Shreyas Iyer: ಏಷ್ಯಾಕಪ್​​ನಿಂದ ಹೊರಬಿದ್ದಿದ್ದ ಶ್ರೇಯಸ್​ ಅಯ್ಯರ್​ಗೆ ಗುಡ್​ನ್ಯೂಸ್​! ಟೀಕೆ ಬೆನ್ನಲ್ಲೇ ಬಿಸಿಸಿಐ ಮಹತ್ವದ ನಿರ್ಧಾರ | Not Shubman Gill, Shreyas Iyer Emerges as Front-Runner for ODI Captaincy | ಕ್ರೀಡೆ

Shreyas Iyer: ಏಷ್ಯಾಕಪ್​​ನಿಂದ ಹೊರಬಿದ್ದಿದ್ದ ಶ್ರೇಯಸ್​ ಅಯ್ಯರ್​ಗೆ ಗುಡ್​ನ್ಯೂಸ್​! ಟೀಕೆ ಬೆನ್ನಲ್ಲೇ ಬಿಸಿಸಿಐ ಮಹತ್ವದ ನಿರ್ಧಾರ | Not Shubman Gill, Shreyas Iyer Emerges as Front-Runner for ODI Captaincy | ಕ್ರೀಡೆ

Last Updated:

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಎರಡು ದಿನಗಳ ಹಿಂದೆ ಏಷ್ಯಾ ಕಪ್‌ಗಾಗಿ ಭಾರತೀಯ ತಂಡವನ್ನು ಘೋಷಿಸಿದೆ. ಒಂದು ವರ್ಷದ ನಂತರ ಶುಭ್​ಮನ್ ಗಿಲ್ ಈ ತಂಡಕ್ಕೆ ಮರಳಿದ್ದಾರೆ. ಆದರೆ ಅಯ್ಯರ್​ ಕೈಬಿಟ್ಟಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದೆ.

ಶ್ರೇಯಸ್ ಐಯರ್‌  ಶ್ರೇಯಸ್ ಐಯರ್‌
ಶ್ರೇಯಸ್ ಐಯರ್‌

ಮುಂದಿನ ತಿಂಗಳು ಯುಎಇಯಲ್ಲಿ ನಡೆಯಲಿರುವ ಏಷ್ಯಾ ಕಪ್‌ಗಾಗಿ (Asia Cup) ಘೋಷಿಸಿರುವ ಭಾರತದ ಟಿ20 (Team India T20) ತಂಡದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಆಯ್ಕೆ ಮಾಡಿಲ್ಲ. ಶ್ರೇಯಸ್ ಅಯ್ಯರ್ ಇದಕ್ಕೆ ಪ್ರತಿಕ್ರಿಯಿಸದೇ ಇದ್ದರು, ಅವರನ್ನ ತಂಡದಿಂದ ಕೈಬಿಟ್ಟಿರುವುದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು (Indian Cricket Fans) ತುಂಬಾ ಆಕ್ರೋಶಗೊಂಡಿದ್ದಾರೆ. ಇದಕ್ಕಾಗಿ ಶ್ರೇಯಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್‌ನಿಂದ ಹಿಡಿದು ಕೋಚ್ ಗೌತಮ್ ಗಂಭೀರ್‌ವರೆಗೆ (Gautam Gambhir) ಎಲ್ಲರನ್ನೂ ಗುರಿಯಾಗಿಸಿ ಟೀಕಿಸಿದ್ದಾರೆ. ಏತನ್ಮಧ್ಯೆ, ಶ್ರೇಯಸ್ ಅಯ್ಯರ್ ಅವರ ಅಭಿಮಾನಿಗಳನ್ನು ಸಂತೋಷಪಡಿಸುವ ವರದಿಯೊಂದು ಬಂದಿದೆ. ಈ ವರದಿಯ ಪ್ರಕಾರ, ಬಿಸಿಸಿಐ ಶ್ರೇಯಸ್ ಅಯ್ಯರ್ ಅವರನ್ನು ಏಕದಿನ ತಂಡದ ನಾಯಕನನ್ನಾಗಿ ಮಾಡಲು ಬಯಸುತ್ತಿದೆ ಎಂದು ತಿಳಿದಿಬಂದಿದೆ.

