ಬಾಳಿಕೆ ಮತ್ತು ವಿಶ್ವಾಸಾರ್ಹತೆ ವಿಷಯಕ್ಕೆ ಬಂದರೆ, ಆದ್ಯತೆಯ ಬ್ರ್ಯಾಂಡ್ ಆಗಿರುವ OPPO, ತನ್ನ ಇತ್ತೀಚಿನ OPPO F29 ಅನ್ನು ಬಿಡುಗಡೆ ಮಾಡುವ ಮೂಲಕ ಭಾರತದ ಬಾಳಿಕೆಬರುವ ಚಾಂಪಿಯನ್ ಸ್ಥಾನವನ್ನು ಅಲಂಕರಿಸಿದೆ.
ಬಾಳಿಕೆ: ಎಲ್ಲದನ್ನೂ ತಾಳಿಕೊಳ್ಳಲು ನಿರ್ಮಿಸಲಾಗಿದೆ
ಕೌಂಟರ್ಪಾಯಿಂಟ್ನ ವರದಿ ಪ್ರಕಾರ: ದೀರ್ಘಾವಧಿಗೆ ನಿರ್ಮಿಸಲಾಗಿದೆ: ಸ್ಮಾರ್ಟ್ಫೋನ್ಗಳಲ್ಲಿ ನಿರ್ಮಾಣದ ಗುಣಮಟ್ಟದ ಪ್ರಮುಖ ಪಾತ್ರ, ನೀರು ಮತ್ತು ಧೂಳು ನಿರೋಧಕಕ್ಕೆ ಅತ್ಯಂತ ಹೆಚ್ಚು ಆದ್ಯತೆ ನೀಡಲಾಗುವ ಬ್ರ್ಯಾಂಡ್ ಆಗಿ OPPO ಹೊರಹೊಮ್ಮಿದೆ. OPPO F29 ಉದ್ಯಮದಲ್ಲಿ ವಿಶಿಷ್ಟವಾದ OPPO F ಸೀರೀಸ್ನ ವಾಟರ್ಪ್ರೂಫ್ ಫೌಂಡೇಷನ್ ಅನ್ನು ಒಳಗೊಂಡಿದೆ ಹಾಗೂ IP66+IP68+IP69 ಪೂರ್ಣ-ಪ್ರಮಾಣದ ವಾಟರ್ಪ್ರೂಫ್ ಪ್ರಮಾಣೀಕರಣವನ್ನು ನಿರ್ವಹಿಸುವುದನ್ನು ಮುಂದುವರಿಸಲಿದೆ.
IP66 ಫೋನ್ ಅನ್ನು ಸಂಪೂರ್ಣವಾಗಿ ಧೂಳು-ನಿರೋಧಕವಾಗಿಸುತ್ತದೆಯಲ್ಲದೆ, ನೀರಿನಲ್ಲಿ 1.5 ಮೀಟರ್ ಆಳದವರೆಗೆ 30 ನಿಮಿಷಗಳ ಕಾಲ ಸತತವಾಗಿ ಮುಳುಗಲು IP68 ಅನುವು ಮಾಡಿಕೊಡುತ್ತದೆ ಮತ್ತು IP69, ಹೆಚ್ಚಿನ ಪ್ರಮಾಣದ ಒತ್ತಡ ಹಾಗೂ ಹೆಚ್ಚಿನ ತಾಪಮಾನದ ವಾಟರ್ ಜೆಟ್ಗಳನ್ನು (80°C ವರೆಗೂ) ತಾಳಿಕೊಳ್ಳಲು ಫೋನ್ ಅನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ಎಲ್ಲವೂ ಸೇರಿ, ಈ ಪ್ರಮಾಣೀಕರಣಗಳು ವಾಶಿಂಗ್ ಮಶೀನ್ ಅಥವಾ ಡಿಶ್ವಾಶರ್ನಲ್ಲಿ ಆಕಸ್ಮಿಕವಾಗಿ ಬಿದ್ದರೂ ಸಹ OPPO F29 ಏನೂ ಆಗದೇ ಉಳಿದುಕೊಳ್ಳುತ್ತದೆ ಎಂಬುದನ್ನು ಸಾಬೀತುಪಡಿಸುತ್ತವೆ.
18 ದ್ರವಗಳು, 0 ಚಿಂತೆಗಳು
ಹೀಗಿದ್ದರೂ, ಬಹುತೇಕ ಸ್ಮಾರ್ಟ್ಫೋನ್ಗಳು ಸ್ವಲ್ಪ ಪ್ರಮಾಣದ ದ್ರವ ಸಿಡಿಯುವಿಕೆಯನ್ನು ತಾಳಿಕೊಳ್ಳುತ್ತವೆ. ಆದರೆ ಕಾಫಿ ಚೆಲ್ಲುವಿಕೆ, ಕೆಸರುಮಿಶ್ರಿತ ನೀರು, ಸೋಪಿನ ನೀರು ಅಥವಾ ಮನೆಯಲ್ಲಿ ಆಯೋಜಿಸಿದ ಪಾರ್ಟಿಯಲ್ಲಿ ಬಿಯರ್ನಲ್ಲಿ ನೆನೆದುಹೋದರೆ ಆಗ ಏನು ಕತೆ? OPPO F29 ಬರೀ ನೀರು ನಿರೋಧಕವಲ್ಲ – ಅದನ್ನು ಪ್ರತಿದಿನದ 18 ವಿಭಿನ್ನ ದ್ರವಗಳನ್ನು ನಿಭಾಯಿಸುವಂತೆ ವಿನ್ಯಾಸಗೊಳಿಸಲಾಗಿದೆ.
