Ross Taylor: ಕೊಹ್ಲಿ-ರೋಹಿತ್ ನೋಡಲು ಕ್ರಿಕೆಟ್​ ಜಗತ್ತು ಬಯಸುತ್ತದೆ! ನಿವೃತ್ತಿ ನಿರ್ಧಾರ ಮಾಡಬಾರದೆಂದ ಕಿವೀಸ್ ಲೆಜೆಂಡ್ | Ross Taylor Backs Rohit Sharma and Virat Kohli to Play 2027 ODI World Cup | ಕ್ರೀಡೆ

Ross Taylor: ಕೊಹ್ಲಿ-ರೋಹಿತ್ ನೋಡಲು ಕ್ರಿಕೆಟ್​ ಜಗತ್ತು ಬಯಸುತ್ತದೆ! ನಿವೃತ್ತಿ ನಿರ್ಧಾರ ಮಾಡಬಾರದೆಂದ ಕಿವೀಸ್ ಲೆಜೆಂಡ್ | Ross Taylor Backs Rohit Sharma and Virat Kohli to Play 2027 ODI World Cup | ಕ್ರೀಡೆ

Last Updated:

ರೋಹಿತ್ ಮತ್ತು ಕೊಹ್ಲಿ ಅವರ ಏಕದಿನ ಭವಿಷ್ಯದ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ, ರೋಹಿತ್ ಮತ್ತು ವಿರಾಟ್ ಫಿಟ್ ಆಗಿದ್ದಾರೆ ಮತ್ತು ರನ್ ಗಳಿಸುತ್ತಿದ್ದಾರೆ. ಆದರೆ ಇಬ್ಬರು ಆಟಗಾರರು ಕುಟುಂಬಗಳನ್ನು ಹೊಂದಿದ್ದಾರೆ ಮತ್ತು ದೀರ್ಘಕಾಲ ಮನೆಯಿಂದ ದೂರ ಇರುವುದು ಆಟಗಾರರಿಗೆ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು. ಅಂದರೆ ಇತರೆ ಮಾದರಿಯಿಂದ ಹೊರಗುಳಿಯುವ ನಿರ್ಧಾರವನ್ನ ಒಪ್ಪಿಕೊಂಡಿದ್ದಾರೆ.

ರೋಹಿತ್- ಕೊಹ್ಲಿರೋಹಿತ್- ಕೊಹ್ಲಿ
ರೋಹಿತ್- ಕೊಹ್ಲಿ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಅಂತರರಾಷ್ಟ್ರೀಯ ನಿವೃತ್ತಿಯ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ, ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ರಾಸ್ ಟೇಲರ್ (Ross Taylor), ಕೊಹ್ಲಿ ಮತ್ತು ರೋಹಿತ್ 2027ರ ಏಕದಿನ ವಿಶ್ವಕಪ್‌ವರೆಗೆ ಆಡುವುದನ್ನು ಮುಂದುವರಿಸಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ ಎಂದು ತಿಳಿಸಿದ್ದಾರೆ. ಇಬ್ಬರೂ ಭಾರತ ತಂಡದ ಇಂಗ್ಲೆಂಡ್ ಪ್ರವಾಸಕ್ಕೂ (England Tour) ಮುನ್ನ ಟೆಸ್ಟ್ ಸ್ವರೂಪದಿಂದ ನಿವೃತ್ತಿ ಘೋಷಿಸಿದರು. ಆದರೆ 50 ಓವರ್‌ಗಳ ಸ್ವರೂಪದಲ್ಲಿ ಆಡುವುದನ್ನು ಮುಂದುವರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇಬ್ಬರೂ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬಹುದು ಮತ್ತು ಮತ್ತೆ ಫಾರ್ಮ್‌ಗೆ ಮರಳಲು ತರಬೇತಿಯನ್ನು ಪ್ರಾರಂಭಿಸಿದ್ದಾರೆ.

ರೋಹಿತ್ ಮತ್ತು ಕೊಹ್ಲಿ ಅವರ ಏಕದಿನ ಭವಿಷ್ಯದ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ, ರೋಹಿತ್ ಮತ್ತು ವಿರಾಟ್ ಫಿಟ್ ಆಗಿದ್ದಾರೆ ಮತ್ತು ರನ್ ಗಳಿಸುತ್ತಿದ್ದಾರೆ. ಆದರೆ ಇಬ್ಬರು ಆಟಗಾರರು ಕುಟುಂಬಗಳನ್ನು ಹೊಂದಿದ್ದಾರೆ ಮತ್ತು ದೀರ್ಘಕಾಲ ಮನೆಯಿಂದ ದೂರ ಇರುವುದು ಆಟಗಾರರಿಗೆ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು. ಅಂದರೆ ಇತರೆ ಮಾದರಿಯಿಂದ ಹೊರಗುಳಿಯುವ ನಿರ್ಧಾರವನ್ನ ಒಪ್ಪಿಕೊಂಡಿದ್ದಾರೆ.

