Last Updated:
ಟಿಂ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಟೂರ್ನಿಯ ಮೆಮೊರೆಬಲ್ ಮೂವ್ಮೆಂಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹಾಗಿದ್ರೆ, ಅವರು ಹೇಳಿದ ಮೆಮೊರೆಬಲ್ ಮೂವ್ಮೆಂಟ್ ಯಾವುದು ಎಂದು ನೋಡೋಣ ಬನ್ನಿ.
ಯಂಗ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ರಿಂದ ಸಮಬಲ ಸಾಧಿಸಿದೆ. ಆ ಮೂಲಕ ಶುಭ್ಮನ್ ಗಿಲ್ (Shubhman Gill) ನಾಯತ್ವದ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದೆ. ಈ ನಡುವೆ ಟಿಂ ಇಂಡಿಯಾದ (Team India) ಮಾಜಿ ಸ್ಟಾರ್ ಆಟಗಾರ ಯುವರಾಜ್ ಸಿಂಗ್ (Yuvraj Singh) ಟೂರ್ನಿಯ ಮೆಮೊರೆಬಲ್ ಮೂವ್ಮೆಂಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹಾಗಿದ್ರೆ, ಅವರು ಹೇಳಿದ ಮೆಮೊರೆಬಲ್ ಮೂವ್ಮೆಂಟ್ ಯಾವುದು ಎಂದು ನೋಡೋಣ ಬನ್ನಿ.
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಸರಣಿಯನ್ನು ಡ್ರಾ ಮಾಡಿಕೊಂಡ ಕ್ಷಣವೇ ಈ ಪಂದ್ಯಾವಳಿಯ ಪ್ರಮುಖ ಕ್ಷಣ ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೇಳಿದ್ದಾರೆ. 4ನೇ ಟೆಸ್ಟ್ ಅನ್ನು ಡ್ರಾ ಮಾಡಿಕೊಳ್ಳುವಲ್ಲಿ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದ ಯುವಿ. ಈ ಹೇಳಿಕೆ ನೀಡಿದ್ದಾರೆ.
1-2 ಅಂತರದ ಹಿನ್ನಡೆಯೊಂದಿಗೆ 4ನೇ ಪಂದ್ಯ ಆಡಿದ ಟೀಂ ಇಂಡಿಯಾ, ಮೊದಲ ಇನ್ನಿಂಗ್ಸ್ನ ಬೃಹತ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿತು. ಈ ವೇಳೆ ಸೋಲುವ ಪಂದ್ಯವನ್ನ ಡ್ರಾ ಮಾಡಿಕೊಳ್ಳುವಲ್ಲಿ ಭಾರತ ತಂಡ ಯಶಸ್ವಿಯಾಯಿತು. ಜಡೇಜಾ ಮತ್ತು ಸುಂದರ್ ವೈಯಕ್ತಿಕ ಶತಕಗಳನ್ನು ಗಳಿಸುವ ಮೂಲಕ ಎರಡು ಸೆಷನ್ಗಳಲ್ಲಿ ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಳ್ಳುವ ಮೂಲಕ ಸೋಲುವುದನ್ನು ತಪ್ಪಿಸಿದೆ. ಓವಲ್ನಲ್ಲಿ ನಡೆದ ಅಂತಿಮ ಟೆಸ್ಟ್ನಲ್ಲಿ ಭಾರತ 6 ರನ್ಗಳ ಅಲ್ಪ ಅಂತರದ ಜಯ ಸಾಧಿಸಿದ ನಂತರ ಐದು ಪಂದ್ಯಗಳ ಸರಣಿಯು ಅಂತಿಮವಾಗಿ 2-2 ಅಂತರದಲ್ಲಿ ಡ್ರಾದಲ್ಲಿ ಕೊನೆಗೊಂಡಿತು.
“ಟೂರ್ನಮೆಂಟ್ನಲ್ಲಿ ಭಾರತ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡ ಕ್ಷಣ ಅದ್ಭುತವಾಗಿತ್ತು. ಅದರಲ್ಲೂ ಧೀರ್ಘಕಾಲ ಬ್ಯಾಟಿಂಗ್ ಮಾಡಿದ ವಾಷಿಂಗ್ಟನ್ ಮತ್ತು ಜಡೇಜಾ ಶತಕಗಳನ್ನು ಗಳಿಸಿ ಟೆಸ್ಟ್ ಡ್ರಾ ಮಾಡಿಕೊಂಡಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ” ಎಂದು ಯುವರಾಜ್ ’50 ಡೇಸ್ ಟು ಗೋ’ ಮಹಿಳಾ ಕ್ರಿಕೆಟ್ ವಿಶ್ವಕಪ್ ಈವೆಂಟ್ನ ಹೊರತಾಗಿ ಐಸಿಸಿ ಡಿಜಿಟಲ್ನೊಂದಿಗೆ ಮಾತನಾಡುತ್ತಾ ಈ ಮಾಹಿತಿ ಹಂಚಿಕೊಂಡರು.
ಇನ್ನೂ ಇದೇ ಸಂದರ್ಭದಲ್ಲಿ ಶುಭ್ಮನ್ ಗಿಲ್ ಬ್ಯಾಟಿಂಗ್ ಕುರಿತು ಕೂಡ ಅವರು ಮಾತನಾಡಿದರು. “ವಿದೇಶಗಳಲ್ಲಿ ಅವರ ರೆಕಾರ್ಡ್ ಕುರಿತು ಬಹಳಷ್ಟು ಪ್ರಶ್ನಾರ್ಥಕ ಚಿಹ್ನೆಗಳಿದ್ದವು. ಆ ವ್ಯಕ್ತಿ ನಾಯಕರಾದರು ಮತ್ತು 4 ಟೆಸ್ಟ್ ಶತಕಗಳನ್ನು ಗಳಿಸಿದರು. ನಿಮಗೆ ಜವಾಬ್ದಾರಿಯನ್ನು ನೀಡಿದಾಗ, ನೀವು ಅದನ್ನು ಹೇಗೆ ತೆಗೆದುಕೊಳ್ಳುತ್ತೀರಿ ಎಂಬುದನ್ನು ಗಿಲ್ ಬ್ಯಾಟಿಂಗ್ ಸೂಚಿಸುತ್ತದೆ” ಎಂದು ಗಿಲ್ ಬ್ಯಾಟಿಂಗ್ ಅನ್ನು ಪ್ರಶಂಸಿದರು.
August 14, 2025 10:50 PM IST