Last Updated:
ಲಕ್ನೋ ಪಂದ್ಯಕ್ಕೂ ಮುನ್ನ ಟೇಬಲ್ ಟಾಪರ್ ಆಗಿದ್ದ ಎಸ್ಆರ್ಎಚ್ ಆರನೇ ಸ್ಥಾನಕ್ಕೆ ಕುಸಿದಿದೆ. ಈ ಸೋಲಿನಿಂದ ಎಸ್ಆರ್ಎಚ್ನ ನೆಟ್ ರನ್ ರೇಟ್ ಕೂಡ 2.200ರಿಂದ -0.128ಕ್ಕೆ ಇಳಿದಿದೆ. ಇದರಿಂದ ಈ ತಂಡ ಟಾಪ್-5ರಿಂದ ಹೊರಬಿದ್ದಿದೆ. ಈಗ ಎಸ್ಆರ್ಎಚ್, ಎಲ್ಎಸ್ಜಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಲಾ ಒಂದು ಗೆಲುವು ಮತ್ತು ಒಂದು ಸೋಲು ಹೊಂದಿವೆ.
ಐಪಿಎಲ್ 2025ರ (IPL 2025) ಏಳನೇ ಪಂದ್ಯದಲ್ಲಿ ಲಕ್ನೋ ಸೂಪರ್ಜೈಂಟ್ಸ್ (LSG) ತಂಡವು ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ 5 ವಿಕೆಟ್ಗಳ ಜಯ ಗಳಿಸಿ ಪಾಯಿಂಟ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೇರಿದೆ. ಗುರುವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಎಚ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ, ಎಲ್ಎಸ್ಜಿ ಕೇವಲ 16.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಶಾರ್ದೂಲ್ ಠಾಕೂರ್ 4 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಪಾಯಿಂಟ್ ಟೇಬಲ್ನಲ್ಲಿ ಬದಲಾವಣೆ
ಈ ಗೆಲುವಿನೊಂದಿಗೆ ಎಲ್ಎಸ್ಜಿ ತನ್ನ ಮೊದಲ ಅಂಕಗಳನ್ನು ಗಳಿಸಿದರೆ, ಏಳನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಮತ್ತೊಂದೆಡೆ, ಪಂದ್ಯಕ್ಕೂ ಮುನ್ನ ಟೇಬಲ್ ಟಾಪರ್ ಆಗಿದ್ದ ಎಸ್ಆರ್ಎಚ್ ಆರನೇ ಸ್ಥಾನಕ್ಕೆ ಕುಸಿದಿದೆ. ಈ ಸೋಲಿನಿಂದ ಎಸ್ಆರ್ಎಚ್ನ ನೆಟ್ ರನ್ ರೇಟ್ ಕೂಡ 2.200ರಿಂದ -0.128ಕ್ಕೆ ಇಳಿದಿದೆ. ಇದರಿಂದ ಈ ತಂಡ ಟಾಪ್-5ರಿಂದ ಹೊರಬಿದ್ದಿದೆ. ಈಗ ಎಸ್ಆರ್ಎಚ್, ಎಲ್ಎಸ್ಜಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಲಾ ಒಂದು ಗೆಲುವು ಮತ್ತು ಒಂದು ಸೋಲು ಹೊಂದಿವೆ.
ಇದನ್ನೂ ಓದಿ: 13 ಎಸೆತಗಳಲ್ಲೇ 5 ಸಿಕ್ಸರ್! ಹೆಡ್, ಕ್ಲಾಸೆನ್ಗಿಂತ ಡೇಂಜರಸ್ ಹಿಟ್ಟರ್ SRHನ ಈ 23ರ ಯುವ ಆಟಗಾರ!