ಟಿ20 ತಂಡಕ್ಕೆ ಗಿಲ್​ ಉಪನಾಯಕ

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಎರಡು ದಿನಗಳ ಹಿಂದೆ ಏಷ್ಯಾ ಕಪ್‌ಗಾಗಿ ಭಾರತೀಯ ತಂಡವನ್ನು ಘೋಷಿಸಿದೆ. ಒಂದು ವರ್ಷದ ನಂತರ ಶುಭ್​ಮನ್ ಗಿಲ್ ಈ ತಂಡಕ್ಕೆ ಮರಳಿದ್ದಾರೆ. ಗಿಲ್ ತಂಡಕ್ಕೆ ಮರಳಿದ್ದು ಮಾತ್ರವಲ್ಲದೆ, ಅವರನ್ನು ತಂಡದ ಉಪನಾಯಕರನ್ನಾಗಿಯೂ ಮಾಡಲಾಗಿದೆ, ಆದರೆ ಈ ಮೊದಲು ಈ ಜವಾಬ್ದಾರಿಯನ್ನು ಅಕ್ಷರ್ ಪಟೇಲ್ ನಿರ್ವಹಿಸುತ್ತಿದ್ದರು. ಅಕ್ಷರ್ ಇರುವಾಗ ಗಿಲ್ ಅವರನ್ನು ಉಪನಾಯಕನನ್ನಾಗಿ ಮಾಡುವುದರಿಂದ ಹಲವು ಅರ್ಥಗಳನ್ನು ಕಲ್ಪಿಸಲಾಗುತ್ತಿದೆ. ಇವುಗಳಲ್ಲಿ ಒಂದು, ಮಂಡಳಿಯು ಮೂರು ಸ್ವರೂಪಗಳ ನಾಯಕತ್ವವನ್ನು ಗಿಲ್‌ಗೆ ಹಸ್ತಾಂತರಿಸಲು ಬಯಸುತ್ತಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಅಯ್ಯರ್​ಗೆ ನಾಯಕತ್ವ

ಏತನ್ಮಧ್ಯೆ, ‘ದೈನಿಕ್ ಜಾಗರಣ್’ ಪತ್ರಿಕೆಯ ವರದಿಯ ಪ್ರಕಾರ, ಬಿಸಿಸಿಐ ರೋಹಿತ್​ ಶರ್ಮಾ ಅವರ ಏಕದಿನ ನಾಯಕತ್ವದ ಉತ್ತರಾಧಿಕಾರಿಯಾಗಿ ಅಯ್ಯರ್ ಅವರನ್ನು ನೋಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಔಪಚಾರಿಕ ಮತ್ತು ಅನೌಪಚಾರಿಕ ಚರ್ಚೆಗಳು ನಡೆದಿವೆ. ಭಾರತ ತಂಡದ ಬಿಡುವಿಲ್ಲದ ವೇಳಾಪಟ್ಟಿಯನ್ನು ಗಮನಿಸಿದರೆ, ತಂಡದ ನಾಯಕತ್ವದ ಜವಾಬ್ದಾರಿಯನ್ನು ಯಾವುದೇ ಒಬ್ಬ ಆಟಗಾರನ ಮೇಲೆ ಹಾಕಲು ಬಿಸಿಸಿಐ ಸಿದ್ಧವಿಲ್ಲ.

ಟಿ20ಗೂ ಗಿಲ್ ನಾಯಕ?

ಶುಭ್​ಮನ್ ಗಿಲ್ ಪ್ರಸ್ತುತ ಟೆಸ್ಟ್ ತಂಡದ ನಾಯಕರಾಗಿದ್ದಾರೆ. ಭಾರತೀಯ ಟಿ20 ತಂಡದ ನಾಯಕತ್ವಕ್ಕೆ ಸೂರ್ಯಕುಮಾರ್ ಅವರ ಉತ್ತರಾಧಿಕಾರಿಯಾಗುವ ಸ್ಪರ್ಧೆಯಲ್ಲೂ ಅವರು ಇದ್ದಾರೆ. ಭಾರತೀಯ ತಂಡ ನಿರಂತರವಾಗಿ ಕ್ರಿಕೆಟ್ ಆಡುತ್ತದೆ. ಕೆಲಸದ ಹೊರೆ ನಿರ್ವಹಿಸಲು ಇಬ್ಬರು ವಿಭಿನ್ನ ನಾಯಕರನ್ನು ಹೊಂದಿರುವುದು ಮಂಡಳಿಯ ಆಲೋಚನೆಯಾಗಿದೆ. ಇದರರ್ಥ ಗಿಲ್ ಮೂರು ಸ್ವರೂಪಗಳ ನಾಯಕರಾಗಲು ಸಾಧ್ಯವಿಲ್ಲ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Shreyas Iyer: ಏಷ್ಯಾಕಪ್​​ನಿಂದ ಹೊರಬಿದ್ದಿದ್ದ ಶ್ರೇಯಸ್​ ಅಯ್ಯರ್​ಗೆ ಗುಡ್​ನ್ಯೂಸ್​! ಟೀಕೆ ಬೆನ್ನಲ್ಲೇ ಬಿಸಿಸಿಐ ಮಹತ್ವದ ನಿರ್ಧಾರ