ಇಬ್ಬರನ್ನ ಕ್ರಿಕೆಟ್ ಜಗತ್ತು ನೋಡಲು ಬಯಸುತ್ತದೆ

” ವಿರಾಟ್ ಮತ್ತು ರೋಹಿತ್ ಅವರನ್ನು ನೋಡಿ, ಅವರು ಇನ್ನೂ ಫಿಟ್ ಆಗಿದ್ದಾರೆ, ಒಂದೇ ಫಾರ್ಮ್​​ನಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್ ಆಡುವುದು ಅವರ ದೇಹಕ್ಕೆ ತುಂಬಾ ಆಯಾಸಕರ. ಅವರಿಬ್ಬರೂ ಪೋಷಕರು ಕೂಡ, ಮತ್ತು ಮನೆ ಮತ್ತು ಮಕ್ಕಳಿಂದ ತುಂಬಾ ದೂರವಿರುತ್ತಾರೆ. ಆದರೂ ಅವರನ್ನ ಕ್ರಿಕೆಟ್ ಜಗತ್ತು ಅವರನ್ನು ಮೈದಾನದಲ್ಲಿ ನೋಡಲು ಬಯಸುತ್ತದೆ ಮತ್ತು ವಿಶ್ವ ಕ್ರಿಕೆಟ್ ಮತ್ತು ಭಾರತೀಯ ಕ್ರಿಕೆಟ್‌ನ ದೃಷ್ಟಿಕೋನದಿಂದ, ಇಬ್ಬರೂ 2027ರ ವೇಳೆಗೆ ವಿಶ್ವಕಪ್ ಟ್ರೋಫಿಯಲ್ಲಿ ಆಡಬೇಕೆಂದು ಆಶಿಸುತ್ತೇವೆ” ಎಂದು ಟೇಲರ್ ಚಾಂಪಿಯನ್ಸ್ ಲೀಗ್ ಟಿ-10 ನೋಯ್ಡಾ ಟ್ರೋಫಿಯಲ್ಲಿ ಭಾಗವಹಿಸಿದ್ದ ವೇಳೆ ತಿಳಿಸಿದ್ದಾರೆ.

ಕ್ಯಾಮರೂನ್ ವೈಟ್ ಭವಿಷ್ಯ

ಮುಂದುವರಿದು, ” ಅವರು (ಕೊಹ್ಲಿ) 18-19 ವರ್ಷ ವಯಸ್ಸಿನ ಯುವಕರಾಗಿದ್ದರು, ಸ್ವಲ್ಪ ದಪ್ಪವಿದ್ದರು. ಕ್ಯಾಮರೂನ್ ವೈಟ್, ‘ಈ ಹುಡುಗನನ್ನು ನೋಡಿ? ಅವನು ವಿಶ್ವದ ಟಾಪ್ ಕ್ರಿಕೆಟ್ ಆಗುತ್ತಾನೆ ಎಂದು ಹೇಳಿದ್ದರು. ಆಗಲೇ ಅವರು ಉತ್ತಮ ಕ್ರಿಕೆಟ್ ಆಡುತ್ತಿದ್ದರು, ಆದರೆ ಅವರು ಈಗ ಉತ್ತಮ ಆಟಗಾರರಾಗಿದ್ದಾರೆ. ಸ್ಪಷ್ಟವಾಗಿಯೇ, ಅವರು ಆರ್‌ಸಿಬಿಗೆ ಅತ್ಯಂತ ನಿಷ್ಠರಾಗಿದ್ದಾರೆ, ಆದರೆ ಅದೇ ಸಮಯದಲ್ಲಿ, ಅವರು ಭಾರತೀಯ ಕ್ರಿಕೆಟ್ ಮತ್ತು ವಿಶ್ವ ಕ್ರಿಕೆಟ್‌ಗಾಗಿ ನೀಡಿರುವ ಕೊಡುಗೆ ಅದ್ಭುತವಾಗಿದೆ. ನಾನು ಭಾವಿಸುತ್ತೇನೆ, ನಾನು ಯಾವಾಗಲೂ ಅವರ ಬಗ್ಗೆ ಮೃದುತ್ವವನ್ನು ಹೊಂದಿದ್ದೇನೆ ಏಕೆಂದರೆ ಅವರು ಹದಿಹರೆಯದವರಾಗಿದ್ದಾಗಿನಿಂದ ಬೆಳೆಯುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಆರ್‌ಸಿಬಿ ಈ ವರ್ಷ ಐಪಿಎಲ್ ಗೆದ್ದು ಅವರಿಗೆ ಬೇಕಾಗಿದ್ದ ಟ್ರೋಫಿಯನ್ನ ಗೆದ್ದಿದ್ದು, ನನಗೆ ಖುಷಿಯಾಗಿದೆ” ಎಂದು ತಿಳಿಸಿದ್ದಾರೆ.