Last Updated:
ಮಂಗಳೂರಿನ ‘ಟೀಮ್ ಮಂಗಳೂರು’ ತಂಡವು ಫ್ರಾನ್ಸ್‌ನಲ್ಲಿ ಸೆಪ್ಟೆಂಬರ್ 13 ರಿಂದ ಜರುಗಲಿರುವ ಜಗತ್ತಿನ ಅತೀ ದೊಡ್ಡ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲಿದೆ. 18 ಅಡಿ ಎತ್ತರದ ರಥದ ವಿನ್ಯಾಸದ ಗಾಳಿಪಟ ತಯಾರಾಗಿದೆ.
ಮಂಗಳೂರು: ಗಾಳಿಪಟ (Kite) ಭಾರತದ ಮಕ್ಕಳ ಬಾಲ್ಯದ ಅವಿಭಾಜ್ಯ ಅಂಗ. ವಿಶಾಲ ದೇಹದ, ತುಂಡು ಬಾಲದ, ಗಾಳಿಗೆ ಜೋಲಿ ಹೊಡೆಯುತ್ತಾ ತೇಲುವ (Floating) ನೋಡ ನೋಡುತ್ತಲೇ ಆಗಸ (Sky) ಮುಟ್ಟುವ ಈ ನಭಚರಿಯನ್ನು ಕಣ್ತುಂಬಿಕೊಳ್ಳದ ದೃಷ್ಟಿ (Vision) ವ್ಯರ್ಥ! ಇಂತಹ ಗಾಳಿಪಟಕ್ಕೆ ಈಗ ಸಿಕ್ಕಿರುವ ಆದ್ಯತೆಯ ಮಟ್ಟವೇ ಬೇರೆ ಹಂತದ್ದು!
ಗಾಳಿಪಟದ ಸಲುವಾಗಿಯೇ ಅಂತಾರಾಷ್ಟ್ರೀಯ ಸ್ಪರ್ಧೆಗಳು ಜರುಗುತ್ತಿವೆ. ಗಾಳಿಪಟ ಕೆಲವೆಡೆ ಸಂಸ್ಕೃತಿಯ ಭಾಗವೂ ಆಗಿದೆ. ಇಂತಹ ಭಾರತದ ಗಾಳಿಪಟ ಫ್ರಾನ್ಸ್‌ನಲ್ಲಿ ಹಾರಲಿದೆ! ಅದು ಕೂಡ “ನಮ್ಮ ಕುಡ್ಲ” ಯಾನೆ ಮಂಗಳೂರಿನ ಗಾಳಿಪಟ ಫ್ರಾನ್ಸ್‌ನಲ್ಲಿ ಭಾರತದ ನಿಶಾನೆಯಾಗಿ ಹಾರಲಿದೆ!
ಫ್ರಾನ್ಸ್ ದೇಶದಲ್ಲಿ ಸೆಪ್ಟೆಂಬರ್ 13 ರಿಂದ ಜರಗಲಿರುವ ಜಗತ್ತಿನ ಅತೀ ದೊಡ್ಡ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಭಾರತದ ಪ್ರತಿನಿಧಿ ತಂಡವಾಗಿ ಮಂಗಳೂರಿನ ಸರ್ವೇಶ್ ರಾವ್ ನೇತೃತ್ವದ ‘ಟೀಮ್ ಮಂಗಳೂರು’ ಹವ್ಯಾಸಿ ಗಾಳಿಪಟ ತಂಡವು ಭಾಗವಹಿಸಲಿದೆ. ಟೀಮ್ ಮಂಗಳೂರು ತಂಡವು ಈಗಾಗಲೇ ಜಾಗತಿಕ ಮಟ್ಟದಲ್ಲಿ 12 ದೇಶಗಳ ಗಾಳಿಪಟ ಉತ್ಸವಗಳಲ್ಲಿ ಭಾರತದ ಸಾಂಸ್ಕೃತಿಕ ವಿಷಯಗಳನ್ನು ಗಾಳಿಪಟ ವಿನ್ಯಾಸವನ್ನಾಗಿ ಬಿಂಬಿಸಿ ಗಗನಕ್ಕೇರಿಸಿದೆ. ಬೃಹತ್ ಗಾಳಿಪಟಗಳನ್ನು ರಚಿಸಿ ಫ್ರಾನ್ಸ್, ಇಂಗ್ಲೆಂಡ್, ಕೆನಡಾ, ಇಟೆಲಿ, ಕೊರಿಯಾ, ಹಾಂಗ್ ಕಾಂಗ್, ಇಂಡೋನೆಷ್ಯಾ, ಕತಾರ್, ದುಬೈ, ಶ್ರೀಲಂಕಾ ಮುಂತಾದ ದೇಶಗಳಲ್ಲಿ ಭಾಗವಹಿಸಿದೆ.
ಈ ಸಲದ ಗಾಳಿಪಟ ಉತ್ಸವಕ್ಕೆ ರಥದ ವಿನ್ಯಾಸದ ಗಾಳಿಪಟ ಈಗ ತಯಾರಾಗುತ್ತಿದೆ. 18 ಅಡಿ ಎತ್ತರ 10 ಅಡಿ ಅಗಲದ ಈ ಗಾಳಿಪಟದ ಕಲಾ ವಿನ್ಯಾಸವನ್ನು ದಿನೇಶ್ ಹೊಳ್ಳ ಮಾಡಿದ್ದು ಗಾಳಿಪಟ ರಚನೆಯಲ್ಲಿ ಪ್ರಾಣೇಶ್ ಕುದ್ರೋಳಿ, ಸತೀಶ್ ರಾವ್, ಅರುಣ್ ಸಹಕರಿಸುತ್ತಿದ್ದಾರೆ. ಗಾಳಿಪಟದ ಹೊಲಿಗೆಯನ್ನು ಸರ್ವೇಶ್ ರಾವ್ ಮಾಡುತ್ತಿದ್ದಾರೆ.
ಇಡೀ ಜಗತ್ತೇ ಇಂದು ನೀರಿನ ಬಗ್ಗೆ ಬರಗಾಲವನ್ನು ಅನುಭವಿಸುತ್ತಿದೆ. ‘ನೀರು ಈ ಭುವಿಯ ಸಕಲ ಜೀವ ಸಂಕುಲಗಳ ಚೇತನಾ ಶಕ್ತಿ, ಪ್ರತೀ ನೀರಿನ ಹನಿಯೂ ತುಂಬಾ ಮಹತ್ವದ್ದು, ನೀರಿನ ಸಂರಕ್ಷಣೆಯ ಬಗ್ಗೆ ಪಲ್ಲಕ್ಕಿಯಲ್ಲಿ ನೀರಿನ ತಂಬಿಗೆಯನ್ನು ಇಟ್ಟು ನೀರು ಈ ಭುವಿಯ ಪ್ರತ್ಯಕ್ಷ ದೇವರು ಎಂಬಂತೆ ಇನ್ನೊಂದು ಗಾಳಿಪಟವನ್ನು ಮಾಡಲಾಗುತ್ತಿದೆ. ಇದರಲ್ಲಿ ಮೇಲೆ ಆಕಾಶ ಕೆಳಗೆ ಬೆಟ್ಟ ನಡುವೆ ನೀರಿನ ತಂಬಿಗೆ, ಬಾಲಂಗೋಚಿಯಲ್ಲಿ ಮರ, ಗಿಡಗಳ ಹಸಿರು ಹಂದರವನ್ನು ಮೂಡಿಸಲಾಗಿದೆ.
ಹಸಿರಿದ್ದರೆ ಉಸಿರು, ಜನರು ಎಲ್ಲರೂ!
ಕೆಳಗಡೆ ನೀರಿನ ಶೇಖರಣೆಯನ್ನು ಹಸಿರು ಪರಿಸರ ಇದ್ದರೆ ನೀರು ಸಹಜವಾಗಿಯೇ ಸಂಗ್ರಹವಾಗುತ್ತದೆ ಎಂಬ ಅರ್ಥ ಬರುವಂತೆ ವಿನ್ಯಾಸ ಮಾಡಿದ್ದಾರೆ ತಯಾರಕರು. ನೀರಿನ ಅಮೂಲ್ಯತೆಯ ಸಂದೇಶವನ್ನು ಸಾರಲಾಗಿದೆ. ರಿಪ್ ಸ್ಟಾಪ್ ನೈಲಾನ್ ಬಟ್ಟೆಯಿಂದ ಅಪ್ಲಿಕ್ ಮಾದರಿಯಲ್ಲಿ ಈ ಗಾಳಿಪಟವನ್ನು ತಯಾರಿಸಲಾಗುತ್ತಿದ್ದು ಮಂಗಳೂರಿನ ಅಶೋಕ ನಗರದ ಸರ್ವೇಶ್ ರಾವ್ ರವರ ಮನೆಯಲ್ಲಿ ಗಾಳಿಪಟ ರೂಪುಗೊಳ್ಳುತ್ತಿದೆ.
Mangalore,Dakshina Kannada,Karnataka
August 21, 2025 10:24 AM IST