Last Updated:
ಮಹಾಕಾಳಿ ಪಡ್ಪುವಿನಲ್ಲಿ 50.50 ಕೋಟಿ ರೂ. ವೆಚ್ಚದಲ್ಲಿ ಸೀರಿಸ್ ಬಾಕ್ಸ್ ಪುಶ್ಶಿಂಗ್ ತಂತ್ರಜ್ಞಾನದಲ್ಲಿ ಹೊಸ ರೈಲ್ವೆ ಅಂಡರ್‌ಪಾಸ್ ನಿರ್ಮಾಣ, ಟ್ರಾಫಿಕ್ ಜಾಮ್ ಸಮಸ್ಯೆಗೆ ಶೀಘ್ರ ಪರಿಹಾರ.
ಮಂಗಳೂರು ನಗರದ ಮಹಾಕಾಳಿ ಪಡ್ಪುವಿನಲ್ಲಿ ಎರಡು ರೈಲು ಹಳಿಗಳು (Train Track) ಪಾಸ್ ಆಗುತ್ತದೆ. ಆದರೆ ಇಲ್ಲಿನ ರೈಲ್ವೇ ಗೇಟ್‌ನಿಂದ (Railway Gate) ವಾಹನ ಸವಾರರು ಸದಾ ಕಿರಿಕಿರಿ ಅನುಭವಿಸುತ್ತಿದ್ದರು. ರೈಲು ಬಂತೆಂದರೆ ಸಾಕು ವಾಹನಗಳು (Vehicles) ಸಾಲುಸಾಲಾಗಿ ನಿಲ್ಲುವ ದೃಶ್ಯ ಸರ್ವೇ ಸಾಮಾನ್ಯ. ಆದ್ದರಿಂದ ಇಲ್ಲೊಂದು ರೈಲ್ವೆ ಅಂಡರ್‌ಪಾಸ್ (Under Pass) ಬೇಕೆಂಬ ಕೂಗು ಬಹಳ ವರ್ಷಗಳಿಂದ ಕೇಳಿ ಬರುತ್ತಿತ್ತು. ಇದೀಗ ಈ ಬೇಡಿಕೆ ಈಡೇರುವ ಕಾಲ ಬಂದೇ ಬಿಟ್ಟಿದೆ.
ಮಹಾಕಾಳಿಪಡ್ಪು ಪ್ರದೇಶ ಜೆಪ್ಪಿನಮೊಗರು, ಕೇರಳ, ಉಳ್ಳಾಲದಿಂದ ಮಂಗಳೂರು ನಗರ ಪ್ರವೇಶಕ್ಕೆ ಹತ್ತಿರದ ರಸ್ತೆ. ಆದರೆ ವಾಹನ ಸವಾರರು ಅನುಭವಿಸುತ್ತಿರುವ ಕಿರಿಕಿರಿಗೆ ಮುಕ್ತಿಕೊಡಲು 4ವರ್ಷಗಳ ಹಿಂದೆ ಸ್ಮಾರ್ಟ್‌ಸಿಟಿಯಿಂದ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಆರಂಭಗೊಂಡಿತ್ತು. ಸದ್ಯ ಕಾಮಗಾರಿ ಪೂರ್ಣಗೊಂಡಿದ್ದು, ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಆಗಬೇಕಿದೆ. ಮಳೆ ನಿಂತ ತಕ್ಷಣ ಬಾಕಿ ಉಳಿದಿರುವ 100 ಮೀಟರ್ ರಸ್ತೆ ಕಾಮಗಾರಿ ಪೂರ್ಣವಾಗಲಿದೆ.
ವಿಶೇಷವೆಂದರೆ ದ.ಕ.ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸೀರಿಸ್ ಬಾಕ್ಸ್ ಪುಶ್ಶಿಂಗ್ ತಂತ್ರಜ್ಞಾನದಲ್ಲಿ ರೈಲ್ವೇ ಅಂಡರ್‌ಪಾಸ್ ಕಾಮಗಾರಿ ನಡೆದಿದೆ. ಗುಡ್ಡವನ್ನು ಕೊರೆಯುವಾಗ ದೊಡ್ಡದಾದ ಬಾಕ್ಸ್ ಅಳವಡಿಸಿ ಅದನ್ನು ಸ್ವಲ್ಪಸ್ವಲ್ಪವೇ ದೂಡುತ್ತಾ ಕೊರೆಯುವುದು ಈ ತಂತ್ರಜ್ಞಾನ. ಎರಡೂ ರೈಲ್ವೆಹಳಿಗಳಿಗೂ ಮೂರು ಬಾಕ್ಸ್‌ಗಳನ್ನು ಅಳವಡಿಸಿ ಅಂಡರ್ ಪಾಸ್ ನಿರ್ಮಿಸಲಾಗಿದೆ. ಇದರಿಂದ ರೈಲ್ವೆ ಹಳಿಯ ಕೆಳಭಾಗದಲ್ಲಿ ಕೆಲಸ ನಡೆಯುತ್ತಿದ್ದರೂ ರೈಲು ಸಂಚಾರ ಮಾತ್ರ ಸ್ಥಗಿತವಾಗಿರಲಿಲ್ಲ.
50 ಕೋಟಿ 50 ಲಕ್ಷದ ಕಾಮಗಾರಿ! ಚತುಷ್ಪಥಕ್ಕೆ ಹೊಸ ವಿನ್ಯಾಸ
ಒಟ್ಟು 50.50ಕೋಟಿ ರೂ. ವೆಚ್ಚದಲ್ಲಿ ಅಂಡರ್‌ಪಾಸ್, ಸಂಪರ್ಕ ರಸ್ತೆ ನಿರ್ಮಾಣವಾಗಿದೆ. ಕಿರಿದಾಗಿದ್ದ ರಸ್ತೆಯನ್ನು 18ಮೀಟರ್ ಅಗಲಕ್ಕೆ ವಿಸ್ತರಿಸಿ ಚತುಷ್ಪಥದ ಕಾಂಕ್ರೀಟ್ ರಸ್ತೆಗೆ ಮೇಲ್ದರ್ಜೆಗೆ ಏರಿಸಿಲಾಗಿದೆ. ಈ ಮೂಲಕ ಈ ಭಾಗದಲ್ಲಿನ ಟ್ರಾಫಿಕ್ ಜಾಮ್ ಕಿರಿಕಿರಿ ತಪ್ಪಲಿದೆ. ಒಟ್ಟಾರೆಯಾಗಿ ಯಾವಾಗಪ್ಪಾ, ಈ ರೈಲ್ವೆ ಕಾಯುವಿಕೆಯಿಂದ ಮುಕ್ತಿ ಎಂದು ಹವಣಿಸುತ್ತಿದ್ದ ಮಂಗಳೂರಿನ ಜನರಿಗೆ ಶುಭ ಸುದ್ದಿಯೊಂದು ಶೀಘ್ರ ಕಾದಿದೆ ಎನ್ನಬಹುದು.
Mangalore,Dakshina Kannada,Karnataka
September 07, 2025 10:44 AM IST