Last Updated:
ಇಟಾಲಿಯನ್ ಆಟಗಾರ ಜಾನಿಕ್ ಸಿನ್ನರ್ ಮತ್ತೊಂದು ಸೆಮಿಫೈನಲ್‌ನಲ್ಲಿ ಕೆನಡಾದ ಆಟಗಾರ ಫೆಲಿಕ್ಸ್ ಆಗರ್-ಅಲಿಯಾಸಿಮ್ ಅವರನ್ನು ಸೋಲಿಸಿದರು. ಭಾನುವಾರ ಈ ಇಬ್ಬರು ಯುವ ಆಟಗಾರರ ನಡುವೆ ವರ್ಷದ ರೋಚಕ 3ನೇ ಫೈನಲ್ ನಡೆಯಲಿದೆ.
ಪ್ರತಿಷ್ಠಿತ ಟೆನಿಸ್ ಗ್ರ್ಯಾಂಡ್ ಸ್ಲ್ಯಾಮ್ (Grand Slam) ಟೂರ್ನಮೆಂಟ್ ಯುಎಸ್ ಓಪನ್‌ನಲ್ಲಿ (US Open) ಸರ್ಬಿಯಾದ ದೈತ್ಯ ನೊವಾಕ್ ಜೊಕೊವಿಚ್ (Novak Djokovic) ಮತ್ತೆ ನಿರಾಶೆಯನ್ನು ಎದುರಿಸಿದ್ದಾರೆ. ತಮ್ಮ 25 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆಲ್ಲುವ ಗುರಿಯೊಂದಿಗೆ ಮೈದಾನ ಪ್ರವೇಶಿಸಿದ್ದ ಜೊಕೊವಿಕ್, ಸೆಮಿಫೈನಲ್‌ನಲ್ಲಿ ತಮ್ಮ ಹೋರಾಟವನ್ನು ಕೊನೆಗೊಳಿಸಿದರು. ಜೊಕೊವಿಚ್ ಅವರನ್ನು ವಿಶ್ವದ 2 ನೇ ಶ್ರೇಯಾಂಕಿತ ಕಾರ್ಲೋಸ್ ಅಲ್ಕರಾಜ್ ಸೋಲಿಸಿದರು. ಇದೀಗ ಮತ್ತೊಮ್ಮೆ, ಟಾಪ್-2 ಶ್ರೇಯಾಂಕಿತರಾದ ಜಾನಿಕ್ ಸಿನ್ನರ್ ಮತ್ತು ಕಾರ್ಲೋಸ್ ಅಲ್ಕರಾಜ್ ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ.
ಇಟಾಲಿಯನ್ ಆಟಗಾರ ಜಾನಿಕ್ ಸಿನ್ನರ್ ಮತ್ತೊಂದು ಸೆಮಿಫೈನಲ್‌ನಲ್ಲಿ ಕೆನಡಾದ ಆಟಗಾರ ಫೆಲಿಕ್ಸ್ ಆಗರ್-ಅಲಿಯಾಸಿಮ್ ಅವರನ್ನು ಸೋಲಿಸಿದರು. ಭಾನುವಾರ ಈ ಇಬ್ಬರು ಯುವ ಆಟಗಾರರ ನಡುವೆ ವರ್ಷದ ರೋಚಕ 3ನೇ ಫೈನಲ್ ನಡೆಯಲಿದೆ. ವಿಂಬಲ್ಡನ್ ಫೈನಲ್‌ನಲ್ಲಿ ಸಿನ್ನರ್ ಜಯಿಸಿದರೆ, ಫ್ರೆಂಚ್ ಓಪನ್‌ನಲ್ಲಿ ಅಲ್ಕರಾಜ್ ಗೆಲುವು ಸಾಧಿಸಿದ್ದರು. ಇದೀಗ ಮೂರನೇ ಹಣಾಹಣಿ ಟೆನಿಸ್ ಪ್ರಿಯರಿಗೆ ರಸದೌತಣ ನೀಡಲಿದೆ.
