Mumbai Indians: 2025 ಮುಂಬೈ ಇಂಡಿಯನ್ಸ್​ಗೆ ಸ್ಮರಣೀಯ ವರ್ಷ! ಒಂದೇ ವರ್ಷದಲ್ಲಿ 4ನೇ ಪ್ರಶಸ್ತಿ ಗೆದ್ದ MI ಫ್ರಾಂಚೈಸಿ | Mumbai Indians Oval Invincibles Make History with 3rd Consecutive The Hundred Title | ಕ್ರೀಡೆ

Mumbai Indians: 2025 ಮುಂಬೈ ಇಂಡಿಯನ್ಸ್​ಗೆ ಸ್ಮರಣೀಯ ವರ್ಷ! ಒಂದೇ ವರ್ಷದಲ್ಲಿ 4ನೇ ಪ್ರಶಸ್ತಿ ಗೆದ್ದ MI ಫ್ರಾಂಚೈಸಿ | Mumbai Indians Oval Invincibles Make History with 3rd Consecutive The Hundred Title | ಕ್ರೀಡೆ

Last Updated:



ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಈ ವರ್ಷ ಓವಲ್ ಇನ್ವಿನ್ಸಿಬಲ್ಸ್‌ನಲ್ಲಿ ಶೇಕಡಾ 49 ರಷ್ಟು ಪಾಲನ್ನು ಖರೀದಿಸಿದೆ. ಮುಂದಿನ ಋತುವಿನಿಂದ, ಈ ಫ್ರಾಂಚೈಸಿಯ ಹೆಸರು MI (ಮುಂಬೈ ಇಂಡಿಯನ್ಸ್) ಲಂಡನ್ ಎಂದು ಬದಲಾಗುವ ಸಾಧ್ಯತೆಯಿದೆ.

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಭಾಗವಾಗಿರುವು ಓವಲ್ ತಂಡಕ್ಕೆ ದಿ ಹಂಡ್ರೆಡ್ ಚಾಂಪಿಯನ್ಸ್ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಭಾಗವಾಗಿರುವು ಓವಲ್ ತಂಡಕ್ಕೆ ದಿ ಹಂಡ್ರೆಡ್ ಚಾಂಪಿಯನ್ಸ್
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಭಾಗವಾಗಿರುವು ಓವಲ್ ತಂಡಕ್ಕೆ ದಿ ಹಂಡ್ರೆಡ್ ಚಾಂಪಿಯನ್ಸ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಒಡೆತನದ ಮುಂಬೈ ಇಂಡಿಯನ್ಸ್‌ಗೆ ಈ ವರ್ಷ ಚೆನ್ನಾಗಿ ಕಳೆದಂತೆ ತೋರುತ್ತದೆ. ಪ್ರಪಂಚದಾದ್ಯಂತದ ಅವರ ಫ್ರಾಂಚೈಸಿಗಳು ಈಗಾಗಲೇ ನಾಲ್ಕು ಪ್ರಮುಖ ಟಿ20 ಪ್ರಶಸ್ತಿಗಳನ್ನು ಗೆದ್ದಿವೆ. ಮೊದಲು, ಅವರ ತಂಡ (MI ಕೇಪ್ ಟೌನ್) ದಕ್ಷಿಣ ಆಫ್ರಿಕಾದ ಟಿ20 ಲೀಗ್ ಪ್ರಶಸ್ತಿಯನ್ನು ಗೆದ್ದಿತ್ತು. ಆ ನಂತರ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ವುಮೆನ್ ಪ್ರೀಮಿಯರ್ ಲೀಗ್ (Mumbai Indians), ನಂತರ ಮೇಜರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್​​ನಲ್ಲಿ MI ನ್ಯೂಯಾರ್ಕ್ ತಂಡ ಚಾಂಪಿಯನ್ ಆಗಿತ್ತು. ಇದೀಗ ಹಂಡ್ರೆಡ್ ಲೀಗ್ ಟೂರ್ನಿಯಲ್ಲೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಂಡವಾದ ಓವಲ್ ಇನ್ವಿನ್ಸಿಬಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಹ್ಯಾಟ್ರಿಕ್ ಪ್ರಶಸ್ತಿ ಗೆದ್ದ ಓವಲ್

ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಈ ವರ್ಷ ಓವಲ್ ಇನ್ವಿನ್ಸಿಬಲ್ಸ್‌ನಲ್ಲಿ ಶೇಕಡಾ 49 ರಷ್ಟು ಪಾಲನ್ನು ಖರೀದಿಸಿದೆ. ಮುಂದಿನ ಋತುವಿನಿಂದ, ಈ ಫ್ರಾಂಚೈಸಿಯ ಹೆಸರು MI (ಮುಂಬೈ ಇಂಡಿಯನ್ಸ್) ಲಂಡನ್ ಎಂದು ಬದಲಾಗುವ ಸಾಧ್ಯತೆಯಿದೆ. ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಫ್ರಾಂಚೈಸಿ ಕೈಗೆ ಬಂದ ನಂತರ, ಇನ್ವಿನ್ಸಿಬಲ್ಸ್ ಪುರುಷರ ತಂಡ ಹಂಡ್ರೆಡ್ ಲೀಗ್‌ನಲ್ಲಿ ಸತತ ಮೂರನೇ ಪ್ರಶಸ್ತಿಯನ್ನು ಗೆದ್ದಿದೆ. ಇದಕ್ಕೂ ಮೊದಲು, ಫ್ರಾಂಚೈಸಿ 2023 ಮತ್ತು 2024 ರ ಆವೃತ್ತಿಗಳಲ್ಲಿಯೂ ವಿಜೇತವಾಗಿತ್ತು.

ಮುಂಬೈ ಇಂಡಿಯನ್ಸ್ ತಂಡದ ಟ್ರೋಫಿಗಳು

ಹಂಡ್ರೆಡ್ ಲೀಗ್ ಪ್ರಶಸ್ತಿಯೊಂದಿಗೆ, ಮುಂಬೈ ಇಂಡಿಯನ್ಸ್ ಕ್ಯಾಬಿನೆಟ್‌ನಲ್ಲಿ ಪ್ರಶಸ್ತಿಗಳ ಸಂಖ್ಯೆ 13ಕ್ಕೆ ತಲುಪಿದೆ. ಈ ಫ್ರಾಂಚೈಸಿಯ ಮೂಲವಾಗಿರುವ ಮುಂಬೈ ಇಂಡಿಯನ್ಸ್ ಪುರುಷರ ತಂಡವು ಐಪಿಎಲ್‌ನಲ್ಲಿ ಐದು ಪ್ರಶಸ್ತಿಗಳನ್ನು ಗೆದ್ದಿದೆ, ಅತ್ಯಂತ ಯಶಸ್ವಿ ತಂಡವಾಗಿ ಸಿಎಸ್‌ಕೆ ಜೊತೆ ಅಗ್ರಸ್ಥಾನವನ್ನು ಹಂಚಿಕೊಂಡಿದೆ. ಜೊತೆಗೆ ಎರಡು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು (2011, 2013) ಗೆದ್ದಿದೆ. ಮುಂಬೈ ಇಂಡಿಯನ್ಸ್ ಮಹಿಳಾ ಐಪಿಎಲ್‌ನಲ್ಲಿ (2023, 2025) ಎರಡು ಪ್ರಶಸ್ತಿಗಳನ್ನು ಗೆದ್ದಿದೆ. ಅವರು ಯುಎಸ್‌ಎಯಲ್ಲಿ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ (2023, 2025), ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಟಿ 20 ಲೀಗ್‌ನಲ್ಲಿ (2024) ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ಟಿ 20 ಲೀಗ್‌ನಲ್ಲಿ (2025) ಎರಡು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಪಂದ್ಯದ ವಿವರ

ನಿನ್ನೆ ನಡೆದ ಪುರುಷರ ಹಂಡ್ರೆಡ್ ಲೀಗ್‌ನ ಫೈನಲ್‌ನಲ್ಲಿ, ಮುಂಬೈ ಇಂಡಿಯನ್ಸ್ (ಓವಲ್ ಇನ್ವಿನ್ಸಿಬಲ್ಸ್) ತಂಡ ಟ್ರೆಂಟ್ ರಾಕೆಟ್ಸ್ ಲಂಡನ್ ತಂಡವನ್ನ 26 ರನ್‌ಗಳಿಂದ ಸೋಲಿಸಿ ವಿಜೇತರಾಗಿ ಹೊರಹೊಮ್ಮಿತು. ಮೊದಲು ಬ್ಯಾಟಿಂಗ್ ಮಾಡಿದ ಇನ್ವಿನ್ಸಿಬಲ್ಸ್ ತಂಡವು 100 ಎಸೆತಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು, ಆದರೆ ಟ್ರೆಂಟ್ ರಾಕೆಟ್ಸ್ ತಂಡವು 142 ರನ್‌ಗಳಿಗೆ ಸೀಮಿತವಾಗಿ ಸೋಲು ಕಂಡಿತು.