- ಹೊರಾಂಗಣ ಅಪಾಯಗಳು: ಮಳೆ, ನದಿ ನೀರು, ಬಿಸಿನೀರ ಬುಗ್ಗೆ
- ನಿತ್ಯದ ಚೆಲ್ಲುವಿಕೆ: ಫ್ರೂಟ್ ಜ್ಯೂಸ್, ಟೀ, ಹಾಲು, ಕಾರ್ಬೊನೇಟೆಡ್ ಪಾನೀಯಗಳು, ಕಾಫಿ, ನಿಂಬೆ ರಸ, ಎಳನೀರು, ಬಿಯರ್
- ಮನೆಯ ಅವ್ಯವಸ್ಥೆ: ಹಬೆ, ಡಿಶ್ವಾಶಿಂಗ್ ನೀರು, ಡಿಟರ್ಜೆಂಟ್ ಮಿಶ್ರಿತ ನೀರು, ಸೋಪ್ ವಾಟರ್
- ಕಠಿಣ ಅಂಶಗಳು: ಕೆಸರುಮಿಶ್ರಿತ ನೀರು, ಕ್ಲೀನಿಂಗ್ ಫೋಮ್, ಐಸ್ ವಾಟರ್
360° Armour Body: ಅನಿರೀಕ್ಷಿತ ಫಲಿತಾಂಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ
ಆದರೆ OPPO ವಾಟರ್ಪ್ರೂಫಿಂಗ್ಗೆ ಅಥವಾ ಈ ಸಂದರ್ಭದಲ್ಲಿ ಲಿಕ್ವಿಡ್ ಪ್ರೂಫಿಂಗ್ಗೆ ಸೀಮಿತಗೊಳ್ಳುವುದಿಲ್ಲ.
ಡ್ಯಾಮೇಜ್-ಪ್ರೂಫ್ 360° Armour Bodyಯನ್ನು ಪ್ರವೇಶಿಸಿ, OPPO ದ ಈವರೆಗಿನ ಅತ್ಯಂತ ಸದೃಢವಾದ ಮತ್ತು ಪರಿಣಾಮಕಾರಿ ನಿರೋಧಕ ಫ್ರೇಮ್ ಆಗಿದೆ. ಇದು ಬರೀ ಮಾರ್ಕೆಟಿಂಗ್ ಪದವಲ್ಲ – ಇದು ಸಾಧನವನ್ನು ಒಳಗಿನಿಂದ ಹೊರಗಿನವರೆಗೆ ರಕ್ಷಿಸುವ ಸಾಮಗ್ರಿಗಳು ಹಾಗೂ ನಾವೀನ್ಯತೆಯ ಸಂಯೋಜನೆಯಾಗಿದೆ.
- AM04 Aerospace-Grade Aluminum Alloy: ಈ ಹಿಂದಿನ OPPO ಮಾಡಲ್ಗಳಿಗಿಂತ 10% ಸದೃಢವಾಗಿದೆ.
- Sponge Bionic Cushioning: ನಾಜೂಕಾದ ಆಂತರಿಕ ಬಿಡಿಭಾಗಗಳನ್ನು ಒಳಗೊಂಡಿದ್ದು, ಆಘಾತಗಳನ್ನು ಹೀರಿಕೊಳ್ಳುತ್ತದೆ.
- Raised Corner Design: ಇದು ನೇರವಾದ ಪರಿಣಾಮದ ವಿರುದ್ಧ ಹೆಚ್ಚುವರಿ ಬಫರ್ ಒದಗಿಸುತ್ತದೆ ಹಾಗೂ ಸ್ಕ್ರೀನ್ ಅಥವಾ ಆಂತರಿಕ ಬಿಡಿಭಾಗಗಳಿಗೆ ಹೊಡೆತ ಬೀಳುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
- Lens Protection Ring: ನೇರವಾದ ಪರಿಣಾಮದಿಂದ ರಕ್ಷಿಸಲು ಲೆನ್ಸ್ ಸುತ್ತಲೂ ಎತ್ತರಿಸಿದ ಲಿಪ್, ಎರಡನೇ ಹಂತದ ಬಲವರ್ಧಿತ ಗಾಜು, ಗೀರುಗಳಿಂದ ರಕ್ಷಿಸುತ್ತದೆ.
- Corning Gorilla Glass 7i F29: ಮೀಟರ್ಗಳಷ್ಟು ಎತ್ತರದಿಂದ ಒರಟಾದ ಮೇಲ್ಮೈ ಪ್ರದೇಶಗಳ ಮೇಲೆ ಬೀಳುವುದನ್ನು ತಾಳಿಕೊಳ್ಳುತ್ತದೆ.
ಭಾರತಕ್ಕಾಗಿ ತಯಾರಿಸಲಾಗಿದೆ, ಭಾರತದಲ್ಲಿ ಪರೀಕ್ಷಿಸಲಾಗಿದೆ
ನಾವು ಈಗಾಗಲೇ ಸ್ಥಾಪಿತವಾಗಿದ್ದು, ಭಾರತದಲ್ಲಿ ಸ್ಮಾರ್ಟ್ಫೋನ್ಗಳ ವಿಚಾರ ಸುಲಭವಾದದ್ದೇನಲ್ಲ. ಹಾಗಾಗಿಯೇ OPPO, F29 ಅನ್ನು ಉದ್ಯಮದಲ್ಲಿರುವ ಕೆಲವು ಅತ್ಯಂತ ಹೆಚ್ಚಿನ ಬಾಳಿಕೆ ಪರೀಕ್ಷೆಗೆ ಒಳಪಡಿಸಿದೆ. ಸಾಧನವು 14 Military Standard (MIL-STD-810H) ಪರಿಸರ ಪರೀಕ್ಷೆಗಳನ್ನು ತೇರ್ಗಡೆಯಾಗಿದ್ದು, ಆ ಮೂಲಕ ಇದು ಅತೀವ ತಾಪಮಾನಗಳು, ಆರ್ದ್ರತೆ, ಮಳೆ, ಧೂಳು, ಸಾಲ್ಟ್ ಮಿಸ್ಟ್, ಸೌರ ವಿಕಿರಣ, ವೈಬ್ರೇಷನ್ ಮತ್ತು ಇತ್ಯಾದಿಯನ್ನು ತಾಳಿಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.
ಈ ಫೋನ್ ಬೀಳುವಿಕೆ ಪರೀಕ್ಷೆಗಳು, ಪರಿಣಾಮ ನಿರೋಧಕ ಪರೀಕ್ಷೆಗಳು ಮತ್ತು ಒತ್ತಡ ಪರೀಕ್ಷೆಗಳು ಸೇರಿದಂತೆ ಹಲವಾರು ತೀವ್ರತರದ OPPO ವಿಶ್ವಾಸಾರ್ಹತೆ ಪರೀಕ್ಷೆಗಳನ್ನು ಸಹ ಸಹಿಸಿಕೊಂಡಿದೆ. ಇದು, IP66, IP68 ಮತ್ತು IP69 ರೇಟಿಂಗ್ಗಳಿಗಾಗಿ ಉತ್ಪನ್ನದ ಬಾಳಿಕೆ ಮತ್ತು ವಿಶ್ವಾಸಾರ್ಹತೆ ಪರೀಕ್ಷೆಯಲ್ಲಿ ಪ್ರಮುಖ ಜಾಗತಿಕ ಪ್ರಾಧಿಕಾರವಾದ ಬೆಂಗಳೂರಿನ SGS India ದಿಂದ ಸಹ ಪರೀಕ್ಷೆಗೆ ಒಳಗಾಗಿದೆ.
ಎಲ್ಲೇ ಇರಿ, ಕನೆಕ್ಟ್ ಆಗಿರಿ
OPPO ದ New Hunter Antenna Architecture ನಿಂದಾಗಿ, F29, 300% ವರೆಗೆ ಉತ್ತಮ ನೆಟ್ವರ್ಕ್ ಸ್ವೀಕೃತಿಯನ್ನು ನೀಡುತ್ತದೆ, ದುರ್ಬಲ ಕವರೇಜ್ ವಲಯಗಳಲ್ಲಿಯೂ ಸಹ ಬಲವಾದ ಸಿಗ್ನಲ್ಗಳನ್ನು ಖಾತ್ರಿಪಡಿಸುತ್ತದೆ. ಕೆಲವೇ ಸ್ಥಳಗಳಲ್ಲಿ ಆಂಟೆನಾಗಳನ್ನು ಹೊಂದಿರುವ ಬಹುತೇಕ ಸ್ಮಾರ್ಟ್ಫೋನ್ಗಳಿಗಿಂತ ಭಿನ್ನವಾಗಿ, F29, ಫ್ರೇಮ್ನ 84.5% ವರೆಗೆ ಕವರ್ ಮಾಡುತ್ತದೆ, ನಿಮ್ಮ ಫೋನ್ ಅನ್ನು ನೀವು ಹೇಗೆ ಹಿಡಿದಿಕೊಂಡಿದ್ದರೂ ಸಹ ಬಲವಾದ ಸ್ವೀಕೃತಿಯನ್ನು ಖಚಿತಪಡಿಸುತ್ತದೆ. F29 ನೈಜ-ಪ್ರಪಂಚದ ದುರ್ಬಲ ಸಿಗ್ನಲ್ ಪರಿಸರದಲ್ಲಿ ಸ್ಪರ್ಧಾತ್ಮಕ ಸಾಧನಗಳನ್ನು ಮೀರಿಸುತ್ತದೆ ಎಂದು TÜV Rheinland ಸ್ವತಂತ್ರವಾಗಿ ಮೌಲ್ಯೀಕರಿಸಿದೆ, TÜV Rheinland High Network Performance Certification ನೀಡುತ್ತದೆ.
ಯಾವ ಸ್ಥಳಗಳಲ್ಲಿ ಇದು ಭಾರೀ ವ್ಯತ್ಯಾಸ ಉಂಟುಮಾಡುತ್ತದೆ:
- ಎಲಿವೇಟರ್ಗಳು ಮತ್ತು ಬೇಸ್ಮೆಂಟ್ಗಳ ಒಳಗೆ
- ದೂರದ ಸ್ಥಳಗಳು
- ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳು
ವೇಗವು ಪ್ರಮುಖ ಪಾತ್ರ ವಹಿಸುವುದರಿಂದ, OPPO F29, AI LinkBoost 2.0 ಅನ್ನು ಒಳಗೊಂಡಿದ್ದು, ಅದು ನೈಜ ಸಮಯದಲ್ಲಿ ಕನೆಕ್ಷನ್ಗಳಿಗೆ ಚತುರತೆಯಿಂದ ಆದ್ಯತೆ ನೀಡುವ ಹಾಗೂ ಸ್ಥಿರಗೊಳಿಸುವ ಸ್ಮಾರ್ಟ್ ನೆಟ್ವರ್ಕ್ ಆಪ್ಟಿಮೈಸೇಶನ್ ಸಿಸ್ಟಂ ಆಗಿದೆ.
ಮುನ್ನಡೆಯುತ್ತಲೇ ಇರಲು ಪವರ್
ಇಷ್ಟೆಲ್ಲದರ ಜೊತೆಗೆ, ಇಂತಹ ಸದೃಢವಾದ ಫೋನ್ನಲ್ಲಿ ಚಾರ್ಜ್ ಇಲ್ಲವೆಂದರೆ ಹೇಗೆ, ಅಲ್ಲವೇ? OPPO F29, F ಸೀರೀಸ್ನಲ್ಲಿ ಇದುವರೆಗಿನ ಅತಿದೊಡ್ಡ ಬ್ಯಾಟರಿಯೊಂದಿಗೆ ಒಂದು ಶಕ್ತಿಶಾಲಿ ಹೆಜ್ಜೆ ಮುಂದಿಟ್ಟಿದೆ: ಬೃಹತ್ 6500mAh ಬ್ಯಾಟರಿ ಇದ್ದು, ಇತರರು ಫೋನ್ ಬಳಸುವುದನ್ನು ನಿಲ್ಲಿಸಿದ ನಂತರವೂ ದೀರ್ಘಕಾಲ ಕಾರ್ಯನಿರ್ವಹಿಸುವ ಪವರ್ಹೌಸ್ ಸಾಧನದ ಅಗತ್ಯವಿರುವವರಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. 45W SUPERVOOC™ ಫ್ಲ್ಯಾಶ್ ಚಾರ್ಜ್ ಕೇವಲ 84 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ ಮತ್ತು ಸಾಧನವು ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ – ಏಕೆಂದರೆ ಕೆಲವೊಮ್ಮೆ, ನಿಮ್ಮ ಹೆಡ್ಫೋನ್ಗಳು, ಸ್ಮಾರ್ಟ್ವಾಚ್ ಅಥವಾ ಸ್ನೇಹಿತರ ಫೋನ್ಗೆ ಸಹ ಸ್ವಲ್ಪ ಚಾರ್ಜ್ ಬೇಕಾಗಬಹುದು.
ಇದಿಷ್ಟೇ ಅಲ್ಲದೆ, ತಾಪಮಾನ -20°C ಇದ್ದಾಗಲೂ ಸಹ F29 ವಿಶ್ವಾಸಾರ್ಹವಾಗಿ ಚಾರ್ಜ್ ಆಗುತ್ತದೆ, ಹಾಗಾಗಿ ನೀವು ಹಿಮದಿಂದ ಆವೃತವಾದ ಹಿಮಾಚಲದ ಬೆಟ್ಟ, ಕಣಿವೆಗಳಲ್ಲಿ ಪ್ರಯಾಣಿಸುತ್ತಿರಿ ಅಥವಾ ದೆಹಲಿಯ ಕೊರೆಯುವ ಚಳಿಯಲ್ಲಿ ನಸುಬೆಳಕಿನ ಶಿಫ್ಟ್ನಲ್ಲಿ ಕೆಲಸ ಮಾಡುತ್ತಿರಿ, ನಿಮ್ಮ ಫೋನ್ ನಿಮ್ಮ ಕೈಬಿಡುವುದಿಲ್ಲ. ಉಷ್ಣತೆ ಇದ್ದಾಗ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಅದೇ ರೀತಿ ಕೆಲಸ ಮಾಡುತ್ತದೆ. F29 ನ ಸುಧಾರಿತ ಉಷ್ಣತೆ ನಿರ್ವಹಣೆಯು ಅದು ಮೈಸುಡುವ ಶಾಖ ಇದ್ದಾಗಲೂ ತಣ್ಣಗೆ ಇರುವುದನ್ನು ಖಚಿತಪಡಿಸುತ್ತದೆ. ನೀವು ಪೂರ್ತಿ ಬೆವೆತಿರುವಾಗಲೂ ಸಹ ನಿಮ್ಮ ಫೋನ್ನ ಬ್ಯಾಟರಿ ಅಧಿಕ ಬಿಸಿಯಾಗುವುದಿಲ್ಲ, ಕಾರ್ಯಕ್ಷಮತೆ ಕಡಿಮೆಯಾಗುವುದಿಲ್ಲ ಅಥವಾ ಅವಧಿಗೂ ಮೊದಲೇ ಹಾಳಾಗುವುದಿಲ್ಲ.
