Asia Cup: ಭಾರತ-ಪಾಕಿಸ್ತಾನ ಏಷ್ಯಾ ಕಪ್​ ಕದನದ ಸಸ್ಪೆನ್ಸ್​​ ಅಂತ್ಯ! ಕ್ರೀಡಾ ಸಚಿವಾಲಯದಿಂದ ಹೊರಬಿತ್ತು ಪ್ರಮುಖ ಘೋಷಣೆ | Government Clears India-Pakistan Match in Asia Cup 2025, But Bilateral Ties Remain Severed | ಕ್ರೀಡೆ

Asia Cup: ಭಾರತ-ಪಾಕಿಸ್ತಾನ ಏಷ್ಯಾ ಕಪ್​ ಕದನದ ಸಸ್ಪೆನ್ಸ್​​ ಅಂತ್ಯ! ಕ್ರೀಡಾ ಸಚಿವಾಲಯದಿಂದ ಹೊರಬಿತ್ತು ಪ್ರಮುಖ ಘೋಷಣೆ | Government Clears India-Pakistan Match in Asia Cup 2025, But Bilateral Ties Remain Severed | ಕ್ರೀಡೆ

Last Updated:

ಏಪ್ರಿಲ್-ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಗಡಿಯಾಚೆಗಿನ ಉದ್ವಿಗ್ನತೆ ಮತ್ತು ಹಲವಾರು ಮುಗ್ದ ಜನರ ಸಾವಿನ ಹಿನ್ನೆಲೆಯಲ್ಲಿ ಕೆಲವರು ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡದಂತೆ ಬಹಿಷ್ಕರಿಸುವಂತೆ ಒತ್ತಾಯಿಸಿದ್ದರು. ಆದರೆ, ಬಿಸಿಸಿಐ ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ತೀರ್ಮಾನಿಸಿತ್ತು. ಇದೀಗ ಕ್ರೀಡಾ ಸಚಿವಾಲಯ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದೆ.

ಭಾರತ  vs ಪಾಕಿಸ್ತಾನ್ಭಾರತ  vs ಪಾಕಿಸ್ತಾನ್
ಭಾರತ vs ಪಾಕಿಸ್ತಾನ್

2025ರ ಏಷ್ಯಾ ಕಪ್‌ನ (Asia cup) ಭಾರತ-ಪಾಕಿಸ್ತಾನ (India vs Pakistan) ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಭಾರತ ಸರ್ಕಾರವು ಗುರುವಾರ ಹಸಿರು ನಿಶಾನೆ ತೋರಿಸಿದೆ. ಈ ಪಂದ್ಯವು ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ. ಕೇಂದ್ರ ಕ್ರೀಡಾ ಸಚಿವಾಲಯವು ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧಗಳ ಕುರಿತು ಹೊಸ ನೀತಿಯನ್ನು ಘೋಷಿಸಿದೆ. ಇದರ ಪ್ರಕಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಅನುಮತಿ ಪಡೆದಿದೆ. ಆದರೆ, ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳು (ಎರಡು ದೇಶಗಳ ನಡುವಿನ ಪಂದ್ಯಾವಳಿಗಳು) ಇನ್ನೂ ಸ್ಥಗಿತಗೊಂಡಿರುತ್ತವೆ.

ಕೇಂದ್ರ ಸರ್ಕಾರದ ಹೊಸ ನೀತಿ

ಕ್ರೀಡಾ ಸಚಿವಾಲಯದ ಹೊಸ ನೀತಿಯು ತಕ್ಷಣದಿಂದ ಜಾರಿಗೆ ಬಂದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ನೀತಿಯು ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧಗಳ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದೆ. ಏಪ್ರಿಲ್-ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಗಡಿಯಾಚೆಗಿನ ಉದ್ವಿಗ್ನತೆ ಮತ್ತು ಹಲವಾರು ಮುಗ್ದ ಜನರ ಸಾವಿನ ಹಿನ್ನೆಲೆಯಲ್ಲಿ ಕೆಲವರು ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡದಂತೆ ಬಹಿಷ್ಕರಿಸುವಂತೆ ಒತ್ತಾಯಿಸಿದ್ದರು. ಆದರೆ, ಬಿಸಿಸಿಐ ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ತೀರ್ಮಾನಿಸಿತ್ತು.

ಸರ್ಕಾರ ಹೇಳಿದ್ದೇನು?

ಭಾರತೀಯ ತಂಡಗಳು ಭವಿಷ್ಯದಲ್ಲಿ ಪಾಕಿಸ್ತಾನದಲ್ಲಿ ಆಡುವುದಿಲ್ಲ, ಮತ್ತು ಪಾಕಿಸ್ತಾನದ ತಂಡಗಳಿಗೆ ಭಾರತದಲ್ಲಿ ಆಡಲು ಅನುಮತಿಯಿಲ್ಲ. ಅಲ್ಲದೆ ಎರಡೂ ತಂಡಗಳ ನಡುವೆ ಯಾವುದೇ ಸ್ಥಳದಲ್ಲೂ ದ್ವಿಪಕ್ಷೀಯ ಸರಣಿ ನಡೆಯುವುದಿಲ್ಲ. ಆದರೆ ಎರಡೂ ತಂಡಗಳು ಬಹುರಾಷ್ಟ್ರೀಯ ಪಂದ್ಯಾವಳಿಗಳಿಗೆ ಅನುಮತಿ ನೀಡಲಾಗಿದೆ. ಏಷ್ಯಾ ಕಪ್, ವಿಶ್ವಕಪ್‌ನಂತಹ ಬಹುರಾಷ್ಟ್ರೀಯ ಟೂರ್ನಮೆಂಟ್‌ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾಗವಹಿಸಬಹುದು. ಇದರಂತೆ, ಭಾರತದಲ್ಲಿ ಆಯೋಜಿಸಲಾಗುವ ಬಹುರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮಗಳಲ್ಲಿ ಪಾಕಿಸ್ತಾನದ ಆಟಗಾರರು ಕೂಡ ಆಡಬಹುದಾಗಿದೆ.

ಎಲ್ಲಾ ಕ್ರೀಡೆಗಳಲ್ಲೂ ದ್ವಿಪಕ್ಷೀಯ ಸರಣಿ ಇಲ್ಲ

ಕೇಂದ್ರ ಸರ್ಕಾರದ ಹೊಸ ನೀತಿ ಕೇವಲ ಕ್ರಿಕೆಟ್​ಗೆ ಆಟಕ್ಕೆ ಮಾತ್ರವಲ್ಲ, ಹಾಕಿ, ಟೆನಿಸ್ ಸೇರಿ ವಿವಿಧ ಕ್ರೀಡೆಗಳಿಗೂ ಅನ್ವಯಿಸುತ್ತದೆ ಎಂದು ಕೇಂದ್ರ ಕ್ರೀಡಾ ಸಚಿವಾಲಯ ತಿಳಿಸಿದೆ. ಈ ಹಿಂದೆ ಕ್ರಿಕೆಟ್ ಹೊರತುಪಡಿಸಿ ಇತರೆ ಕ್ರೀಡೆಗಳ ಕ್ರೀಡಾಪಟುಗಳು ಪಾಕಿಸ್ತಾನಕ್ಕೆ ತೆರಳಿದ್ದವು. ಅತ್ತ ಪಾಕ್ ಕ್ರೀಡಾಪಟುಗಳು ಕೂಡ ಇಲ್ಲಿದೆ ಆಗಮಿಸಿದ್ದರು. ಆದರೆ ಇನ್ನುಮುಂದೆ ಈ ದ್ವಿಪಕ್ಷೀಯ ಕ್ರೀಡಾಪಂದ್ಯಗಳನ್ನ ಕ್ರೀಡಾ ಸಚಿವಾಲಯ ನಿಷೇಧಿಸಿದೆ.