ಮೊದಲ ಸೆಮಿಫೈನಲ್‌ನಲ್ಲಿ, ಜಾನಿಕ್ ಸಿನ್ನರ್ 6-1, 3-6, 6-3, 6-4 ಅಂತರದಲ್ಲಿ ಅಲಿಯಾಸಿಮ್ ಅವರನ್ನು ಸೋಲಿಸಿದರು. ಸುಮಾರು ಮೂರುವರೆ ಗಂಟೆಗಳ ಕಾಲ ನಡೆದ ಈ ಪಂದ್ಯದಲ್ಲಿ, ಸಿನ್ನರ್ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು. ಆದರ ಎರಡನೇ ಸೆಟ್‌ನಲ್ಲಿ, ಅಲಿಯಾಸಿಮ್ ಪ್ರತಿರೋಧ ತೋರಿ 2ನೇ ಸೆಟ್ ತಮ್ಮದಾಹಿಸಿಕೊಂಡರು. ಆದರೆ ಸಿನರ್ ತನ್ನ ಅನುಭವದಿಂದ ಚೇತರಿಸಿಕೊಂಡು ಮುಂದಿನ ಎರಡು ಸೆಟ್‌ಗಳನ್ನು ಗೆದ್ದು ಫೈನಲ್‌ಗೆ ಮುನ್ನಡೆದರು. ಈ ಪಂದ್ಯದಲ್ಲಿ, ಜಾನಿಕ್ ಸೈನರ್ 11 ಏಸ್‌ಗಳನ್ನು ಸಿಡಿಸಿದರು. ಆದರೆ ಅಲಿಯಾಸಿಮ್ 9 ಏಸ್‌ಗಳನ್ನು ಸಿಡಿಸಲು ಸಾಧ್ಯವಾಯಿತು. ಜಾನಿಕ್ 4 ಬ್ರೇಕ್ ಪಾಯಿಂಟ್‌ಗಳನ್ನು ಸಾಧಿಸಿದರೆ, ಅಲಿಯಾಸಿಮ್ ಕೇವಲ ಒಂದು ಬ್ರೇಕ್ ಪಾಯಿಂಟ್ ಅನ್ನು ಗೆದ್ದರು. ಈ ಗೆಲುವಿನೊಂದಿಗೆ, ಸೈನರ್ ಒಂದೇ ವರ್ಷದಲ್ಲಿ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳಲ್ಲಿ ಫೈನಲ್ ತಲುಪಿದ ಆಟಗಾರರಾದರು.
ಎರಡನೇ ಸೆಮಿಫೈನಲ್‌ನಲ್ಲಿ, ಅಲ್ಕರಾಜ್ ಲೆಜೆಂಡರಿ ಆಟಗಾರ ಜೊಕೊವಿಚ್ ಅವರನ್ನು 6-4, 7-6(7/4), 6-2 ಅಂತರದಲ್ಲಿ ಸೋಲಿಸಿದರು. 24 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಜೊಕೊವಿಚ್ ಅವರನ್ನು ಅಲ್ಕರಾಜ್ ಮೂರು ನೇರ ಸೆಟ್‌ಗಳಲ್ಲಿ ಸೋಲಿಸಿದರು. ಈ ಪಂದ್ಯದಲ್ಲಿ ಜೊಕೊವಿಚ್ 4 ಏಸ್‌ಗಳನ್ನು ಹೊಡೆದರೆ, ಅಲ್ಕರಾಜ್ 7 ಏಸ್‌ಗಳನ್ನು ಹೊಡೆದರು. ಕಾರ್ಲೋಸ್ ಅಲ್ಕರಾಜ್ 4 ಬ್ರೇಕ್ ಪಾಯಿಂಟ್‌ಗಳನ್ನು ಸಾಧಿಸಿದರೆ, ಜೊಕೊವಿಚ್ ಒಂದು ಬ್ರೇಕ್ ಪಾಯಿಂಟ್ ಗಳಿಸಿದರು. ಈ ಪಂದ್ಯದಲ್ಲಿ ಅಲ್ಕರಾಜ್ 101 ಅಂಕಗಳನ್ನು ಗಳಿಸಿದರೆ, ಜೊಕೊವಿಚ್ ಕೇವಲ 81 ಅಂಕಗಳನ್ನು ಗಳಿಸಿದರು.
ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಅವರು ಜಾನಿಕ್ ಸಿನ್ನರ್ ಅವರನ್ನು ಎದುರಿಸಲಿದ್ದಾರೆ. ಕಳೆದ 37 ಪಂದ್ಯಗಳಲ್ಲಿ 36 ಬಾರಿ ಗೆದ್ದಿರುವ ಅಲ್ಕರಾಜ್, ಸಿನ್ನರ್ ವಿರುದ್ಧ ಮಾತ್ರ ಸೋತಿದ್ದಾರೆ. ಅದು ಕೊನೆಯ ವಿಂಬಲ್ಡನ್ ಫೈನಲ್ ಕೂಡ ಆಗಿತ್ತು ಎಂಬುದು ಗಮನಾರ್ಹ. ಈಗ, ಅಲ್ಕರಾಜ್ ಮತ್ತೆ ಸಿನ್ನರ್ ಜೊತೆ ಯುಎಸ್ ಓಪನ್ ಪ್ರಶಸ್ತಿಗಾಗಿ ಸ್ಪರ್ಧಿಸಲಿದ್ದಾರೆ.
September 06, 2025 6:05 PM IST
US Open 2025: ಸತತ 4ನೇ ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್‌ನಲ್ಲಿ ಸೋತ ಜೊಕೊವಿಚ್; ಅಲ್ಕರಾಜ್- ಸಿನ್ನರ್ ನಡುವೆ ವರ್ಷದಲ್ಲಿ 3ನೇ ಫೈನಲ್ ಹಣಾಹಣಿ!