Ganesh Shobhayatre: ದಕ್ಷಿಣ ಕನ್ನಡದಲ್ಲಿ ಗಣೇಶನಿಂದ ದುಪ್ಪಟಾಯ್ತು ಖುಷಿ, ಆಗಸ್ಟ್ 30ರಂದು ವೈಭವದ ಶೋಭಾಯಾತ್ರೆ! | Dakshina Kannada Ganeshotsava | ದಕ್ಷಿಣ ಕನ್ನಡ

Ganesh Shobhayatre: ದಕ್ಷಿಣ ಕನ್ನಡದಲ್ಲಿ ಗಣೇಶನಿಂದ ದುಪ್ಪಟಾಯ್ತು ಖುಷಿ, ಆಗಸ್ಟ್ 30ರಂದು ವೈಭವದ ಶೋಭಾಯಾತ್ರೆ! | Dakshina Kannada Ganeshotsava | ದಕ್ಷಿಣ ಕನ್ನಡ

Last Updated:

ಇದೇ 30ರಂದು ಸಂಜೆ 5 ಗಂಟೆಗೆ ಸರಿಯಾಗಿ ಗಣೇಶನ ವೈಭವದ ಶೋಭಾಯಾತ್ರೆ ವಿವಿಧ ಸ್ತಬ್ಧಚಿತ್ರಗಳ ಪ್ರದರ್ಶನದೊಂದಿಗೆ ಕೊನೆಗೊಳ್ಳಲಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಗಣೇಶ (Ganesh) ಬಂದ, ಸಂಭ್ರಮ ತಂದ. ಹೌದು ದೇಶದೆಲ್ಲೆಡೆ ವಿನಾಯಕನ ಆಗಮನ ಖುಷಿ ತಂದಿದೆ. ಹೌದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದಕ್ಷಿಣ ಕನ್ನಡ (Dakshina Kannada) ಪುತ್ತೂರು (Puttur) ಇದರ 59 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಇಂದಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಆರಂಭಗೊಂಡಿದೆ. ಬೆಳಿಗ್ಗೆ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರಿಂದ ಗಣಪತಿ ವಿಗ್ರಹದ ಪ್ರತಿಷ್ಠಾಪಣೆ ನಡೆಯಿತು. ಬಳಿಕ ಗಣಪತಿ ಹೋಮ ಹಾಗೂ ಸಾವಿರಾರು ಭಕ್ತರಿಗೆ (Devotees) ಅನ್ನಸಂತರ್ಪಣೆ ನೆರವೇರಿತು.

30ಕ್ಕೆ ವೈಭವದ ಶೋಭಾಯಾತ್ರೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುಜೀಂದ್ರ ಪ್ರಭು, ಗೌರವಾಧ್ಯಕ್ಷರಾದ ಎಂ.ಕೆ. ಪ್ರಸಾದ್ ಭಂಡಾರಿ, ರವೀಂದ್ರ ಶೆಟ್ಟಿ ನುಳಿಯಾಲು, ಕಾರ್ಯಾಧ್ಯಕ್ಷರಾದ ರಾಧಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಜೊತೆ ಕಾರ್ಯದರ್ಶಿ ನೀಲಂತ್ ಕುಮಾರ್, ಕೋಶಾಧಿಕಾರಿ ಶ್ರೀನಿವಾಸ್ ಮೂಲ್ಯ, ಉಪಾಧ್ಯಕ್ಷರಾದ ವಿಶ್ವನಾಥ ಗೌಡ ಬನ್ನೂರು, ಸತೀಶ್ ನಾಯ್ಕ್ ಪರ್ಲಡ್ಕ, ಸುಧೀರ್ ಶೆಟ್ಟಿ ತೆಂಕಿಲ, ಸಹಜ್ ರೈ ಬಳಜ್ಜ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಇಂದಿನಿಂದ ನಾಲ್ಕು ದಿನಗಳ ಕಾಲ ದೇವರ ಆರಾಧನೆ ನಡೆಯಲಿದ್ದು, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಇದೇ 30ರಂದು ಸಂಜೆ 5 ಗಂಟೆಗೆ ಸರಿಯಾಗಿ ಗಣೇಶನ ವೈಭವದ ಶೋಭಾಯಾತ್ರೆ ವಿವಿಧ ಸ್ತಬ್ಧಚಿತ್ರಗಳ ಪ್ರದರ್ಶನದೊಂದಿಗೆ ಕೊನೆಗೊಳ್ಳಲಿದೆ.

ಗಣೇಶ ಬಂದ, ಸಂಭ್ರಮ ತಂದ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾವೇರಿಕಟ್ಟೆ ಇದರ 27ನೇ ವರ್ಷದ ಗಣೇಶೋತ್ಸವ ಪುತ್ತೂರಿನ ದರ್ಬೆಯ ಕಾವೇರಿಕಟ್ಟೆ ಕಾರ್ಟೇಕ್ ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಅರ್ಚಕರಾದ ಉದಯ್ ಭಟ್ ಸಂಪ್ಯ ಇವರ ನೇತೃತ್ವದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪನೆ ನಡೆಯಿತು. ಬಳಿಕ ಗಣಪತಿ ಹವನ, ಮಹಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು.