Last Updated:
ಭಾರತ ತಂಡದಲ್ಲಿ ಪ್ರಮುಖ ವೇಗಿಯಾಗಿ ಹೊರಹೊಮ್ಮಿದ ಇರ್ಫಾನ್ ಪಠಾಣ್ 2009 ರಲ್ಲಿ ತಂಡದಿಂದ ಹೊರಬಿದ್ದರು. ಇರ್ಫಾನ್ ಪಠಾಣ್ ಅಕ್ಟೋಬರ್ 2012 ರಲ್ಲಿ ಭಾರತ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಅದರ ನಂತರ, ಅವರು ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ ಮತ್ತು 2020ರಲ್ಲಿ ನಿವೃತ್ತಿ ಘೋಷಿಸಿದರು.
ಭಾರತದ ಸ್ಫೋಟಕ ಬ್ಯಾಟರ್ ಆಗಿದ್ದ ವೀರೆಂದರ್ ಸೆಹ್ವಾಗ್ (Virender Sehwag) ಇತ್ತೀಚಿನ ಸಂದರ್ಶನವೊಂದರಲ್ಲಿ ನಾನು ಧೋನಿಯಿಂದಾಗಿ 2008ರಲ್ಲೇ ನಿವೃತ್ತಿ ಆಲೋಚನೆ ಮಾಡಿದ್ದೆ, ಆದರೆ ಸಚಿನ್ ತೆಂಡೂಲ್ಕರ್ (Sachin Tendulkar) ಸಲಹೆ ಮೇರೆಗೆ ಮುಂದುವರಿದು 2011ರ ವಿಶ್ವಕಪ್ವರೆಗೆ ಆಡಿದೆ ಎಂದು ತಿಳಿಸಿದ್ದರು. ಇದೀಗ ಮತ್ತೊಬ್ಬ ಆಟಗಾರ ಧೋನಿ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan), ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಕಾರಣದಿಂದಾಗಿ ತಮ್ಮ ವೃತ್ತಿಜೀವನವು ಹಾಳಾಯಿತು ಎಂದು ಹೇಳಿದ್ದಾರೆ. ಉತ್ತಮ ಪ್ರದರ್ಶನ ನೀಡಿದ್ದರೂ ಅವರನ್ನು ತಂಡದಿಂದ ಕೈಬಿಡಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಭಾರತ ತಂಡದಲ್ಲಿ ಪ್ರಮುಖ ವೇಗಿಯಾಗಿ ಹೊರಹೊಮ್ಮಿದ ಇರ್ಫಾನ್ ಪಠಾಣ್ 2009 ರಲ್ಲಿ ತಂಡದಿಂದ ಹೊರಬಿದ್ದರು. ಇರ್ಫಾನ್ ಪಠಾಣ್ ಅಕ್ಟೋಬರ್ 2012 ರಲ್ಲಿ ಭಾರತ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಅದರ ನಂತರ, ಅವರು ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ ಮತ್ತು 2020ರಲ್ಲಿ ನಿವೃತ್ತಿ ಘೋಷಿಸಿದರು.
ಇತ್ತೀಚಿನ ಸಂದರ್ಶನವೊಂದರಲ್ಲಿ, ಇರ್ಫಾನ್ ಪಠಾಣ್ ತಮ್ಮ ವೃತ್ತಿಜೀವನದ ಬಗ್ಗೆ ಶಾಕಿಂಗ್ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಆಗಿನ ಕೋಚ್ ಗ್ಯಾರಿ ಕರ್ಸ್ಟನ್ ಅವರು ಧೋನಿಯಿಂದಾಗಿ ಭಾರತೀಯ ತಂಡದಲ್ಲಿ ಸ್ಥಾನ ಸಿಗಲಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ ಧೋನಿಗೆ ನಾಯಕನಾಗಿ ಅಂತಿಮ ತಂಡವನ್ನು ಆಯ್ಕೆ ಮಾಡುವ ಹಕ್ಕಿದೆ ಮತ್ತು ಅವರು ಅವರನ್ನು ದೂಷಿಸುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಹೇಳಿಕೆ ವಿವಾದವಾಗದಿರುವಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದಾರೆ.
