Last Updated:
ಭಾರತ ಪರ 99 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಜರ್, ಕಿರ್ಮಾನಿ ಅವರ ಆತ್ಮಚರಿತ್ರೆಯ ಬಿಡುಗಡೆ ಸಮಾರಂಭದಲ್ಲಿ, ‘ಅವರು ವಿಶ್ವದ ನಂಬರ್ ಒನ್ ವಿಕೆಟ್ ಕೀಪರ್. ಅಂತಹ ವಿಕೆಟ್ ಕೀಪರ್ ಇದುವರೆಗೆ ಹುಟ್ಟಿಲ್ಲ ಎಂದು ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವಿಕೆಟ್ಕೀಪರ್ಗಳ (Wicket Keeper) ವಿಷಯಕ್ಕೆ ಬಂದರೆ, ಎಂಎಸ್ ಧೋನಿ (MS Dhoni) ಮತ್ತು ರಿಷಭ್ ಪಂತ್ (Rishabh Pant) ಅವರ ಹೆಸರುಗಳು ಮೊದಲು ಬರುತ್ತವೆ. ಹೆಚ್ಚಿನ ಭಾರತೀಯರು ಈ ಇಬ್ಬರಲ್ಲಿ ಯಾರನ್ನಾದರೂ ಭಾರತದ ಅತ್ಯುತ್ತಮ ವಿಕೆಟ್ಕೀಪರ್ ಎಂದೇ ಪರಿಗಣಿಸುತ್ತಾರೆ, ಆದರೆ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅಚ್ಚರಿ ಹೆಸರನ್ನ ಆಯ್ಕೆ ಮಾಡಿದ್ದಾರೆ. ಮೊಹಮ್ಮದ್ ಅಜರುದ್ದೀನ್ 1983ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಕನ್ನಡಿಗ ಸೈಯದ್ ಕಿರ್ಮಾನಿ ಅವರನ್ನು ವಿಶ್ವದ ಅತ್ಯುತ್ತಮ ವಿಕೆಟ್ಕೀಪರ್ ಎಂದು ಹೇಳಿದ್ದಾರೆ.
ಭಾರತ ಪರ 88 ಟೆಸ್ಟ್ ಪಂದ್ಯಗಳನ್ನು ಆಡಿರುವ ಸೈಯದ್ ಕಿರ್ಮಾನಿ ಅವರನ್ನು ಮೊಹಮ್ಮದ್ ಅಜರುದ್ದೀನ್ ತಮ್ಮ ಆತ್ಮಚರಿತ್ರೆ ‘ಸ್ಟಂಪ್ಡ್: ಲೈಫ್ ಬಿಹೈಂಡ್ ಅಂಡ್ ಬಿಯಾಂಡ್ ದಿ ಟ್ವೆಂಟಿ-ಟು ಯಾರ್ಡ್ಸ್’ ಬಿಡುಗಡೆ ಸಮಾರಂಭದಲ್ಲಿ ಹೊಗಳಿದ್ದಾರೆ. ಅಜರುದ್ದೀನ್ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸೈಯದ್ ಕಿರ್ಮಾನಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಅಂದರೆ ಅವರು ಕಿರ್ಮಾನಿ ಅವರೊಂದಿಗೆ ಆಡಿದ್ದಲ್ಲದೆ, ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆದಿದ್ದಾರೆ.
ಭಾರತ ಪರ 99 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಜರ್, ಕಿರ್ಮಾನಿ ಅವರ ಆತ್ಮಚರಿತ್ರೆಯ ಬಿಡುಗಡೆ ಸಮಾರಂಭದಲ್ಲಿ, ‘ಅವರು ವಿಶ್ವದ ನಂಬರ್ ಒನ್ ವಿಕೆಟ್ ಕೀಪರ್. ಅಂತಹ ವಿಕೆಟ್ ಕೀಪರ್ ಇದುವರೆಗೆ ಹುಟ್ಟಿಲ್ಲ. ನಾಲ್ವರು ಸ್ಪಿನ್ನರ್ಗಳೊಂದಿಗೆ ವಿಕೆಟ್ ಕೀಪಿಂಗ್ ಮಾಡುವುದು ಯಾರಿಗೂ ಸುಲಭವಾಗಿರಲಿಲ್ಲ. 1983 ರ ವಿಶ್ವಕಪ್ನಲ್ಲಿ ಅವರು ಅನೇಕ ಉತ್ತಮ ಕ್ಯಾಚ್ಗಳನ್ನು ಹಿಡಿದಿದ್ದಾರೆ. ಕಪಿಲ್ 175 ರನ್ ಗಳಿಸಿದ ಪಂದ್ಯದಲ್ಲಿ, ಕಿರ್ಮಾನಿ (24) ಅವರಿಗೆ ಉತ್ತಮ ಬೆಂಬಲ ನೀಡಿದ್ದರು ಎಂದು ಸ್ಮರಿಸಿದ್ದಾರೆ.
ಸೈಯದ್ ಕಿರ್ಮಾನಿ ಜನವರಿ 1976 ರಿಂದ ಜನವರಿ 1986 ರವರೆಗೆ ಟೀಮ್ ಇಂಡಿಯಾ ಪರ ಒಟ್ಟು 88 ಟೆಸ್ಟ್ ಮತ್ತು 49 ಏಕದಿನ ಪಂದ್ಯಗಳನ್ನು ಆಡಿದರು ಮತ್ತು ಕ್ರಮವಾಗಿ 2759 ಮತ್ತು 373 ರನ್ ಗಳಿಸಿದರು. ಕೀಪರ್ ಆಗಿ, ಅವರು ಟೆಸ್ಟ್ ಕ್ರಿಕೆಟ್ನಲ್ಲಿ 160 ಕ್ಯಾಚ್ಗಳನ್ನು ಪಡೆದಿದ್ದಾರೆ ಹಾಗೂ 38 ಬ್ಯಾಟ್ಸ್ಮನ್ಗಳನ್ನು ಸ್ಟಂಪ್ ಮಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ, ಅವರು 36 ಬ್ಯಾಟರ್ಗಳನ್ನ ಪೆವಿಲಿಯನ್ಗಟ್ಟಿದ್ದಾರೆ. ಕಿರ್ಮಾನಿ 1983ರ ವಿಶ್ವಕಪ್ನಲ್ಲಿ ಎಲ್ಲಾ ಎಂಟು ಪಂದ್ಯಗಳನ್ನು ಆಡಿದ್ದು, 12 ಕ್ಯಾಚ್ಗಳನ್ನು ಪಡೆದು,ಎರಡು ಸ್ಟಂಪಿಂಗ್ಗಳನ್ನು ಮಾಡಿದ್ದರು.
August 11, 2025 9:00 PM IST