ICC Rank: ವಿಶ್ವದ ನಂಬರ್ 1 ಬೌಲರ್ ಪಟ್ಟಕ್ಕೇರಿದ ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ಬೌಲರ್ | Maharaj’s Masterclass: South African Spinner Becomes Number One ODI Bowler | ಕ್ರೀಡೆ

ICC Rank: ವಿಶ್ವದ ನಂಬರ್ 1 ಬೌಲರ್ ಪಟ್ಟಕ್ಕೇರಿದ ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ಬೌಲರ್ | Maharaj’s Masterclass: South African Spinner Becomes Number One ODI Bowler | ಕ್ರೀಡೆ

Last Updated:

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೇಶವ್ ಮಹಾರಾಜ್ 33 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ತಂಡದ ಗೆಲುವಿನ ನಂತರ ಈ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದರು.

ಕೇಶವ್ ಮಹಾರಾಜಕೇಶವ್ ಮಹಾರಾಜ
ಕೇಶವ್ ಮಹಾರಾಜ

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ತನ್ನ ಏಕದಿನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ದೊಡ್ಡ ಬದಲಾವಣೆಯಾಗಿದೆ. ದಕ್ಷಿಣ ಆಫ್ರಿಕಾದ ಸ್ಪಿನ್ ಬೌಲರ್ ಕೇಶವ್ ಮಹಾರಾಜ್ ಈಗ ವಿಶ್ವದ ನಂಬರ್ ಒನ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆಗಸ್ಟ್ 19ರಂದು ಆಸ್ಟ್ರೇಲಿಯಾ ವಿರುದ್ಧ ಆಡಿದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್‌ ಉರುಳಿಸಿದ್ದರು. ಈ ಅದ್ಭುತ ಪ್ರದರ್ಶನದಿಂದ ಅವರು ಎರಡು ಸ್ಥಾನಗಳನ್ನು ಏರಿ ಮೊದಲ ಸ್ಥಾನಕ್ಕೆ ಬಂದಿದ್ದಾರೆ.

ಪಂದ್ಯ ಪುರುಷೋತ್ತಮ ಪ್ರಶಸ್ತಿ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೇಶವ್ ಮಹಾರಾಜ್ 33 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ತಂಡದ ಗೆಲುವಿನ ನಂತರ ಈ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದರು. ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಮಹಾರಾಜ್ ಐದು ವಿಕೆಟ್‌ ಸಾಧನೆ ಮಾಡಿದ್ದರು. ಇದು ಅವರ ಏಕದಿನ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವೂ ಆಗಿದೆ. ಇದೇ ಪ್ರದರ್ಶನ ಅವರಿಗೆ ನಂಬರ್ 1 ಸ್ಥಾನ ತಂದುಕೊಟ್ಟಿದೆ.

ಕೇಶವ್ ಮಹಾರಾಜ್ ತಮ್ಮ ದಾಖಲೆಯ ಬೌಲಿಂಗ್ ಪ್ರದರ್ಶನದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ ಮೊದಲ ಸ್ಪಿನ್ನರ್ ಎನಿಸಿಕೊಂಡರು. ಅವರಿಗಿಂತ ಮೊದಲು, ಇಮ್ರಾನ್ ತಾಹಿರ್ ಮೂರು ಸ್ವರೂಪಗಳಲ್ಲಿ 291 ವಿಕೆಟ್‌ಗಳನ್ನು ಕಬಳಿಸಿದ್ದರು. ಮಹಾರಾಜ್ ಇದುವರೆಗೆ ದಕ್ಷಿಣ ಆಫ್ರಿಕಾ ಪರ ಒಟ್ಟು 304 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಇದರಲ್ಲಿ ಟೆಸ್ಟ್‌ನಲ್ಲಿ 203, ಏಕದಿನದಲ್ಲಿ 63 ಮತ್ತು ಟಿ20ಐಗಳಲ್ಲಿ 38 ಸೇರಿವೆ.

