Last Updated:
WhatsApp Banking Service: ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ಸೇವೆಗಳು ಅತ್ಯಂತ ಸುಲಭವಾಗುತ್ತಿವೆ. ಹಿಂದಿನಂತೆ ಪ್ರತಿಯೊಂದು ಸಣ್ಣ ಕೆಲಸಕ್ಕಾಗಿ ಸರ್ಕಾರಿ ಅಥವಾ ಖಾಸಗಿ ಬ್ಯಾಂಕುಗಳ ಶಾಖೆಗಳಿಗೆ ಹೋಗಬೇಕಾಗಿಲ್ಲ. ಈಗ WhatsApp ಮೂಲಕಲೇ ಹಲವಾರು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಗ್ರಾಹಕರಿಗೆ ಸಮಯ ಉಳಿತಾಯವಾಗುವುದರ ಜೊತೆಗೆ, ಸುಲಭವಾದ ಅನುಭವ ಸಿಗುತ್ತದೆ. ಹಾಗಾಗಿ, ಪ್ರಮುಖ ಬ್ಯಾಂಕುಗಳು WhatsApp ಬ್ಯಾಂಕಿಂಗ್ ಸೇವೆಯ ಕುರಿತು ಮಾಹಿತಿ ಇಲ್ಲಿದೆ:
WhatsApp Banking Service: ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ಸೇವೆಗಳು ಅತ್ಯಂತ ಸುಲಭವಾಗುತ್ತಿವೆ. ಹಿಂದಿನಂತೆ ಪ್ರತಿಯೊಂದು ಸಣ್ಣ ಕೆಲಸಕ್ಕಾಗಿ ಸರ್ಕಾರಿ ಅಥವಾ ಖಾಸಗಿ ಬ್ಯಾಂಕುಗಳ ಶಾಖೆಗಳಿಗೆ ಹೋಗಬೇಕಾಗಿಲ್ಲ. ಈಗ WhatsApp ಮೂಲಕಲೇ ಹಲವಾರು ಬ್ಯಾಂಕಿಂಗ್ ಸೇವೆಗಳನ್ನು (Banking service) ಪಡೆಯಬಹುದು. ಗ್ರಾಹಕರಿಗೆ ಸಮಯ ಉಳಿತಾಯವಾಗುವುದರ ಜೊತೆಗೆ, ಸುಲಭವಾದ ಅನುಭವ ಸಿಗುತ್ತದೆ. ಹಾಗಾಗಿ, ಪ್ರಮುಖ ಬ್ಯಾಂಕುಗಳು WhatsApp Banking service ಕುರಿತು ಮಾಹಿತಿ ಇಲ್ಲಿದೆ:
ಹೌದು, WhatsApp ಸೇವೆಯ ಮೂಲಕ ಖಾತೆದಾರರು ಕೇವಲ ಒಂದು ಸಂದೇಶದ ಮೂಲಕ ಬ್ಯಾಲೆನ್ಸ್ ವಿಚಾರಿಸಬಹುದು, ಮಿನಿ ಸ್ಟೇಟ್ಮೆಂಟ್ ಪಡೆಯಬಹುದು, ಚೆಕ್ಬುಕ್ ವಿನಂತಿ ಮಾಡಬಹುದು ಹಾಗೂ ಹತ್ತಿರದ ATM ಅಥವಾ ಶಾಖೆಯನ್ನು ಹುಡುಕಬಹುದು. WhatsApp ಬ್ಯಾಂಕಿಂಗ್ 24×7 ಲಭ್ಯವಿರುವುದರಿಂದ ಗ್ರಾಹಕರು ಯಾವುದೇ ಸಮಯದಲ್ಲಿ ಬಳಸಿಕೊಳ್ಳಬಹುದು.
WhatsApp ಬ್ಯಾಂಕಿಂಗ್ನಲ್ಲಿ ಲಭ್ಯವಿರುವ ಸೇವೆಗಳು:
WhatsApp ಮೂಲಕ ಹೆಚ್ಚಿನ ಬ್ಯಾಂಕುಗಳು ಈ ಕೆಳಗಿನ ಸೇವೆಗಳನ್ನು ಒದಗಿಸುತ್ತವೆ:
- ಖಾತೆ ಬ್ಯಾಲೆನ್ಸ್ ಪರಿಶೀಲನೆ
- ಮಿನಿ ಸ್ಟೇಟ್ಮೆಂಟ್ (ಕೊನೆಯ 5 ವಹಿವಾಟುಗಳವರೆಗೆ)
- ಚೆಕ್ಬುಕ್ ವಿನಂತಿ ಮತ್ತು ಅದರ ಸ್ಥಿತಿ
- ಹತ್ತಿರದ ATM ಮತ್ತು ಶಾಖೆ ಲೊಕೇಟರ್
- ಕ್ರೆಡಿಟ್ ಕಾರ್ಡ್ ಸೇವೆಗಳು (ಖಾತೆ ಸಾರಾಂಶ, ಬಾಕಿ ಮೊತ್ತ, ರಿವಾರ್ಡ್ ಪಾಯಿಂಟ್ಗಳು)
- FD ವಿವರಗಳು, ಸಾಲ ವಿವರಗಳು ಮತ್ತು ಕಾರ್ಡ್ ಬ್ಲಾಕ್ ಸೇವೆಗಳು (ಕೆಲವು ಬ್ಯಾಂಕುಗಳಲ್ಲಿ ಮಾತ್ರ)
ಪ್ರತಿ ಬ್ಯಾಂಕ್ ತನ್ನದೇ ಆದ WhatsApp ಬ್ಯಾಂಕಿಂಗ್ ನಂಬರ್ ಹೊಂದಿರುತ್ತದೆ. ಗ್ರಾಹಕರು ಆ ಸಂಖ್ಯೆಗೆ “Hi” ಅಥವಾ “Hello” ಎಂದು ಸಂದೇಶ ಕಳುಹಿಸಿದರೆ, ತಕ್ಷಣವೇ ಮೆನು ತೆರೆಯುತ್ತದೆ. ನಂತರ ಬೇಕಾದ ಸೇವೆಯನ್ನು ಆಯ್ಕೆ ಮಾಡಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಎಂದರೆ WhatsApp ಖಾತೆ ಸಂಖ್ಯೆ ನಿಮ್ಮ ಬ್ಯಾಂಕ್ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಯೇ ಆಗಿರಬೇಕು.
ವಾಟ್ಸಪ್ ಬ್ಯಾಂಕಿಂಗ್ ಸೇವೆಯ ವಿಶೇಷತೆ:
- 24×7 ಲಭ್ಯತೆ – ಯಾವಾಗ ಬೇಕಾದರೂ ಬಳಸಬಹುದು
- ಶಾಖೆಗೆ ಹೋಗಬೇಕಾಗಿಲ್ಲ, ಅಪ್ಲಿಕೇಶನ್ ಡೌನ್ಲೋಡ್ ಅಗತ್ಯವಿಲ್ಲ
- ತ್ವರಿತ ಸೇವೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಹೆಚ್ಚು ಉಪಯುಕ್ತ
- WhatsApp ನ end-to-end encryption ಮೂಲಕ ಸುರಕ್ಷತೆ
ಪ್ರಮುಖ ಬ್ಯಾಂಕುಗಳ WhatsApp ಸಂಖ್ಯೆಗಳು
- ಎಸ್ಬಿಐ ವಾಟ್ಸಪ್ ಬ್ಯಾಂಕಿಂಗ್ ಸಂಖ್ಯೆ: 90226 90226
- ಐಸಿಐಸಿಐ ವಾಟ್ಸಪ್ ಬ್ಯಾಂಕಿಂಗ್ ಸಂಖ್ಯೆ: 86400 86400
- ಆಕ್ಸಿಸ್ ಬ್ಯಾಂಕ್ ವಾಟ್ಸಪ್ ಬ್ಯಾಂಕಿಂಗ್ ಸಂಖ್ಯೆ: 70361 91300
- ಬ್ಯಾಂಕ್ ಆಫ್ ಬರೋಡಾ ವಾಟ್ಸಪ್ ಬ್ಯಾಂಕಿಂಗ್ ಸಂಖ್ಯೆ: 84338 88777
- ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ವಾಟ್ಸಪ್ ಸಂಖ್ಯೆ: 92640 92640
- ಎಚ್ಡಿಎಫ್ಸಿ ವಾಟ್ಸಪ್ ಬ್ಯಾಂಕಿಂಗ್ ಸಂಖ್ಯೆ: 70700 22222
- ಕೆನರಾ ಬ್ಯಾಂಕ್ ವಾಟ್ಸಪ್ ಬ್ಯಾಂಕಿಂಗ್ ಸಂಖ್ಯೆ: 90155 52222
ಗಮನದಲ್ಲಿಡಬೇಕಾದ ವಿಷಯಗಳು
- ಯಾವಾಗಲೂ ಬ್ಯಾಂಕಿನ ಅಧಿಕೃತ (green tick ಇರುವ) WhatsApp ನಂಬರ್ ಬಳಸಬೇಕು
- ಅನುಮಾನಾಸ್ಪದ ಲಿಂಕ್ಗಳಿಗೆ ಪ್ರತಿಕ್ರಿಯಿಸಬಾರದು
- ಈ ಸೇವೆಯಲ್ಲಿ ಹಣ ವರ್ಗಾವಣೆ (Fund Transfer) ಸಾಧ್ಯವಿಲ್ಲ, ಮಾಹಿತಿ ಪಡೆಯಲು ಮಾತ್ರ ಬಳಸಬೇಕು
ಹಾಗಾಗಿ, ಈ WhatsApp ಬ್ಯಾಂಕಿಂಗ್ ಭಾರತದ ಕೋಟ್ಯಂತರ ಗ್ರಾಹಕರಿಗೆ ಅತ್ಯಂತ ಅನುಕೂಲಕರ ಮಾರ್ಗವಾಗಿ ಬೆಳೆಯುತ್ತಿದೆ. SBI, ICICI, Axis, PNB, Bank of Baroda, HDFC ಮತ್ತು Canara Bank ಮುಂತಾದ ಪ್ರಮುಖ ಬ್ಯಾಂಕುಗಳು ಈಗಾಗಲೇ ಈ ಸೇವೆಯನ್ನು ಒದಗಿಸುತ್ತಿವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಬ್ಯಾಂಕುಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ಇದರ ಮೂಲಕ ಜನರು ಸರ್ಕಾರಿ ಬ್ಯಾಂಕುಗಳಿಗೆ ಭೇಟಿ ನೀಡುವ ತೊಂದರೆಯಿಂದ ಮುಕ್ತರಾಗಿ, ತಮ್ಮ ಸಣ್ಣ ದೊಡ್ಡ ಬ್ಯಾಂಕಿಂಗ್ ಕೆಲಸಗಳನ್ನು ಕೇವಲ ಒಂದು WhatsApp ಸಂದೇಶದ ಮೂಲಕ ಮುಗಿಸಬಹುದು.
August 22, 2025 4:55 PM IST