ಯತೆಯ ಬಗ್ಗೆ ಡಿಸೆಂಬರ್‌ನ ಆರಂಭದಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ IPL 2026 ರ ಆಕ್ಷನ್‌ಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ, ಮತ್ತು ತಂಡಗಳು ರಿಟೆನ್ಶನ್ ನಿಯಮಗಳು ಮತ್ತು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಒಮ್ಮತಕ್ಕೆ ಬಂದಿಲ್ಲ. ಈ ನಿಯಮಗಳು ಧೋನಿಯ ನಿರ್ಧಾರದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಸ್ವತಃ ಒಂದು ಈವೆಂಟ್‌ನಲ್ಲಿ ತಿಳಿಸಿದ್ದಾರೆ. “ನಿಯಮಗಳು ಮತ್ತು ರಿಟೆನ್ಶನ್‌ಗೆ ಸಂಬಂಧಿಸಿದಂತೆ ಸ್ಪಷ್ಟತೆ ಬಂದ ನಂತರವೇ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ. ತಂಡದ ಒಳಿತಿಗೆ ತಕ್ಕಂತೆ ಇರಬೇಕು,” ಎಂದು ಧೋನಿ ಹೇಳಿದ್ದಾರೆ.