Last Updated:
ಆರ್ಸಿಬಿ ತಂಡ ಸಿಎಸ್ಕೆ ವಿರುದ್ಧ ಬರೋಬ್ಬರಿ 17 ವರ್ಷದ ಬಳಿಕ ಸಿಎಸ್ಕೆ ತವರಿನಲ್ಲಿ ಗೆದ್ದು ಸಾಧನೆ ಮಾಡಿತು. ಇನ್ನೂ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಎಂ ಎಸ್ ಧೋನಿ ಇಂದಿನ ಪಂದ್ಯದಲ್ಲಿ ಕೆಳ ಕ್ರಮಾಂಕದಲ್ಲಿ ಬಂದು ಅಬ್ಬರಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ನಡುವಿನ ಹೈವೋಲ್ಟೇಜ್ ಪಂದ್ಯವನ್ನು ಆರ್ಸಿಬಿ ಬೃಹತ್ ಮೊತ್ತದ ಅಂತರದಲ್ಲಿ ಗೆದ್ದುಕೊಂಡಿತು. ಆ ಮೂಲಕ ಆರ್ಸಿಬಿ (RCB) ತಂಡ ಸಿಎಸ್ಕೆ (SCK) ವಿರುದ್ಧ ಬರೋಬ್ಬರಿ 17 ವರ್ಷದ ಬಳಿಕ ಸಿಎಸ್ಕೆ ತವರಿನಲ್ಲಿ ಗೆದ್ದು ಸಾಧನೆ ಮಾಡಿತು. ಇನ್ನೂ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಎಂ ಎಸ್ ಧೋನಿ (MS Dhoni) ಇಂದಿನ ಪಂದ್ಯದಲ್ಲಿ ಕೆಳ ಕ್ರಮಾಂಕದಲ್ಲಿ ಬಂದು ಅಬ್ಬರಿಸಿದರು.
A never ending story 😊
Last over 🤝 MS Dhoni superhits 🔥
Scorecard ▶ https://t.co/I7maHMwxDS #TATAIPL | #CSKvRCB | @ChennaiIPL pic.twitter.com/j5USqXvf7r
— IndianPremierLeague (@IPL) March 28, 2025
16 ಎಸೆತಗಳಲ್ಲಿ 30 ರನ್ಸ್
ಸಿಎಸ್ಕೆ ಬೌಲಿಂಗ್ ಸಂದರ್ಭದಲ್ಲಿ ಜಸ್ಟ್ 0.16 ಸೆಕೆಂಡ್ನಲ್ಲಿ ಫಿಲ್ ಸಾಲ್ಟ್ ಅವರನ್ನು ಸ್ಟಂಪ್ ಮಾಡಿದ್ದ ಧೋನಿ, ಬ್ಯಾಟಿಂಗ್ನಲ್ಲೂ ಸಾಮರ್ಥ್ಯ ಇದೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಅವರು 16 ಎಸೆತಗಳಲ್ಲಿ ಬರೋಬ್ಬರಿ 30 ರನ್ ಸಿಡಿಸಿ ಮಿಂಚಿದರು. ಈ ವೇಳೆ ಅವರು, 3 ಬೌಂಡರಿ ಹಾಗೂ ಎರಡು ಅಮೋಘ ಸಿಕ್ಸರ್ ಬಾರಿಸಿದರು. ಅಷ್ಟೇ ಅಲ್ಲ ಕಳೆದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದ ಕೃನಾಲ್ ಪಾಂಡ್ಯ ಅವರಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಮತ್ತು ಒಂದು ಫೋರ್ ಸಿಡಿಸಿ ತಮ್ಮ ಸಾಮರ್ಥ್ಯ ಎನು ಎಂಬುದನ್ನು ಸಾಬೀತುಪಡಿಸಿದರು.
March 28, 2025 11:27 PM IST