Team India: ಟಿ20 ತಂಡಕ್ಕೆ ಗಿಲ್​ ಆಗಮನ ಆತನ ಕರಿಯರ್ ಅಂತ್ಯಕ್ಕೆ ಕಾರಣವಾಗುತ್ತಾ? ಶಾಕ್ ಕೊಟ್ಟ ಅಗರ್ಕರ್ ಹೇಳಿಕೆ | Asia Cup 2025 Shubman Gill s Ascendancy May Cost Sanju Samson T20I Spot | ಕ್ರೀಡೆ

Team India: ಟಿ20 ತಂಡಕ್ಕೆ ಗಿಲ್​ ಆಗಮನ ಆತನ ಕರಿಯರ್ ಅಂತ್ಯಕ್ಕೆ ಕಾರಣವಾಗುತ್ತಾ? ಶಾಕ್ ಕೊಟ್ಟ ಅಗರ್ಕರ್ ಹೇಳಿಕೆ | Asia Cup 2025 Shubman Gill s Ascendancy May Cost Sanju Samson T20I Spot | ಕ್ರೀಡೆ

Last Updated:

ಗಿಲ್ ಮತ್ತು ಜೈಸ್ವಾಲ್ ಇಲ್ಲದ ಕಾರಣ ಸಂಜು ಸ್ಯಾಮ್ಸನ್​ ಹಾಗೂ ಅಭಿಷೇಕ್ ಶರ್ಮಾ ಕೂಡ ಆ ಸಮಯದಲ್ಲಿ ಆಡಿದ್ದರು. ಅಭಿಷೇಕ್‌ನ ಪ್ರದರ್ಶನ ಅವರನ್ನು ಕೈಬಿಡದಂತೆ ಮಾಡಿದೆ, ಜೊತೆಗೆ ಅವರು ಬೌಲಿಂಗ್​ಗೂ ಕೂಡ ಸಹಕಾರಿಯಾಗಲಿದ್ದಾರೆ. ಗಿಲ್ ಕಳೆದ ಟಿ20 ವಿಶ್ವಕಪ್‌ನ ನಂತರ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉಪನಾಯಕನಾಗಿದ್ದರು. ಈಗ ಅವನು ಲಭ್ಯವಿರುವುದರಿಂದ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ಅಗರ್ಕರ್ ಹೇಳಿದ್ದಾರೆ.

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಗಿಲ್ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಗಿಲ್
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಗಿಲ್

ಏಷ್ಯಾಕಪ್​​ಗೆ (Asia Cup) ಭಾರತ ತಂಡದ ಘೋಷಣೆಯ ನಂತರ ಭಾರತೀಯ ಕ್ರಿಕೆಟ್ ತಂಡದ (Indian cricket Team) ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ (Ajit Agarkar) ನೀಡಿದ ಹೇಳಿಕೆ ಸಂಜು ಸ್ಯಾಮ್ಸನ್ (Sanju samson) ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿವೆ. 2025ರ ಏಷಿಯಾ ಕಪ್‌ಗೆ ತಂಡವನ್ನು ಘೋಷಿಸುವ ವೇಳೆ ಪತ್ರಿಕಾಗೋಷ್ಠಿಯಲ್ಲಿ ಅಗರ್ಕರ್, ಸಂಜು ಸ್ಯಾಮ್ಸನ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಆಡಿದ್ದು ಕೇವಲ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಲಭ್ಯವಿರದ ಕಾರಣ ಎಂದು ಬಹಿರಂಗಪಡಿಸಿದ್ದಾರೆ.

