Last Updated:
ಬೆಥೆಲ್ ಕೇವಲ 76 ಎಸೆತಗಳಲ್ಲಿ ತಮ್ಮ ಮೊದಲ ಅಂತರರಾಷ್ಟ್ರೀಯ ಶತಕವನ್ನು ಸಿಡಿಸಿದರು. ಇದರೊಂದಿಗೆ, ಬೆಥೆಲ್ ತಮ್ಮ ಮೊದಲ ODI ಶತಕವನ್ನು ಗಳಿಸಿದ ಅತ್ಯಂತ ವೇಗದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಒಟ್ಟಾರೆ ಜಾಕೋಬ್ 82 ಎಸೆತಗಳಲ್ಲಿ 110 ರನ್ಗಳ ಇನ್ನಿಂಗ್ಸ್ ಆಡಿದರು.
ಐಪಿಎಲ್ನಲ್ಲಿ RCB ಪರ ಆಡಿದ್ದ 21 ವರ್ಷದ ಯುವ ಬ್ಯಾಟ್ಸ್ಮನ್ ಜಾಕೋಬ್ ಬೆಥೆಲ್ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಛಾಪು ಮೂಡಿಸಲು ಪ್ರಾರಂಭಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಬೆಥೆಲ್ ತಮ್ಮ ಬ್ಯಾಟಿಂಗ್ನ ಮ್ಯಾಜಿಕ್ ಅನ್ನು ತೋರಿಸಿದ್ದಾರೆ. ಸರಣಿಯ ಮೂರನೇ ಪಂದ್ಯದಲ್ಲಿ, ಬೆಥೆಲ್ ಬೌಂಡರಿ ಮತ್ತು ಸಿಕ್ಸರ್ಗಳ ಸುರಿಮಳೆ ಸುರಿಸುವ ಮೂಲಕ ಅದ್ಭುತ ಶತಕ ಗಳಿಸಿದರು. ಇವರಿಗೆ ಸಾಥ್ ನೀಡಿದ ರೂಟ್ ಕೂಡ ಶತಕ ಸಿಡಿಸಿದರು. ಕೊನೆಯಲ್ಲಿ ಬಟ್ಲರ್ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ಇಂಗ್ಲಿಷ್ ತಂಡವು ಪಂದ್ಯದಲ್ಲಿ 400 ರನ್ಗಳ ಗಡಿಯನ್ನು ಸುಲಭವಾಗಿ ದಾಟಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದ್ದ ಇಂಗ್ಲೆಂಡ್ ತಂಡ 2 ವಿಕೆಟ್ ಇಂಗ್ಲಿಷ್ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ ಜೇಮಿ ಸ್ಮಿತ್ ಹಾಗೂ ಬೆನ್ ಡಕೆಟ್ 59 ರನ್ ಸೇರಿಸಿದರು. ಡಕೆಟ್ 31 ರನ್ಗಳಿಸಿ ಔಟ್ ಆದರು. ನಂತರ ರೂಟ್ ಹಾಗೂ ಜೇಮಿ ಸ್ಮಿತ್ 58 ರನ್ ಸೇರಿಸಿದರು. ಸ್ಮಿತ್ 48 ಎಸೆತಗಳಲ್ಲಿ9 ಬೌಂಡರಿ, 1 ಸಿಕ್ಸರ್ ಸಹಿತ 62 ರನ್ಗಳಿಸಿದರು. ತಂಡದ ಮೊತ್ತ 117 ರನ್ಗಳಿಗೆ 2 ವಿಕೆಟ್ಗಳನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಬಂದ ಜಾಕೋಬ್ ಬೆಥೆಲ್ ಬೌಂಡರಿ, ಸಿಕ್ಸರ್ಗಳ ಮಳೆಗೈದರು.
ಬೆಥೆಲ್ ಕೇವಲ 76 ಎಸೆತಗಳಲ್ಲಿ ತಮ್ಮ ಮೊದಲ ಅಂತರರಾಷ್ಟ್ರೀಯ ಶತಕವನ್ನು ಸಿಡಿಸಿದರು. ಇದರೊಂದಿಗೆ, ಬೆಥೆಲ್ ತಮ್ಮ ಮೊದಲ ODI ಶತಕವನ್ನು ಗಳಿಸಿದ ಅತ್ಯಂತ ವೇಗದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಒಟ್ಟಾರೆ ಜಾಕೋಬ್ 82 ಎಸೆತಗಳಲ್ಲಿ 110 ರನ್ಗಳ ಇನ್ನಿಂಗ್ಸ್ ಆಡಿದರು. ಇದರಲ್ಲಿ ಅವರು 13 ಬೌಂಡರಿಗಳು ಮತ್ತು 3 ಗಗನಚುಂಬಿ ಸಿಕ್ಸರ್ಗಳಿದ್ದವು. ನಂತರ ಇಂಗ್ಲೆಂಡ್ನ ಸೂಪರ್ಸ್ಟಾರ್ ಜೋ ರೂಟ್ ಕೂಡ ಶತಕ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ರೂಟ್ 96 ಎಸೆತಗಳಲ್ಲಿ 6 ಬೌಂಡರಿ ಸಹಿತ 100 ರನ್ಗಳಿಸಿ ಔಟ್ ಆದರು.