‘ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ, ನಾನು ಮತ್ತು ನನ್ನ ಸಹೋದರ ಯೂಸುಫ್ ಪಠಾಣ್ ಜೊತೆಯಾಗಿ ತಂಡಕ್ಕೆ ಗೆಲುವನ್ನ ತಂದುಕೊಟ್ಟಿದ್ದರು. ಕೇವಲ 27-28 ಎಸೆತಗಳಲ್ಲಿ 60 ರನ್‌ಗಳ ಅಗತ್ಯವಿದ್ದ ಕಠಿಣ ಪರಿಸ್ಥಿತಿಯಲ್ಲಿ ನಾವು ತಂಡವನ್ನು ಗೆಲುವಿನತ್ತ ಮುನ್ನಡೆಸಿದೆವು. ಇದಾದ ನಂತರ, ನಾವು ನ್ಯೂಜಿಲೆಂಡ್ ಪ್ರವಾಸವನ್ನು ತಲುಪಿದಾಗ, ಮೊದಲ, ಎರಡನೇ ಮತ್ತು ಮೂರನೇ ಪಂದ್ಯಗಳ ಆಡುವ ಹನ್ನೊಂದರಿಂದ ನನ್ನನ್ನು ಕೈಬಿಡಲಾಯಿತು. ನಾಲ್ಕನೇ ಪಂದ್ಯ ಮಳೆಯಿಂದಾಗಿ ಡ್ರಾ ಆಗಿತ್ತು. ನಾನು ಕೊನೆಯ ಪಂದ್ಯದಲ್ಲಿಯೂ ಇರಲಿಲ್ಲ. ನಂತರ ನಾನು ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಸರ್ ಅವರನ್ನು ನನ್ನನ್ನು ಏಕೆ ಕೈಬಿಡಲಾಯಿತು ಎಂದು ಕೇಳಿದೆ. ನಾನು ಏನನ್ನಾದರೂ ಸುಧಾರಿಸಬೇಕಾದರೆ, ಅವರು ನನಗೆ ಹೇಳಬಹುದಿತ್ತು, ಆದರೆ ನನ್ನನ್ನು ಏಕೆ ಕೈಬಿಡಲಾಯಿತು ಎಂದು ನನಗೆ ತಿಳಿಯಬೇಕಿತ್ತು.
ಇದಕ್ಕೆ ಕರ್ಸ್ಟನ್ ನನಗೆ ಎರಡು ಕಾರಣಗಳನ್ನು ನೀಡಿದರು. ಕೆಲವು ವಿಷಯಗಳು ನನ್ನ ನಿಯಂತ್ರಣದಲ್ಲಿಲ್ಲ ಎಂದು ಅವರು ಹೇಳಿದರು. ಅಂತಿಮ ತಂಡದ ಆಯ್ಕೆ ನಾಯಕನ ಅಂತಿಮ ನಿರ್ಧಾರ ಎಂದು ಅವರು ಬಹಿರಂಗಪಡಿಸಿದರು. ಆ ಸಮಯದಲ್ಲಿ ಧೋನಿ ನಾಯಕರಾಗಿದ್ದರು. ತಂಡದ ಆಯ್ಕೆ ನಾಯಕ, ಕೋಚ್ ಹಾಗೂ ಮ್ಯಾನೇಜ್ಮೆಂಟ್ ಕೈಯಲ್ಲಿರುತ್ತದೆ.
ಎರಡನೇ ಕಾರಣವಾಗಿ ತಂಡಕ್ಕೆ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್ ಆಲ್‌ರೌಂಡರ್ ಅಗತ್ಯವಿದೆ ಎಂದು ಅವರು ಹೇಳಿದರು. ನನ್ನ ಸಹೋದರ ಯೂಸುಫ್ ಪಠಾಣ್ ಬ್ಯಾಟಿಂಗ್ ಆಲ್‌ರೌಂಡರ್. ನಾನು ಬೌಲಿಂಗ್ ಆಲ್‌ರೌಂಡರ್. ತಂಡದಲ್ಲಿ ಒಂದೇ ಸ್ಥಾನವಿದೆ ಎಂದು ಅವರು ತಿಳಿಸಿದರು. ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ನಾಯಕನ ಮಾತು ಅಂತಿಮವಾಗಿರುತ್ತದೆ. ಈಗ,ಧೋನಿಯ ನಿರ್ಧಾರ ಸರಿಯೇ? ಅಲ್ಲವೇ? ನಾನು ಹೇಳಲು ಬಯಸುವುದಿಲ್ಲ, ಏಕೆಂದರೆ ಪ್ರತಿಯೊಬ್ಬ ನಾಯಕನಿಗೂ ತನ್ನದೇ ಆದ ರೀತಿಯಲ್ಲಿ ತನ್ನ ತಂಡವನ್ನು ನಡೆಸುವ ಹಕ್ಕಿದೆ ” ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಇರ್ಫಾನ್ ಪಠಾಣ್ ಒಟ್ಟಾರೆ 120 ಏಕದಿನ ಪಂದ್ಯಗಳನ್ನು ಆಡಿದರು, ಅದರಲ್ಲಿ ಅವರು 173 ವಿಕೆಟ್‌ಗಳನ್ನು ಪಡೆದರು ಮತ್ತು 1500 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದರು.
August 15, 2025 9:55 PM IST