ಗಿಗ್ ಕಾರ್ಮಿಕರು ಮತ್ತು ರೋಡ್ ವಾರಿಯರ್ಗಳ ಅಗತ್ಯಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ
ಸತತವಾಗಿ ಚಲಿಸುತ್ತಾ ಕೆಲಸ ಮಾಡುವವರಿಗೆ ಫೋನ್ ಎಂದರೆ ಬರೀ ಒಂದು ಸಾಧನವಲ್ಲ – ಅದು ಕ್ಲೈಂಟ್ಗಳು, ಸಹೋದ್ಯೋಗಿಗಳು ಮತ್ತು ಪ್ರಮುಖವಾದ ಮಾಹಿತಿಗೆ ಇರುವ ಅವರ ಕನೆಕ್ಷನ್ ಆಗಿರುತ್ತದೆ. ವಾಹನ ದಟ್ಟಣೆಯಿರುವ ಟ್ರಾಫಿಕ್ನಲ್ಲಿ ಡೆಲಿವರಿ ರೈಡರ್ ಅವರ ರಿಂಗ್ಟೋನ್ ಸಾಕಷ್ಟು ಜೋರಾಗಿಲ್ಲದ ಕಾರಣ ಒಂದು ಆರ್ಡರ್ ನೋಟಿಫಿಕೇಶನ್ ಅನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನಭರಿತ ಕೆಫೆಯಲ್ಲಿ ಒಪ್ಪಂದದ ಮಾತುಕತೆಯಾಡುತ್ತಿರುವ ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ಪ್ರತಿ ಮಾತನ್ನೂ ಸ್ಪಷ್ಟವಾಗಿ ಕೇಳಿಸಿಕೊಳ್ಳುವ ಅಗತ್ಯವಿರುತ್ತದೆ. ಆನ್-ಸೈಟ್ನಲ್ಲಿ ಪ್ಲಾನ್ಗಳನ್ನು ಪರಿಶೀಲಿಸುತ್ತಿರುವ ಕನ್ಸ್ಟ್ರಕ್ಷನ್ ಸೂಪರ್ವೈಸರ್ ಅವರ ಫೋನ್ ಬಳಸುವುದಕ್ಕಾಗಿಯೇ ಅವರ ಗ್ಲೌಸ್ಗಳನ್ನು ತೆಗೆಯಲೇಬೇಕಾಗುತ್ತದೆ.
ಹಾಗಾಗಿ, ತಮ್ಮ ಬದುಕಿಗೆ ಅವರ ಸಾಧನಗಳ ಮೇಲೆ ಅವಲಂಬಿತರಾಗಿರುವ ಉದ್ಯೋಗಿಗಳಿಗೆ OPPO F29 ಉದ್ದೇಶಭರಿತ-ನಿರ್ಮಾಣವಾಗಿದೆ. Outdoor Mode ಬರೀ ಕರೆಯ ವಾಲ್ಯೂಮ್ ಅನ್ನು ಹೆಚ್ಚಿಸುವುದಿಲ್ಲ – ಅದು ನೋಟಿಫಿಕೇಶನ್ ಸೌಂಡ್ಗಳು ಮತ್ತು ರಿಂಗ್ಟೋನ್ಗಳನ್ನು 300% ರಷ್ಟು ವರ್ಧಿಸುತ್ತದೆ, ಅದರಿಂದಾಗಿ ನೀವು ಏನನ್ನೂ ತಪ್ಪಿಸಿಕೊಳ್ಳಲಾರಿರಿ ಎಂಬುದನ್ನು ಖಾತ್ರಿಪಡಿಸುತ್ತದೆ. ಸ್ವಯಂಚಾಲಿತ ಹ್ಯಾಂಡ್ಸ್-ಫ್ರೀ ಕಾಲಿಂಗ್ (Automatic Hands-Free Calling) ಅನುಕೂಲಕರವಾಗಿ ಪೂರ್ಣ ವಾಲ್ಯೂಮ್ನಲ್ಲಿ ಸ್ಪೀಕರ್ ಮೋಡ್ಗೆ ಬದಲಿಸುತ್ತದೆ, ಅದರಿಂದಾಗಿ ನೀವು ಏನನ್ನು ಮಾಡುತ್ತಿರುವಿರೋ ಅದನ್ನು ನಿಲ್ಲಿಸದೆ ನೀವು ಕರೆಗಳನ್ನು ಸ್ವೀಕರಿಸಬಹುದು.
Glove Mode ನೀವು ಗ್ಲೌಸ್ ಧರಿಸಿರುವಾಗಲೂ ಸಹ ನಿಮ್ಮ ಫೋನ್ ಜೊತೆಗೆ ತಡೆಯಿಲ್ಲದೆ ಸಂವಹನ ನಡೆಸುವ ಸ್ವಾತಂತ್ರ್ಯವನ್ನು ನಿಮಗೆ ನೀಡುತ್ತದೆ. ಆಂಟಿ-ಮಿಸ್ಟಚ್ ಅಲ್ಗಾರಿದಮ್ ಸ್ಕ್ರೀನ್ ತೇವವಾಗಿರುವಾಗಲೂ ಸಹ ನಾಜೂಕಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸುತ್ತದೆ, ಹಾಗಾಗಿ ನೀವು ಮಳೆಯಲ್ಲಿ ಕರೆಗಳನ್ನು ಸ್ವೀಕರಿಸಬಹುದು, ಬೆವರಿದ ಕೈಗಳಿಂದ ಮ್ಯಾಪ್ಗಳಾದ್ಯಂತ ಟ್ಯಾಪ್ ಮಾಡಬಹುದು ಅಥವಾ ಒಂದು ಬೀಟ್ ಅನ್ನು ಬಿಟ್ಟುಬಿಡದೆ ಮಿಡ್-ಶಿಫ್ಟ್ ಕ್ರಮವನ್ನು ಸರಿಹೊಂದಿಸಬಹುದು.
