Virat Kohli: ಸಂತೋಷದ ಕ್ಷಣ ದುರಂತವಾಯ್ತು, RCB ಅಭಿಮಾನಿಗಳಿಗೆ ವಿರಾಟ್​ ಕೊಹ್ಲಿ ಭಾವುಕ ಸಂದೇಶ ​| Emotional post virat kohli breaks silence on bengaluru stampede | ರಾಜ್ಯ

Virat Kohli: ಸಂತೋಷದ ಕ್ಷಣ ದುರಂತವಾಯ್ತು, RCB ಅಭಿಮಾನಿಗಳಿಗೆ ವಿರಾಟ್​ ಕೊಹ್ಲಿ ಭಾವುಕ ಸಂದೇಶ ​| Emotional post virat kohli breaks silence on bengaluru stampede | ರಾಜ್ಯ

Last Updated:

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಘಟನೆಯಾಗಿ 3 ತಿಂಗಳ ಬಳಿಕ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಭಾವುಕ ಸಂದೇಶ ರವಾನಿಸಿದ್ದಾರೆ. ಆರ್​ಸಿಬಿ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ವಿರಾಟ್ ಪೋಸ್ಟ್ ಮಾಡಿದ್ದಾರೆ. 

News18News18
News18

ಬೆಂಗಳೂರು (ಸೆ.03): ಅದು 18 ವರ್ಷದ ಕನಸು ನನಸಾದ ಕ್ಷಣ. ಇಡೀ ಆರ್​ಸಿಬಿ ತಂಡ (RCB Team) ಹಾಗೂ ಅಭಿಮಾನಿಗಳಿಗೆ ಸಂತಸದ ಸುದಿನ. ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿತ್ತು ಆದ್ರೆ ಈ ಖುಷಿ 48 ಗಂಟೆಯೂ ಇರಲಿಲ್ಲ. ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಮುಂದೆ ಕಾಲ್ತುಳಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ರು. ಇದು ಆರ್​ಸಿಬಿ ದೊಡ್ಡ ಕಪ್ಪು ಚುಕ್ಕೆ ಆಗಿದೆ.  ಈ ಕರಾಳ ಘಟನೆ ಸಂಭವಿಸಿ 3 ತಿಂಗಳಾದ ಬಳಿಕ ಮೊದಲ ಬಾರಿಗೆ ವಿರಾಟ್​ ಕೊಹ್ಲಿ (Virat Kohli) ಭಾವುಕ ಪೋಸ್ಟ್ ಮಾಡಿದ್ದಾರೆ.

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಘಟನೆಯಾಗಿ 3 ತಿಂಗಳ ಬಳಿಕ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಭಾವುಕ ಸಂದೇಶ ರವಾನಿಸಿದ್ದಾರೆ. ಆರ್​ಸಿಬಿ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ವಿರಾಟ್ ಪೋಸ್ಟ್ ಮಾಡಿದ್ದಾರೆ.

ಸಂತೋಷದ ಕ್ಷಣ ದುರಂತವಾಯ್ತು

“ಜೂನ್ 4 ರಂತಹ ಹೃದಯಾಘಾತಕ್ಕೆ ಜೀವನದಲ್ಲಿ ಯಾವುದೂ ನಿಮ್ಮನ್ನು ನಿಜವಾಗಿಯೂ ಸಿದ್ಧಪಡಿಸುವುದಿಲ್ಲ. ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲಿ ಅದು ಅತ್ಯಂತ ಸಂತೋಷದಾಯಕ ಕ್ಷಣವಾಗಿರಬೇಕಾಗಿತ್ತು – ಆದ್ರೆ ದುರಂತವಾಗಿ ಮಾರ್ಪಟ್ಟಿದೆ.”

ಇದು ಆರ್​ಸಿಬಿಯ ಒಂದು ಭಾಗವಾಗಿದೆ

“ನಾವು ಕಳೆದುಕೊಂಡವರ ಕುಟುಂಬಗಳಿಗಾಗಿ ಮತ್ತು ಗಾಯಗೊಂಡ ನಮ್ಮ ಅಭಿಮಾನಿಗಳಿಗಾಗಿ ನಾನು ಯೋಚಿಸುತ್ತಿದ್ದೇನೆ ಮತ್ತು ಪ್ರಾರ್ಥಿಸುತ್ತಿದ್ದೇನೆ. ನಿಮ್ಮ ನಷ್ಟವು ಈಗ ನಮ್ಮ ಕಥೆಯ ಭಾಗವಾಗಿದೆ.

ಎಚ್ಚರಿಕೆಯಿಂದ ಮುಂದುವರೆಯುತ್ತೇವೆ

“ಒಟ್ಟಾಗಿ, ನಾವು ಎಚ್ಚರಿಕೆಯಿಂದ, ಗೌರವದಿಂದ ಮತ್ತು ಜವಾಬ್ದಾರಿಯಿಂದ ಮುಂದುವರಿಯುತ್ತೇವೆ” ಎಂದು ವಿರಾಟ್​ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವೆಬ್‌ಸೈಟ್ ಮೂಲಕ ಹೇಳಿದರು.

ಕಾಲ್ತುಳಿತದಲ್ಲಿ 11 ಮಂದಿ ಸಾವು

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜೂನ್​4ರಂದು ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ರೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.  ಕೇಸ್​ ಸಂಬಂಧ ಆರ್‌ಸಿಬಿ, ಕೆಎಸ್‌ಸಿಎ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಲ್ಲದೆ ರಾಜ್ಯ ಸರ್ಕಾರವೂ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ ಸೇರಿದಂತೆ ಕೆಲ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು.