Women’s World Cup: ಕನ್ನಡಿಗರಿಗಿಲ್ಲ 2025ರ ಮಹಿಳಾ ಏಕದಿನ ವಿಶ್ವಕಪ್ ನೋಡುವ ಸೌಭಾಗ್ಯ! ಪರಿಷ್ಕೃತ ವೇಳಾಪಟ್ಟಿಯಲ್ಲಿ ಬೆಂಗಳೂರಿನ ಪಂದ್ಯ ಎತ್ತಂಗಡಿ ಮಾಡಿದ ಐಸಿಸಿ | Mumbai’s Wankhede Stadium to Host ICC Women’s World Cup 2025 Matches Instead of Bengaluru | ಕ್ರೀಡೆ

Women’s World Cup: ಕನ್ನಡಿಗರಿಗಿಲ್ಲ 2025ರ ಮಹಿಳಾ ಏಕದಿನ ವಿಶ್ವಕಪ್ ನೋಡುವ ಸೌಭಾಗ್ಯ! ಪರಿಷ್ಕೃತ ವೇಳಾಪಟ್ಟಿಯಲ್ಲಿ ಬೆಂಗಳೂರಿನ ಪಂದ್ಯ ಎತ್ತಂಗಡಿ ಮಾಡಿದ ಐಸಿಸಿ | Mumbai’s Wankhede Stadium to Host ICC Women’s World Cup 2025 Matches Instead of Bengaluru | ಕ್ರೀಡೆ
ಕಾಲ್ತುಳಿತದಲ್ಲಿ ಪ್ರಕರಣದ ಪರಿಣಾಮ

ಐಪಿಎಲ್ 2025 (IPL) ಆವೃತ್ತಿ ಗೆದ್ದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿಜಯೋತ್ಸವ ಆಚರಿಸುತ್ತಿದ್ದಾಗ ಕಾಲ್ತುಳಿತ ಸಂಭವಿಸಿ ಅನೇಕ ಅಭಿಮಾನಿಗಳು ಪ್ರಾಣಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ, RCB ಆಡಳಿತ ಮಂಡಳಿ ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದವು. ಈ ವಿಷಯದ ತನಿಖೆಯಲ್ಲಿ RCB ಸಂಪೂರ್ಣವಾಗಿ ತಪ್ಪಿತಸ್ಥ ಎಂದು ತಿಳಿದುಬಂದಿತ್ತು.

ನವಿ ಮುಂಬೈಗೆ ಸ್ಥಳಾಂತರ

ಕಾಲ್ತುಳಿತ ಘಟನೆಯ ನಂತರ, ಕರ್ನಾಟಕ ಸರ್ಕಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲು ಅನುಮತಿ ನಿರಾಕರಿಸಿತು. ಈ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ನಡೆಯಬೇಕಿದ್ದ ಎಲ್ಲಾ ಪಂದ್ಯಗಳನ್ನು ನವಿ ಮುಂಬೈನಲ್ಲಿ ಆಯೋಜಿಸಲು ICC ನಿರ್ಧರಿಸಿದೆ.

ಇತ್ತೀಚಿನ ICC ಪ್ರಕಟಣೆಯ ಪ್ರಕಾರ, ನವಿ ಮುಂಬೈನ DY ಪಾಟೀಲ್ ಕ್ರೀಡಾಂಗಣವು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐದು ಪಂದ್ಯಗಳನ್ನು ಆಯೋಜಿಸುತ್ತದೆ. ಲೀಗ್ ಹಂತದ ಮೂರು, ಸೆಮಿಫೈನಲ್ ಮತ್ತು ಫೈನಲ್ ಸಹ ಇಲ್ಲಿ ನಡೆಯುವ ಸಾಧ್ಯತೆಯಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗಿನ ಒಪ್ಪಂದದ ಪ್ರಕಾರ, ಮಹಿಳಾ ತಂಡವು ಶ್ರೀಲಂಕಾದ ಕೊಲಂಬೊದಲ್ಲಿ ತನ್ನ ಪಂದ್ಯಗಳನ್ನು ಆಡುತ್ತದೆ, ಇದು ತಟಸ್ಥ ಸ್ಥಳವಾಗಿದೆ.

ಪಾಕಿಸ್ತಾನ ತಂಡ ಫೈನಲ್ ತಲುಪಿದರೆ ಏನು?