ಈ ಕಾರಣಕ್ಕೆ ಸಂಜುಗೆ ಅವಕಾಶ

” ಗಿಲ್ ಮತ್ತು ಜೈಸ್ವಾಲ್ ಇಲ್ಲದ ಕಾರಣ ಸಂಜು ಸ್ಯಾಮ್ಸನ್​ ಹಾಗೂ ಅಭಿಷೇಕ್ ಶರ್ಮಾ ಕೂಡ ಆ ಸಮಯದಲ್ಲಿ ಆಡಿದ್ದರು. ಅಭಿಷೇಕ್‌ನ ಪ್ರದರ್ಶನ ಅವರನ್ನು ಕೈಬಿಡದಂತೆ ಮಾಡಿದೆ, ಜೊತೆಗೆ ಅವರು ಬೌಲಿಂಗ್​ಗೂ ಕೂಡ ಸಹಕಾರಿಯಾಗಲಿದ್ದಾರೆ. ಗಿಲ್ ಕಳೆದ ಟಿ20 ವಿಶ್ವಕಪ್‌ನ ನಂತರ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉಪನಾಯಕನಾಗಿದ್ದರು. ಈಗ ಅವನು ಲಭ್ಯವಿರುವುದರಿಂದ ತಂಡಕ್ಕೆ ಆಯ್ಕೆಯಾಗಿದ್ದಾರೆ” ಎಂದು ಅಗರ್ಕರ್ ಹೇಳಿದ್ದಾರೆ.

ಅತ್ಯುತ್ತಮ ಫಾರ್ಮ್​​ನಲ್ಲಿ ಸಂಜು

ಕೇರಳದಂತಹ ಕ್ರಿಕೆಟ್‌ನಲ್ಲಿ ಕಡಿಮೆ ಪ್ರಾತಿನಿಧ್ಯ ಹೊಂದಿರುವ ರಾಜ್ಯಕ್ಕೆ ಸಂಜು ಸ್ಯಾಮ್ಸನ್ ಒಂದು ದೊಡ್ಡ ಆಶಾಕಿರಣವಾಗಿದ್ದಾರೆ. 20 ವರ್ಷದ ವಯಸ್ಸಿನಲ್ಲಿ ಟಿ20 ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವಾಡಿದ ಸಂಜು, ಸ್ಥಿರತೆಯ ಕೊರತೆ ಮತ್ತು ದೊಡ್ಡ ರನ್‌ಗಳ ಕೊರತೆಯಿಂದ ಆರಂಭಿಕ ವರ್ಷಗಳಲ್ಲಿ ಟೀಕೆಗೆ ಒಳಗಾಗಿದ್ದರು. ಆದರೆ ಇತ್ತೀಚೆಗೆ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. 2024 ರ ಟಿ20 ವಿಶ್ವಕಪ್‌ನ ನಂತರ, ಸಂಜು 42 ಟಿ20 ಪಂದ್ಯಗಳಲ್ಲಿ 152.38 ರ ಸ್ಟ್ರೈಕ್ ರೇಟ್‌ನೊಂದಿಗೆ 861 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳಿವೆ. ಅವನ ಎಲ್ಲಾ ಶತಕಗಳು ಆರಂಭಿಕ ಆಟಗಾರನಾಗಿ ಬಂದಿವೆ, ಆದರೆ ಈಗ ಶುಭ್ಮನ್ ಗಿಲ್‌ರ ಆಗಮನದಿಂದ ಅವನ ಸ್ಥಾನ ಅಪಾಯದಲ್ಲಿದೆ.