ಆರ್ಸಿಬಿ ಮೊದಲ ಸ್ಥಾನಕ್ಕೆ ಲಗ್ಗೆ
ಎಲ್ಎಸ್ಜಿ ಗೆಲುವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಕೂಡ ಲಾಭ ಪಡೆದಿದೆ. ಆರ್ಸಿಬಿ ಎರಡನೇ ಸ್ಥಾನದಿಂದ ಮೊದಲ ಸ್ಥಾನಕ್ಕೇರಿದೆ. ಶುಕ್ರವಾರ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಡುವೆ ಹೈವೋಲ್ಟೆಜ್ ಪಂದ್ಯ ನಡೆಯಲಿದೆ. ಎರಡೂ ತಂಡಗಳು ತಮ್ಮ ಮೊದಲ ಪಂದ್ಯ ಗೆದ್ದಿವೆ. ಈ ಪಂದ್ಯದ ವಿಜೇತ ತಂಡ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿಯಲಿದೆ. ಆರ್ಸಿಬಿ ಗೆದ್ದರೆ ಅದರ ಸ್ಥಾನ ಬದಲಾಗದೆ ಮೊದಲ ಸ್ಥಾನದಲ್ಲೇ ಉಳಿಯುತ್ತದೆ. ಆದರೆ, ಸಿಎಸ್ಕೆ ಗೆದ್ದರೆ ನಾಲ್ಕನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಏರಬಹುದು.
ಪಂದ್ಯದ ಮುಖ್ಯಾಂಶಗಳು
ಎಸ್ಆರ್ಎಚ್ಗೆ ಈ ಸೋಲು ಟೂರ್ನಿಯ ಮೊದಲ ಆಘಾತವಾಗಿದ್ದು, ಎಲ್ಎಸ್ಜಿ ತನ್ನ ಆರಂಭಿಕ ಸೋಲಿನ ನಂತರ ಭರ್ಜರಿಯಾಗಿ ಪುಟಿದೆದ್ದಿದೆ. ಈ ಗೆಲುವು ಎಲ್ಎಸ್ಜಿಯ ನೆಟ್ ರನ್ ರೇಟ್ ಸುಧಾರಿಸಿದ್ದು, ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಶುಕ್ರವಾರದ ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯದ ಫಲಿತಾಂಶ ಪಾಯಿಂಟ್ ಟೇಬಲ್ನಲ್ಲಿ ಮತ್ತಷ್ಟು ಬದಲಾವಣೆ ತರಲಿದೆ.
ಇದನ್ನೂ ಓದಿ: ಚೆಪಾಕ್ನಲ್ಲಿ ಗರಿಷ್ಠ ಮತ್ತು ಕನಿಷ್ಠ ಸ್ಕೋರ್ ಎಷ್ಟು? ಟಾಸ್ ಗೆದ್ದ ತಂಡದ ಬೆಸ್ಟ್ ಆಯ್ಕೆ ಯಾವುದು?
ಇಲ್ಲಿಯವರೆಗಿನ ಪಂದ್ಯಗಳ ಫಲಿತಾಂಶಗಳು
ಮೊದಲ ಪಂದ್ಯದಲ್ಲಿ ಆರ್ಸಿಬಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿತ್ತು. ನಂತರ ಮುಂಬೈ ವಿರುದ್ಧ ಸಿಎಸ್ಕೆ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಗೆಲುವು ಸಾಧಿಸಿವೆ. ಗುಜರಾತ್ ಹಾಗೂ ರಾಜಸ್ಥಾನ್ ರಾಯಲ್ಸ್ ಗೆಲುವಿಗಾಗಿ ಎದುರು ನೋಡುತ್ತಿವೆ.
March 28, 2025 5:05 PM IST
IPL 2025: ಲಕ್ನೋ ವಿರುದ್ಧ ಸೋತ ಬೆನ್ನಲ್ಲೇ ಅಗ್ರಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದ SRH! ಟಾಪ್ನಲ್ಲಿ ಆರ್ಸಿಬಿ, IPL ಪಾಯಿಂಟ್ ಟೇಬಲ್ ಇಲ್ಲಿದೆ