ಕುಸಿದ ತೀಕ್ಷಣ, ಕುಲದೀಪ್

ಈ ಬದಲಾವಣೆಯಲ್ಲಿ ಶ್ರೀಲಂಕಾದ ಮಹೀಶ್ ತೀಕ್ಷಣ (ಶ್ರೀಲಂಕಾ) ಹಾಗೂ ಕುಲದೀಪ್ ಎರಡನೇ ಮತ್ತು ಮೂರನೇ ಸ್ಥಾನಗಳಿಗೆ ಕೆಳಗಿಳಿದಿದ್ದಾರೆ. ಆದರೆ ಭಾರತದ ಇನ್ನೊಬ್ಬ ಸ್ಪಿನ್ನರ್ ರವೀಂದ್ರ ಜಡೇಜಾ ಇನ್ನೂ ಟಾಪ್-10 ರಲ್ಲಿ (ಒಂಬತ್ತನೇ ಸ್ಥಾನ) ಉಳಿದಿದ್ದಾರೆ. ಭಾರತದ ವೇಗಿ ಬೌಲರ್‌ಗಳಾದ ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಕ್ರಮವಾಗಿ 13, 14 ಮತ್ತು 15ನೇ ಸ್ಥಾನಗಳಲ್ಲಿ ಇದ್ದಾರೆ.

21 ತಿಂಗಳ ಬಳಿಕ ನಂಬರ್ 1 ಸ್ಥಾನ

ಮಹಾರಾಜ ನವೆಂಬರ್ 2023ರಲ್ಲಿ ಮೊದಲ ಬಾರಿ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿದ್ದರು. ಅಂದಿನಿಂದ ಟಾಪ್ 5ರಲ್ಲೆ ಕಾಣಿಸಿಕೊಂಡಿದ್ದ ಕೇಶವ್ ಇದೀಗ 21 ತಿಂಗಳ ಬಳಿಕ ನಂಬರ್ ಸ್ಥಾನಕ್ಕೇರಿದ್ದಾರೆ. ಮಹಾರಾಜ ಪ್ರಸ್ತುತ 687 ರೇಟಿಂಗ್ ಪಾಯಿಂಟ್ಗಳನ್ನ ಹೊಂದಿದ್ದು ಅಗ್ರಸ್ಥಾನದಲ್ಲಿದ್ದರೆ, ತೀಕ್ಷಣ 671 ಪಾಯಿಂಟ್​ಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದ್ದಾರೆ. ಆಸೀಸ್ ವಿರುದ್ಧ 33ರನ್​ಗಳಿಗೆ 5 ವಿಕೆಟ್ ಪಡೆದು ಗೆಲುವಿನ ಪ್ರದರ್ಶನ ತೋರಿದ ಬೆನ್ನಲ್ಲೇ ಅವರ ಶ್ರೇಯಾಂಕದಲ್ಲಿ ಬದಲಾವಣೆಯಾಗಿದೆ.

ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ

ಬ್ಯಾಟಿಂಗ್‌ನಲ್ಲಿ ಭಾರತದ ಉಪನಾಯಕ ಶುಭ್ಮನ್ ಗಿಲ್ ಇನ್ನೂ ಮೊದಲ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್, ಭಾರತದ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ. ಭಾರತದ ಶ್ರೇಯಸ್ ಅಯ್ಯರ್ ಆರನೇ ಸ್ಥಾನದಲ್ಲಿದ್ದಾರೆ.

ಆಲ್‌ರೌಂಡರ್ ವಿಭಾಗದಲ್ಲಿ ಅಫ್ಘಾನಿಸ್ತಾನದ ಆಟಗಾರರಾದ ಅಜ್ಮತುಲ್ಲಾ ಒಮರ್‌ಜೈ ಮತ್ತು ಮೊಹಮ್ಮದ್ ನಬಿ ಮೊದಲ ಎರಡು ಸ್ಥಾನಗಳಲ್ಲಿ ಉಳಿದಿದ್ದಾರೆ. ಭಾರತದ ರವೀಂದ್ರ ಜಡೇಜಾ ಟಾಪ್-10 ರಲ್ಲಿ (ಹತ್ತನೇ ಸ್ಥಾನ) ಇದ್ದಾರೆ.