ಫ್ಲ್ಯಾಗ್ಶಿಪ್ AI ಅನ್ನು ಎಲ್ಲರಿಗೂ ಪರಿಚಯಿಸುತ್ತಿದೆ
ನಾವು ಹೇಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಬದುಕುತ್ತಿದ್ದೇವೆ ಎಂಬುದನ್ನು AI ವೇಗವಾಗಿ ಪರಿವರ್ತಿಸುತ್ತಿರುವ ಜಗತ್ತಿನಲ್ಲಿ, ಈ ಇಂಟೆಲಿಜೆಂಟ್ ಟೂಲ್ಗಳಿಗೆ ಇರುವ ಆ್ಯಕ್ಸೆಸ್ ಫ್ಲ್ಯಾಗ್ಶಿಪ್ ಸಾಧನಗಳಲ್ಲಿಯೂ ಇರಲಿ ಎಂಬುದು OPPO ನಂಬಿಕೆಯಾಗಿದೆ. F29 ಆ ನಂಬಿಕೆಯನ್ನು ನಿಜವಾಗಿಸಿದೆ – ಆ ಮೂಲಕ ಭಾರತದಾದ್ಯಂತದ ಪ್ರತಿದಿನದ ಬಳಕೆದಾರರಿಗೆ ಸ್ಮಾರ್ಟ್, ವಾಸ್ತವವಾದ AI ಫೀಚರ್ಗಳನ್ನು ಪರಿಚಯಿಸುತ್ತಿದೆ. ನೀವು ಸಾಕಷ್ಟು ಅಧ್ಯಯನ ಸಾಮಗ್ರಿಯನ್ನು ಸಾರಾಂಶಗೊಳಿಸುತ್ತಿರಬಹುದು, ತ್ವರಿತವಾಗಿ ಕಂಟೆಂಟ್ ಅನ್ನು ಅನುವಾದ ಮಾಡುತ್ತಿರಬಹುದು ಅಥವಾ ಪ್ರಮುಖವಾದ ಇಮೇಲ್ ಅನ್ನು ರಚಿಸುತ್ತಿರಬಹುದು, F29 ನ AI Summary, Screen Translator ಹಾಗೂ AI Writer ಟೂಲ್ಗಳನ್ನು ನೈಜ-ಜೀವನದ ಉತ್ಪಾದಕತೆಯನ್ನು ಬೆಂಬಲಿಸಲು ನಿರ್ಮಿಸಲಾಗಿದೆಯೇ ಹೊರತು ಕೇವಲ ತಂತ್ರಜ್ಞಾನವನ್ನು ಪ್ರದರ್ಶಿಸುವುದಕ್ಕಲ್ಲ.
Google Gemini ಇಂಟಿಗ್ರೇಶನ್ ಇದನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ದಿದ್ದು, ಐಡಿಯಾಗಳನ್ನು ಬ್ರೇನ್ಸ್ಟಾರ್ಮ್ ಮಾಡಲು, ಸಂಕೀರ್ಣ ಪ್ರಶ್ನೆಗಳಿಗೆ ಉತ್ತರಿಸಲು ಹಾಗೂ ಸರಳವಾದ ಧ್ವನಿ ಅಥವಾ ಪಠ್ಯದ ಪ್ರಾಂಪ್ಟ್ಗಳನ್ನು ಬಳಸಿಕೊಂಡು ಕಂಟೆಂಟ್ ರಚಿಸುವುದಕ್ಕೆ ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ತ್ವರಿತವಾಗಿ ಮಾಹಿತಿಯನ್ನು ಪಡೆಯುವುದಕ್ಕಾಗಿ Circle to Search ಜೊತೆಗೂಡಿದ್ದು, AI ನ ಶಕ್ತಿಯನ್ನು F29 ನಿಮ್ಮ ಕೈಯಲ್ಲಿ ಇಡುತ್ತಿದೆ – ವೇಗವಾಗಿ ಕೆಲಸ ಮಾಡಲು, ಸ್ಮಾರ್ಟ್ ಆಗಿ ಸಂವಹನ ನಡೆಸಲು ಮತ್ತು ನಿಮ್ಮ ದಿನ ಹೇಗೆ ಇದ್ದರೂ ಮುನ್ನಡೆಯಲು ಸಹಾಯ ಮಾಡುತ್ತದೆ.
ಆನಂದಿಸಲು ವಿನ್ಯಾಸಗೊಳಿಸಲಾಗಿದೆ: ಅಂಡರ್ವಾಟರ್ ಫೋಟೊಗ್ರಫಿ, ಡಿಸ್ಪ್ಲೇ ಮತ್ತು ಕಾರ್ಯಕ್ಷಮತೆಯ ತಡೆರಹಿತ ಮಿಶ್ರಣ
ಇಷ್ಟೆಲ್ಲ ಇದ್ದ ಮೇಲೆ ಹೊಚ್ಚಹೊಸ ಫೋನ್ ನಿಮ್ಮನ್ನು ಆನಂದಗೊಳಿಸಬೇಕು.
ಹೌದು, ಇದು Optical Image Stabilization (OIS) ಅನ್ನು ಒಳಗೊಂಡಿರುವ 50MP Ultra-Clear Camera ಹೊಂದಿದೆ, ಆದರೆ ಹೆಚ್ಚಿನ ಸ್ಮಾರ್ಟ್ಫೋನ್ಗಳು ಫೋಟೋಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ಸ್ಥಳಗಳಲ್ಲಿ ಫೋಟೋಗಳನ್ನು ತೆಗೆದುಕೊಳ್ಳಲು F29 ಅನ್ನು ನಿರ್ಮಿಸಲಾಗಿದೆ ಎಂಬುದು ಇದನ್ನು ಎದ್ದುಕಾಣುವಂತೆ ಮಾಡುತ್ತದೆ.
