Special Habba: ಗಣೇಶನ ಜೊತೆ ತೆನೆ ಹಬ್ಬದ ಸಂಭ್ರಮ, ಇದನ್ನು ಕಟ್ಟಿದ್ರೆ ಸೌಭಾಗ್ಯ ದೊರೆಯುವ ನಂಬಿಕೆ! | Ganesh Festival | ದಕ್ಷಿಣ ಕನ್ನಡ

Special Habba: ಗಣೇಶನ ಜೊತೆ ತೆನೆ ಹಬ್ಬದ ಸಂಭ್ರಮ, ಇದನ್ನು ಕಟ್ಟಿದ್ರೆ ಸೌಭಾಗ್ಯ ದೊರೆಯುವ ನಂಬಿಕೆ! | Ganesh Festival | ದಕ್ಷಿಣ ಕನ್ನಡ

Last Updated:

ದಕ್ಷಿಣ ಕನ್ನಡದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ತೆನೆ ಹಬ್ಬವನ್ನು ಆಚರಿಸಲಾಗುತ್ತದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂರಾರು ಭಕ್ತರು ತೆನೆ ಪಡೆದುಕೊಂಡು ಹೋಗಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ನಾಡಿನೆಲ್ಲೆಡೆ ಗಣೇಶ ಹಬ್ಬ (Ganesh Festival)  ಆಚರಣೆಯ ಸಂಭ್ರಮ ಮನೆ ಮಾಡಿದೆ. ವಿಘ್ನ ನಿವಾರಕನ ಹಬ್ಬದ ಆಗಮನಕ್ಕಾಗಿ ಜನ ಕಾಯುತ್ತಿದ್ದು, ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಗಣೇಶ ಹಬ್ಬವನ್ನು ಸಂಭ್ರಮಿಸೋದು ವಿಶೇಷತೆಯೂ ಆಗಿದೆ. ಅದೇ ಪ್ರಕಾರ ಕರಾವಳಿ ಭಾಗದಲ್ಲಿ ಗಣೇಶನ ಹಬ್ಬದಂದು ತೆನೆ ಹಬ್ಬವನ್ನೂ (Tene Habba) ಕೆಲವು ಕಡೆಗಳಲ್ಲಿ ಆಚರಿಸಲಾಗುತ್ತದೆ. ಈ ಋತುವಿನ ಹೊಸ ತೆನೆಯಲ್ಲಿ ಊಟ ಮಾಡುವ ಈ ಹಬ್ಬವನ್ನು ಆಚರಿಸಲು ಪುದ್ದರ್ ಎಂಬ ಹಬ್ಬ ಇದ್ದರೂ ಹೆಚ್ಚಿನವರು ಗಣೇಶ ಚತುರ್ಥಿ ದಿನವೇ ತೆನೆಹಬ್ಬ ಆಚರಿಸುತ್ತಾರೆ. ಸಾರ್ವಜನಿಕ (Public) ಗಣೇಶೋತ್ಸವ ನಡೆಯುವ ಸ್ಥಳದಲ್ಲಿ ಮತ್ತು ದೇವಸ್ಥಾನಗಳಲ್ಲಿ (Temple) ಭಕ್ತರಿಗೆ ತೆನೆಯನ್ನು ವಿತರಿಸಲಾಗುತ್ತದೆ.

ತೆನೆ ಹಬ್ಬದ ಸಂಭ್ರಮ

ತೆನೆ ಹಬ್ಬ (‘ಕುರಲ್‍ಪರ್ಬ’)ದ ದಿನ ಬೆಳಿಗ್ಗೆಯೇ ಮಹಿಳೆಯರು ಮನೆಯನ್ನು ಸಾರಿಸಿ ಶುದ್ಧಗೊಳಿಸುತ್ತಾರೆ. ಮನೆಯ ಯಜಮಾನ ಸ್ನಾನ ಮಾಡಿ ಮಡಿಯುಟ್ಟು ಗದ್ದೆಗೆ ಹೋಗಿ ತೆನೆಯನ್ನು ಒಂದು ‘ಸೂಡಿ’ಯಷ್ಟು ಕಿತ್ತು ತುದಿ ಬಾಳೆ ಎಲೆಯಲ್ಲಿಟ್ಟು ತಲೆಯಲ್ಲಿ ಹೊತ್ತು ತರುತ್ತಾನೆ.

ಕೆಲವೊಮ್ಮೆ ತೆನೆಯನ್ನು ಮುಂಚಿನ ದಿನ ಸಾಯಂಕಾಲವೇ ತರುವುದು ಉಂಟು. ಹಾಗೆ ತಂದು ಬಾವಿಯ ದಂಡೆಯಲ್ಲಿಯೋ, ಇಲ್ಲವೆ ತುಳಸಿ ಕಟ್ಟೆಯ ಬಳಿಯಲ್ಲಿಯೋ ಇಡಲಾಗುತ್ತದೆ. ಹಾಲು ಬರುವ ಮರದಡಿಯಲ್ಲಿ ತೆನೆಯನ್ನು ಇಡಬೇಕೆಂಬ ನಂಬಿಕೆಯೂ ಇದೆ. ಅದರಂತೆ ಮನೆಯ ಆವರಣದೊಳಗಿರುವ ಹಲಸಿನ ಮರದಡಿಯಲ್ಲಿ ಸಂಗ್ರಹಿಸಿಡುತ್ತಾರೆ.

ಭಕ್ತರಿಗೆ ತೆನೆ ವಿತರಣೆ

ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತೆನೆಹಬ್ಬದ ಹಿನ್ನಲೆಯಲ್ಲಿ ಭಕ್ತರಿಗೆ ತೆನೆ ವಿತರಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ತೆನೆಯನ್ನು ಪಡೆದು ತೆರಳಿದ್ದಾರೆ. ಗಣೆಶ ಹಬ್ಬದ ದಿನ ಈ ತೆನೆಯನ್ನು ಮನೆ ಬಾಗಿಲಿಗೆ ಕಟ್ಟಿದಲ್ಲಿ ಮನೆಯಲ್ಲಿರುವ ಜನರಿಗೆ ಸೌಭಾಗ್ಯ ದೊರಕುತ್ತದೆ ಎನ್ನುವ ನಂಬಿಕೆಯೂ ಈ ಆಚರಣೆಯ ಹಿಂದಿದೆ.