ಭವಿಷ್ಯದ ನಾಯಕನಾಗುವತ್ತಾ ಗಿಲ್​​

ಶುಭ್ಮನ್ ಗಿಲ್‌ನನ್ನು ಭಾರತದ ಮುಂದಿನ ಎಲ್ಲಾ-ಮಾದರಿಯ ನಾಯಕನಾಗಿ (ಟೆಸ್ಟ್, ಏಕದಿನ, ಟಿ20) ರೂಪಿಸಲಾಗುತ್ತಿದೆ. ಗಿಲ್ 21 ಟಿ20 ಪಂದ್ಯಗಳಲ್ಲಿ 139.27 ರ ಸ್ಟ್ರೈಕ್ ರೇಟ್‌ನೊಂದಿಗೆ 578 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಒಳಗೊಂಡಿವೆ. ಐಪಿಎಲ್ 2025ರಲ್ಲಿ ಅವರು 155.87 ರ ಸ್ಟ್ರೈಕ್ ರೇಟ್‌ನೊಂದಿಗೆ 650 ರನ್​ ಗಳಿಸಿದ್ದಾರೆ. ಗಿಲ್‌ರ ಈ ಪ್ರದರ್ಶನ ಮತ್ತು ಉಪನಾಯಕತ್ವದ ಆಯ್ಕೆಯಿಂದ ಅವನು ಆರಂಭಿಕ ಸ್ಥಾನಕ್ಕೆ ಮೊದಲ ಆದ್ಯತೆಯಾಗಿದ್ದಾರೆ ಎಂದು ಅಗರ್ಕರ್ ಸೂಚಿಸಿದ್ದಾರೆ.

ಸಂಜುಗೆ ಅವಕಾಶ ಡೌಟ್ ಎಂದ ಚೋಪ್ರಾ

ಆಕಾಶ್ ಚೋಪ್ರಾ ಸೇರಿದಂತೆ ಕೆಲವು ಮಾಜಿ ಕ್ರಿಕೆಟಿಗರು ಸಂಜು ಸ್ಯಾಮ್ಸನ್ ಆರಂಭಿಕರಾಗಿ ಆಡುವ ಸಾಧ್ಯತೆ ಕಡಿಮೆ ಎಂದಿದ್ದಾರೆ. “ಗಿಲ್ ಉಪನಾಯಕನಾಗಿ ಬಂದಿರುವುದರಿಂದ ಅವರು ಖಂಡಿತವಾಗಿಯೂ ಆರಂಭಿಕನಾಗಿ ಆಡುತ್ತಾರೆ. ಇದರಿಂದ ಸಂಜು ಸ್ಯಾಮ್ಸನ್ ಪ್ಲೇಯಿಂಗ್ XIನಿಂದ ಹೊರಗುಳಿಯಬಹುದು. ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯರನ್ನು ತಂಡದಿಂದ ಕೈಬಿಡಲಾಗದು, ಫಿನಿಶರ್ ಆಗಿ ಜಿತೇಶ್​ ಶರ್ಮಾಗೆ ಮೊದಲ ಆಧ್ಯತೆ ನೀಡಬಹುದು. ಆದ್ದರಿಂದ ಸಂಜುಗೆ ಪ್ಲೇಯಿಂಗ್ ಇಲೆವೆನ್​​ನಲ್ಲಿ ಸ್ಥಾನ ಸಿಗದಿರಬಹುದು,” ಎಂದು ಚೋಪ್ರಾ ಹೇಳಿದ್ದಾರೆ.

ಗಿಲ್ ತಂಡಕ್ಕೆ ಆಗಮಿಸಿದ್ದು, ಹಾಗೆಯೇ ಜೈಸ್ವಾಲ್​​ ಹಾಗೂ ಶ್ರೇಯಸ್ ಅಯ್ಯರ್ ತಂಡದಿಂದ ಹೊರಬಿದ್ದಿರುವುದರು ಬಿಸಿಸಿಐ ಆಟಗಾರರನ್ನು ಆಯ್ಕೆ ಮಾಡುವ ಮಾನದಂಡ ಯಾವುದು ಎಂಬ ಪ್ರಶ್ನೆ ಉದ್ಭವಿಸಿದೆ. ಒಂದು ವೇಳೆ ಸಂಜು ಸ್ಯಾಮ್ಸನ್‌ಗೆ ಮತ್ತೊಮ್ಮೆ ದೊಡ್ಡ ವೇದಿಕೆಯಲ್ಲಿ ಅವಕಾಶ ಕಡಿಮೆಯಾದರೆ, ಕೇರಳದ ಕ್ರಿಕೆಟ್ ಅಭಿಮಾನಿಗಳಿಗಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇದು ದೊಡ್ಡ ನಿರಾಸೆಯಾಗಲಿದೆ.