ಏಷ್ಯಾ ಕಪ್ 2025ರ ವಿವರ

ಏಷ್ಯಾ ಕಪ್ 2025 ಒಟ್ಟು ಎಂಟು ತಂಡಗಳನ್ನು ಒಳಗೊಂಡಿದ್ದು, ಭಾರತ ಮತ್ತು ಪಾಕಿಸ್ತಾನ ಗ್ರೂಪ್ A ರಲ್ಲಿ ಸ್ಥಾನ ಪಡೆದಿವೆ. ಟೂರ್ನಮೆಂಟ್‌ನ ಸ್ವರೂಪದ ಪ್ರಕಾರ, ಈ ಎರಡು ತಂಡಗಳು ಒಂದೇ ಗ್ರೂಪ್‌ನಿಂದ ಸೂಪರ್-ಫೋರ್‌ಗೆ ತೇರ್ಗಡೆಯಾದರೆ ಮತ್ತು ಫೈನಲ್‌ನಲ್ಲಿ ಮುಖಾಮುಖಿಯಾದರೆ, ಕೆಲವೇ ದಿನಗಳಲ್ಲಿ ಮೂರು ಬಾರಿ ಆಡುವ ಸಾಧ್ಯತೆ ಇದೆ. ಇದು ಪ್ರಸಾರಕರು ಮತ್ತು ಏಷಿಯನ್ ಕ್ರಿಕೆಟ್ ಕೌನ್ಸಿಲ್ (ACC) ಗೆ ದೊಡ್ಡ ಮೊತ್ತದ ಆದಾಯವನ್ನು ತರುತ್ತದೆ.

ಭಾರತ-ಪಾಕಿಸ್ತಾನ ಪಂದ್ಯದ ಪ್ರಾಮುಖ್ಯತೆ

ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳು ಕೇವಲ ಕ್ರೀಡೆಗಿಂತ ಹೆಚ್ಚಿನದನ್ನು ಪ್ರತಿನಿಧಿಸುತ್ತವೆ. ಈ ಪಂದ್ಯಗಳು ದೊಡ್ಡ ಪ್ರಮಾಣದ ಪ್ರೇಕ್ಷಕರನ್ನು ಆಕರ್ಷಿಸುವುದರಿಂದ, ಏಷಿಯನ್ ಕ್ರಿಕೆಟ್ ಕೌನ್ಸಿಲ್‌ಗೆ ಆರ್ಥಿಕವಾಗಿ ಮಹತ್ವದ್ದಾಗಿವೆ. ACC ಯ ಅನೇಕ ಗ್ರಾಸ್‌ರೂಟ್‌ ಕಾರ್ಯಕ್ರಮಗಳು (ಕಿರಿಯ ಕ್ರಿಕೆಟ್‌ಗೆ ಸಂಬಂಧಿಸಿದ ಯೋಜನೆಗಳು) ಈ ಪಂದ್ಯಗಳ ಆದಾಯದ ಮೇಲೆ ಅವಲಂಬಿತವಾಗಿವೆ. ಆದರೆ, ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಗಡಿಯಾಚೆಗಿನ ಶಾಂತಿಯಾಗುವವರೆಗೆ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳನ್ನು ಆಡಬಾರದು ಎಂದು ಹೇಳಿದ್ದರು. ಆದರೂ ಭಾರತ ಕ್ರೀಡಾ ಸಚಿವಾಲಯ ಬಹುತಂಡಗಳ ಟೂರ್ನಮೆಂಟ್​​ನಲ್ಲಿ ಆಡಲು ಅವಕಾಶ ನೀಡಿರುವುದು ಕ್ರಿಕೆಟ್ ಮಂಡಳಿಗೆ ನೆಮ್ಮದಿ ತಂದಿದೆ.

ವೀಸಾ ಸರಳೀಕರಣ

ಹೊಸ ನೀತಿಯು ಭಾರತವನ್ನು ಅಂತಾರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮಗಳ ಆಯೋಜನೆಗೆ ಆದ್ಯತೆಯ ತಾಣವನ್ನಾಗಿಸಲು ವೀಸಾ ಕಾರ್ಯವಿಧಾನವನ್ನು ಸರಳಗೊಳಿಸುವ ಭರವಸೆಯನ್ನು ನೀಡಿದೆ. ಇದರಿಂದ ಭಾರತದಲ್ಲಿ ಬಹುರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್‌ಗಳನ್ನು ಆಯೋಜಿಸಲು ಸುಲಭವಾಗಲಿದೆ.