ಬ್ರೂಕ್ (3) ಔಟ್ ಆಗುತ್ತಿದ್ದಂತೆ ಮೈದಾನಕ್ಕೆ ಬಂದ ಬಟ್ಲರ್ ಕೇವಲ 32 ಎಸೆತಗಳಲ್ಲಿ 62 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇದರಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸೇರಿತ್ತು. ಕೊನೆಯ ಓವರ್ನಲ್ಲಿ 4 ಬೌಂಡರಿ ಸಿಡಿಸಿ ತಂಡದ ಮೊತ್ತವನ್ನ 414ಕ್ಕೆ ಏರಿಸಿದರು. ಈ ಎಲ್ಲಾ ಆಟಗಾರರ ಅದ್ಭುತ ಪ್ರದರ್ಶನದಿಂದಾಗಿ, ಇಂಗ್ಲಿಷ್ ತಂಡವು 50 ಓವರ್ಗಳಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು 414 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ಪರ, ಕೇಶವ್ ಮಹಾರಾಜ್ ಮತ್ತು ಕಾರ್ಬಿನ್ ಬಾಷ್ ತಲಾ 2 ವಿಕೆಟ್ ಪಡೆದರು.
ಆದರೆ ನಾಂಡ್ರೆ ಬರ್ಗರ್ 95 ರನ್ ನೀಡಿ ದಕ್ಷಿಣ ಆಫ್ರಿಕಾ ಪರ ಏಕದಿನಲ್ಲಿ 3ನೇ ಅತ್ಯಂತ ದುಬಾರಿ ಬೌಲರ್ ಆದರು. ಡೇಲ್ ಸ್ಟೈನ್ ಆಸ್ಟ್ರೇಲಿಯಾ ವಿರುದ್ದ 96 ಹಾಗೂ ಪಾರ್ನೆಲ್ ಭಾರತದ ವಿರುದ್ಧ 95 ರನ್ಗಳನ್ನ ಬಿಟ್ಟುಕೊಟ್ಟು ಮೊದಲೆರಡು ಸ್ಥಾನದಲ್ಲಿದ್ದಾರೆ.
414 ರನ್ಗಳಿಸುವ ಮೂಲಕ ಇಂಗ್ಲೆಂಡ್ ತಂಡ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ 400 ಗಡಿ ದಾಟಿತು. ಇದಕ್ಕೂ ಮುನ್ನ 2016ರಲ್ಲಿ 399 ರನ್ಗಳಿಸಿದ್ದು, ಗರಿಷ್ಠ ಮೊತ್ತವಾಗಿತ್ತು. ಇವುಗಳ ನಂತರ ಟಾಪ್ ಸ್ಕೋರ್ ಎಂದರೆ 2017ರಲ್ಲಿ 346 ಹಾಗೂ 2023ರಲ್ಲಿ 342 ರನ್ಗಳಿಸಿದೆ.
ದಕ್ಷಿಣ ಆಫ್ರಿಕಾ ಒಟ್ಟಾರೆ 4ನೇ ಬಾರಿ 400ಕ್ಕೂ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಬಾರಿ 400ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟ 2ನೇ ತಂಡ ಎನಿಸಿಕೊಂಡಿತು. ವೆಸ್ಟ್ ಇಂಡೀಸ್ 5 ಬಾರಿ ಈ ಕಳಪೆ ಸಾಧನೆ ಮಾಡಿ ಅಗ್ರಸ್ಥಾನದಲ್ಲಿದೆ. ಶ್ರೀಲಂಕಾ, ನೆದರ್ಲೆಂಡ್ಸ್ ಹಾಗೂ ಶ್ರೀಲಂಕಾ ತಲಾ 3 ಬಾರಿ 400 ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದೆ.
September 07, 2025 8:33 PM IST