Last Updated:
ಆಕರ್ಷಕ ಟ್ಯಾಬ್ಲೋಗಳು ನೆರೆದಿದ್ದವರ ಗಮನಸೆಳೆಯಿತು. ಹೆಚ್ಚಾಗಿ ಪೌರಾಣಿಕ ಕಥೆಗಳನ್ನು ಆಧರಿಸಿದ ಸ್ತಬ್ಧ ಚಿತ್ರಗಳನ್ನೇ ಪ್ರದರ್ಶಿಸಲಾಗಿದ್ದು, ಇವುಗಳ ಜೊತೆಗೆ ಇನ್ನೂ ಹಲವು ಆಕರ್ಷಣೆಗಳು ನೆರೆದವರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ದಕ್ಷಿಣ ಕನ್ನಡ: ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ (Ganesh) ವಿಗ್ರಹದ ಶೋಭಾಯಾತ್ರೆಯು ಅತ್ಯಂತ ಸಂಭ್ರಮ-ಸಡಗರದಿಂದ ಸಂಪನ್ನಗೊಂಡಿದೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಈ ಬಾರಿ 59 ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದ್ದು, ಮೂರು ದಿನಗಳ ಕಾಲ ಇಲ್ಲಿ ಗಣೇಶ ಮೂರ್ತಿಯನ್ನು (Idol) ಪ್ರತಿಷ್ಠಾಪಿಸಿ ಬಳಿಕ ಅದರ ವಿಸರ್ಜನೆಯನ್ನು ಮಾಡಲಾಗಿದೆ. ಮಹಾಲಿಂಗೇಶ್ವರ ದೇವರ (God) ಗದ್ದೆಯಿಂದ ಹೊರಟ ಶೋಭಾಯಾತ್ರೆಯು ಬೊಳುವಾರು ತನಕ ಸಾಗಿ, ಮತ್ತೆ ಜಾತ್ರೆ (Jatra) ಗದ್ದೆಗೆ ಬಂದು ಅಲ್ಲಿರುವ ಕೆರೆಯಲ್ಲಿ ಮೂರ್ತಿಯ ವಿಸರ್ಜನೆ ಮಾಡಲಾಯಿತು.
ಎಂದಿನಂತೆ ಈ ಬಾರಿಯೂ ಆಕರ್ಷಕ ಟ್ಯಾಬ್ಲೋಗಳು ನೆರೆದಿದ್ದವರ ಗಮನಸೆಳೆಯಿತು. ಹೆಚ್ಚಾಗಿ ಪೌರಾಣಿಕ ಕಥೆಗಳನ್ನು ಆಧರಿಸಿದ ಸ್ತಬ್ಧ ಚಿತ್ರಗಳನ್ನೇ ಪ್ರದರ್ಶಿಸಲಾಗಿದ್ದು, ಇವುಗಳ ಜೊತೆಗೆ ಇನ್ನೂ ಹಲವು ಆಕರ್ಷಣೆಗಳು ನೆರೆದವರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ಈ ಬಾರಿ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿ.ಜೆ ಗೆ ನಿಷೇಧ ಹೇರಿರುವ ಕಾರಣದಿಂದ ಮೆರವಣಿಗೆಯಲ್ಲಿ ಡಿ.ಜೆ ಗೆ ಗಣೇಶೋತ್ಸವ ಸಮಿತಿ ಅನುಮತಿಯನ್ನು ನಿರಾಕರಿಸಿತ್ತು. ಪೌರಾಣಿಕ ಕಥೆಗಳ ಸ್ತಬ್ದಚಿತ್ರಗಳ ಜೊತೆಗೆ ಭಜನಾ ತಂಡಗಳು ನಡೆಸಿಕೊಟ್ಟ ಆಕರ್ಷಕ ಕುಣಿತ ಭಜನೆ ಜನರನ್ನ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೇಳುವಂತೆ ಮಾಡಿತ್ತು.
Dakshina Kannada,Karnataka
September 01, 2025 5:09 PM IST