ಪಾಕಿಸ್ತಾನ ತಂಡ ಫೈನಲ್ ತಲುಪಿದರೆ, ಪ್ರಶಸ್ತಿ ಹೋರಾಟವನ್ನು ನವಿ ಮುಂಬೈ ಬದಲಿಗೆ ಕೊಲಂಬೊದಲ್ಲಿ ನಡೆಸಲಾಗುತ್ತದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಭಾರತ vs ಶ್ರೀಲಂಕಾ, ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಮತ್ತು ಭಾರತ vs ಬಾಂಗ್ಲಾದೇಶ ಪಂದ್ಯಗಳನ್ನು ನವಿ ಮುಂಬೈನಲ್ಲಿ ನಡೆಸಲಾಗುತ್ತದೆ.

ODI ವಿಶ್ವಕಪ್-2025 ರಲ್ಲಿ ಟೀಮ್ ಇಂಡಿಯಾ ಪರಿಸ್ಕೃತ ವೇಳಾಪಟ್ಟಿ

ಸೆಪ್ಟೆಂಬರ್ 30- ಭಾರತ vs. ಶ್ರೀಲಂಕಾ- ಗುವಾಹಟಿ

ಅಕ್ಟೋಬರ್ 5- ಭಾರತ vs. ಪಾಕಿಸ್ತಾನ- ಕೊಲಂಬೊ

ಅಕ್ಟೋಬರ್ 9- ಭಾರತ vs. ದಕ್ಷಿಣ ಆಫ್ರಿಕಾ- ವಿಶಾಖಪಟ್ಟಣ

ಅಕ್ಟೋಬರ್ 12- ಭಾರತ vs. ಆಸ್ಟ್ರೇಲಿಯಾ- ವಿಶಾಖಪಟ್ಟಣಂ

ಅಕ್ಟೋಬರ್ 19- ಭಾರತ vs. ಇಂಗ್ಲೆಂಡ್- ಇಂದೋರ್

ಅಕ್ಟೋಬರ್ 23- ಭಾರತ vs. ನ್ಯೂಜಿಲೆಂಡ್- ನವಿ ಮುಂಬೈ

ಅಕ್ಟೋಬರ್ 26- ಭಾರತ vs. ಬಾಂಗ್ಲಾದೇಶ- ನವಿ ಮುಂಬೈ.

ನಾಕೌಟ್ ಹಂತದ ವೇಳಾಪಟ್ಟಿ

ಅಕ್ಟೋಬರ್ 29- ಸೆಮಿಫೈನಲ್ 1- ಕೊಲಂಬೊ/ಗುವಾಹಟಿ

ಅಕ್ಟೋಬರ್ 30- ಸೆಮಿ-ಫೈನಲ್ 2- ನವಿ ಮುಂಬೈ

ನವೆಂಬರ್ 2- ಫೈನಲ್- ಕೊಲಂಬೊ/ನವಿ ಮುಂಬೈ

2025ರ ODI ವಿಶ್ವಕಪ್‌ಗೆ ಭಾರತ ಮಹಿಳಾ ಕ್ರಿಕೆಟ್ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ಯಾಸ್ತಿಕಾ ಭಾಟಿಯಾ, ಅರುಂಧತಿ ರೆಡ್ಡಿ,ಕ್ರಾಂತಿ ಗೌಡ್, ರಿಚಾ ಘೋಷ್, ಅಮಂಜೋತ್ ಕೌರ್, ರಾಧಾ ಯಾದವ್, ರೇಣುಕಾ ಠಾಕೂರ್, ಶ್ರೀಚರಣಿ,

ಸ್ಟ್ಯಾಂಡ್‌ಬೈ: ಸಯಾಲಿ ಸತ್ಘರೆ, ತೇಜಲ್ ಹಸಾಬ್ನಿಸ್, ಪ್ರೇಮಾ ರಾವತ್, ಪ್ರಿಯಾ ಮಿಶ್ರಾ, ಉಮಾ ಛೆಟ್ರಿ, ಮಿನ್ನು ಮಣಿ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Women’s World Cup: ಕನ್ನಡಿಗರಿಗಿಲ್ಲ 2025ರ ಏಕದಿನ ವಿಶ್ವಕಪ್ ನೋಡುವ ಸೌಭಾಗ್ಯ! ಪರಿಷ್ಕೃತ ವೇಳಾಪಟ್ಟಿಯಲ್ಲಿ ಬೆಂಗಳೂರಿನ ಪಂದ್ಯ ಎತ್ತಂಗಡಿ ಮಾಡಿದ ಐಸಿಸಿ