ಬೈಜೂಸ್: ಬೈಜೂಸ್, ಒಂದು ಕಾಲದಲ್ಲಿ ಭಾರತದ ಪ್ರಮುಖ ಎಡ್‌ಟೆಕ್ ಕಂಪನಿಯಾಗಿತ್ತು. 2019ರಲ್ಲಿ ಒಪ್ಪೋ ಬದಲಿಗೆ ಭಾರತೀಯ ಕ್ರಿಕೆಟ್ ತಂಡದ ಸ್ಪಾನ್ಸರ್‌ಆಗಿ 2022ರವರೆಗೆ ಒಪ್ಪಂದ ಮಾಡಿಕೊಂಡಿತು. 2022ರಲ್ಲಿ ಇದರ ಮೌಲ್ಯ 22 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಿತ್ತು. ಆದರೆ, ಆರ್ಥಿಕ ಕುಸಿತ, ಸಾಲದ ಒತ್ತಡ, ಮತ್ತು ಕಾನೂನಾತ್ಮಕ ಸಮಸ್ಯೆಗಳಿಂದಾಗಿ ಕಂಪನಿಯು ದಿವಾಳಿಯಾಗಿ, ಬಿಸಿಸಿಐಗೆ 158 ಕೋಟಿ ರೂಪಾಯಿಗಳ ಒಪ್ಪಂದದ ಒಂದು ಭಾಗವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಬಿಸಿಸಿಐ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (NCLT)ಗೆ ಮೊರೆಯಿತು. 2024ರ ಆಗಸ್ಟ್‌ನಲ್ಲಿ, ದಿವಾಳಿತನ ಕಾರ್ಯವಿಧಾನಗಳನ್ನು ರದ್ದುಗೊಳಿಸುವ ಒಪ್ಪಂದವನ್ನು NCLAT ಸ್ವೀಕರಿಸಿತಾದರೂ, ಸುಪ್ರೀಂ ಕೋರ್ಟ್ ಈ ಒಪ್ಪಂದವನ್ನು ತಡೆಹಿಡಿದಿತು.