ಟ್ರಿಪಲ್ IP ರೇಟಿಂಗ್ಗಳಿಂದಾಗಿ ಈ ಫೋನ್ ನೀರಿನ ವಿರುದ್ಧ ಸಂಪೂರ್ಣವಾಗಿ ತಡೆಯೊಡ್ಡುತ್ತದೆ, ಆ ಮೂಲಕ ಅನಿರೀಕ್ಷಿತ ಆನಂದವನ್ನು ಬಹಿರಂಗಪಡಿಸಿದೆ – ಅದು Underwater Photography Mode. ಈಗ ನೀವು ನೀರಿನ ಹಾನಿಯ ಕುರಿತು ಚಿಂತಿಸದೆ ಆಳನೀರಿನಲ್ಲಿ ಆಕರ್ಷಕ ಫೋಟೊಗಳನ್ನು ಶೂಟ್ ಮಾಡಬಹುದು. ಇದಾದ ನಂತರ, ಸ್ವಯಂ-ಖಾಲಿಯಾಗುವ ಸ್ಪೀಕರ್ ಸಿಸ್ಟಂ ಸ್ವಯಂಚಾಲಿತವಾಗಿ ನೀರನ್ನು ಹೊರಹಾಕುತ್ತದೆ, ಇದರಿಂದ ಪ್ರತಿಯೊಂದು ಸಹ ಸ್ಪಷ್ಟವಾಗಿರುತ್ತದೆ ಹಾಗೂ ಕಾರ್ಯನಿರ್ವಹಿಸುವಂತೆ ಇರುತ್ತವೆ.
ಇದಲ್ಲದೆ, ತನ್ನ 6.7–ಇಂಚ್ AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 1200 ನಿಟ್ಗಳ ಪೀಕ್ ಬ್ರೈಟ್ನೆಸ್ ಮೂಲಕ F29 ಅದ್ಭುತ ಡಿಸ್ಪ್ಲೇ ಅನುಭವವನ್ನು ಒದಗಿಸುತ್ತದೆ – ವೈವಿಧ್ಯಮಯ ಬಣ್ಣಗಳು, ನಯವಾದ ಸ್ಕ್ರಾಲಿಂಗ್ ಮತ್ತು ಅತೀವ ಬಿಸಿಲಿನಲ್ಲೂ ಅತ್ಯುತ್ತಮ ಗೋಚರತೆಯನ್ನು ಖಾತ್ರಿಪಡಿಸುತ್ತದೆ. 2160Hz PWM ಡಿಮ್ಮಿಂಗ್ ಮೂಲಕ ಇನ್ನೂ ಹೆಚ್ಚಿನ ಅನನ್ಯತೆಯನ್ನು ಹೊಂದಿದ್ದು, ಕಣ್ಣುಗಳಿಗೆ ಆರಾಮವೆನಿಸುವ ಫ್ಲಿಕರ್-ಫ್ರೀ ಅನುಭವವನ್ನು OPPO F29 ಖಚಿತಪಡಿಸುತ್ತದೆ.
ಈ ದ್ರವ ಅನುಭವಕ್ಕೆ ಶಕ್ತಿ ತುಂಬುವುದು 4nm Snapdragon 6 Gen 1 ಪ್ರಾಸೆಸರ್ ಆಗಿದ್ದು, ಇದನ್ನು ಫ್ಲ್ಯಾಗ್ಶಿಪ್-ಹಂತದ ವೇಗ, ಸುಗಮ ಮಲ್ಟಿಟಾಸ್ಕಿಂಗ್ ಮತ್ತು ವರ್ಧಿತ AI ಸಾಮರ್ಥ್ಯಗಳನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. OPPO ದ ColorOS 15, AI-ಚಾಲಿತ ವರ್ಧನೆಗಳನ್ನು ಒಳಗೊಂಡಿದ್ದು, ಅದು ಕಾಲಾನಂತರದಲ್ಲಿ ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿಸುತ್ತದೆ, ನಿಮ್ಮ ಸಾಧನವು ನಿಧಾನವಾಗದೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುತ್ತದೆ.
ಆದರೆ ನಿಜವಾಗಿಯೂ ಅಚ್ಚರಿಯ ವೈಶಿಷ್ಟ್ಯತೆ ಎಂದರೆ ಅದರ 60–ತಿಂಗಳ ಫ್ಲುಯೆನ್ಸಿ ಟೆಸ್ಟಿಂಗ್. ಕಳಪೆ ಬ್ಯಾಟರಿ ಕಾರ್ಯಕ್ಷಮತೆ ಮತ್ತು ಸಾಧನದ ನಿಧಾನಗತಿಯಿಂದಾಗಿ ಬಳಕೆದಾರರನ್ನು ಅಪ್ಗ್ರೇಡ್ ಮಾಡುವಂತೆ ಒತ್ತಾಯಿಸುವ ಇತರ ಸ್ಮಾರ್ಟ್ಫೋನ್ಗಳಂತೆ ಅಲ್ಲ ಈ ಫೋನ್. OPPO F29, 5 ವರ್ಷಗಳವರೆಗೆ ವಿಶ್ವಾಸಾರ್ಹ ಕಾರ್ಯಕ್ಷಮತೆಯ ಭರವಸೆ ನೀಡುತ್ತದೆ, ನಿಮ್ಮ ಸಾಧನವನ್ನು ಅಪ್ಗ್ರೇಡ್ ಮಾಡುವ ಅಗತ್ಯವಿಲ್ಲದೆ ಯಾವಾಗ ಅಪ್ಗ್ರೇಡ್ ಮಾಡಬೇಕು ಎಂಬುದು ನಿಮ್ಮ ನಿಯಂತ್ರಣದಲ್ಲಿರುತ್ತದೆ.
ಸ್ಮಾರ್ಟ್ಫೋನ್ಗಳು ಇಂದು ಕಾರ್ಯಕ್ಷಮತೆ, ಶೈಲಿ ಮತ್ತು ಇಂಟೆಲಿಜೆನ್ಸ್ನ ಭರವಸೆ ನೀಡುತ್ತವೆ, ಆದರೆ ಕೆಲವೇ ಕೆಲವನ್ನು ಮಾತ್ರ ನಿಜ ಜೀವನದ ಆಗುಹೋಗುಗಳಿಗೆ – ಬೀಳುವಿಕೆಗಳು, ಚೆಲ್ಲುವಿಕೆ, ಹವಾಮಾನ ವೈಪರೀತ್ಯ ಮತ್ತು ನಿತ್ಯದ ಬಳಕೆಯಿಂದಾಗಿ ಉಂಟಾಗುವ ಸವೆತವನ್ನು – ತಾಳಿಕೊಳ್ಳುವಂತೆ ನಿರ್ಮಿಸಲಾಗಿರುತ್ತದೆ. OPPO F29 ಈ ನಿರೂಪಣೆಯನ್ನು ಬದಲಾಯಿಸಿದೆ, ಬಾಳಿಕೆ ಬರುವ ಸ್ಮಾರ್ಟ್ಫೋನ್ ಪವರ್, ಇಂಟೆಲಿಜೆನ್ಸ್ ಅಥವಾ ಬಳಕೆದಾರರ ಅನುಭದೊಂದಿಗೆ ರಾಜಿಯಾಗುವ ಅಗತ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದೆ.
ಗಿಗ್ ಕಾರ್ಮಿಕರು ಮತ್ತು ರೋಡ್ ವಾರಿಯರ್ಗಳಿಗೆಂದೇ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದ್ದು, Outdoor Mode ಮತ್ತು Glove Mode ಎಂಬ ಚಿಂತನಶೀಲ ಫೀಚರ್ಗಳನ್ನು ಒಳಗೊಂಡಿದೆ. ಹೊರಾಂಗಣದಲ್ಲಿ ಮತ್ತು ರಸ್ತೆಯಲ್ಲಿ ತಮ್ಮ ಬಹುಪಾಲು ಸಮಯವನ್ನು ವ್ಯಯಿಸುವವರೊಂದಿಗೆ ಈ ಸಾಧನವು ಇರಲೇಬೇಕಾದದ್ದು ಆಗಿದೆ. ನಿಮ್ಮ ಸ್ಮಾರ್ಟ್ಫೋನ್ನಿಂದ ನೀವು ಹೆಚ್ಚಿನದನ್ನು ಬಯಸಿದರೆ, ಸಮಯವಾದಂತೆ ನಿಧಾನವಾಗುವ ದುರ್ಬಲ ಸಾಧನಗಳೊಂದಿಗೆ ರಾಜಿಯಾಗಲು ಬಯಸದಿದ್ದರೆ, OPPO F29 ಬರೀ ಒಂದು ಆಯ್ಕೆಯಲ್ಲ – ಇದೊಂದು ಅಭೂತಪೂರ್ವ ಮಾನದಂಡವಾಗಿದೆ.
ದರ, ಆಫರ್ಗಳು ಮತ್ತು ಲಭ್ಯತೆ:
OPPO F29 ಎರಡು ಆಕರ್ಷಕ ಶೇಡ್ಗಳಲ್ಲಿ ಲಭ್ಯವಿದೆ: ಬೋಲ್ಡ್, ವಿಶ್ವಾಸಯುತ ನೋಟಕ್ಕಾಗಿ ಸಾಲಿಡ್ ಪರ್ಪಲ್ ಮತ್ತು ಭಾರತದ ಪ್ರಶಾಂತ ಪರ್ವತದ ಹಿಮಗಿರಿಗಳನ್ನು ಪ್ರಚೋದಿಸುವ ಗ್ಲೇಸಿಯರ್ ಬ್ಲೂ. 8GB+128GB ಗೆ INR 23,999 ದರ ಇದೆ ಮತ್ತು 8GB+256GB ಗೆ INR 25,999 ಇದೆ. F29 5G ಈಗಾಗಲೇ ಮಾರಾಟಕ್ಕೆ ಲಭ್ಯವಿದ್ದು, Flipkart, Amazon, OPPO E-store ಮತ್ತು ಪ್ರಮುಖ ರಿಟೇಲ್ ಔಟ್ಲೆಟ್ಗಳಲ್ಲಿ ದೊರೆಯಲಿದೆ.
ಅನುಮೋದಿತ ಸೋಶಿಯಲ್ ಕಾಪಿ
ಗಿಗ್ ವಲಯಕ್ಕೆ ನಿರ್ಮಿಸಲಾದ – OPPO F29 ಅನ್ನು ಪರಿಚಯಿಸುತ್ತಿದ್ದೇವೆ. ಇದನ್ನು ಬೀಳಿಸಿ, ಇದರ ಮೇಲೆ ಚೆಲ್ಲಿರಿ, ಇದನ್ನು ಮಳೆಯಲ್ಲಿ ಕೊಂಡಿಯ್ಯಿರಿ – ಇದು ಸೋಲುವುದಿಲ್ಲ. 5 ವರ್ಷಗಳ ಪೀಕ್ ಪರ್ಫಾರ್ಮೆನ್ಸ್ ಜೊತೆಗೆ, ನೀವು ಕನೆಕ್ಟ್ ಆಗಿರುವಿರಿ, ಉತ್ಪಾದಕತೆ ಹೆಚ್ಚುತ್ತದೆ ಮತ್ತು ಯಾವಾಗಲೂ ಚಲನೆಯಲ್ಲಿರುವಿರಿ. ಅಲ್ಟಿಮೇಟ್ #TheDurableChampion #OPPOF29Series5G
March 28, 2025 11:39 AM IST